ಇ- ಕಾಮರ್ಸ್ ಅಮೇಜಾನ್ ಮೇಲೆ ಎಫ್‌ಐಆರ್ ದಾಖಲು!

ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್​ ಸಂಸ್ಥೆಯೊಂದರ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಗರ್ಭಪಾತಕ್ಕೆ ಸಾಮಾನ್ಯವಾಗಿ ಬಳಸಲಾಗುವ ಎಂಟಿಪಿ ಕಿಟ್ ಅನ್ನು ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಲಾಗುತ್ತಿರುವುದು ಕಂಡುಬಂದಿತ್ತು. ಹಾಗಾಗಿ ಅಮೆಜಾನ್‌ನಲ್ಲಿ ಸ್ವತಃ ಎಂಟಿಪಿ ಕಿಟ್ ಆರ್ಡರ್ ಮಾಡಿ ತರಿಸಿಕೊಂಡು ಖಾತ್ರಿಯಾದ ಬಳಿಕ ಎಫ್‌ಐಆರ್ ಹಾಕಲಾಗಿದೆ.

ಅರ್ಹ ವೈದ್ಯರ ಶಿಫಾರಸು ಪತ್ರ ಇಲ್ಲದೇ ಆನ್‌ಲೈನ್‌ನಲ್ಲಿ ಆಬಾರ್ಷನ್ ಕಿಟ್ ಮಾರಾಟ ಮಾಡಿದ ಅಮೆಜಾನ್ ವಿರುದ್ಧ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಎಫ್‌ಐಆರ್ ದಾಖಲಿಸಿದೆ.

ಗರ್ಭಪಾತಕ್ಕೆ ಬಳಸುವ ಎಂಟಿಪಿ ಕಿಟ್ ಅನ್ನು 1940ರ ಡ್ರಗ್ಸ್ ಕಾಯ್ದೆ ಅಡಿ ಸ್ಕೆಡ್ಯೂಲ್ ಎಚ್ ಔಷಧ ವರ್ಗೀಕರಣಕ್ಕೆ ಸೇರಿಸಲಾಗಿದೆ. ಅರ್ಹ ವೈದ್ಯರ ಪ್ರಿಸ್‌ಕ್ರಿಪ್ಷನ್ ಇದ್ದರೆ ಮಾತ್ರ ಇದರ ಮಾರಾಟ ಮಾಡಬೇಕೆಂದು ನಿಯಮ ಇದೆ. ಈ ಔಷಧವನ್ನು ಆಸ್ಪತ್ರೆಯಲ್ಲಿ ತಜ್ಞರ ಮೂಲಕ ಬಳಸಬೇಕೆಂದು 2002ರ ಗರ್ಭಪಾತ ಕಾನೂನು ಹೇಳುತ್ತದೆ.

ಆಸ್ಪತ್ರೆಗಳಲ್ಲಿ ಕೂಡ ಗರ್ಭಪಾತ ಮಾಡುವಂತಿಲ್ಲ. ಮೆಡಿಕಲ್ ಟರ್ಮಿನೇಶನ್​ ಆಫ್​ ಪ್ರೆಗ್ನೆನ್ಸಿ ಕಾಯ್ದೆ 2002 ಮತ್ತು 2003 ರ ನಿಯಮಗಳ ಅನುಸಾರ, ಗರ್ಭಪಾತದ ಮಾತ್ರೆಗಳು ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ಇರಬೇಕು. ಆನ್‌ಲೈನ್‌ನಲ್ಲಿ ಇಂಥ ಹಲವು ಔಷಧಗಳನ್ನು ವೈದ್ಯರ ಪ್ರಿಸ್‌ಕ್ರಿಪ್ಷನ್ ಇಲ್ಲದೇ ಮಾರಾಟ ಮಾಡಲಾಗುತ್ತಿದೆ ಎಂದು ಹಲವರು ಆರೋಪಿಸುತ್ತಾರೆ. ಇದೀಗ ಅಮೆಜಾನ್ ಮೇಲೆ ಹಾಕಲಾಗಿರುವ ಎಫ್‌ಐಆರ್‌ನಿಂದಾಗಿ ಇಂಥ ಅಕ್ರಮ ಮಾರಾಟಗಳಿಗೆ ಮುಂದೆ ಕಡಿವಾಣ ಬೀಳಬಹುದು .

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಪ್ರಾಧಿಕಾರವು ಇನ್ನಷ್ಟು ವಿಚಾರಣೆ ನಡೆಸಿದಾಗ ಈ ಔಷಧವನ್ನು ಒಡಿಶಾದಿಂದ ಸಪ್ಲೈ ಮಾಡಿರುವುದು ತಿಳಿದುಬಂದಿದೆ. 

Leave A Reply

Your email address will not be published.