Day: January 19, 2022

ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ | ಕೆಲವೇ ದಿನಗಳ ಹಿಂದೆ ಕುವೈಟ್‌ ‌ನಿಂದ ಊರಿಗೆ ಬಂದಿದ್ದರು

ಉಡುಪಿ : ಪತಿ ಮತ್ತು ಮಗನೊಂದಿಗೆ ಸಾಂತ್ಮಾರಿ ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆಯೋರ್ವರು ರಸ್ತೆ ಅಪಘಾತಕ್ಕೆ ಒಳಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಬುಧವಾರ ನಿಧನ ಹೊಂದಿದರು. ಕೆಲವೇ ದಿನಗಳ ಹಿಂದೆ ಕುವೈಟ್‌ನಿಂದ ಆಗಮಿಸಿದ್ದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗನೊಂದಿಗೆ ಕೋಟದಲ್ಲಿರುವ ತನ್ನ ತಂದೆ ತಾಯಿ ಮನೆಗೆ ದ್ವಿಚಕ್ರ ವಾಹನದಲ್ಲಿ ಸೋಮವಾರ ತೆರಳುತ್ತಿದ್ದ ಸರಿತಾ ಪಿಂಟೊ (38), ಬ್ರಹ್ಮಾವರದಲ್ಲಿ ನಡೆದ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಪತಿ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, …

ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ | ಕೆಲವೇ ದಿನಗಳ ಹಿಂದೆ ಕುವೈಟ್‌ ‌ನಿಂದ ಊರಿಗೆ ಬಂದಿದ್ದರು Read More »

ಮಂಗಳೂರು:ಮನೆ ಕಟ್ಟಲು ಹಣದ ಜೊತೆಗೆ ಗಿಫ್ಟ್ ಕಳುಹಿಸುವುದಾಗಿ ಹೇಳಿ 2.92 ಲಕ್ಷ .ರೂ.ಗಳನ್ನು ದೋಚಿಕೊಂಡ ಖತರ್ನಾಕ್ ವಂಚಕ

ಮಂಗಳೂರು: ವ್ಯಕ್ತಿಯೋರ್ವರಿಗೆ ಮನೆ ಕಟ್ಟಲು ಹಣದ ಜೊತೆಗೆ ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ ಸುಳ್ಳು ನೆಪವೊಡ್ಡಿ ಹಣ ಕಸಿದುಕೊಂಡು ಮೋಸಗೊಳಿಸಿರುವ ಘಟನೆ ನಡೆದಿದೆ. ದೂರುದಾರ ವ್ಯಕ್ತಿ ಕೆನರಾ ಬ್ಯಾಂಕ್‌ ಕೂಳೂರು ಶಾಖೆಯಲ್ಲಿ ಖಾತೆಯನ್ನು ಹೊಂದಿದವರಾಗಿದ್ದು,ಇವರಿಂದ 2.92 ಲಕ್ಷ .ರೂ.ಗಳನ್ನು ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರಿಗೆ ಮನೆ ಕಟ್ಟಲು ಹಣ ನೀಡುವುದಾಗಿ ಹಾಗೂ ಗಿಫ್ಟ್ ಕೂಡ ಕಳುಹಿಸಿಕೊಡುವುದಾಗಿ +22953861930ನಿಂದ ವ್ಯಕ್ತಿಯೋರ್ವ ವಾಟ್ಸ್‌ಆಯಪ್‌ ಸಂದೇಶದ ಮೂಲಕ 2021ರ ಸೆ.20ರಂದು ತಿಳಿಸಿದ್ದ.ಅನಂತರ ಅ. 5ರಂದು …

ಮಂಗಳೂರು:ಮನೆ ಕಟ್ಟಲು ಹಣದ ಜೊತೆಗೆ ಗಿಫ್ಟ್ ಕಳುಹಿಸುವುದಾಗಿ ಹೇಳಿ 2.92 ಲಕ್ಷ .ರೂ.ಗಳನ್ನು ದೋಚಿಕೊಂಡ ಖತರ್ನಾಕ್ ವಂಚಕ Read More »

ಮಗುವಿಗೆ ನಾಯಿ ಕಚ್ಚಿದ್ದಕ್ಕೆ ಪೊಲೀಸ್ ಅತಿಥಿಯಾದ ಮಾಲೀಕ!!

ಮನುಷ್ಯರ ಮೇಲೆ ನಾಯಿಗಳ ದಾಳಿ ಇತ್ತೀಚೆಗೆ ಅಧಿಕವಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಮಗುವಿಗೆ ನಾಯಿ ಕಚ್ಚಿದ್ದು, ಮಾಲೀಕ ಪೊಲೀಸ್ ಅತಿಥಿಯಾಗಿದ್ದಾನೆ. ಕೇವಲ ನಾಯಿ ಕಚ್ಚಿದ್ದಕ್ಕೆ ಆತ ಕಂಬಿ ಏನಿಸಿದನೇ ಎಂಬ ನಿಮ್ಮ ಯೋಚನೆ ತಪ್ಪು. ಯಾಕಂದ್ರೆ ಇದಕ್ಕೂ ಒಂದು ಕಾರಣವಿದೆ. ಹೌದು.10 ವರ್ಷದ ಬಾಲಕನಿಗೆ ನಾಯಿ ಕಚ್ಚಿತ್ತು. ಇದರ ಬಗ್ಗೆ ಮಾಲಿಕರಿಗೆ ಪೋಷಕರು ಪ್ರಶ್ನಿಸಿದಾಗ ಸಮಧಾನದಿಂದ ಕ್ಷಮೆಯಾಚುವುದನ್ನು ಬಿಟ್ಟು,ಆಕ್ರೋಶಗೊಂಡ ಮಾಲಿಕರು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇದರಿಂದ ಮಗುವಿನ ಪೋಷಕರು ನೊಂದು ದೂರು ನೀಡಿದ್ದು,ಅದರಂತೆ ಕ್ರಮ …

ಮಗುವಿಗೆ ನಾಯಿ ಕಚ್ಚಿದ್ದಕ್ಕೆ ಪೊಲೀಸ್ ಅತಿಥಿಯಾದ ಮಾಲೀಕ!! Read More »

‘ಗಟ್ಟಿ ಧ್ವನಿ’ಯಿದ್ದ ಉಪನ್ಯಾಸಕಿಯನ್ನು ವಜಾಗೊಳಿಸಿದ ಕಾಲೇಜು, ಕೋರ್ಟ್ ಮೆಟ್ಟಿಲೇರಿದ ಟೀಚರ್ ಗೆ ಕೋರ್ಟ್ ನಿಂದ 1 ಕೋಟಿ ಪರಿಹಾರ

ಲಂಡನ್ : ಯುಕೆ ವಿಶ್ವವಿದ್ಯಾಲಯದ ಉಪನ್ಯಾಸಕಿಗೆ ‘ ತುಂಬಾ ಜೋರಾಗಿ’ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಲಾಗಿತ್ತು. ತನ್ನ ಜೋರು ಧ್ವನಿಗಾಗಿ ಕೆಲಸದಿಂದ ವಜಾ ಮಾಡಿದ್ದನ್ನು ಪ್ರಶ್ನಿಸಿ ಡಾ.ಆನೆಟ್ ಪ್ಲೌಟ್ ಎಕ್ಸೆಟರ್ ಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಯುಕೆ ವಿಶ್ವವಿದ್ಯಾಲಯದ ಈ ಉಪನ್ಯಾಸಕಿಗೆ £100,000 ( ₹ 1 ಕೋಟಿ) ನಷ್ಟವನ್ನು ನೀಡಲು ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ. ಈ ವಜಾಗೊಳಿಸುವಿಕೆ ಉಪನ್ಯಾಸಕಿಯ ಹಿನ್ನೆಲೆ, ಅರ್ಹತೆ ಅಥವಾ ಲೈಂಗಿಕತೆಗೆ ಯಾವುದೇ ಸಂಬಂಧವಿಲ್ಲ. ಉಪನ್ಯಾಸಕಿ ಮಧ್ಯಮ ಯುರೋಪಿಯನ್ ಯಹೂದಿ …

‘ಗಟ್ಟಿ ಧ್ವನಿ’ಯಿದ್ದ ಉಪನ್ಯಾಸಕಿಯನ್ನು ವಜಾಗೊಳಿಸಿದ ಕಾಲೇಜು, ಕೋರ್ಟ್ ಮೆಟ್ಟಿಲೇರಿದ ಟೀಚರ್ ಗೆ ಕೋರ್ಟ್ ನಿಂದ 1 ಕೋಟಿ ಪರಿಹಾರ Read More »

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ|2022 ರ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಮಿಂಚಲಿರುವ ಸುಂದರಿ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ 2022 ತನ್ನ ಕೊನೆಯ ಸೀಸನ್ ಎಂದು ಹೇಳುವ ಮೂಲಕ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲಿ ಪಾಲುದಾರ ನಾಡಿಯಾ ಕಿಚೆನೊಕ್ ಅವರೊಂದಿಗೆ ಸೋತ ನಂತರ ನಿವೃತ್ತಿ ಕುರಿತಾಗಿ ಮಾತನಾಡಿ’ ಇದು ತನ್ನ ಕೊನೆಯ ಋತು’ ಎಂದು ಹೇಳಿದ್ದಾರೆ. ಬುಧವಾರ ಆಸ್ಟ್ರೇಲಿಯಾ ಓಪನ್ʼನಲ್ಲಿ ಸೋತ ನಂತ್ರ ಅವ್ರಿಂದ ಈ ಹೇಳಿಕೆ ಬಂದಿದೆ. ಇದು ತನ್ನ …

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ|2022 ರ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಮಿಂಚಲಿರುವ ಸುಂದರಿ Read More »

ಮಂಗಗಳ ಕೈಯಲ್ಲಿ ‘ಸ್ಮಾರ್ಟ್ ಫೋನ್ ‘| ವ್ಯಕ್ತಿಯೊಬ್ಬ ಕ್ಯಾಮರಾದಲ್ಲಿ ಸೆರೆಹಿಡಿದ ತಮ್ಮದೇ ವಿಡಿಯೋವನ್ನು ದಿಟ್ಟಿಸಿ ನೋಡುತ್ತಿರುವ ಕೋತಿಗಳ ವಿಡಿಯೋ ವೈರಲ್

ಮಂಗನಿಂದಲೇ ಮಾನವ ಎನ್ನುವ ಮಾತಿದೆ. ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ. ಕೋತಿಗಳು ಎಂದೊಡನೆ ನೆನಪಾಗುವುದೇ ಅವುಗಳ ಚೇಷ್ಟೆ. ಒಂದು ಕ್ಷಣವೂ ಸುಮ್ಮನೆ ಕೂರದ ಅಥವಾ ಕುಳಿತಲ್ಲಿಯೇ ಏನಾದರೂ ಚೇಷ್ಟೆಯನ್ನು ಹುಡುಕುವ ಮಂಗಗಳ ತಮಾಷೆಯ ಚೇಷ್ಟೆಗಳನ್ನು ನೋಡಿದರೆ ಯಾರು ತಾನೇ ನಗದೇ ಇರಲು ಸಾಧ್ಯ?? ಈಗ ಅಂತಹದ್ದೇ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ …

ಮಂಗಗಳ ಕೈಯಲ್ಲಿ ‘ಸ್ಮಾರ್ಟ್ ಫೋನ್ ‘| ವ್ಯಕ್ತಿಯೊಬ್ಬ ಕ್ಯಾಮರಾದಲ್ಲಿ ಸೆರೆಹಿಡಿದ ತಮ್ಮದೇ ವಿಡಿಯೋವನ್ನು ದಿಟ್ಟಿಸಿ ನೋಡುತ್ತಿರುವ ಕೋತಿಗಳ ವಿಡಿಯೋ ವೈರಲ್ Read More »

ಒಂದು ದಿನದ ನವಜಾತ ಶಿಶುವಿಗೆ ಕೊರೋನ ಸೋಂಕು ದೃಢ

ಗದಗ :ಹುಟ್ಟಿ ಒಂದೇ ದಿನವಾದ ಮಗುವಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು,ನವಜಾತ ಶಿಶು ಸೇರಿದಂತೆ ಜಿಲ್ಲೆಯ ಒಟ್ಟು 87 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿ.ಎಚ್.ಓ ಜಗದೀಶ್ ನುಚ್ಚಿನ ಹೇಳಿದ್ದಾರೆ. ಗದಗ ಇಬ್ಬರು ಹಾಗೂ ರೋಣ ಪಟ್ಟಣದ ಇಬ್ಬರು ಹೀಗೆ ನಾಲ್ಕು ಜನ ಗರ್ಭಿಣಿಯರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.ಇನ್ನು ಹುಟ್ಟಿದ ಮಗುವಿಗೆ ಹಾಸ್ಪಿಟಲ್ ನಲ್ಲೇ ಇನ್ಫೆಕ್ಷನ್ನಿಂದ ಪಾಸಿಟಿವ್ ಆಗಿರಬಹುದು. ಆದರೆ ತಾಯಿಗೆ ನೆಗೆಟಿವ್ ಇದ್ದು, ಮಗುವನ್ನು ಖಾಸಗಿ ಮಕ್ಕಳ …

ಒಂದು ದಿನದ ನವಜಾತ ಶಿಶುವಿಗೆ ಕೊರೋನ ಸೋಂಕು ದೃಢ Read More »

ಪಂಚರಾಜ್ಯಗಳ ಚುನಾವಣೆ : ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್

ಪ್ರಯಾಗ್ ರಾಜ್ : ಮಂಗಳವಾರ ಪೆರೇಡ್ ಗ್ರೌಂಡ್ ನಲ್ಲಿ ರೈತರ ಮೂರು ದಿನಗಳ‌’ ಚಿಂತನ ಶಿಬಿರ’ ದಲ್ಲಿ ಪಾಲ್ಗೊಳ್ಳಲು ಮಾಘಮೇಳಕ್ಕೆ ಆಗಮಿಸಿದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಭಾರತೀಯ ಕಿಸಾನ್ ಯೂನಿಯನ್ ರಾಜಕೀಯ ಪಕ್ಷಕ್ಕೆ ಬೆಂಬಲವನ್ನು ನೀಡುತ್ತದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ. ” ಪಂಚರಾಜ್ಯಗಳ ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ ” ಎಂದು ಸ್ಪಷ್ಟಪಡಿಸಿದ್ದಾರೆ. ಬಿಕೆಯು ಅಧ್ಯಕ್ಷ ನರೇಶ್ ಟಿಕಾಯತ್ ಅವರು ಉತ್ತರ ಪ್ರದೇಶದಲ್ಲಿ ಮುಂಬರುವ …

ಪಂಚರಾಜ್ಯಗಳ ಚುನಾವಣೆ : ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ Read More »

ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದು ವಿವಾಹಿತೆ ರೈಲಿನಲ್ಲಿ ಪ್ರಯಾಣ | ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಬಜರಂಗದಳದ ಕಾರ್ಯಕರ್ತರು

ಮುಸ್ಲಿಂ ವ್ಯಕ್ತಿ ಹಾಗೂ ಹಿಂದೂ ವಿವಾಹಿತೆ ರೈಲಿನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದದ್ದನ್ನು ಕಂಡ ಬಜರಂಗದಳದ ಸದಸ್ಯರು ಉಜ್ಜಯಿನಿ ರೈಲ್ವೆ ಪೊಲೀಸ್ ಠಾಣೆಗೆ ಎಳೆದೊಯ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆ ರೈಲಿನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದಾರೆ. ಇದು ಲವ್ ಜಿಹಾದ್ ಎಂದು ಭಜರಂಗದಳದ ಸದಸ್ಯರು ಆರೋಪಿಸಿದ್ದಾರೆ. ನಂತರ ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂದೋರ್‌ನ ಈ ಇಬ್ಬರು ಪ್ರಯಾಣಿಕರು ಮತ್ತು …

ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದು ವಿವಾಹಿತೆ ರೈಲಿನಲ್ಲಿ ಪ್ರಯಾಣ | ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಬಜರಂಗದಳದ ಕಾರ್ಯಕರ್ತರು Read More »

ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ ಕಳೆದುಕೊಂಡಿದ್ದ ಆಕೆ ತಂಗಿಯೂ ಬಿಟ್ಟು ಹೋದಳಲ್ಲ ಎಂಬ ಕೊರಗು

ತೆಲಂಗಾಣ : ತನ್ನ ಒಡಹುಟ್ಟಿದ ತಂಗಿ ಅನಾರೋಗ್ಯದಿಂದ ಸತ್ತರೂ ಅದನ್ನು ಯಾರಿಗೂ ಹೇಳದೇ ಅಕ್ಕ ಆ ಶವದ ಜೊತೆಯೇ ನಾಲ್ಕು ದಿನ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ಸ್ವಾತಿ ಮತ್ತು ತಂಗಿ ( 24) ಶ್ವೇತಾ ಇಬ್ಬರೂ ಪೆದ್ದಪಲ್ಲಿ ಪಟ್ಟಣದ ಪ್ರಗತಿ ನಗರದಲ್ಲಿ ವಾಸವಿದ್ದರು. ಕಳೆದ ಒಂದು ವಾರದಿಂದ ಶ್ವೇತಾ ಜ್ವರದಿಂದ ನರಳುತ್ತಿದ್ದರು. ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಟ್ಟು ಮನೆಗೆ ವಾಪಾಸ್ ಬಂದಿದ್ದಾರೆ. ಆದರೂ ಆರೋಗ್ಯ ತೀರಾ ಹದಗೆಟ್ಟು ಉಸಿರಾಟ …

ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ ಕಳೆದುಕೊಂಡಿದ್ದ ಆಕೆ ತಂಗಿಯೂ ಬಿಟ್ಟು ಹೋದಳಲ್ಲ ಎಂಬ ಕೊರಗು Read More »

error: Content is protected !!
Scroll to Top