ಯಾವುದೇ ಸೂಚನೆಯಿಲ್ಲದೇ ಹೆರಿಗೆಯಾದ ಮಹಿಳೆ!!ಕೇವಲ ದೇಹದ ತೂಕ ಹೆಚ್ಚಿದೆ ಎಂದುಕೊಂಡ ಆಕೆ ಮಗುವಿಗೆ ತಾಯಿಯಗುತ್ತಾಳೆಂದು ಊಹಿಸಿರಲಿಲ್ಲವಂತೆ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರ ಹೊಟ್ಟೆಯ ಗಾತ್ರ ದೊಡ್ಡದಿರುತ್ತದೆ. ಹೆಣ್ಣು ಗರ್ಭಿಣಿಯಾಗಿ ತನ್ನ ಮಗುವಿನೊಂದಿಗೆ ಪ್ರತಿ ಹಂತದಲ್ಲೂ, ಪ್ರತೀ ಕ್ಷಣವನ್ನು ಅನುಭವಿಸುತ್ತಾಳೆ. ಮಗುವಿನ ಚಲನವಲನದಿಂದ ಖುಷಿ ಪಡುತ್ತಾಳೆ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಒಂದು ಘಟನೆಯೊಂದು ನಡೆದಿದೆ.

ನೈಟೌಟ್​ನಲ್ಲಿ ಎಂಜಾಯ್ ಮಾಡುತ್ತಿದ್ದ ಮಹಿಳೆಗೆ ಏಕಾಏಕಿ ಹೆರಿಗೆಯಾಗಿದ್ದು, ಮಹಿಳೆಗೇ ಒಮ್ಮೆಲೆ ಅಚ್ಚರಿಯಾಗುವಂತಹ ಘಟನೆ ನಡೆದಿದೆ. 23 ವರ್ಷದ ಅಮೆರಿಕಾದ ಲವಿನಿಯಾ ಎಂಬ ಯುವತಿ ರಾತ್ರಿ 10 ಗಂಟೆಯ ಹೊತ್ತಿಗೆ ಹೊಟ್ಟೆ ಸೆಳೆಯುತ್ತಿದೆ ಎಂದು ಹೇಳಲಾರಂಭಿಸಿದ್ದಾಳೆ.

ಸ್ನೇಹಿತರ ಜೊತೆಗಿದ್ದ ಆಕೆ ತನ್ನ ತಾಯಿಯ ಬಳಿ ಹೋದಳು. ತಕ್ಷಣವೇ ವೈದ್ಯರನ್ನು ಕರೆಸಲಾಯಿತು. ಆಕೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಳೆ ಎಂಬ ಮಾತು ಕೇಳಿ ಮನೆಯವರು ಸೇರಿ ಮಹಿಳೆ ಕೂಡ ದಂಗಾಗಿದ್ದಾಳೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಆಕೆ 8 ತಿಂಗಳ ಮಗುವಿಗೆ ಜನ್ಮ ನೀಡಿದ್ದಾಳೆ. ಸಿ-ಸೆಕ್ಷನ್ ಮೂಲಕ ಹೆರಿಗೆ ಆಗಿದೆ. ಈ ಘಟನೆ ಕಳೆದ ತಿಂಗಳು ನಡೆದಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ತಾಯಿಗೆ ಗರ್ಭಾವಸ್ಥೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಹೊಟ್ಟೆ ಕೂಡಾ ಯಾವುದೇ ಆಕಾರ ಪಡೆದುಕೊಂಡಿರಲಿಲ್ಲ. ಆದರೆ ಆಕೆ ಇತ್ತೀಚೆಗೆ ದೇಹದ ತೂಕ ಪಡೆದಿದ್ದಳು. ಲಾಕ್​ಡೌನ್​ನಿಂದಾಗಿ ದೇಹದ ತೂಕ ಹೆಚ್ಚಾಗಿದೆ ಎಂಬ ಭಾವನೆಯಲ್ಲಿದ್ದಳು.

ನಾನು ಇನ್ನೂ ಆಘಾತದಲ್ಲಿಯೇ ಇದ್ದೇನೆ. ಸಮಯ ಸಾಗುತ್ತಿದ್ದಂತೆಯೇ ನಡೆದ ಘಟನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ದೇಹದ ತೂಕ ಹೆಚ್ಚಾದದ್ದು ಲಾಕ್​ಡೌನ್​ನಲ್ಲಿ ಮನೆಯಲ್ಲೇ ಇದ್ದುದರಿಂದ ಎಂದು ನಾನು ಭಾವಿಸಿದ್ದೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಲಕ್ಷಣಗಳನ್ನು ನಾನೂ ಹೊಂದಲಿಲ್ಲ. ಯಾವುದೇ ಊಹೆಯೂ ಸಹ ಇರಲಿಲ್ಲ ಎಂದು ಲುಮಿನಿಯಾ ಹೇಳಿಕೊಂಡಿದ್ದಾರೆ.

ನನ್ನ ಹೆಂಡತಿ ತೂಕ ಹೆಚ್ಚಾಗಿದೆ ಎಂಬ ಮಾತನ್ನು ಈ ಹಿಂದೆ ಆಡಿದ್ದೆವು. ಅದನ್ನು ಬಿಟ್ಟರೆ ಗರ್ಭಾವಸ್ಥೆಯಲ್ಲಿನ ಯಾವುದೇ ಲಕ್ಷಣ ಅವಳಲ್ಲಿ ಕಂಡು ಬಂದಿರಲಿಲ್ಲ. ನಿಜವಾಗಿಯೂ ಆಶ್ಚರ್ಯವಾಗುತ್ತಿದೆ ಎಂದು ಆಕೆಯ ಗಂಡ ಮಾತನಾಡಿದ್ದಾರೆ.

ಅಚ್ಚರಿ ಮೂಡಿಸುವಂತೆ ಯಾವುದೇ ಊಹೆಯೂ ಇಲ್ಲದೇ ಹೆರಿಗೆಯಾದ ಮಹಿಳೆ ಈಕೆ ಒಬ್ಬಳೇ ಅಲ್ಲ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ಹೆಸರಿನ ಇನ್ನೊಬ್ಬ ಮಹಿಳೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ವಿಮಾನ ಹತ್ತಿ ಇಳಿಯುವ ಸ್ಥಳ ತಲುಪುವವರೆಗೆ ಮಹಿಳೆಯ ಮಡಿಲಲ್ಲಿ ಗಂಡು ಮಗುವಿತ್ತು.

Leave a Reply

error: Content is protected !!
Scroll to Top
%d bloggers like this: