ಉಪ್ಪಿನಂಗಡಿ : ಹಿಂದೂ ಪರ ಕಾರ್ಯಕರ್ತನ ಮೀನಿನ ಅಂಗಡಿಗೆ ಬೆಂಕಿ | ಆರೋಪಿಗಳನ್ನು ಬಂಧಿಸದಿದ್ದರೆ ಹೆದ್ದಾರಿ ಬಂದ್ -ಗುಡುಗಿದ ಅರುಣ್ ಪುತ್ತಿಲ,ಗಣರಾಜ್ ಭಟ್

ಉಪ್ಪಿನಂಗಡಿಯ ಹಳೇ ಗೇಟು ಬಳಿ ಮೀನು ಮಾರಾಟದ ಅಂಗಡಿ ಇಟ್ಟುಕೊಂಡಿದ್ದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಅಶೋಕ್ ಎಂಬವರ ಅಂಗಡಿಯನ್ನು ಬೆಂಕಿ ಹಾಕಿ ಸುಟ್ಟ ಪ್ರಕರಣ ಭಾನುವಾರ ತಡ ರಾತ್ರಿ ನಡೆದಿದೆ.

ಈ ಪ್ರಕರಣದ ಆರೋಪಿಗಳನ್ನು ರಾತ್ರಿಯೊಳಗೆ ಬಂಧಿಸದಿದ್ದರೇ, ನಾಳೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಸ್ತೆ ರೊಕೋ ನಡೆಸಲಾಗುವುದು ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಘೋಷಿಸಿದ್ದಾರೆ.

ಉಪ್ಪಿನಂಗಡಿಯ ಸಾರ್ವಜನಿಕರು, ಎಲ್ಲ ಹಿಂದೂ ಪರ ಕಾರ್ಯಕರ್ತರ ಪರವಾಗಿ ರಾಸ್ತೆ ರೊಕೋ ಕರೆ ಕೊಟ್ಟಿರುವ ಅವರು ಒಬ್ಬ ಅಮಾಯಕ ವ್ಯಾಪಾರಿಯ ಅಂಗಡಿಗೆ ಬೆಂಕಿ ಕೊಟ್ಟ ಹೀನ ಕಾರ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅವರು ಅಂಗಡಿಗೆ ಬೆಂಕಿ ಹಚ್ಚಿದ ಕೃತ್ಯದ ಮಾಹಿತಿ ತಿಳಿಯುತ್ತಲೇ ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲಕ ಅಶೋಕ್ ರವರಿಗೆ ಧೈರ್ಯ ತುಂಬಿದರು. ಅದೇ ವೇಳೆ ಅಲ್ಲಿಗೆ ಆಗಮಿಸಿದ ಪುತ್ತೂರು ಡಿ ವೈಎಸ್ ಪಿ ಯವರಲ್ಲಿ ಅಂಗಡಿ ಮಾಲಕರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ ಅವರು “ಈ ಘಟನೆಯೂ ಉಪ್ಪಿನಂಗಡಿಯಲ್ಲಿ ನಿರಂತರ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇಲ್ಲಿ ಅಂಗಡಿಗೆ ಬೆಂಕಿ ಹಾಕಿದ್ದಾರೆ ಎಂಬ ನಾಳೆ ಇಲ್ಲಿ ಬೆಂಕಿ ಅಂಗಡಿಗೆ ಬೆಂಕಿ ಹಾಕಿದವರ ಅಂಗಡಿಗೆ ಇನ್ನಾರೋ ಬೆಂಕಿ ಹಾಕುವುದು, ಆ ಮೂಲಕ ಸಂಘರ್ಷದ ಸರಣಿ ಮುಂದುವರಿಯುತ್ತಾ ಸಾಗುತ್ತದೆ ಅದಕ್ಕಿಂತ ಮೊದಲೇ ಪೊಲೀಸ್ ಇಲಾಖೆ ಎಚ್ಚೆತ್ತು ಅಪರಾಧಿಯನ್ನು ಬಂಧಿಸಿ” ಎಂದು ಅವರು ಒತ್ತಾಯ ಮಾಡಿದ್ದಾರೆ.

ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡರಾದ ಗಣರಾಜ್ ಭಟ್ ಕೆದಿಲ, ಅಜಿತ್ ರೈ ಹೊಸಮನೆ, ರಾಜೇಶ್ ಈಶ್ವರಮಂಗಲ, ಸಂದೀಪ್ ಉಪ್ಪಿನಂಗಡಿ, ಉಪ್ಪಿನಂಗಡಿ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ ಮಡಿವಾಳ, ವ್ಯವಸ್ಥಾಪನ ಸಮಿತಿ ಸದಸ್ಯ ಜಯಂತ್, ರಾಮಕುಂಜ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಶಾಂತ್ ರಾಮಕುಂಜ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.