ಪಾಲ್ತಾಡು : ಅಕ್ರಮ ಮದ್ಯ ಮಾರಾಟ,ಆರೋಪಿಯ ಬಂಧನ

ಸವಣೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬೆಳ್ಳಾರೆ ಠಾಣಾ ಎಎಸೈ ಸುಧಾಕರ.ಎಸ್ ಹಾಗೂ ಸಿಬಂದಿಗಳು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಲ್ತಾಡು ಕಾಲನಿಯಲ್ಲಿ ದಾಳಿ ನಡೆಸಿ ಯಾವುದೇ ಪರವಾನಿಗೆ ಹೊಂದದೇ, ಸರಕಾರ ನಿಗದಿಪಡಿಸಿದ ದರಕ್ಕಿಂತ ಅಧಿಕ ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ವಶದಲ್ಲಿಟ್ಟುಕೊಂಡ ಕೊಳ್ತಿಗೆ ಗ್ರಾಮದ ಪಾಲ್ತಾಡು ಕಾಲನಿ ನಿವಾಸಿ ಸುಂದರ.ಕೆ ಎಂಬವರನ್ನು ವಶಕ್ಕೆ ಪಡೆದು 4 ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ತುಂಬಿಸಿದ್ದ 90 ಮಿ.ಲೀ ಮದ್ಯ ಇರುವ ಮೈಸೂರು ಲ್ಯಾನ್ಸರ್ ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು- 71, 90 ಮಿ.ಲೀ ಮದ್ಯ ಇರುವ ಒರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು – 6, ನ್ನು ಪತ್ತೆ ಹಚ್ಚಿ ( ಮದ್ಯದ ಅಂದಾಜು ಮೌಲ್ಯ ರೂ 2,695/-) ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.