ಬೈಂದೂರು:ಮೀನು ಖರೀದಿಗೆ ರಸ್ತೆ ದಾಟುತ್ತಿದ್ದಾತನಿಗೆ ಕ್ಷಣದಲ್ಲೇ ನಿಗದಿಯಾಗಿತ್ತು ಸಾವು!!ರಸ್ತೆಯಲ್ಲಿ ಯಮನಂತೆ ಕಾಡಿದ ಟೆಂಪೋ

ರಸ್ತೆ ದಾಟುತ್ತಿದ್ದಾಗ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಬೈಂದೂರು ತಾಲೂಕಿನ ರಾಹುತನ ಕಟ್ಟೆ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿಯನ್ನು ಭಟ್ಕಳ ಜಾಲಿ ನಿವಾಸಿ ಮಂಜು (46) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಬೈಕ್ ನಲ್ಲಿ ಚಲಿಸುತ್ತಿದ್ದ ಮಂಜು,ರಸ್ತೆ ಬದಿಯ ಮೀನಿನ ಅಂಗಡಿಗೆ ಮೀನು ಖರೀದಿಸಲೆಂದು ತನ್ನ ಬೈಕ್ ನ್ನು ರಸ್ತೆ ಬದಿ ನಿಲ್ಲಿಸಿ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಿರುವಾಗ ಈ ದುರ್ಗಟನೆ ಸಂಭವಿಸಿದೆ.

Ad Widget / / Ad Widget

ಡಿಕ್ಕಿ ಹೊಡೆದ ಟೆಂಪೋ ಧರ್ಮಸ್ಥಳದಿಂದ ಭಟ್ಕಳ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿ ತನ್ನ ಬೈಕ್ ನಿಲ್ಲಿಸಿ ರಸ್ತೆ ದಾಟಿದ್ದೇ ಆತನ ಪ್ರಾಣಕ್ಕೆ ಕುತ್ತಾಗಿದ್ದು,ಮೀನು ತರಲೆಂದು ರಸ್ತೆಗಿಳಿದ ಆತ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ. ಸಂಪೂರ್ಣವಾಗಿ ರಸ್ತೆ ದಾಟುವ ಮುನ್ನವೇ ಆತನ ಪಾಲಿಗೆ ಯಮನಂತೆ ಕಾಡಿದ ಟೆಂಪೊ ಟ್ರಾವೆಲರ್ ರಸ್ತೆ ಮಧ್ಯೆಯೇ ಆತನ ಉಸಿರನ್ನು ನಿಲ್ಲಿಸಿದೆ.

ಸ್ಥಳಕ್ಕೆ ಬೈಂದೂರು ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: