Daily Archives

June 4, 2021

ಮತ್ತೆ ಜೈಲಿಗೆ ಮರಳುವ ಆಕರ್ಷಣೆ | ಪ್ರಧಾನಿ ಮೋದಿಗೆ ಬೆದರಿಕೆ ಹಾಕಿ ಜೈಲು ಪಾಲಾದ ಜೈಲು ಹಕ್ಕಿ !

ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದಾನೆ.ಕೊಲೆ ಬೆದರಿಕೆ ಹಾಕಿದ ವಿಷಯ ತಿಳಿದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸಲ್ಮಾನ್ (22) ಆರೋಪಿಯನ್ನು ಬಂಧಿಸಿದ್ದಾರೆ.

ಕೋವಿಡ್ ನಿಯಂತ್ರಣದ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಭವಿಷ್ಯ -ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಕೋವಿಡ್ ನಿಯಂತ್ರಣವಾಗದಿದ್ದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನೂ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ

ಉಡುಪಿ | ರಿವರ್ಸ್ ತೆಗೆಯುವ ವೇಳೆ ಬಾವಿಗೆ ಬಿದ್ದ ಕಾರು

ಕಾರನ್ನು ರಿವರ್ಸ್ ತೆಗೆಯುವಾಗ ಚಾಲಕಿಯ ನಿಯಂತ್ರಣ ತಪ್ಪಿ ಬಾವಿಗೆ ಉರುಳಿ ಬಿದ್ದ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.ಕಾರು ರಿವರ್ಸ್ ತೆಗೆಯುವಾಗ ಬ್ರೇಕ್ ಬದಲು ಎಕ್ಸಲೇಟರ್ ಗೆ ತುಳಿದ ಕಾರಣ ಕಾರು ನಿಯಂತ್ರಣ ತಪ್ಪಿ ಮನೆಯ ಬಾವಿಗೆ ಬಿದ್ದಿದೆ.

ಮಂಗಳೂರಿನಲ್ಲಿ ಸುರಿವ ಮಳೆಯನ್ನೂ ಲೆಕ್ಕಿಸದೆ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ನುಗ್ಗಿ ಬಂದ ಜನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ನಡುವೆಯೂ ಜನ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಮನೆಯಿಂದ ಹೊರ ಬಂದಿದ್ದಾರೆ. ಇಂದು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ, ಆರೋಗ್ಯ ಕೇಂದ್ರ ಸೇರಿದಂತೆ ಹಲವೆಡೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರದ ಉಚಿತ ಲಸಿಕೆ ನೀಡಲಾಗುತ್ತಿದೆ.

ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು | 2 ವರ್ಷದ ಹಿಂದಿನ ಅವಘಡ ಮಾಸುವ ಮೊದಲೇ ಇನ್ನೊಂದು ದುರ್ಘಟನೆ

ಕಾಸರಗೋಡು : ವಿದ್ಯುತ್ ಶಾಕ್ ತಗುಲಿ ಮಹಿಳೆ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಏತಡ್ಕದ ಪುತ್ರಕಳ ರಸ್ತೆಯ ಅಳಕ್ಕೆ ಎಂಬಲ್ಲಿ ನಡೆದಿದೆ.ಏತಡ್ಕ ಅಳಕ್ಕೆ ನಿವಾಸಿ ರಾಮಚಂದ್ರ ಮಣಿಯಾಣಿ ಅವರ ಪತ್ನಿ ಸುಜಾತಾ (50) ಮೃತ ದುರ್ದೈವಿ. ಅವರುಏತಡ್ಕ ಸಮೀಪ ಉದ್ಯೋಗ ಖಾತರಿ ಕೆಲಸ ಮುಗಿಸಿ ಸಂಜೆ ಮನೆಗೆ

ಪೊಲೀಸ್ ಇಲಾಖೆಯಲ್ಲಿ 3,533 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಪುರುಷ ಮತ್ತು ಮಹಿಳಾ) (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ (ಸ್ಥಳೀಯ)ಹುದ್ದೆಗಳನ್ನು ಒಳಗೊಂಡಂತೆ 3,533 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.ಅರ್ಜಿ ನಮೂನೆ ಹಾಗೂ

ಹಳ್ಳಕ್ಕೆ ಉರುಳಿದ ತಕ್ಷಣ ಕಾರಿಗೆ ಹೊತ್ತಿಕೊಂಡ ಬೆಂಕಿ | ಮೂವರ ಸಜೀವ ದಹನ

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ಕಾರಿನ ಒಳಗಿದ್ದ ಮೂವರು ಸಜೀವ ದಹನವಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಬಳಿ ಸಂಭವಿಸಿದೆ.ಮುಂಜಾನೆ 5 ಗಂಟೆ ಸಮಯದಲ್ಲಿ ಈ ದಾರುಣ ಘಟನೆ ನಡೆದಿದ್ದು,

ರಾಜ್ಯದಲ್ಲೂ ದ್ವಿತೀಯ ಪಿಯು ಪರೀಕ್ಷೆ ರದ್ದು ಆದರೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತದೆ | ಸುರೇಶ್ ಕುಮಾರ್ ಹೇಳಿಕೆ

ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು. ಪರೀಕ್ಷೆ ಇಲ್ಲದೆ ಮೌಲ್ಯಮಾಪನ ನಡೆಸಲಾಗುವುದು. ಸಿಬಿಎಸ್ಸಿ ಮತ್ತು ಐಸಿಎಸ್ಸಿ ಮಾದರಿಯಲ್ಲೇ ರಾಜ್ಯದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು.ಹಿಂದಿನ ಎಲ್ಲಾ ಶಿಕ್ಷಣ ಸಚಿವರು ಗಳೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು.ಹಲವು

ಪ್ಯಾಕೇಜ್‍ನಲ್ಲಿ ಮೀನುಗಾರರಿಗೂ ಪರಿಹಾರ ಘೋಷಣೆ:ಸಚಿವ ಅಂಗಾರ

ಕಡಬ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ಬಾರಿಗೆ ಘೋಷಣೆ ಮಾಡಿರುವ 500 ಕೋಟಿ ರೂ. ವಿಶೇಷ ಪ್ಯಾಕೇಜ್‍ನಲ್ಲಿ ಮೀನುಗಾರರು ಹಾಗೂ ಇನ್‍ಲ್ಯಾಂಡ್ ದೋಣಿ ಮಾಲಕರಿಗೂ ತಲಾ 3000 ರೂ.

ಕೊರೋನಾ ಸೋಂಕಿತರನ್ನು ಬೆತ್ತಲಾಗಿಸಿ, ನೆಲದ ಮೇಲೆ ನೀಡುತ್ತಿದ್ದಾರೆ ಚಿಕಿತ್ಸೆ !!!

ಭುವನೇಶ್ವರದ ಮಯೂರ್ಭಂಜ್ ಕೋ ಆಸ್ಪತ್ರೆಯಲ್ಲಿ ಸೋಂಕಿತರನ್ನು ನೆಲದ ಮೇಲೆ ಬೆತ್ತಲಾಗಿ ಮಲಗಿಸಿ ಚಿಕಿತ್ಸೆ ಕೊಡುತ್ತಿರುವ ವಿಡಿಯೋ, ಫೋಟೋ ವೈರಲ್ ಆಗಿದ್ದು, ವ್ಯಾಪಕ ಕೋಲಾಹಲ ಸೃಷ್ಟಿಸಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಹಾಗೂ ವಿಡಿಯೋ ತುಣುಕುಗಳಲ್ಲಿ ಸೋಂಕಿತರು ಹಾಸಿಗೆ