ಎಲ್ಲರೂ ಚಿತ್ರವಿಚಿತ್ರವಾದ ಪ್ರೇಮಕಥೆಗಳನ್ನು ಕೇಳಿರುತ್ತೀರಿ, ಆದರೆ ಪ್ರಾಣಿಯೊಂದಿಗಿನ ಪ್ರೇಮಕಥೆ ನೀವೆಲ್ಲಾದರೂ ಕೇಳಿದ್ದೀರಾ???| ಹಾಗಾದರೆ ಓದಿ ಈ ಚಿಂಪಾಂಜಿಯ ಜೊತೆಗಿನ ಸ್ಪೆಷಲ್ ಲವ್ ಸ್ಟೋರಿ

Share the Article

ಮನುಷ್ಯರಿಗೆ ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿ ಕಾಳಜಿ ಸಾಮಾನ್ಯ. ಇತ್ತೀಚಿಗಂತೂ ಇನ್ಸ್ಟಾಗ್ರಾಮ್ ಫೇಸ್ಬುಕ್ ಗಳಲ್ಲಿ ನಾಯಿ-ಬೆಕ್ಕುಗಳ ಜೊತೆ ಫೋಟೋ ತೆಗೆದು ಪೋಸ್ಟ್ ಮಾಡುವಂತದ್ದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಮಹಿಳೆ ಮತ್ತು ಚಿಂಪಾಂಜಿಯ ಪ್ರೇಮಕಥೆ ವಿಚಿತ್ರವೇ ಸರಿ.

ಹೌದು, ಇಂತಹುದೊಂದು ವಿಚಿತ್ರ ಸಂಗತಿ ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ನಡೆದಿದೆ.ಮಹಿಳೆಯೇ ಝೋನಲ್ಲಿರುವ ಜಿಂಪಾಂಜಿಯೊಂದಿಗೆ ಆಕೆಯ ಪ್ರೇಮಕಥೆಯನ್ನು ಬಿಚ್ಚಿಟ್ಟಿದ್ದಾರೆ.ಅಷ್ಟೇ ಅಲ್ಲದೆ ಚಿಂಪಾಂಜಿಯೂ ನನ್ನನ್ನು ಪ್ರೀತಿಸುತ್ತಿದೆ ಎಂದು ಹೇಳುವ ಮೂಲಕ ಎಲ್ಲರಿಗೂ ದಿಗ್ಬ್ರಮೆಗೊಳಿಸಿದ್ದಾರೆ.

ಮಹಿಳೆ ಮೃಗಾಲಯದಲ್ಲಿ ಚಿಂಪಾಂಜಿಯೊಂದಿಗೆ 4 ವರ್ಷಗಳ ಕಾಲ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಮೃಗಾಲಯದಲ್ಲಿರುವ ಚಿಟಾ ಹೆಸರಿನ ಚಿಂಪಾಂಜಿ ಜೊತೆ ತನಗೆ ಸಂಬಂಧವಿದೆ ಎಂದು ಆಡಿ ಟಿಮ್ಮರ್ಮನ್ಸ್‌ ಹೇಳಿಕೊಂಡಿದ್ದಾರೆ.

ಆದರೆ ಇವರ ಪ್ರೇಮ ಕಹಾನಿಯನ್ನು ಕೇಳಿದ ಮೃಗಾಲಯದ ಆಡಳಿತ ಮಂಡಳಿ, ಆಟಿ ಟಿಮ್ಮರ್ಮನ್ಸ್​​ ಮೃಗಾಲಯಕ್ಕೆ ಭೇಟಿ ನೀಡುವುದನ್ನು ನಿಷೇಧಿಸುವ ಮೂಲಕ ಅವರ ಪ್ರೇಮ ಸಂಬಂಧಕ್ಕೆ ತಡೆಯಾಗಿದ್ದಾರೆ.

ಮಹಿಳೆ ಹಾಗೂ ಜಿಂಪಾಂಕಿ ನಡುವೆ ಇದ್ದ ಗಾಜಿನ ತಡೆ ಅವರಿಬ್ಬರ ನಡುವಿನ ಪ್ರೇಮಕ್ಕೆ ಅಡ್ಡಿ ಬಂದಿಲ್ಲವಂತೆ. ಗ್ಲಾಸ್​​​ ನ ಆ ಕಡೆ ಜಿಂಪಾಂಜಿ ಈ ಕಡೆ ಮಹಿಳೆ ಪರಸ್ಪರ ಸಂವಹನ ನಡೆಸಿದ್ದಾರೆ. ಪರಸ್ಪರ ಚುಂಬಿಸುತ್ತಿದ್ದರು ಕೂಡ ಎಂದು ತಿಳಿದು ಬಂದಿದೆ.

ಚಿಟಾ ಜೊತೆ ಮಹಿಳೆಯ ಸಂಬಂಧ ಒಳ್ಳೆಯದಲ್ಲ,ಇದು ಇತರ ಚಿಂಪಾಂಜಿಗಳೊಂದಿಗಿನ ಬಾಂಧವ್ಯಕ್ಕೆ ಹಾನಿಕಾರಕವೆಂದು ಮೃಗಾಲಯ ನಿಷೇಧವೇರಿದೆ. ಇನ್ಮುಂದೆ ಜಿಂಪಾಂಜಿಯನ್ನು ಮಹಿಳೆ ಭೇಟಿಯಾಗಬಾರದು. ಇದಕ್ಕಾಗಿ ಝಾಗೆ ಭೇಟಿ ನೀಡಬಾರದು ಎಂದು ತಾಕೀತು ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆ, ನಾನು ಆ ಪ್ರಾಣಿಯನ್ನು ಪ್ರೀತಿಸುತ್ತೇನೆ. ಅವನು ನನ್ನನ್ನು ಪ್ರೀತಿಸುತ್ತಾನೆ. ನನಗೆ ಜೀವನದಲ್ಲಿ ಬೇರೆ ಏನೂ ಸಿಕ್ಕಿಲ್ಲ. ಈಗ ಅವನಿಂದ ಸಿಕ್ಕಿರುವ ಪ್ರೀತಿಯನ್ನು ತೆಗೆದುಕೊಳ್ಳಲು ಏಕೆ ಬಯಸುತ್ತಾರೆ. ನಮ್ಮ ಸಂಬಂಧಕ್ಕೆ ಈ ಅಡ್ಡಿ ಏಕೆ ಎಂದು ಪ್ರಶ್ನಿಸಿದ್ದಾರೆ.

ಇವರಿಬ್ಬರ ಸಂಬಂಧ ಯಾವ ರೀತಿ ಬೆಳೆದಿದೆ ಎಂದರೆ ಚಿಟಾ ಜಿಂಪಾಂಜಿ ಇತರೆ ಪ್ರಾಣಿಗಳೊಂದಿಗೆ ಸೇರುತ್ತಿಲ್ಲವಂತೆ. ಮಹಿಳೆಯ ಆಗಮನವನ್ನೇ ನಿರೀಕ್ಷಿಸುತ್ತಾ ಕೂತಿರುತ್ತದೆ. ಅದು ಈಗ ಪ್ರಾಣಿಗಳೊಂದಿಗೆ ಬೆರೆಯುವದನ್ನು ಬಿಟ್ಟಿದೆ ಎನ್ನಲಾಗುತ್ತಿದೆ.

ಆದರೆ ಮೃಗಾಲಯ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಇದೀಗ ಮಹಿಳೆಗೂ ಭೇಟಿ ನೀಡಲು ಅವಕಾಶ ನೀಡದೇ ಇವರ ಪ್ರೇಮಕ್ಕೆ ಮೃಗಾಲಯ ಅಧಿಕಾರಿಗಳೇ ತಡೆ ಗೋಡೆಯಾಗಿದ್ದಾರೆ. ಅತ್ತ ಮಹಿಳೆಯೂ ಚಿಂಪಾಂಜಿಯಾ ಭೇಟಿ ಆಗಲು ಆಗದೆ ಕಣ್ಣೀರು ಇಡುತ್ತಿದರೆ ಎಂದು ತಿಳಿದು ಬಂದಿದೆ.

Leave A Reply