ಸಾರಿಗೆ ನೌಕರರಿಗೆ ಜುಲೈ ತಿಂಗಳ ವೇತನ ಬಿಡುಗಡೆ | ನಷ್ಟದಲ್ಲಿರುವ ನಿಗಮಕ್ಕೆ ಸರಕಾರ ಆಸರೆ

ಸಾರಿಗೆ ನೌಕರರ ಜುಲೈ ತಿಂಗಳ ವೇತನವನ್ನು ಕೊನೆಗೂ ಸರಕಾರ ಬಿಡುಗಡೆ ಮಾಡಿದ್ದು, ಒಟ್ಟು ವೇತನ ವೆಚ್ಚದ ಶೇ.25ರಷ್ಟನ್ನು ಸೋಮವಾರ ಬಿಡುಗಡೆಗೊಳಿಸಿದೆ.

ಕೊರೊನಾದಿಂದ ನಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ ನೌಕರರ ವೇತನ ಪಾವತಿ ಕಷ್ಟ ಆಗುತ್ತಿದೆ. ಆದ್ದರಿಂದ ಜುಲೈ ವೇತನಕ್ಕಾಗಿ ಮೂಲವೇತನ ಹಾಗೂ ಭತ್ತೆಯ ಶೇ. 25ರಷ್ಟು ಅಂದರೆ 60.82 ಕೋ. ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಕೆಎಸ್‌ಆರ್‌ಟಿಸಿಗೆ 27.74 ಕೋ. ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 17.47 ಕೋ. ರೂ. ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಗೆ 15.61 ಕೋ. ರೂ. ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ನಾಲ್ಕೂ ನಿಗಮಗಳು ಜುಲೈನಿಂದ ಸೆಪ್ಟಂಬರ್‌ವರೆಗಿನ ವೇತನ ಪಾವತಿಗಾಗಿ 640.61 ಕೋ. ರೂ. ವಿಶೇಷ ಅನುದಾನ ಬಿಡುಗಡೆ ಮಾಡು ವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಜುಲೈ ತಿಂಗಳಿಗೆ ಸೀಮಿತವಾಗಿ 109.31 ಕೋ. ರೂ. ನೀಡಲಾಗಿದೆ.

Leave A Reply

Your email address will not be published.