Day: September 1, 2021

ಪುತ್ತೂರು-ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಬಸ್ ಪುನರಾರಂಭಿಸುವಂತೆ ಕೆಎಸ್‌ಆರ್‌ಟಿಸಿಗೆ ಮನವಿ | ಕೂಡಲೇ ಬಸ್ ಸಂಚಾರ ಆರಂಭಕ್ಕೆ ನಿರ್ದೇಶನ

ಸವಣೂರು: ಪುತ್ತೂರು-ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಈ ಹಿಂದೆ ಸಂಚಾರ ನಡೆಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನರಾರಂಭಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಾಧಿಕಾರಿ ಜಯಕರ ಶೆಟ್ಟಿ ಅವರಿಗೆ ಸವಣೂರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಅಂಗಡಿಮೂಲೆ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಅವರು ಮನವಿ ಸಲ್ಲಿಸಿದರು. ಈ ಹಿಂದೆ ಸಂಚಾರ ನಡೆಸುತ್ತಿದ್ದ ಬಸ್‌ಗಳನ್ನು ಮತ್ತೆ ಆರಂಭಿಸಬೇಕು.ಈ ಬಸ್‌ಗಳನ್ನು ನಂಬಿಕೊಂಡು ಹಲವರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು,ಕೋವಿಡ್ ಕಾರಣದಿಂದ ನಿಂತ ಬಸ್ ಸಂಚಾರವನ್ನು ಮತ್ತೆ ಆರಂಭಿಸಿ ಸಾರ್ವಜನಿಕರಿಗೆ …

ಪುತ್ತೂರು-ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಬಸ್ ಪುನರಾರಂಭಿಸುವಂತೆ ಕೆಎಸ್‌ಆರ್‌ಟಿಸಿಗೆ ಮನವಿ | ಕೂಡಲೇ ಬಸ್ ಸಂಚಾರ ಆರಂಭಕ್ಕೆ ನಿರ್ದೇಶನ Read More »

ಕಡಬ : ದ್ವಿಚಕ್ರ ವಾಹನಗಳ ನಡುವೆ ಅಪಘಾತ | ಸವಾರರಿಗೆ ಗಾಯ

ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಕಡಬ ಪೇಟೆಯ ಗಣೇಶ್ ಬಿಲ್ಡಿಂಗ್ ಬಳಿ ಬುಧವಾರದಂದು ಸಂಭವಿಸಿದೆ. ಕಳಾರದಿಂದ ಕಡಬ ಕಡಗೆ ಬರುತ್ತಿದ್ದ ಹೀರೋ ಮೆಸ್ಟೋ ವಾಹನ ಸವಾರ ಪೊಲೀಸ್ ವಾಹನವನ್ನು ಕಂಡು ಎಡಬದಿಗೆ ತಿರುಗಿಸಿದ್ದು, ಈ ಸಂದರ್ಭದಲ್ಲಿ ಮುಂದಿನಿಂದ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಸಣ್ಣಪುಟ್ಟ ಗಾಯಗೊಂಡ ವಾಹನ ಸವಾರರನ್ನು ತಕ್ಷಣವೇ ಪೊಲೀಸ್ ವಾಹನದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಮಾನ್ಯಗೊಂಡ 500 ರೂಪಾಯಿ ಬೆಲೆಯ ನೋಟಿನ ಬೆಲೆ ಇವತ್ತಿಗೆ 10,000 ರೂಪಾಯಿ !!

2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 500 ರೂ. ನೋಟುಗಳನ್ನು ಬ್ಯಾನ್​ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಎಲ್ಲರೂ ತಮ್ಮ ಬಳಿಯಿದ್ದ ನೋಟುಗಳನ್ನು ನೀಡಿ ಹೊಸ ನೋಟುಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇನ್ನು ಅದೆಷ್ಟೋ ಜನರ ಬಳಿ ಬ್ಯಾನ್​​ ಆದ 500 ರೂಪಾಯಿ ಮುಖಬೆಲೆಯ ನೋಟುಗಳಿವೆ. ಆದರೆ ಮೌಲ್ಯ ಇಲ್ಲದ ಈ ನೋಟುಗಳು ಕಾಗದಕ್ಕೆ ಸಮಾನ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಯಾಕೆಂದರೆ ನಿಷೇಧಿಸಿದ ಹಳೆಯ 500 ರೂ. ನೋಟು ನಿಮ್ಮ ಬಳಿ ಇದ್ದರೆ, ಮನೆಯಲ್ಲಿಯೇ ಕುಳಿತು 10,000 ರೂ. …

ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಮಾನ್ಯಗೊಂಡ 500 ರೂಪಾಯಿ ಬೆಲೆಯ ನೋಟಿನ ಬೆಲೆ ಇವತ್ತಿಗೆ 10,000 ರೂಪಾಯಿ !! Read More »

ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಬರಲಿದೆ ಸಿಹಿ ಸುದ್ದಿ | ವಾರದಲ್ಲಿ ಮೂರು ದಿನ ರಜೆ ಹಾಗೂ ವೇತನ ಸ್ವರೂಪ ಬದಲಾಗುವ ಸಾಧ್ಯತೆ !!

ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಆದಷ್ಟು ಬೇಗ ಸಿಹಿ ಸುದ್ದಿ ನೀಡಲಿದೆ. ಈ ನಿಟ್ಟಿನಲ್ಲಿ ನೂತನ ವೇತನ ಸಂಹಿತೆಯನ್ನು ಶೀಘ್ರವೇ ಪೂರ್ಣಗೊಳಿಸಲಿದ್ದು, ಇದೇ ವರ್ಷದ ಅಕ್ಟೋಬರ್‌ನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಈ ಮಸೂದೆಯಡಿ ಉದ್ಯೋಗಿಗಳ ರಜಾದಿನಗಳು, ಸಂಬಳ ಮತ್ತು ಕೆಲಸದ ಸಮಯದ ಕುರಿತು ಹಲವು ಬದಲಾವಣೆ ತರಲಾಗಿದೆ. ಹೊಸ ವೇತನ ಸಂಹಿತೆಯಡಿ ನೌಕರರ ಕೆಲಸದ ಸಮಯವನ್ನು 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ಒಂದು ವಾರದಲ್ಲಿ …

ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಬರಲಿದೆ ಸಿಹಿ ಸುದ್ದಿ | ವಾರದಲ್ಲಿ ಮೂರು ದಿನ ರಜೆ ಹಾಗೂ ವೇತನ ಸ್ವರೂಪ ಬದಲಾಗುವ ಸಾಧ್ಯತೆ !! Read More »

ಗ್ರಾಹಕರಿಗೆ ಮತ್ತೊಮ್ಮೆ ಅಡುಗೆ ಅನಿಲ ದರ ಏರಿಕೆಯ ಬಿಸಿ | 25 ರೂ. ಏರಿಕೆ, 15 ದಿನಗಳಲ್ಲಿ ಬರೋಬ್ಬರಿ 50 ರೂ. ಹೆಚ್ಚಳ !?

ಗ್ರಾಹಕರಿಗೆ ಅಡುಗೆ ಅನಿಲ ಬೆಲೆ ಏರಿಕೆಯ ಬಿಸಿ ಮುಟ್ಟಿದ್ದು, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. 15 ದಿನಗಳಲ್ಲಿ ಸಬ್ಸಿಡಿ ರಹಿತ LPG ಸಿಲಿಂಡರ್ 50 ರೂಪಾಯಿಗಳಷ್ಟು ದುಬಾರಿಯಾಗಿದೆ. ಇಂದು ಸಿಲಿಂಡರ್ ದರವನ್ನು ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. ಈ ಹಿಂದೆ, ಆಗಸ್ಟ್ 18 ರಂದು ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದವು. ಎಲ್‌ಪಿಜಿ ಸಿಲಿಂಡರ್ ಬೆಲೆ 25 ರೂ. ಹೆಚ್ಚಳದ ನಂತರ, ಈಗ ದೆಹಲಿಯಲ್ಲಿ 4.2 ಕೆಜಿ …

ಗ್ರಾಹಕರಿಗೆ ಮತ್ತೊಮ್ಮೆ ಅಡುಗೆ ಅನಿಲ ದರ ಏರಿಕೆಯ ಬಿಸಿ | 25 ರೂ. ಏರಿಕೆ, 15 ದಿನಗಳಲ್ಲಿ ಬರೋಬ್ಬರಿ 50 ರೂ. ಹೆಚ್ಚಳ !? Read More »

ಸವಣೂರು: ಪೆಟ್ರೋಲ್‌, ಡಿಸೇಲ್‌ ಮತ್ತು ಗ್ಯಾಸ್‌ ದರ ಏರಿಕೆ ವಿರೋಧಿಸಿ ಎಸ್‌.ಡಿ.ಪಿ.ಐ ಪ್ರತಿಭಟನೆ

ಸವಣೂರು : ಪೆಟ್ರೋಲ್‌, ಡಿಸೇಲ್‌ ಮತ್ತು ಗ್ಯಾಸ್‌ ದರ ಏರಿಕೆ ವಿರೋಧಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರು ಬುಧವಾರ ಸವಣೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ಸೇರಿದಂತೆ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮಧ್ಯಮ ವರ್ಗದ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ದರ ಕಡಿಮೆಯಾಗಿದ್ದರೂ ಕೂಡ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್‌ ಬೆಲೆ ಏರಿಕೆ …

ಸವಣೂರು: ಪೆಟ್ರೋಲ್‌, ಡಿಸೇಲ್‌ ಮತ್ತು ಗ್ಯಾಸ್‌ ದರ ಏರಿಕೆ ವಿರೋಧಿಸಿ ಎಸ್‌.ಡಿ.ಪಿ.ಐ ಪ್ರತಿಭಟನೆ Read More »

ಸಾರ್ವಜನಿಕ ಬಸ್ ಸ್ಟಾಂಡ್ ನ್ನು ಹೊತ್ತುಕೊಂಡು ಹೋದ ಕಳ್ಳರು !! ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದ ಕಬ್ಬಿಣದ ಬಸ್ ಸ್ಟಾಂಡ್ ಕಳ್ಳರ ಪಾಲು

ಬಸ್ ಸ್ಟಾಂಡ್ ನ್ನೇ ಕಳ್ಳರು ಹೊತ್ತುಕೊಂಡು ಹೋದ ಘಟನೆಯೊಂದು ಬೆಂಗಳೂರಿನಿಂದ ವರದಿಯಾಗಿದ್ದು, ಎಲ್ಲರೂ ಅಚ್ಚರಿಪಡುವಂತಹ ಈ ಘಟನೆ ರಾಜ್ಯದಲ್ಲೇ ಮೊದಲ ಪ್ರಕರಣವಾಗಿದೆ. ಘಟನೆ ವಿವರ:ಬಿಬಿಎಂಪಿ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕಬ್ಬಿಣದಿಂದ ಬಸ್ಸು ಸ್ಟಾಂಡ್ ಒಂದನ್ನು ನಿರ್ಮಿಸಿದ್ದು,ಸದ್ಯ ಕಬ್ಬಿಣದಿಂದ ನಿಮಿಸಿದ ಬಸ್ ಸ್ಟಾಂಡನ್ನು ಕಳ್ಳರು ತಡರಾತ್ರಿ ಕಟರ್ ಮೂಲಕ ಕಟ್ ಮಾಡಿ ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದ್ದು, ಕೆ ಆರ್ ಪುರಂ ನ ಆನಂದಪುರ ಟಿಸಿ ಪಾಳ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು, ಪೊಲೀಸರು …

ಸಾರ್ವಜನಿಕ ಬಸ್ ಸ್ಟಾಂಡ್ ನ್ನು ಹೊತ್ತುಕೊಂಡು ಹೋದ ಕಳ್ಳರು !! ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದ ಕಬ್ಬಿಣದ ಬಸ್ ಸ್ಟಾಂಡ್ ಕಳ್ಳರ ಪಾಲು Read More »

ಕೊರೋನಾ ಕಾರಣದಿಂದ ಪಾತಾಳಕ್ಕೆ ಕುಸಿದಿದ್ದ ದೇಶದ ಆರ್ಥಿಕತೆಯಲ್ಲಿ ಭಾರೀ ಜಿಗಿತ | ಬರೊಬ್ಬರಿ ಶೇ. 20.1ರಷ್ಟು ಏರಿ ನಿಂತ ಜಿಡಿಪಿ !!

ಕೊರೋನಾ ಕಾರಣದಿಂದ ಕುಸಿದು ಹೋಗಿದ್ದ ದೇಶದ ಅರ್ಥ ವ್ಯವಸ್ಥೆಯು ಇದೀಗ ಬೆಳವಣಿಗೆಯ ಹಾದಿ ಹಿಡಿದಿದೆ. ಏಪ್ರಿಲ್‌–ಜೂನ್‌ ಅವಧಿಯಲ್ಲಿ ದಾಖಲೆಯ ಗರಿಷ್ಠ ಮಟ್ಟದ ತ್ರೈಮಾಸಿಕ ಬೆಳವಣಿಗೆಯನ್ನು ಕಂಡಿದೆ. ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 20.1ರಷ್ಟು ಇತ್ತು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ. 41 ಅರ್ಥಶಾಸ್ತ್ರಜ್ಞರ ಅಭಿಮತದ ಪ್ರಕಾರ, ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕಕ್ಕೆ ಶೇ 20ರಷ್ಟು ಜಿಡಿಪಿ ಬೆಳವಣಿಗೆ ಆಗಬಹುದು ಎನ್ನಲಾಗಿತ್ತು. ಇನ್ನು ರಿಸರ್ವ್ ಬ್ಯಾಂಕ್ …

ಕೊರೋನಾ ಕಾರಣದಿಂದ ಪಾತಾಳಕ್ಕೆ ಕುಸಿದಿದ್ದ ದೇಶದ ಆರ್ಥಿಕತೆಯಲ್ಲಿ ಭಾರೀ ಜಿಗಿತ | ಬರೊಬ್ಬರಿ ಶೇ. 20.1ರಷ್ಟು ಏರಿ ನಿಂತ ಜಿಡಿಪಿ !! Read More »

ವಿಟ್ಲ ಎಸೈ ಆಗಿದ್ದ ವಿನೋದ್ ರೆಡ್ಡಿ ಮೇಲೆ ಗುಂಡು ಹಾರಿಸಿ‌ ಕೊಲೆಯತ್ನ‌ ಪ್ರಕರಣ | ಓರ್ವ ಆರೋಪಿಗೆ ಷರತ್ತು ಬದ್ಧ ಜಾಮೀನು

ಬಂಟ್ವಾಳ : ಕಳೆದ ಮಾರ್ಚ್ ತಿಂಗಳಲ್ಲಿ ವಿಟ್ಲ ಪೊಲೀಸ್ ಠಾಣಾ ಎಸೈ ವಿನೋದ್ ರೆಡ್ಡಿ ಅವರ ಮೇಲೆ, ಗುಂಡು ಹಾರಿಸಿ ಕೊಲೆ ಯತ್ನಕ್ಕೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪೈಕಿ, ಕೇರಳ ರಾಜ್ಯದ ಉಪ್ಪಳದ ಹೈದರ್ ಎಂಬವನಿಗೆ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಈ ಕೊಲೆಯತ್ನ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳ ಪೈಕಿ, ಉಪ್ಪಳದ ಹೈದರ್‌ಗೆ ನ್ಯಾಯಾಲಯ ಜಾಮೀನು ನೀಡಿದೆ. ಮಾ. 25ರಂದು ಬೆಳಗಿನ ಜಾವ ಬಂಟ್ವಾಳ ತಾಲೂಕು …

ವಿಟ್ಲ ಎಸೈ ಆಗಿದ್ದ ವಿನೋದ್ ರೆಡ್ಡಿ ಮೇಲೆ ಗುಂಡು ಹಾರಿಸಿ‌ ಕೊಲೆಯತ್ನ‌ ಪ್ರಕರಣ | ಓರ್ವ ಆರೋಪಿಗೆ ಷರತ್ತು ಬದ್ಧ ಜಾಮೀನು Read More »

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ಮಹಿಳೆಯ ಬ್ಯಾಗ್ ಕಳ್ಳತನ | ಆರೋಪಿ ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ

ಕಡಬ : ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರವಾಸಿಗರ ಸೋಗಿನಲ್ಲಿ ಚಿನ್ನಾಭರಣ ಕದ್ದ ಆರೋಪದಲ್ಲಿ ಮಹಿಳೆಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ,ಆಕೆಯ ಗೆಳೆಯ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಯಶವಂತಪುರ ಠಾಣೆಯ ಪೊಲೀಸರು ಮಮತಾ (38) ಎಂಬಾಕೆಯನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಸಹಕರಿಸಿದ ಈಕೆಯ ಗೆಳೆಯ ಪರಾರಿಯಾಗಿದ್ದಾನೆ. ಬಂಧಿತ ಮಮತಾಳಿಂದ 20.2 ಲಕ್ಷ ಮೌಲ್ಯದ 439 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮಮತಾ ಮೂಲತಃ‌ ಆಂಧ್ರ ಪ್ರದೇಶ ಮೂಲದವಳು. 2 ವರ್ಷದ ಹಿಂದೆ …

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ಮಹಿಳೆಯ ಬ್ಯಾಗ್ ಕಳ್ಳತನ | ಆರೋಪಿ ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ Read More »

error: Content is protected !!
Scroll to Top