ಆರ್ಡರ್ ಲೇಟ್ ಮಾಡಿದನೆಂಬ ಕಾರಣಕ್ಕೆ ಹೋಟೆಲ್ ನಲ್ಲಿ ಜಗಳಕ್ಕಿಳಿದ ಡೆಲಿವರಿ ಬಾಯ್ | ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಹೋಟೆಲ್ ಓನರ್ ನ ಹಣೆಗೆ ಬಿದ್ದಿತ್ತು ಬುಲ್ಲೆಟ್ !
ಆರ್ಡರ್ ನೀಡುವುದು ಕೊಂಚ ತಡವಾಯಿತೆಂಬ ಕಾರಣಕ್ಕೆ ಹೋಟೆಲ್ ಮಾಲೀಕನನ್ನೇ ದಾರುಣವಾಗಿ ಕೊಲೆಗೈದ ಪ್ರಕರಣ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು,ಮೃತ ವ್ಯಕ್ತಿಯನ್ನು ಸುನಿಲ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು,ಕೊಲೆ ನಡೆಸಿದ ಆರೋಪಿ ಸ್ವಿಗ್ಗಿ ಡೆಲಿವರಿ ಬಾಯ್ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ದೆಹಲಿಯ ಗ್ರೇಟರ್ ನೋಯ್ಡಾದ ಮಿತ್ರ ಸೊಸೈಟಿ ಯಲ್ಲಿ ಜಾಮ್ ಜಾಮ್ ಎಂಬ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದರು.ಅಲ್ಲಿಗೆ ಬುಧವಾರ ಬೆಳಿಗ್ಗೆ ಆರೋಪಿ ಬಂದಿದ್ದು,ಚಿಕನ್ ಬಿರಿಯಾನಿ ಮತ್ತು ಪುರಿ ಸಬ್ಬಿ ಆರ್ಡರ್ ನೀಡಿದ್ದ ಎನ್ನಲಾಗಿದೆ. ಆ ಸಂದರ್ಭ ಬಿರಿಯಾನಿ …