Day: May 23, 2021

ನಿಯಮ ಉಲ್ಲಂಘಿಸಿದರೆ ಕ್ರಮ: ದ.ಕ. ಜಿಲ್ಲಾಧಿಕಾರಿ

ಮಂಗಳೂರು: ಕೋವಿಡ್ ನಿಗ್ರಹಕ್ಕಾಗಿ ರಾಜ್ಯ ಸರಕಾರದ ಆದೇಶದಂತೆ ಜೂನ್ 7ರ ಬೆಳಗ್ಗೆ 6ರವರೆಗೆ ದ.ಕ.ಜಿಲ್ಲೆಯಲ್ಲೂ ಲಾಕ್‌ಡೌನ್ ಮುಂದುವರಿಸಲಾಗಿದೆ. ಈ ದಿನಗಳಲ್ಲಿ ನಿಗದಿತ ಸಮಯದೊಳಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರಿಂದ 60ರ ಅನ್ವಯ ಐಪಿಸಿ ಕಲಂ 188ರಂತೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4,5,10ರಂತೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಸಿದ್ದಾರೆ

ಅಮರ ಪಡ್ನೂರು | ವೃದ್ಧೆಯ ಮನೆಯ ಮೇಲ್ಛಾವಣಿಯನ್ನು ನಿರ್ಮಿಸಿ ಮಾನವೀಯತೆ ಮೆರೆದ ಶೇಣಿಯ ಯುವಕರು

ಅಮರಪಡ್ನೂರು ಗ್ರಾಮದ ಶೇಣಿಯ ಯುವಕರು ಅಶಕ್ತರಾದ ವೃದ್ಧೆಯೋರ್ವರಿಗೆ ಮನೆಯ ಛಾವಣಿಯನ್ನು ಸರಿಪಡಿಸುವುದರ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ. ಶೇಣಿಯ ವೃದ್ಧೆಯೊಬ್ಬರ ಮನೆಯ ಚಾವಣಿಯು ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ವಾಸಿಸಲು ಯೋಗ್ಯವಾಗದೆ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದರು. ಇದನ್ನು ಮನಗಂಡ ಶೇಣಿಯ ಯುವಕರು ಒಟ್ಟು ಸೇರಿ ಇಂದು ಮನೆಯ ಮೇಲ್ಚಾವಣಿಯನ್ನು ಸರಿಪಡಿಸಿದರು.‌ ನೂತನವಾದ ಛಾವಣಿಯನ್ನು ನಿರ್ಮಿಸಿದರು. ಈ ಕಾರ್ಯದಲ್ಲಿ ಶೇಣಿಯ ಹೆಚ್ಚಿನ ಯುವಕರು ಪಾಲ್ಗೊಂಡಿದ್ದರು.‌ ಶೇಣಿಯ ಯುವಕರು ತಮ್ಮ ಬಿಡುವಿನ ಸಂದರ್ಭದಲ್ಲಿ ಇಂತಹ ಕಾರ್ಯದಲ್ಲಿ ಪಾಲ್ಗೊಂಡದ್ದು ಮೆಚ್ಚುಗೆಯನ್ನು ಪಡೆದಿದೆ. ವರದಿ: ಸೃಜನ್ …

ಅಮರ ಪಡ್ನೂರು | ವೃದ್ಧೆಯ ಮನೆಯ ಮೇಲ್ಛಾವಣಿಯನ್ನು ನಿರ್ಮಿಸಿ ಮಾನವೀಯತೆ ಮೆರೆದ ಶೇಣಿಯ ಯುವಕರು Read More »

‘ಮೂರನೇಯ ಮಹಾಯುದ್ಧದ ದಿಶೆಯಲ್ಲಿ’ ಈ ಕುರಿತು ಆನ್‌ಲೈನ್ ವಿಶೇಷ ವಿಚಾರ ಸಂಕಿರಣ !

ಪ್ಯಾಲೆಸ್ಟೈನ್ ಮತ್ತು ಚೀನಾ ಇವುಗಳ ಕುರಿತು ಭಾರತವು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಇಸ್ರೈಲ್‌ಗೆ ಬೆಂಬಲ ನೀಡಬೇಕು ! – ಶ್ರೀ. ಸುಶೀಲ ಪಂಡಿತ, ಸಂಸ್ಥಾಪಕರು, ‘ರೂಟ್ಸ್ ಇನ್ ಕಾಶ್ಮೀರ್’ ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಸ್ರೈಲ್ ಭಾರತಕ್ಕೆ ಯುದ್ಧಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿತ್ತು. ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ; ಆದರೆ ಇಂದು ಇಸ್ರೈಲ್ ಮತ್ತು ಪ್ಯಾಲೆಸ್ಟೈನ್ ಇವುಗಳ ನಡುವಿನ ಯುದ್ಧದಲ್ಲಿ ನಾವು ಪ್ಯಾಲೆಸ್ಟೈನ್‌ನನ್ನು ಸಮರ್ಥಿಸುತ್ತಿದ್ದೇವೆ, ಇದು ಮಿತ್ರತ್ವಕ್ಕೆ ದ್ರೋಹ ಬಗೆದಂತಾಗುವುದಿಲ್ಲವೇ ? ಇದೇ ಪ್ಯಾಲೆಸ್ಟೈನ್ ಕಾಶ್ಮೀರದ ವಿಷಯದಲ್ಲಿ …

‘ಮೂರನೇಯ ಮಹಾಯುದ್ಧದ ದಿಶೆಯಲ್ಲಿ’ ಈ ಕುರಿತು ಆನ್‌ಲೈನ್ ವಿಶೇಷ ವಿಚಾರ ಸಂಕಿರಣ ! Read More »

ಹಾಡುಹಗಲೇ ಯುವಕನ ಕೊಲೆ..ಎರಡು ವಾರದ ಹಿಂದೆಯಷ್ಟೇ ಜೈಲಿಂದ ಬಿಡುಗಡೆಯಾಗಿದ್ದ ವ್ಯಕ್ತಿ

ರೌಡಿಶೀಟರ್ ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ವಲ್ಲಭಾಯ್ ರಸ್ತೆಯಲ್ಲಿ ನಡೆದಿದೆ. ಭರತ್ ಕೊಲೆಯಾದ ರೌಡಿಶೀಟರ್. ಈತ ಎರಡು ವಾರದ ಹಿಂದೆ ಜೈಲಿನಿಂದ ಹೊರಬಂದಿದ್ದ. ಇಂದು ಹಾಸನ ಸಂತೆಪೇಟೆಯ 80 ಫೀಟ್ ರಸ್ತೆಯಲ್ಲಿ ಭರತ್​​ ಬೈಕ್​ನಲ್ಲಿ ತೆರಳುತ್ತಿದ್ದಾಗ ತೆಲೆಗೆ ಮಚ್ಚಿನಿಂದ ಕೊಚ್ಚಿ, ಬರ್ಬರ ಹತ್ಯೆ ಮಾಡಲಾಗಿದೆ. ಈ ಕುರಿತು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ. ಘಟನೆ ಹಿಂದೆ ವೈಷಮ್ಯದ ಕಾರಣ ಇರುವ ಸಾಧ್ಯತೆ ಇದೆ ಎಂದು …

ಹಾಡುಹಗಲೇ ಯುವಕನ ಕೊಲೆ..ಎರಡು ವಾರದ ಹಿಂದೆಯಷ್ಟೇ ಜೈಲಿಂದ ಬಿಡುಗಡೆಯಾಗಿದ್ದ ವ್ಯಕ್ತಿ Read More »

ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಇನ್ನಿಲ್ಲ

ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಅವರು ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು. ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಚ್ಚೇಂದ್ರನಾಥ್ ಅವರು ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದು ಸಾಕಷ್ಟು ಶಿಷ್ಯರನ್ನು ಹೊಂದಿದ್ದರು. ಮೃತರು ಪುತ್ರಿ ಖ್ಯಾತ ಸ್ಯಾಕ್ಸೋಫೋನ್ ವಾದಕಿ ಸಿಂಧು ಭೈರವಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿದ್ದ ಅವರ ಪತ್ನಿ ಇತ್ತೀಚೆಗೆ ನಿಧನರಾಗಿದ್ದಾರೆ.

ನಿಯಮಮೀರಿ ಅನಗತ್ಯ ಸಂಚಾರ ಮಾಡಿದ ವ್ಯಕ್ತಿಗಳಿಗೆ ಇನ್ನು ಮುಂದೆ ಕಸ ಹೆಕ್ಕುವ ಕೆಲಸ, ಕಸ ವಿಲೇವಾರಿಗೆ ಅವರ ವಾಹನಗಳೇ ಬಳಕೆ !

ಉಡುಪಿ: ಲಾಕ್ ಡೌನ್ ಅವಧಿ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆ ಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಅದೇ ವಾಹನದವರಿಂದಲೇ ಕಸ- ತ್ಯಾಜ್ಯ ವಿಲೇವಾರಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಕಟು ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ಆಭರಣ ಮೋಟರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ ವರೆಗೆ ಹೆದ್ದಾರಿ ಬದಿ ಬಿದ್ದಿದ್ದ ಕಸ- ತ್ಯಾಜ್ಯ ರಾಶಿಯನ್ನು ಈ ವೃಥಾ ಸಂಚಾರಿಗಳ ವಾಹನಕ್ಕೆ ತುಂಬಿಸಿ ಅಲೆವೂರಿನ ಡಂಪಿಂಗ್ ಯಾರ್ಡ್ ಗೆ ಸಾಗಿಸಿದರು. ಇನ್ನು …

ನಿಯಮಮೀರಿ ಅನಗತ್ಯ ಸಂಚಾರ ಮಾಡಿದ ವ್ಯಕ್ತಿಗಳಿಗೆ ಇನ್ನು ಮುಂದೆ ಕಸ ಹೆಕ್ಕುವ ಕೆಲಸ, ಕಸ ವಿಲೇವಾರಿಗೆ ಅವರ ವಾಹನಗಳೇ ಬಳಕೆ ! Read More »

ತಂದೆಯ ಮರಣದ ಸುದ್ದಿ ತಿಳಿಸಿದರೂ ನೋಡಲು ಬಾರದ ಮಗ, ತಂದೆಯ ಲಕ್ಷಾಂತರ ಹಣವನ್ನು ಮಾತ್ರ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆ !

ದುಡ್ಡು ಎಷ್ಟು ಖರ್ಚಾದರೂ ಪರವಾಗಿಲ್ಲ. ನನ್ನ ತಂದೆ ತಾಯಿಯನ್ನು,ಬಂಧುಗಳನ್ನು ಉಳಿಸಿಕೊಡಿ ಎಂದು ಆಸ್ಪತ್ರೆಯಲ್ಲಿ ವೈದ್ಯರಲ್ಲಿ ಅಂಗಲಾಚಿ ಬೇಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಅಂತಹ ವಿಷಯಗಳನ್ನು ಅಗಾಗ ಕೇಳಿದ್ದೇವೆ. ಆದರೆ ಇಲ್ಲೊಬ್ಬ ನಿಷ್ಕರುಣಿ ಪಾಪಿ ಪುತ್ರ ತನ್ನ ತಂದೆಯ ಮರಣದ ಸುದ್ದಿ ತಿಳಿಸಿದರೂ ಕೊನೆ ಕ್ಷಣದಲ್ಲಿ ತಂದೆಯ ಮುಖ ನೋಡಲು ಕೂಡ ಬಾರದೇ, ತಂದೆಯ ಬಳಿಯಿದ್ದ ಲಕ್ಷಾಂತರ ಹಣವನ್ನು ಮಾತ್ರ ತನಗೆ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆಯಿದು. ಮೈಸೂರಿನಲ್ಲಿ ಕೊರೊನಾದಿಂದ ವ್ಯಕ್ತಿಯೊಬ್ಬರ ತಂದೆ ನಿಧನರಾಗಿದ್ದಾರೆ. ಈ ವಿಚಾರವನ್ನು …

ತಂದೆಯ ಮರಣದ ಸುದ್ದಿ ತಿಳಿಸಿದರೂ ನೋಡಲು ಬಾರದ ಮಗ, ತಂದೆಯ ಲಕ್ಷಾಂತರ ಹಣವನ್ನು ಮಾತ್ರ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆ ! Read More »

ತಾಯಿಯನ್ನು ಕಳೆದುಕೊಂಡ ದುಖದಲ್ಲಿದ್ದ ಮಗಳು ತಕ್ಷಣ ಅಮ್ಮನ ಮೊಬೈಲ್ ಫೋನ್ ಗೆ ತಡಕಾಡಿ ಹುಡುಕಿಕೊಡಿ ಎಂದು ಬೇಡಿಕೊಂಡಿದ್ದೇಕೆ ?!

ಮಡಿಕೇರಿಯ ಕೋವಿಡ್​ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೋವಿಡ್‌ನಿಂದ ತನ್ನ ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿ ಆಕೆಯ ಮೊಬೈಲ್​ಅನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾಳೆ. ಬಾರದ ಊರಿಗೆ ತೆರಳಿರುವ ಅಮ್ಮನ ನೆನಪುಗಳಿರುವ ಮೊಬೈಲ್​ಅನ್ನು ಹುಡುಕಿಕೊಡಿ ಎಂಬ ಅವಳ ಅಹವಾಲು ಕರುಳು ಹಿಂಡುವಂತಿದೆ. ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿ ಪುಟ್ಟ ಬಾಲಕಿ ಹೃತಿಕ್ಷಳಿಗೆ ಮತ್ತು ಅವಳ ತಂದೆತಾಯಿಗೆ ಇತ್ತೀಚೆಗೆ ಕರೊನಾ ಸೋಂಕು ತಗುಲಿತು. ಅವಳೂ ಮತ್ತು ದಿನಗೂಲಿ ನೌಕರರಾದ ತಂದೆ ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚಿಕಿತ್ಸೆ ಪಡೆದರೆ, ತಾಯಿಯನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. …

ತಾಯಿಯನ್ನು ಕಳೆದುಕೊಂಡ ದುಖದಲ್ಲಿದ್ದ ಮಗಳು ತಕ್ಷಣ ಅಮ್ಮನ ಮೊಬೈಲ್ ಫೋನ್ ಗೆ ತಡಕಾಡಿ ಹುಡುಕಿಕೊಡಿ ಎಂದು ಬೇಡಿಕೊಂಡಿದ್ದೇಕೆ ?! Read More »

ಯುವಕನ ಕಪಾಳಕ್ಕೆ ಹೊಡೆದು ಮೊಬೈಲ್ ಕಸಿದ ಜಿಲ್ಲಾಧಿಕಾರಿ ಅಮಾನತು

ಕೊರೋನಾ ನಿಯಮ ಉಲ್ಲಂಘಿಸಿದ ಎಂಬ ಕಾರಣ ನೀಡಿ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ ಜಿಲ್ಲಾಧಿಕಾರಿ ರಣಬೀರ್ ಶರ್ಮ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಭೂಪೇಶ್ ಬಫೇಲ್ ಅವರು ಈ ಆದೇಶ ಹೊರಡಿಸಿದ್ದಾರೆ. ಮತ್ತೊಬ್ಬ ಐಎಎಸ್ ಅಧಿಕಾರಿ ಗೌರವ್ ಕುಮಾರ್ ಸಿಂಗ್ ಅವರನ್ನು ಸೂರಜ್‌ಪುರದ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ರಣಬೀರ್ ಶರ್ಮ ಎಂಬ ಜಿಲ್ಲಾಧಿಕಾರಿ ಲಾಕ್‌ಡೌನ್ ನಡುವೆ ಕೆಲ ಯುವಕನ ಮೊಬೈಲ್ ಪಡೆದು ಜೋರಾಗಿ ನೆಲಕ್ಕೆ ಎಸೆದು …

ಯುವಕನ ಕಪಾಳಕ್ಕೆ ಹೊಡೆದು ಮೊಬೈಲ್ ಕಸಿದ ಜಿಲ್ಲಾಧಿಕಾರಿ ಅಮಾನತು Read More »

ಪೊಲೀಸರ ಲಾಠಿ ಏಟಿಗೆ ತರಕಾರಿ ಮಾರುತ್ತಿದ್ದ ಅಪ್ರಾಪ್ತ ಬಾಲಕ ಬಲಿ

ಕೊರೊನಾ ಕರ್ಫ್ಯೂ ಬಿಗುಗೊಳಿಸುವ ಕಾರ್ಯದಲ್ಲಿ ಪೊಲೀಸರು 17 ವರ್ಷ ವಯಸ್ಸಿನ ಬಾಲಕನೊಬ್ಬನ ಪ್ರಾಣ ತೆಗೆದಿರುವ ಘಟನೆ ನಡೆದಿದೆ. ಮನೆಯ ಮುಂದೆ ತರಕಾರಿ ಮಾರುತ್ತಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟು ತಿಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉನ್ನಾವ್ ಜಿಲ್ಲೆಯ ಬಂಗಾರ್‌ಮಾವ್ ಪ್ರದೇಶದ ಭಟ್‌ಪುರಿ ಬಡಾವಣೆಯಲ್ಲಿ ಬಾಲಕನೊಬ್ಬ ಮನೆಯ ಹೊರಗೆ ತರಕಾರಿ ಮಾರುತ್ತಿದ್ದ. ಕರೊನಾ ಕರ್ಪ್ಯೂ ಉಲ್ಲಂಘಿಸಿದ್ದಕ್ಕಾಗಿ ಅವನನ್ನು ಹಿಡಿದ ಪೊಲೀಸ್ ಪೇದೆ ಲಾಠಿಯಿಂದ ಹೊಡೆದರು. ನಂತರ ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲೂ ಥಳಿಸಿದರು. ಬಾಲಕನ ಪರಿಸ್ಥಿತಿ …

ಪೊಲೀಸರ ಲಾಠಿ ಏಟಿಗೆ ತರಕಾರಿ ಮಾರುತ್ತಿದ್ದ ಅಪ್ರಾಪ್ತ ಬಾಲಕ ಬಲಿ Read More »

error: Content is protected !!
Scroll to Top