ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು- ಕುಡಿದು ಕಾರು ಚಲಾಯಿಸಿ, ಪೊಲೀಸರಿಗೆ ಆವಾಜ಼್ ಹಾಕಿದ ಮಹಿಳಾ ಅಧಿಕಾರಿ

ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆಯಿತು ಈ ಘಟನೆ. ಎಷ್ಟೇ ದೊಡ್ಡ ಅಧಿಕಾರಿಯಾದರೂ ಕುಡಿದು ತಕರಾರು ಮಾಡಿದರೆ ಮಾತ್ರ ಎಲ್ಲಾ ಗೌರವ ಸಾರ್ವಜನಿಕರ ಮನಸ್ಸಿನಲ್ಲಿ ಸರ್ರನೆ ಇಳಿದು ಹೋಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ.

ಉನ್ನತ ಹುದ್ದೆಯಲ್ಲಿದ್ದ ಮಹಿಳಾ‌ ಅಧಿಕಾರಿ ಕುಡಿದು ಮದ್ಯದ ಅಮಲಿನಲ್ಲಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.


Ad Widget

Ad Widget

Ad Widget

ದೇವಿಪತನ್ ಮಂಡಲ್‌ನ ಉಪ ಕಾರ್ಮಿಕ ಆಯುಕ್ತ ರಚನಾ ಕೇಸರ್ವಾನಿ ಎಂದು ಗುರುತಿಸಲಾದ ಮಹಿಳಾ ಅಧಿಕಾರಿ ಕುಡಿದು ಬಚ್ ಪೊಲೀಸರಿಗೆ ‘ಬೆದರಿಕೆ’ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾನು ಬೀಳೋದಿಲ್ಲ ಎನ್ನುತ್ತಾ ತೂರಾಡುತ್ತಾ ಮಾತಾಡುತ್ತಿರುವ ಮಹಿಳಾ ಅಧಿಕಾರಿಯನ್ನು ಈ ವಿಡಿಯೋದಲ್ಲಿ ನೋಡಬಹುದು.

ಮದ್ಯ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುವುದನ್ನು ಕಾಣಬಹುದು. ಇದರ ಮಧ್ಯೆ, ಓರ್ವ ಮಹಿಳಾ ಕಾನ್ಸ್‌ಟೇಬಲ್ ಆ ಮಹಿಳಾ ಅಧಿಕಾರಿಯನ್ನು ತನ್ನ ಕಾರಿನಲ್ಲಿ ಕೂರಿಸಲು ಪ್ರಯತ್ನಿಸುತ್ತಿರುವುದು, ಆದರೆ, ಆ ಮಹಿಳಾ ಅಧಿಕಾರಿ ರಚನಾ ಕುಡಿದ ಮತ್ತಿನಲ್ಲಿ ಪದೇ ಪದೇ ಹೊರಬರಲು ಪ್ರಯತ್ನಿಸಿ, ನಾನು ಬೀಳೋದಿಲ್ಲ ಎನ್ನುತ್ತ ಮತ್ತೆ ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಈ ಘಟನೆಯ ನಂತರ, ಪೊಲೀಸರು ಭಾನುವಾರ ವೈರಲ್ ಆಗಿರುವ ಈ ವೀಡಿಯೋವನ್ನು ಉತ್ತರ ಪ್ರದೇಶದ ಕಾರ್ಮಿಕ ಇಲಾಖೆಗೆ ಉಲ್ಲೇಖಿಸಿ ಅಧಿಕಾರಿಯ ವಿರುದ್ಧ ತನಿಖೆಗೆ ವಿನಂತಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: