ಮೋಸ್ಟ್ ವಾಂಟೆಡ್, ನಟೋರಿಯಸ್ ಕಿಲ್ಲರ್ ಬಾಂಬೆ ರವಿ ಕೊರೋನಾದಿಂದ ಸಾವು

ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ, ಸುಪಾರಿ ಕಿಲ್ಲರ್ ಬಾಂಬೆ ರವಿ ಕೊರೋನಾದಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಟೋರಿಯಸ್ ರೌಡಿ ರವಿ, ಆಂಧ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಇತ್ತೀಚೆಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿಯ ಕೊಲೆ ಯತ್ನಕ್ಕೆ ಸ್ಕೆಚ್ ಹಾಕಿದ್ದ ಆರೋಪ ಈತನ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆಸ್ಪತ್ರೆ ಸೇರಿದರೂ ದಂಧೆ ಬಿಡದ ಈತ, ಸೌತ್ ಆಫ್ರಿಕಾದ ನಂಬರ್ ನಿಂದ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ. ಸೈಕಲ್ ರವಿ ವಿರೋಧಿ ಬಣದಲ್ಲಿ ಗುರುತಿಸಿದ್ದ ಈ ಕುಖ್ಯಾತ ರೌಡಿ ಹಿರಿಯ ಅಧಿಕಾರಿಗಳ ಜೊತೆ ಪಾರ್ಟಿ ಮಾಡಿದ್ದ ವೀಡಿಯೋ ಕೂಡ ವೈರಲ್ ಆಗಿತ್ತು.

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ ಬಾಂಬೆ ರವಿ ಕುಖ್ಯಾತಿಯನ್ನು ಪಡೆದುಕೊಂಡಿದ್ದ. ಸಾಕಷ್ಟು ಬೆದರಿಕೆ ಕರೆ, ಕೊಲೆ ಯತ್ನ ಸೇರಿದಂತೆ ಈತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು.

Leave A Reply

Your email address will not be published.