Day: May 2, 2022

ಇ- ಕಾಮರ್ಸ್ ಅಮೇಜಾನ್ ಮೇಲೆ ಎಫ್‌ಐಆರ್ ದಾಖಲು!

ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್​ ಸಂಸ್ಥೆಯೊಂದರ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗರ್ಭಪಾತಕ್ಕೆ ಸಾಮಾನ್ಯವಾಗಿ ಬಳಸಲಾಗುವ ಎಂಟಿಪಿ ಕಿಟ್ ಅನ್ನು ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಲಾಗುತ್ತಿರುವುದು ಕಂಡುಬಂದಿತ್ತು. ಹಾಗಾಗಿ ಅಮೆಜಾನ್‌ನಲ್ಲಿ ಸ್ವತಃ ಎಂಟಿಪಿ ಕಿಟ್ ಆರ್ಡರ್ ಮಾಡಿ ತರಿಸಿಕೊಂಡು ಖಾತ್ರಿಯಾದ ಬಳಿಕ ಎಫ್‌ಐಆರ್ ಹಾಕಲಾಗಿದೆ. ಅರ್ಹ ವೈದ್ಯರ ಶಿಫಾರಸು ಪತ್ರ ಇಲ್ಲದೇ ಆನ್‌ಲೈನ್‌ನಲ್ಲಿ ಆಬಾರ್ಷನ್ ಕಿಟ್ ಮಾರಾಟ ಮಾಡಿದ ಅಮೆಜಾನ್ ವಿರುದ್ಧ ಮಹಾರಾಷ್ಟ್ರದ ಆಹಾರ ಮತ್ತು …

ಇ- ಕಾಮರ್ಸ್ ಅಮೇಜಾನ್ ಮೇಲೆ ಎಫ್‌ಐಆರ್ ದಾಖಲು! Read More »

ಎಸ್ ಎಸ್ ಎಲ್ ಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ| ಕರ್ನಾಟಕ ಅಂಚೆ ಇಲಾಖೆಯಲ್ಲಿದೆ ಬರೋಬ್ಬರಿ 2410 ಹುದ್ದೆಗಳು !

ಭಾರತೀಯ ಅಂಚೆ ಇಲಾಖೆಯಿಂದ ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆ : ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್, ಗ್ರಾಮೀಣ ಡಾಕ್ ಸೇವಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮೇ 02, 2022ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 05,2022 ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ …

ಎಸ್ ಎಸ್ ಎಲ್ ಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ| ಕರ್ನಾಟಕ ಅಂಚೆ ಇಲಾಖೆಯಲ್ಲಿದೆ ಬರೋಬ್ಬರಿ 2410 ಹುದ್ದೆಗಳು ! Read More »

ಗಂಡ ಹೆಂಡತಿಯ ವಿಚಿತ್ರ ಡಿವೋರ್ಸ್ ಒಪ್ಪಂದ…ಈಗ ಕೋರ್ಟ್ ಬಾಗಿಲಲ್ಲಿ…ಅಪರೂಪದಲ್ಲಿ ಅಪರೂಪದ ಘಟನೆ!

ದಂಪತಿಗಳ ಮಧ್ಯೆ ಕೆಲವೊಂದು ಕಾರಣಗಳಿಂದ ವಿರಸ ಆಗುವುದು ಸಹಜ. ಕೆಲವರು ಇದನ್ನು ಹಿರಿಯರ ಸಮ್ಮುಖದಲ್ಲಿ ಸರಿ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ದಂಪತಿಗಳ ಮಧ್ಯೆ ಈ ವಿರಸ ಸರಿಯಾಗುವುದಿಲ್ಲಾವೆಂದಾರೆ ವಿಚ್ಛೇದನ ಕೊಡುವುದು, ಕೋರ್ಟ್ ಮೊರೆ ಹೋಗುವುದು ಮಾಮೂಲು. ಆದರೆ ಕೋರ್ಟ್ ಮೊರೆ ಹೋದರೂ ಕೂಡಾ, ಆರು ತಿಂಗಳ ಸಮಯ ನೀಡಿ, ಮತ್ತೂ ಸಾಮರಸ್ಯ ಮೂಡದಿದ್ದರೆ ಇದು ಕೋರ್ಟ್ ಗೆ ಮನವರಿಕೆ ಆದರೆ ವಿಚ್ಛೇದನದ ಆದೇಶವನ್ನು ಅನಂತರ ಹೊರಡಿಸುತ್ತದೆ. ಇದೆಲ್ಲಾ ಎಲ್ಲರಿಗೂ ತಿಳಿದ ವಿಷಯ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ …

ಗಂಡ ಹೆಂಡತಿಯ ವಿಚಿತ್ರ ಡಿವೋರ್ಸ್ ಒಪ್ಪಂದ…ಈಗ ಕೋರ್ಟ್ ಬಾಗಿಲಲ್ಲಿ…ಅಪರೂಪದಲ್ಲಿ ಅಪರೂಪದ ಘಟನೆ! Read More »

ಮುಂದಿನ ಮೂರ್ನಾಲ್ಕು ದಿನ ದೇಶದಲ್ಲಿ ಹೆಚ್ಚಾಗಲಿದೆ ಬಿಸಿಲ ಶಾಖ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಸಲಹೆ

ಬಿಸಿಲ ಬೇಗೆಯಿಂದ ಜನ ಬೆಂದು ಹೋಗುತ್ತಿದ್ದಾರೆ.ದೇಶಾದ್ಯಂತ ಜನರು ತೀವ್ರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವೊಂದು ಸಲಹೆಯನ್ನು ನೀಡಿದ್ದು, ಶಾಖ ಸಂಬಂಧಿತ ಕಾಯಿಲೆಗಳನ್ನು ಪರಿಹರಿಸಲು ಎಲ್ಲಾ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇಲಾಖೆಗಳನ್ನು ಒತ್ತಾಯಿಸಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೆ ಶಾಖದ ಪರಿಣಾಮ ಹೆಚ್ಚಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಹಾಗೂ ಇದರ ಬಗ್ಗೆ ಹೇಗೆ ಜಾಗೃತಿ ವಹಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಆರೋಗ್ಯ ಇಲಾಖೆಯು ವೈದ್ಯಾಧಿಕಾರಿಗಳು,ಆರೋಗ್ಯ ಸಿಬ್ಬಂದಿ ಮತ್ತು …

ಮುಂದಿನ ಮೂರ್ನಾಲ್ಕು ದಿನ ದೇಶದಲ್ಲಿ ಹೆಚ್ಚಾಗಲಿದೆ ಬಿಸಿಲ ಶಾಖ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಸಲಹೆ Read More »

ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು- ಕುಡಿದು ಕಾರು ಚಲಾಯಿಸಿ, ಪೊಲೀಸರಿಗೆ ಆವಾಜ಼್ ಹಾಕಿದ ಮಹಿಳಾ ಅಧಿಕಾರಿ

ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆಯಿತು ಈ ಘಟನೆ. ಎಷ್ಟೇ ದೊಡ್ಡ ಅಧಿಕಾರಿಯಾದರೂ ಕುಡಿದು ತಕರಾರು ಮಾಡಿದರೆ ಮಾತ್ರ ಎಲ್ಲಾ ಗೌರವ ಸಾರ್ವಜನಿಕರ ಮನಸ್ಸಿನಲ್ಲಿ ಸರ್ರನೆ ಇಳಿದು ಹೋಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಉನ್ನತ ಹುದ್ದೆಯಲ್ಲಿದ್ದ ಮಹಿಳಾ‌ ಅಧಿಕಾರಿ ಕುಡಿದು ಮದ್ಯದ ಅಮಲಿನಲ್ಲಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ದೇವಿಪತನ್ ಮಂಡಲ್‌ನ ಉಪ ಕಾರ್ಮಿಕ ಆಯುಕ್ತ ರಚನಾ ಕೇಸರ್ವಾನಿ ಎಂದು ಗುರುತಿಸಲಾದ ಮಹಿಳಾ ಅಧಿಕಾರಿ ಕುಡಿದು ಬಚ್ ಪೊಲೀಸರಿಗೆ …

ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು- ಕುಡಿದು ಕಾರು ಚಲಾಯಿಸಿ, ಪೊಲೀಸರಿಗೆ ಆವಾಜ಼್ ಹಾಕಿದ ಮಹಿಳಾ ಅಧಿಕಾರಿ Read More »

ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಯುವತಿಯ ಮೇಲೆ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಬೈಕ್ ಪತ್ತೆ!

ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಯುವತಿಯ ಮೇಲೆ ಆಸಿಡ್ ದಾಳಿ ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರ ತಂಡ ಬಲೆಬೀಸುತ್ತಲೇ ಇದ್ದು,ಇದೀಗ ಪರಾರಿಯಾಗಿರುವಂತಹ ಕಿರಾತಕ ನಾಗೇಶ್ ಬೈಕ್ ಮೆಜೆಸ್ಟಿಕ್ ಬಳಿಯಲ್ಲಿ ಪತ್ತೆಯಾಗಿದೆ ಯುವತಿಯನ್ನ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಈ ಪಾಗಲ್ ಪ್ರೇಮಿ ಯಾವಾಗ ಯುವತಿ ಈತನ ಪ್ರೀತಿ ನಿರಾಕರಿಸಿದ್ದಾಳೊ ಆಗ ಸಿಟ್ಟುಗೊಂಡು ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ.ಯುವತಿ ಕೆಲಸಕ್ಕೆಂದು ಮುತ್ತೂಟ್ ಫಿನ್ ಕಾರ್ಪ್ ಬಳಿ ಬಂದಾಗ ಈ ಘಟನೆ ಸಂಭವಿಸಿತ್ತು.ಸದ್ಯ ಯುವತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ಚಿಕಿತ್ಸೆ …

ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಯುವತಿಯ ಮೇಲೆ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಬೈಕ್ ಪತ್ತೆ! Read More »

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ!

ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸುವುದರ ಜೊತೆಗೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 423 ಗ್ರಾಮ ಒನ್ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಕೇಂದ್ರ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಜನಸಂಖ್ಯೆ ಅನುಗುಣವಾಗಿ ಒಂದು ಅಥವಾ ಎರಡು ಕೇಂದ್ರ ತೆರೆಯಲು ಸರ್ಕಾರ ಅನುಮತಿ ನೀಡಿದ್ದು,ರಾಜ್ಯದ ಕೆಲವು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಯೋಜನೆ ಇದೀಗ ರಾಜ್ಯದೆಲ್ಲಡೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. …

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ! Read More »

ನಾಗಬನದಿಂದ ಪ್ರತಿಷ್ಠೆ ಮಾಡಿದ 6 ನಾಗನ ಕಲ್ಲುಗಳನ್ನು ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು!

ಕಿನ್ನಿಗೋಳಿ: ನಾಗಬನ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ರವಿವಾರ ನಡೆದಿದೆ. ಇದು ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗನಬನವಾಗಿದ್ದು,ರವಿವಾರ ಬೆಳಗ್ಗೆ ಭಂಡಾರಿ ಮನೆತನದ ವ್ಯಕ್ತಿಯೊಬ್ಬರು ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದದ್ದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ ಜಾಗದಲ್ಲಿ ಹಾಕಲಾಗಿದೆ ಎಂಬುದು ತಿಳಿದಿದೆ. ಬಿಜೆಪಿ ನಾಯಕ ಈಶ್ವರ್‌ ಕಟೀಲು ತಪ್ಪಿತಸ್ಥರನ್ನು …

ನಾಗಬನದಿಂದ ಪ್ರತಿಷ್ಠೆ ಮಾಡಿದ 6 ನಾಗನ ಕಲ್ಲುಗಳನ್ನು ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು! Read More »

Canara Bank ನಲ್ಲಿ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ಮೇ.15 ಕೊನೆಯ ದಿನಾಂಕ!

ಕೆನರಾ ಬ್ಯಾಂಕ್ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಡೆಪ್ಯೂಟಿ ಮ್ಯಾನೇಜಿಂಗ್ ಟ್ರಸ್ಟಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 12-05 2022 ರ ಮೊದಲು ಇಮೇಲ್ ಕಳುಹಿಸಬಹುದು. ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ದಿನಾಂಕಗಳು: ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 28-04 2022ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ:12-05-2022 ಬ್ಯಾಂಕ್ ಹೆಸರು : ಕೆನರಾ …

Canara Bank ನಲ್ಲಿ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ಮೇ.15 ಕೊನೆಯ ದಿನಾಂಕ! Read More »

ವೈದ್ಯಕೀಯ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ‘ಚರಕ ಶಪಥ’ ಪ್ರಮಾಣ ವಚನ ನೀಡಿದ್ದಕ್ಕೆ ಕಾಲೇಜು ಮುಖ್ಯಸ್ಥನ ವಜಾ !! | ಭಾಷೆಯ ವಿಚಾರದಲ್ಲಿ ಮತ್ತೆ ವಿವಾದಕ್ಕೆ ನಾಂದಿ ಹಾಡಿದ ಸರ್ಕಾರ

ದೇಶದಲ್ಲಿ ಪದೇ ಪದೇ ಭಾಷೆ ಕುರಿತಾದ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಅಂತೆಯೇ ಇದೀಗ ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಮಹರ್ಷಿ ʻಚರಕ ಶಪಥʼ ಪ್ರಮಾಣ ವಚನ ನೀಡಿದ್ದಕ್ಕೆ ವೈದ್ಯಕೀಯ ಕಾಲೇಜಿನ ಡೀನ್‌ರನ್ನು ತಮಿಳುನಾಡು ಸರ್ಕಾರ ವಜಾಗೊಳಿಸಿದ ಘಟನೆ ನಡೆದಿದೆ. ಹಿಂದಿ ಹೇರಿಕೆ ವಿವಾದ, ಕೇಂದ್ರದೊಂದಿಗಿನ ರಾಜ್ಯ ಸರ್ಕಾರದ ಉದ್ವಿಗ್ನತೆ ನಡುವೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಪಳನಿವೇಲ್‌ ತ್ಯಾಗ ರಾಜನ್‌ ಮತ್ತು ವಾಣಿಜ್ಯ ತೆರಿಗೆ ಸಚಿವ ಪಿ.ಮೂರ್ತಿ ಭಾಗವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಸಂಸ್ಕೃತದಲ್ಲಿ …

ವೈದ್ಯಕೀಯ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ‘ಚರಕ ಶಪಥ’ ಪ್ರಮಾಣ ವಚನ ನೀಡಿದ್ದಕ್ಕೆ ಕಾಲೇಜು ಮುಖ್ಯಸ್ಥನ ವಜಾ !! | ಭಾಷೆಯ ವಿಚಾರದಲ್ಲಿ ಮತ್ತೆ ವಿವಾದಕ್ಕೆ ನಾಂದಿ ಹಾಡಿದ ಸರ್ಕಾರ Read More »

error: Content is protected !!
Scroll to Top