Day: August 23, 2021

ಕಡಬ : ನೂಜಿಬಾಳ್ತಿಲ ಭಾರೀ ಮಳೆ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದೆ. ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಯ ರೆಂಜಿಲಾಡಿ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕೊಣಾಜೆ, ಎಂಜಿರ ಭಾಗಗಳಲ್ಲಿ ಬಾರೀ ಮಳೆ ಸುರಿಯಿತು. ಸುಮಾರು ಒಂದುವರೆ ತಾಸು ಸುರಿದ ನಿರಂತರ ಬಾರೀ ಮಳೆಗೆ ಹಳ್ಳ, ತೋಡು ತುಂಬಿ ಹರಿದಿದೆ. ಹಳ್ಳಗಳ ಸಮೀಪದ ಕೃಷಿ ಭೂಮಿ, ತೋಟ, ಗದ್ದೆ ಗಳಿಗೆ ನೀರು ನುಗ್ಗಿವೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಬಂದ ಪರಿಣಾಮ ಚರಂಡಿಗಳು ಬಂದ್ ಆಗಿ ರಸ್ತೆಗಳಿಗೂ ನೀರು ನುಗ್ಗಿದೆ. ಕಲ್ಲುಗುಡ್ಡೆ …

ಕಡಬ : ನೂಜಿಬಾಳ್ತಿಲ ಭಾರೀ ಮಳೆ Read More »

ಬೈಂದೂರು:ಮೀನು ಖರೀದಿಗೆ ರಸ್ತೆ ದಾಟುತ್ತಿದ್ದಾತನಿಗೆ ಕ್ಷಣದಲ್ಲೇ ನಿಗದಿಯಾಗಿತ್ತು ಸಾವು!!ರಸ್ತೆಯಲ್ಲಿ ಯಮನಂತೆ ಕಾಡಿದ ಟೆಂಪೋ

ರಸ್ತೆ ದಾಟುತ್ತಿದ್ದಾಗ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಬೈಂದೂರು ತಾಲೂಕಿನ ರಾಹುತನ ಕಟ್ಟೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿಯನ್ನು ಭಟ್ಕಳ ಜಾಲಿ ನಿವಾಸಿ ಮಂಜು (46) ಎಂದು ಗುರುತಿಸಲಾಗಿದೆ. ಘಟನೆ ವಿವರ: ಬೈಕ್ ನಲ್ಲಿ ಚಲಿಸುತ್ತಿದ್ದ ಮಂಜು,ರಸ್ತೆ ಬದಿಯ ಮೀನಿನ ಅಂಗಡಿಗೆ ಮೀನು ಖರೀದಿಸಲೆಂದು ತನ್ನ ಬೈಕ್ ನ್ನು ರಸ್ತೆ ಬದಿ ನಿಲ್ಲಿಸಿ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಿರುವಾಗ ಈ ದುರ್ಗಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ಟೆಂಪೋ …

ಬೈಂದೂರು:ಮೀನು ಖರೀದಿಗೆ ರಸ್ತೆ ದಾಟುತ್ತಿದ್ದಾತನಿಗೆ ಕ್ಷಣದಲ್ಲೇ ನಿಗದಿಯಾಗಿತ್ತು ಸಾವು!!ರಸ್ತೆಯಲ್ಲಿ ಯಮನಂತೆ ಕಾಡಿದ ಟೆಂಪೋ Read More »

ಎಲ್ಲರೂ ಚಿತ್ರವಿಚಿತ್ರವಾದ ಪ್ರೇಮಕಥೆಗಳನ್ನು ಕೇಳಿರುತ್ತೀರಿ, ಆದರೆ ಪ್ರಾಣಿಯೊಂದಿಗಿನ ಪ್ರೇಮಕಥೆ ನೀವೆಲ್ಲಾದರೂ ಕೇಳಿದ್ದೀರಾ???| ಹಾಗಾದರೆ ಓದಿ ಈ ಚಿಂಪಾಂಜಿಯ ಜೊತೆಗಿನ ಸ್ಪೆಷಲ್ ಲವ್ ಸ್ಟೋರಿ

ಮನುಷ್ಯರಿಗೆ ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿ ಕಾಳಜಿ ಸಾಮಾನ್ಯ. ಇತ್ತೀಚಿಗಂತೂ ಇನ್ಸ್ಟಾಗ್ರಾಮ್ ಫೇಸ್ಬುಕ್ ಗಳಲ್ಲಿ ನಾಯಿ-ಬೆಕ್ಕುಗಳ ಜೊತೆ ಫೋಟೋ ತೆಗೆದು ಪೋಸ್ಟ್ ಮಾಡುವಂತದ್ದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಮಹಿಳೆ ಮತ್ತು ಚಿಂಪಾಂಜಿಯ ಪ್ರೇಮಕಥೆ ವಿಚಿತ್ರವೇ ಸರಿ. ಹೌದು, ಇಂತಹುದೊಂದು ವಿಚಿತ್ರ ಸಂಗತಿ ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ನಡೆದಿದೆ.ಮಹಿಳೆಯೇ ಝೋನಲ್ಲಿರುವ ಜಿಂಪಾಂಜಿಯೊಂದಿಗೆ ಆಕೆಯ ಪ್ರೇಮಕಥೆಯನ್ನು ಬಿಚ್ಚಿಟ್ಟಿದ್ದಾರೆ.ಅಷ್ಟೇ ಅಲ್ಲದೆ ಚಿಂಪಾಂಜಿಯೂ ನನ್ನನ್ನು ಪ್ರೀತಿಸುತ್ತಿದೆ ಎಂದು ಹೇಳುವ ಮೂಲಕ ಎಲ್ಲರಿಗೂ ದಿಗ್ಬ್ರಮೆಗೊಳಿಸಿದ್ದಾರೆ. ಮಹಿಳೆ ಮೃಗಾಲಯದಲ್ಲಿ ಚಿಂಪಾಂಜಿಯೊಂದಿಗೆ 4 ವರ್ಷಗಳ ಕಾಲ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. …

ಎಲ್ಲರೂ ಚಿತ್ರವಿಚಿತ್ರವಾದ ಪ್ರೇಮಕಥೆಗಳನ್ನು ಕೇಳಿರುತ್ತೀರಿ, ಆದರೆ ಪ್ರಾಣಿಯೊಂದಿಗಿನ ಪ್ರೇಮಕಥೆ ನೀವೆಲ್ಲಾದರೂ ಕೇಳಿದ್ದೀರಾ???| ಹಾಗಾದರೆ ಓದಿ ಈ ಚಿಂಪಾಂಜಿಯ ಜೊತೆಗಿನ ಸ್ಪೆಷಲ್ ಲವ್ ಸ್ಟೋರಿ Read More »

ಉಪ್ಪಿನಂಗಡಿ : ಹಿಂದೂ ಪರ ಕಾರ್ಯಕರ್ತನ ಮೀನಿನ ಅಂಗಡಿಗೆ ಬೆಂಕಿ | ಆರೋಪಿಗಳನ್ನು ಬಂಧಿಸದಿದ್ದರೆ ಹೆದ್ದಾರಿ ಬಂದ್ -ಗುಡುಗಿದ ಅರುಣ್ ಪುತ್ತಿಲ,ಗಣರಾಜ್ ಭಟ್

ಉಪ್ಪಿನಂಗಡಿಯ ಹಳೇ ಗೇಟು ಬಳಿ ಮೀನು ಮಾರಾಟದ ಅಂಗಡಿ ಇಟ್ಟುಕೊಂಡಿದ್ದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಅಶೋಕ್ ಎಂಬವರ ಅಂಗಡಿಯನ್ನು ಬೆಂಕಿ ಹಾಕಿ ಸುಟ್ಟ ಪ್ರಕರಣ ಭಾನುವಾರ ತಡ ರಾತ್ರಿ ನಡೆದಿದೆ. ಈ ಪ್ರಕರಣದ ಆರೋಪಿಗಳನ್ನು ರಾತ್ರಿಯೊಳಗೆ ಬಂಧಿಸದಿದ್ದರೇ, ನಾಳೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಸ್ತೆ ರೊಕೋ ನಡೆಸಲಾಗುವುದು ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಘೋಷಿಸಿದ್ದಾರೆ. ಉಪ್ಪಿನಂಗಡಿಯ ಸಾರ್ವಜನಿಕರು, ಎಲ್ಲ ಹಿಂದೂ ಪರ ಕಾರ್ಯಕರ್ತರ ಪರವಾಗಿ ರಾಸ್ತೆ ರೊಕೋ ಕರೆ ಕೊಟ್ಟಿರುವ ಅವರು …

ಉಪ್ಪಿನಂಗಡಿ : ಹಿಂದೂ ಪರ ಕಾರ್ಯಕರ್ತನ ಮೀನಿನ ಅಂಗಡಿಗೆ ಬೆಂಕಿ | ಆರೋಪಿಗಳನ್ನು ಬಂಧಿಸದಿದ್ದರೆ ಹೆದ್ದಾರಿ ಬಂದ್ -ಗುಡುಗಿದ ಅರುಣ್ ಪುತ್ತಿಲ,ಗಣರಾಜ್ ಭಟ್ Read More »

ಚಿನ್ನದಂಗಡಿ ದರೋಡೆ ಮಾಡಿದ ದರೋಡೆಕೋರರಿಂದ ಗುಂಡು ಹಾರಾಟ | ಅಮಾಯಕ ಯುವಕ ಬಲಿ

ಚಿನ್ನಾಭರಣ ಕಳವು ಮಾಡಲು ಚಿನ್ನದಂಗಡಿಗೆ ಬಂದ ದರೋಡೆಕೋರರು ಹಾರಿಸಿದ ಗುಂಡಿಗೆ ಅಮಾಯಕ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಮೈಸೂರಿನ ದಡದಹಳ್ಳಿ ಗ್ರಾಮದ ಚಂದ್ರು (23) ಎಂಬ ಅಮಾಯಕ ಯುವಕ ದರೋಡೆಕೋರರ ಗುಂಡೇಟಿಗೆ ಬಲಿಯಾದ ದುರ್ದೈವಿ ಯುವಕ. ಮೈಸೂರಿನ ವಿದ್ಯಾರಣ್ಯಪುರಂ ಚಿನ್ನಾಭರಣ ಮಳಿಗೆಯೊಂದಕ್ಕೆ ಸೋಮವಾರ ಸಾಯಂಕಾಲ ಚಿನ್ನ ಖರೀದಿಸುವಂತೆ ಬಂದ ಖದೀಮರು, ಏಕಾಏಕಿ ಅಂಗಡಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿರೋಧ ತೋರಲು ಅಂಗಡಿ ಮಾಲೀಕ ಮುಂದಾದಾಗ ಚಿನ್ನಾಭರಣ …

ಚಿನ್ನದಂಗಡಿ ದರೋಡೆ ಮಾಡಿದ ದರೋಡೆಕೋರರಿಂದ ಗುಂಡು ಹಾರಾಟ | ಅಮಾಯಕ ಯುವಕ ಬಲಿ Read More »

ಹಂತ ಹಂತವಾಗಿ ಪಿಯು ಕಾಲೇಜು ಆರಂಭಿಸಲು ದ.ಕ ಜಿಲ್ಲಾಡಳಿತ ನಿರ್ಧಾರ -ಡಾ.ಕೆ.ವಿ.ರಾಜೇಂದ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಸದ್ಯ ಸ್ವಲ್ಪಮಟ್ಟಿಗೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಾಲೆಗಳ ಆರಂಭ ಕುರಿತು ಸದ್ಯಕ್ಕೆ ಯೋಚನೆ ಮಾಡಿಲ್ಲ. ಆದರೆ ಪಿಯು ತರಗತಿಗಳನ್ನು ಹಂತಹಂತವಾಗಿ ತೆರೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ಜನಪ್ರತಿನಿಧಿಗಳೊಂದಿಗೆ ಸಭೆಯೂ ನಡೆದಿದೆ. ಪಿಯು ತರಗತಿಗಳು ಆರಂಭಗೊಂಡ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಶಾಲೆಗಳನ್ನು ತೆರೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದರು.ಕೋವಿಡ್ ನಿಯಮ …

ಹಂತ ಹಂತವಾಗಿ ಪಿಯು ಕಾಲೇಜು ಆರಂಭಿಸಲು ದ.ಕ ಜಿಲ್ಲಾಡಳಿತ ನಿರ್ಧಾರ -ಡಾ.ಕೆ.ವಿ.ರಾಜೇಂದ್ರ Read More »

ಅಡಿಕೆ ಕೃಷಿಕರಿಗೆ ಸೋಲಾರ್ ಡ್ರೈಯರ್‌ಗೆ ಕೇಂದ್ರ ಸರ್ಕಾರದ ರಾಷ್ಡ್ರೀಯ ತೋಟಗಾರಿಕೆ ಮಿಷನ್ ಯೋಜನೆಯಿಂದ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ

ಸವಣೂರು : ದ.ಕ.ಜಿಲ್ಲೆಯಲ್ಲಿ ರೈತರು ಸ್ಥಳೀಯವಾಗಿ ನಿರ್ಮಿಸುವ ಟ್ಯುಬ್ಯುಲಾರ್ ಸೋಲಾರ್ ಪಾಲಿಟನೆಲ್ ಡ್ರೈಯರ್ ಗಳಿಗೆ ರಾಷ್ಡ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನವನ್ನು ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ನೇತೃತ್ವದಲ್ಲಿ ಸುಳ್ಯ ವಿ.ಸ.ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಸವಣೂರು ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಕಾಣಿಯೂರು ಗ್ರಾ.ಪಂ‌.ಉಪಾಧ್ಯಕ್ಷ ಗಣೇಶ್ ಉದನಡ್ಕ ಮನವಿ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ತೆಂಗು, ಜಾಯಿಕಾಯಿ ಕೋಕೋ …

ಅಡಿಕೆ ಕೃಷಿಕರಿಗೆ ಸೋಲಾರ್ ಡ್ರೈಯರ್‌ಗೆ ಕೇಂದ್ರ ಸರ್ಕಾರದ ರಾಷ್ಡ್ರೀಯ ತೋಟಗಾರಿಕೆ ಮಿಷನ್ ಯೋಜನೆಯಿಂದ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ Read More »

ಪಾಲ್ತಾಡು : ಅಕ್ರಮ ಮದ್ಯ ಮಾರಾಟ,ಆರೋಪಿಯ ಬಂಧನ

ಸವಣೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬೆಳ್ಳಾರೆ ಠಾಣಾ ಎಎಸೈ ಸುಧಾಕರ.ಎಸ್ ಹಾಗೂ ಸಿಬಂದಿಗಳು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಲ್ತಾಡು ಕಾಲನಿಯಲ್ಲಿ ದಾಳಿ ನಡೆಸಿ ಯಾವುದೇ ಪರವಾನಿಗೆ ಹೊಂದದೇ, ಸರಕಾರ ನಿಗದಿಪಡಿಸಿದ ದರಕ್ಕಿಂತ ಅಧಿಕ ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ವಶದಲ್ಲಿಟ್ಟುಕೊಂಡ ಕೊಳ್ತಿಗೆ ಗ್ರಾಮದ ಪಾಲ್ತಾಡು ಕಾಲನಿ ನಿವಾಸಿ ಸುಂದರ.ಕೆ ಎಂಬವರನ್ನು ವಶಕ್ಕೆ ಪಡೆದು 4 ಪ್ಲಾಸ್ಟಿಕ್ ಕೈ ಚೀಲಗಳಲ್ಲಿ …

ಪಾಲ್ತಾಡು : ಅಕ್ರಮ ಮದ್ಯ ಮಾರಾಟ,ಆರೋಪಿಯ ಬಂಧನ Read More »

ಮಂಗಳೂರು ವಿ.ವಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಕೊನೆಯಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲು ಚಿಂತನೆ|ವಿ.ವಿ ಯ ಹೊಸ ಪ್ರಯತ್ನ ಸಕಾರವಾಗಲಿದೆಯೇ?

ಇದೇ ಮೊದಲ ಬಾರಿಗೆ ಮಂಗಳೂರು ವಿಶ್ವ ವಿದ್ಯಾನಿಲಯವು ಸೆಮಿಸ್ಟರ್ ಪರೀಕ್ಷೆಗಳನ್ನು ಆನ್ಲೈನ್ ನಲ್ಲಿ ನಡೆಸಲು ತೀರ್ಮಾನ ಕೈಗೊಂಡಿದ್ದು, ಆ ಮೂಲಕ ವಿದ್ಯಾರ್ಥಿಗಳಲ್ಲಿ ಮನೆಮಾಡಿದ್ದ ಆತಂಕ, ತವಕ ಕೊಂಚ ದೂರ ಸರಿಸಿದಂತಾಗಿದೆ. ಆರನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ಮಂಗಳೂರು ವಿ.ವಿ ಚಿಂತನೆ ನಡೆಸಿದೆ. ಮಹಾಮಾರಿಯಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮುಖಾಂತರವೇ ತರಗತಿ ನಡೆದಿದ್ದು, ಆ ಬಳಿಕ ಕೆಲವು ಬಾರಿ ಮುಂದೂಡಲಾಗಿದ್ದ ಪರೀಕ್ಷೆಗಳನ್ನು ಶೀಘ್ರವೇ ಆನ್ ಲೈನ್ ಮುಖಾಂತರ ನಡೆಸಿ, ಆ ಬಳಿಕ …

ಮಂಗಳೂರು ವಿ.ವಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಕೊನೆಯಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲು ಚಿಂತನೆ|ವಿ.ವಿ ಯ ಹೊಸ ಪ್ರಯತ್ನ ಸಕಾರವಾಗಲಿದೆಯೇ? Read More »

ಕಡಬ : ಬಂಟ್ರದಲ್ಲಿ ಮತ್ತೆ ಅಕ್ರಮ ಕಪ್ಪು ಕಲ್ಲಿನ ಕ್ವಾರೆ ಆರಂಭಕ್ಕೆ ಸಿದ್ದತೆ | ಸ್ಥಳೀಯ ನಾಗರೀಕರಿಂದ ಜಿಲ್ಲಾಧಿಕಾರಿಗೆ ದೂರು

ಕಡಬ ತಾಲೂಕಿನ ಬಂಟ್ರ ಗ್ರಾಮದ ಕುಂಡಡ್ಕ ಎಂಬಲ್ಲಿ ಪುನರಾರಂಭಿಸಲು ಉದ್ದೇಶಿಸಿರುವ ಕಪ್ಪು ಕಲ್ಲಿನ ಕ್ವಾರೆಗೆ (ಜಲ್ಲಿ ಕ್ವಾರೆಗೆ ) ಸ್ಥಳೀಯ ನಾಗರೀಕರು ಆಕ್ಷೇಪಣೆ ಸಲ್ಲಿಸಿ ದ.ಕ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಸ .ನಂ 13 ರ ದಾಖಲಾತಿಯನ್ನು ನೀಡಿ ಸ.ನಂ ೧೫ ರಲ್ಲಿ ಈ ಹಿಂದೆ 1998 ರಿಂದ 2009ರ ವರೆಗೆ ದಿ.ಬಾಬು ಗೌಡ ಅವರ ಮಕ್ಕಳ ಉಸ್ತುವಾರಿಯಲ್ಲಿ ಅಕ್ರಮವಾಗಿ ಕ್ವಾರೆಯಿಂದ ಸುಮಾರು 70,000 ಲೋಡ್ ಜಲ್ಲಿಯನ್ನು ತೆಗೆಯಲಾಗಿತ್ತು. ಇದರ ವಿರುದ್ಧ ಸಾರ್ವಜನಿಕರು ದೂರು ನೀಡಿದ ಬೆನ್ನಲ್ಲೇ …

ಕಡಬ : ಬಂಟ್ರದಲ್ಲಿ ಮತ್ತೆ ಅಕ್ರಮ ಕಪ್ಪು ಕಲ್ಲಿನ ಕ್ವಾರೆ ಆರಂಭಕ್ಕೆ ಸಿದ್ದತೆ | ಸ್ಥಳೀಯ ನಾಗರೀಕರಿಂದ ಜಿಲ್ಲಾಧಿಕಾರಿಗೆ ದೂರು Read More »

error: Content is protected !!
Scroll to Top