ಕಡಬ : ನೂಜಿಬಾಳ್ತಿಲ ಭಾರೀ ಮಳೆ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದೆ.

ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಯ ರೆಂಜಿಲಾಡಿ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕೊಣಾಜೆ, ಎಂಜಿರ ಭಾಗಗಳಲ್ಲಿ ಬಾರೀ ಮಳೆ ಸುರಿಯಿತು. ಸುಮಾರು ಒಂದುವರೆ ತಾಸು ಸುರಿದ ನಿರಂತರ ಬಾರೀ ಮಳೆಗೆ ಹಳ್ಳ, ತೋಡು ತುಂಬಿ ಹರಿದಿದೆ. ಹಳ್ಳಗಳ ಸಮೀಪದ ಕೃಷಿ ಭೂಮಿ, ತೋಟ, ಗದ್ದೆ ಗಳಿಗೆ ನೀರು ನುಗ್ಗಿವೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಬಂದ ಪರಿಣಾಮ ಚರಂಡಿಗಳು ಬಂದ್ ಆಗಿ ರಸ್ತೆಗಳಿಗೂ ನೀರು ನುಗ್ಗಿದೆ.

ಕಲ್ಲುಗುಡ್ಡೆ – ಉದನೆ ರಸ್ತೆಯ ಲ್ಲಿನ ಪುತ್ತಿಗೆ ಕಿರುಸೇತುವೆ ಕೆಲಕಾಲ ಮುಳುಗಡೆಯಾಗಿ ಸಂಚಾರಕ್ಕೆ ತೊಂದರೆಯಾಯಿತು.

Leave A Reply

Your email address will not be published.