Education

KCET 2022 ರ ಪಠ್ಯಕ್ರಮ ಪ್ರಕಟ : ಡೌನ್‌ಲೋಡ್ ಮಾಡುವ ಮಾಹಿತಿ ಇಲ್ಲಿದೆ

2022ನೇ ಸಾಲಿನ KCET(ಕರ್ನಾಟಕ ಸಾಮನ್ಯ ಪ್ರವೇಶ ಪರೀಕ್ಷೆ) ಪಠ್ಯಕ್ರಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಫೀಶಿಯಲ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಉತ್ತಮ ತಯಾರಿಗಾಗಿ ಈ ಪಠ್ಯಕ್ರಮವನ್ನು ಚೆಕ್ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಇಂಜಿನಿಯರಿಂಗ್, ತಂತ್ರಜ್ಞಾನ ಕೋರ್ಸ್‌ಗಳು, ಫಾರ್ಮ್ ಸೈನ್ಸ್ ಕೋರ್ಸ್‌ಗಳು, ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನ ಕೋರ್ಸ್‌ಗಳು, ಬಿ ಫಾರ್ಮ್, ಫಾರ್ಮ್ ಡಿ ಮತ್ತು ನ್ಯಾಚುರೋಪತಿ ಮತ್ತು ಯೋಗ ಕೋರ್ಸ್‌ಗಳು ಸೇರಿದಂತೆ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೆಸಿಇಟಿ ನಡೆಸಲಾಗುತ್ತದೆ. KCET 2022 …

KCET 2022 ರ ಪಠ್ಯಕ್ರಮ ಪ್ರಕಟ : ಡೌನ್‌ಲೋಡ್ ಮಾಡುವ ಮಾಹಿತಿ ಇಲ್ಲಿದೆ Read More »

ಜಿಟಿಡಿಸಿ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಆರಂಭ

ವಿಜಯನಗರಹೊಸಪೇಟೆ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರವೇಶಕ್ಕೆ ಅರ್ಜಿಗಳು ಆಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಶಂಕರ ಆನಂದಲಾಲಿ ತಿಳಿಸಿದರು.ಈ ಕುರಿತು ಹೊಸಪೇಟೆಯ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಅನುಭವಿ ಪ್ರಾಧ್ಯಾಪಕ ತಂಡ ಅತ್ಯಾಧುನಿಕ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ವಿಶ್ವದ ಉನ್ನತ ದರ್ಚೆಯ ಕಂಪನಿಗಳ ನೇರ ಸಂದರ್ಶನ ಸೇರಿದಂತೆ ಖಚಿತ ಉದ್ಯೋಗಾವಕಾಶಗಳನ್ನು ನೀಡುವ ಈ ಕಾರ್ಯಕ್ಕೆ ಹೆಚ್ಚು ವಿದ್ಯಾರ್ಥಿಗಳ ಸೇರಿಕೊಳ್ಳಲು ಸುವರ್ಣಾವಕಾಶ ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ಕರೆ ನೀಡಿದರು.ಸಂಸ್ಥೆಯಲ್ಲಿ ಈ ವರೆಗೂ ವ್ಯಾಸಂಗ ಮಾಡಿದ ಬಹುತೇಕರು ದೇಶ ವಿದೇಶ …

ಜಿಟಿಡಿಸಿ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಆರಂಭ Read More »

ವಿದ್ಯಾರ್ಥಿಗಳೇ ಬಹುಮುಖ್ಯ ಮಾಹಿತಿ ಗಮನಿಸಿ:
ಈ ಶೈಕ್ಷಣಿಕ ವರ್ಷದಿಂದಲೇ “ತೆರೆದ ಪುಸ್ತಕ ಪರೀಕ್ಷೆ” | 8,9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪರೀಕ್ಷೆ

ಹಿಂದಿನಿಂದಲೂ ರಾಜ್ಯದಲ್ಲಿ ತೆರೆದ ಪುಸ್ತಕ ಪರೀಕ್ಷೆ ಚರ್ಚೆಯಲ್ಲಿರುವ ಸುದ್ದಿ. ಆದರೆ ಶಿಕ್ಷಣ ಇಲಾಖೆ ಈ ಬಾರಿ ಅಂದರೆ ಪ್ರಸಕ್ತ ವರ್ಷದಿಂದ ತೆರೆದ ಪುಸ್ತಕ ಪರೀಕ್ಷೆಯನ್ನು ಜಾರಿಗೆ ತರಲು ಮುಂದಾಗಿದೆ. ಯಾವುದೇ ಮುಖ್ಯ ಪರೀಕ್ಷೆಯಲ್ಲಿ ಈ ಕ್ರಮವನ್ನು ಅನುಸರಿಸದೆ, ಕೇವಲ ಶೈಕ್ಷಣಿಕ ಚಟುವಟಿಕೆಯ ಒಂದು ಭಾಗವಾಗಿ ಮಾತ್ರ ನಡೆಸಲು ತಿರ್ಮಾನಿಸಲಾಗಿದೆ ಎನ್ನಲಾಗಿದೆ. ಫಲಿತಾಂಶ ಸುಧಾರಣ ಅಂಶವಾಗಿ ಪರಿಗಣಿಸಿ, ಶಿಕ್ಷಣ ಇಲಾಖೆ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ. 8,9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪರೀಕ್ಷೆ, ಕೇಂದ್ರೀಕೃತ ಮೌಲ್ಯಮಾಪನ …

ವಿದ್ಯಾರ್ಥಿಗಳೇ ಬಹುಮುಖ್ಯ ಮಾಹಿತಿ ಗಮನಿಸಿ:
ಈ ಶೈಕ್ಷಣಿಕ ವರ್ಷದಿಂದಲೇ “ತೆರೆದ ಪುಸ್ತಕ ಪರೀಕ್ಷೆ” | 8,9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪರೀಕ್ಷೆ
Read More »

SSLC ಉತ್ತರ ಪತ್ರಿಕೆಯ ಸ್ಕ್ಯಾನ್ ಹಾಗೂ ಮರು ಮೌಲ್ಯಮಾಪನಕ್ಕೆ ವೆಬ್‌ಸೈಟ್ ಓಪನ್ | ಲೋಪದೋಷ ಸರಪಡಿಸಿದ ಪರೀಕ್ಷಾ ಮಂಡಳಿ

SSLC ಪರೀಕ್ಷೆಯ ಫಲಿತಾಂಶವನ್ನು ಮೇ 19 ರಂದು ಪ್ರಕಟಿಸಲಾಗಿತ್ತು. ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು, ಶೇಕಡ 85.63 ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಆದರೆ ಫಲಿತಾಂಶ ಬಂದರೂ ಕೆಲವು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹೌದು ಫಲಿತಾಂಶ ಬಂದಿದೆ ನಿಜ, ಆದರೆ ನಮಗೆ ಇನ್ನೂ ಹೆಚ್ಚಿನ ಅಂಕಗಳು ಬರಬೇಕಿತ್ತು ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ. ಈಗ ಆ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ ಪಡೆಯಲು ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು …

SSLC ಉತ್ತರ ಪತ್ರಿಕೆಯ ಸ್ಕ್ಯಾನ್ ಹಾಗೂ ಮರು ಮೌಲ್ಯಮಾಪನಕ್ಕೆ ವೆಬ್‌ಸೈಟ್ ಓಪನ್ | ಲೋಪದೋಷ ಸರಪಡಿಸಿದ ಪರೀಕ್ಷಾ ಮಂಡಳಿ Read More »

ಖಾಸಗಿ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ

ಬಳ್ಳಾರಿ : ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಸಿಹಿಸುದ್ದಿ ಇದ್ದು, ಇಲ್ಲಿಯವರೆಗೆ ಯಾವುದೇ ಪರೀಕ್ಷೆ ಇಲ್ಲದೆ ಶುಲ್ಕ ಪಾವತಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಬೇಕಿತ್ತು. ಆದರೀಗ ಸಮಾಜ ಕಲ್ಯಾಣ ಇಲಾಖೆ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಿದೆ. 2022-23ನೇ ಸಾಲಿಗೆ 5ನೇ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಖಾಸಗಿ ಶಾಲೆಗಳಲ್ಲಿ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ …

ಖಾಸಗಿ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ Read More »

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಗ್ರಾಮ ಒನ್ ಕೇಂದ್ರಗಳ ಮೂಲಕ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಅವಕಾಶ

ವಿದ್ಯಾರ್ಥಿಗಳಿಗೆ ಕೆಎಸ್‍ಆರ್ ಟಿಸಿ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಸರ್ಕಾರದ ಆದೇಶದಂತೆ ಗ್ರಾಮ ಒನ್ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಒಟ್ಟು 768 ಸೇವೆಗಳನ್ನು ನೀಡಲಾಗುತ್ತಿದೆ. ಇದೀಗ ಅದರಲ್ಲಿ ಬಸ್ ಪಾಸ್ ಸೇವೆಯನ್ನು ನೀಡಲು ಪ್ರಾರಂಭಿಸಿದೆ. ವಿದ್ಯಾರ್ಥಿಗೆ ಬಸ್ ಪಾಸ್‍ಗೆ ಅಗತ್ಯ ದಾಖಲೆ, ಶೈಕ್ಷಣಿಕ ಸಂಸ್ಥೆ ಕೆಎಸ್‍ಆರ್ ಸಿಟಿ ಬಸ್ ಪಾಸ್‍ನಿಂದ ಘೋಷಣೆ ಪ್ರಮಾಣಪತ್ರ, ಆಧಾರ್ ಕಾರ್ಡ್, ಶುಲ್ಕ ಪಾವತಿಸಿದ ರಸೀದಿ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, …

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಗ್ರಾಮ ಒನ್ ಕೇಂದ್ರಗಳ ಮೂಲಕ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಅವಕಾಶ Read More »

ವಿದೇಶಿ ವಿದ್ಯಾಭ್ಯಾಸದ ಕನಸು ಕಂಡಿದ್ದೀರಾ? ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳಬೇಕು ಎನ್ನುವವರು ಈ ವಿಷಯಗಳ ಬಗ್ಗೆ ತಪ್ಪದೆ ತಿಳಿದುಕೊಳ್ಳಿ

ಸಾಮಾನ್ಯವಾಗಿ ವಿದ್ಯಾರ್ಥಿಗಳು ವಿದೇಶದಲ್ಲಿ ಓದಬೇಕು ಎನ್ನುವ ಹಂಬಲ ಸಾಧಾರಣವಾಗಿ ಇಟ್ಟುಕೊಂಡಿರುತ್ತಾರೆ. ಆದರೆ ವಿದೇಶದಲ್ಲಿ ಅಧ್ಯಯನಕ್ಕಾಗಿ ಹೋಗುವಾಗ ಕೆಲವೊಂದು ಮಾಹಿತಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಉತ್ತಮ. ದೇಶದಿಂದ ದೇಶಕ್ಕೆ ತೆರಳುತ್ತಿರುವ ಕಾರಣ ಮಾನಸಿಕವಾಗಿಯೂ ಸದೃಢರಾಗಿರುವುದು ಬಹು ಮುಖ್ಯ. ನೀವು ವಿದೇಶಕ್ಕೆ ಅಧ್ಯಯನಕ್ಕೆ ತೆರಳುವ ಮುನ್ನ ಈ ಕೆಳಗಿನ ವಿಷಯಗಳನ್ನು ನೀವು ಸಂಪೂರ್ಣವಾಗಿ ತಿಳಿದುಕೊಂಡರೆ ಒಳಿತು. ನಮ್ಮ ಊರಿನಿಂದ ಇನ್ನೊಂದು ಊರಿಗೇ ಹೋಗಿ ಜೀವನ ನಡೆಸುವುದೇ ಕಷ್ಟ. ಅಂತಹುದರಲ್ಲಿ ಯಾವುದೇ ಗೊತ್ತು ಗುರಿಯಿಲ್ಲದ ದೇಶ, ನಗರಕ್ಕೆ ತೆರಳಿ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ …

ವಿದೇಶಿ ವಿದ್ಯಾಭ್ಯಾಸದ ಕನಸು ಕಂಡಿದ್ದೀರಾ? ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳಬೇಕು ಎನ್ನುವವರು ಈ ವಿಷಯಗಳ ಬಗ್ಗೆ ತಪ್ಪದೆ ತಿಳಿದುಕೊಳ್ಳಿ Read More »

ಜೂನ್ ತಿಂಗಳಲ್ಲಿ ನಡೆಯಲಿರುವ ಸಿಇಟಿ ಪರೀಕ್ಷೆಗೂ ಹಿಜಾಬ್ ನಿಷೇಧ !! | ಪರೀಕ್ಷೆ ಕುರಿತಂತೆ ಇನ್ನೂ ಹಲವು ನಿಯಮಗಳನ್ನು ಜಾರಿಗೊಳಿಸಿದ ಕೆಇಎ

ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆ ಬಳಿಕ ಸಿಇಟಿ ಪರೀಕ್ಷೆ ನಡೆಯಲಿದೆ. ಇದೀಗ ಸಿಇಟಿ ಪರೀಕ್ಷೆಯಲ್ಲಿ ಹಿಜಾಬ್‌ ಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿಗೆ ಅನ್ವಯವಾಗುವ ನಿಯಮಗಳೇ ಸಿಇಟಿ ಪರೀಕ್ಷೆಗೂ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೂನ್ 16, 17 ಹಾಗೂ 18 ರಂದು ಈ ವರ್ಷದ ಸಿಇಟಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. …

ಜೂನ್ ತಿಂಗಳಲ್ಲಿ ನಡೆಯಲಿರುವ ಸಿಇಟಿ ಪರೀಕ್ಷೆಗೂ ಹಿಜಾಬ್ ನಿಷೇಧ !! | ಪರೀಕ್ಷೆ ಕುರಿತಂತೆ ಇನ್ನೂ ಹಲವು ನಿಯಮಗಳನ್ನು ಜಾರಿಗೊಳಿಸಿದ ಕೆಇಎ Read More »

SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ | ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ: ಎಸ್.ಎಸ್.ಎಲ್. ಸಿ ಪಾಸ್ ಆದ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ, ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಿಂದ ಪ್ರೋತ್ಸಾಹ ಧನ ನೀಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಮೇ.19 ರಂದು ಪ್ರಕಟಗೊಂಡಿದ್ದು, ಈ ಪರೀಕ್ಷೆಯಲ್ಲಿ 600 ಅಂಕಕ್ಕಿಂತ ಹೆಚ್ಚು ಅಂಕ ಪಡೆದ ಕಾರ್ಮಿಕರ ಮಕ್ಕಳಿಗೆ ಈ ಸೌಲಭ್ಯ ನೀಡಲಾಗುತ್ತದೆ. ಈ ಪ್ರೋತ್ಸಾಹ ಧನ ಪಡೆಯಲು ನೋಂದಾಯಿತ ಕಾರ್ಮಿಕ ಮಕ್ಕಳ ಹೆಸರು, ಫಲಾನುಭವಿಗಳ ಹೆಸರು, ನೋಂದಾಣಿ …

SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ | ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ Read More »

ತಾಂಡ ಹುಡಗ ಎಸ್ಸೆಸ್ಸೆಲ್ಸಿಯಲ್ಲಿ ಹೊಸಪೇಟೆಗೆ ಫಸ್ಟ್!

ಹೊಸಪೇಟೆ: ತಾಂಡ ಹುಡುಗ ಎಸ್ಸೆಸ್ಸೆಲ್ಸಿಯಲ್ಲಿ ೬೨೫ಕ್ಕೆ ೬೨೪ ಅಂಕಗಳನ್ನು ಪಡೆದು ಹೊಸಪೇಟೆ ತಾಲೂಕಿಗೆ ಮೊದಲ ಸ್ಥಾನ ಪಡೆದಿದ್ದಾನೆ. ಹೌದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ ತಾಂಡಾದ ತರುಣಕುಮಾರ ವಿ. ಹೊಸಪೇಟೆ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ೬೨೪ಕ್ಕೆ ೬೨೫ ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಲ್ಲಿ ಅಪ್ಪ-ಅಮ್ಮನೊಂದಿಗೆ ಬಾಲಕ ತರುಣಕುಮಾರ ಕಬ್ಬು ಕಟಾವು ಮಾಡಲು ಮಂಡ್ಯ, ಮೈಸೂರಿಗೂ ತೆರಳಿದ್ದ. ಕಿತ್ತು ತಿನ್ನುವ ಬಡತನದ ಮಧ್ಯೆ ಬಾಲಕ ತರುಣ ಮಾಡಿರುವ …

ತಾಂಡ ಹುಡಗ ಎಸ್ಸೆಸ್ಸೆಲ್ಸಿಯಲ್ಲಿ ಹೊಸಪೇಟೆಗೆ ಫಸ್ಟ್! Read More »

error: Content is protected !!
Scroll to Top