ಬ್ರೇಕ್ ಬದಲು ಎಕ್ಸ್‌ಲೆಟರ್ ತುಳಿದ ಚಾಲಕ | ಇಬ್ಬರು ಮಹಿಳೆಯರ ಮೇಲೆ ಹರಿದ ಕಾರು

Share the Article

ಚಾಲಕನೊಬ್ಬನ ಅಚಾತುರ್ಯದಿಂದ ಬ್ರೇಕ್ ಬದಲು ಎಕ್ಸ್‌ಲೆಟರ್ ತುಳಿದ ಪರಿಣಾಮ ಕಾರೊಂದು ಫುಟ್‌ಪಾತ್‌ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ದೇವರಾಜ ಅರಸು ರಸ್ತೆಯ ಯಶಸ್ವಿನಿ ಸಿಲ್ಕ್ ಮಳಿಗೆ ಮುಂಭಾಗದ ಪಾರ್ಕಿಂಗ್‌ನಿಂದ ಹೊರಟಿದ್ದ ಕಾರೊಂದು ಚಾಲಕನ ಅಜಾಗರೂಕತೆಯಿಂದ ಏಕಾಏಕಿ ಫುಟ್ ಪಾತ್ ಮೇಲೆ ನುಗ್ಗಿ ಎದುರಿಗಿದ್ದ ಭಾಗ್ಯ ಮತ್ತು ಲಕ್ಷ್ಮೀ ಎಂಬವರಿಗೆ ಕಾರು ಗುದ್ದುತ್ತಿದ್ದಾಗ ಎಚ್ಚೆತ್ತಕೊಂಡ ಅವರು ದೂರು ಸರಿದಿದ್ದಾರೆ.

ಆದರೂ ಭಾಗ್ಯ ಅವರ ಕಾಲ ಮೇಲೆ ಕಾರು ಹರಿದಿದೆ. ಈ ಘಟನೆ ನ.13 ರಂದು ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಚಾಲಕ ಶ್ರೀರಾಂಪುರ ನಿವಾಸಿ ಆರೋಗ್ಯ ರಾಜ್ ಎಂಬುವರ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಾರನ್ನು ಪಾರ್ಕ್ ಮಾಡುವ ವೇಳೆ ಬ್ರೇಕ್ ಬದಲು ಅಚಾನಕ್ಕಾಗಿ ಎಕ್ಸಲೇಟರ್ ಒತ್ತಿದ್ದರಿಂದ ಕಾರು ಫುಟ್‌ಪಾತ್‌ಗೆ ನುಗ್ಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ

Leave A Reply