ಮುಂದಿನ ಮೂರ್ನಾಲ್ಕು ದಿನ ದೇಶದಲ್ಲಿ ಹೆಚ್ಚಾಗಲಿದೆ ಬಿಸಿಲ ಶಾಖ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಸಲಹೆ

ಬಿಸಿಲ ಬೇಗೆಯಿಂದ ಜನ ಬೆಂದು ಹೋಗುತ್ತಿದ್ದಾರೆ.
ದೇಶಾದ್ಯಂತ ಜನರು ತೀವ್ರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವೊಂದು ಸಲಹೆಯನ್ನು ನೀಡಿದ್ದು, ಶಾಖ ಸಂಬಂಧಿತ ಕಾಯಿಲೆಗಳನ್ನು ಪರಿಹರಿಸಲು ಎಲ್ಲಾ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇಲಾಖೆಗಳನ್ನು ಒತ್ತಾಯಿಸಿದೆ.

ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೆ ಶಾಖದ ಪರಿಣಾಮ ಹೆಚ್ಚಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಹಾಗೂ ಇದರ ಬಗ್ಗೆ ಹೇಗೆ ಜಾಗೃತಿ ವಹಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.


Ad Widget

Ad Widget

Ad Widget

ರಾಜ್ಯದ ಆರೋಗ್ಯ ಇಲಾಖೆಯು ವೈದ್ಯಾಧಿಕಾರಿಗಳು,
ಆರೋಗ್ಯ ಸಿಬ್ಬಂದಿ ಮತ್ತು ತಳಮಟ್ಟದ ಕಾರ್ಯಕರ್ತರಿಗೆ
ಶಾಖದ ಕಾಯಿಲೆ, ಅದರ ಆರಂಭಿಕ ಗುರುತಿಸುವಿಕೆ ಮತ್ತು ನಿರ್ವಹಣೆಯ ಬಗ್ಗೆ ಸಂವೇದನೆ ಮತ್ತು ಸಾಮರ್ಥ್ಯ ವರ್ಧನೆಯ ಪ್ರಯತ್ನಗಳನ್ನು ಮುಂದುವರೆಸಬೇಕು ಎಂದು ಇಲಾಖೆ ಹೇಳಿದೆ.

ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೊರಗುಳಿಯ ಬಾರದು ಎಂದು ಕೇಂದ್ರವು ಜನರಿಗೆ ಸಲಹೆ ನೀಡಿದೆ. ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಚಟುವಟಿಕೆಗಳು, ಮದ್ಯಪಾನ, ಚಹಾ, ಕಾಫಿ ಅಥವಾ ಹೆಚ್ಚಿನ ಪ್ರಮಾಣದ ಸಕ್ಕರೆ ಹೊಂದಿರುವ ದ್ರವಗಳನ್ನು ಸೇವಿಸಬೇಡಿ. ಇವುಗಳು ನಿಮ್ಮ ಆಯಾಸಕ್ಕೆ ಕಾರಣವಾಗಬಹುದು. ಹೆಚ್ಚಿನ ಪ್ರೊಟೀನ್ ಆಹಾರ ಮತ್ತು ಹಳಸಿದ ಆಹಾರವನ್ನು ತ್ಯಜಿಸಿ.

ಆದಷ್ಟು ಮನೆಯೊಳಗೆ ಇರಿ ಮತ್ತು ಸಾಧ್ಯವಾದಷ್ಟು ಹೈಡ್ರೇಟ್ ಆಗಿರಲು ಹಣ್ಣಿನಿಂದ ತಯಾರಿಸಿದಂತಹ ದ್ರವ ಪದಾರ್ಥಗಳನ್ನು ಸೇವಿಸಿ ಎಂದು ಕೇಂದ್ರವು ಜನರಿಗೆ ಸಲಹೆ ನೀಡಿದೆ. ವಯಸ್ಸಾದವರು ಅಥವಾ ಅನಾರೋಗ್ಯ ಹೊಂದಿರುವವರ ಮೇಲೆ ಗಮನ ಇಡಿ. ಉದ್ಯೋಗದಾತರು ಮತ್ತು ಕಾರ್ಮಿಕರಿಗೆ, ಕೆಲಸದ ಸ್ಥಳದಲ್ಲಿ ತಂಪಾದ ಕುಡಿಯುವ ನೀರನ್ನು ಒದಗಿಸಬೇಕು ಮತ್ತು ನೇರ ಸೂರ್ಯನ ಬೆಳಕನ್ನು ತಪ್ಪಿಸಲು ಕಾರ್ಮಿಕರಿಗೆ ಎಚ್ಚರಿಕೆ ನೀಡಬೇಕು.

Leave a Reply

error: Content is protected !!
Scroll to Top
%d bloggers like this: