‘ಗಟ್ಟಿ ಧ್ವನಿ’ಯಿದ್ದ ಉಪನ್ಯಾಸಕಿಯನ್ನು ವಜಾಗೊಳಿಸಿದ ಕಾಲೇಜು, ಕೋರ್ಟ್ ಮೆಟ್ಟಿಲೇರಿದ ಟೀಚರ್ ಗೆ ಕೋರ್ಟ್ ನಿಂದ 1 ಕೋಟಿ ಪರಿಹಾರ

ಲಂಡನ್ : ಯುಕೆ ವಿಶ್ವವಿದ್ಯಾಲಯದ ಉಪನ್ಯಾಸಕಿಗೆ ‘ ತುಂಬಾ ಜೋರಾಗಿ’ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಲಾಗಿತ್ತು.

ತನ್ನ ಜೋರು ಧ್ವನಿಗಾಗಿ ಕೆಲಸದಿಂದ ವಜಾ ಮಾಡಿದ್ದನ್ನು ಪ್ರಶ್ನಿಸಿ ಡಾ.ಆನೆಟ್ ಪ್ಲೌಟ್ ಎಕ್ಸೆಟರ್ ಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಯುಕೆ ವಿಶ್ವವಿದ್ಯಾಲಯದ ಈ ಉಪನ್ಯಾಸಕಿಗೆ £100,000 ( ₹ 1 ಕೋಟಿ) ನಷ್ಟವನ್ನು ನೀಡಲು ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.

ಈ ವಜಾಗೊಳಿಸುವಿಕೆ ಉಪನ್ಯಾಸಕಿಯ ಹಿನ್ನೆಲೆ, ಅರ್ಹತೆ ಅಥವಾ ಲೈಂಗಿಕತೆಗೆ ಯಾವುದೇ ಸಂಬಂಧವಿಲ್ಲ. ಉಪನ್ಯಾಸಕಿ ಮಧ್ಯಮ ಯುರೋಪಿಯನ್ ಯಹೂದಿ ಹಿನ್ನೆಲೆಯ ಕಾರಣದಿಂದ 59 ವರ್ಷದ ಉಪನ್ಯಾಸಕಿ ‘ ನೈಸರ್ಗಿಕವಾಗಿ ಗಟ್ಟಿಯಾದ ಧ್ವನಿ’ ಹೊಂದಿದ್ದೇನೆ. ಇದು ನನ್ನ ವಜಾಗೊಳಿಸಲು ಕಾರಣವಾಯಿತು’ ಎಂದು ಆರೋಪ ಮಾಡಿದ್ದರು.

‘ದೊಡ್ಡ ಧ್ವನಿಯು ನನ್ನ ಕುಟುಂಬದ ಹಿನ್ನೆಲೆಯಿಂದ ಬಂದಿದೆ ಮತ್ತು ಇದು ಸಾಮಾನ್ಯ’ ಎಂದು ಮಹಿಳೆ ಹೇಳಿದ್ದಾರೆ.

ನಾನು ನ್ಯೂಯಾರ್ಕ್‌ ಮತ್ತು ಜರ್ಮನಿಯಲ್ಲಿ ವಾಸಿಸುತ್ತಿದ್ದಾಗ ಮತ್ತು ಕೆಲಸ ಮಾಡುವಾಗ ತನ್ನ ಜೋರು ಧ್ವನಿ ಎಂದಿಗೂ ಸಮಸ್ಯೆಯಾಗಿರಲಿಲ್ಲ. ಈ ರೀತಿಯ ನಿಂದನೆಯಿಂದ ನಾನು ಕೋರ್ಟ್ ಮೆಟ್ಟಿಲೇರಿರುವುದಾಗಿ ಡಾ.ಪ್ಲೌಟ್ ಹೇಳಿದ್ದಾರೆ.

ಮಾನವ ಸಂಪನ್ಮೂಲ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಹಿರಿಯ ಶ್ರೇಣಿಗಳಲ್ಲಿ ಡಾ.ಪ್ಲೌಟ್ ವಿರುದ್ಧ ಅನ್ಯಾಯ ನಡೆದಿದೆ. ಹಾಗೂ ಡಾ.ಪ್ಲೌಟ್ ಉಪನ್ಯಾಸಕಿಯನ್ನು ಆಕೆ ಕೆಲಸ ಮಾಡುತ್ತಿದ್ದ ವಿಶ್ವವಿದ್ಯಾಲಯ ನಡೆಸಿಕೊಂಡ ರೀತಿಗೆ ಕೋರ್ಟ್ ಟೀಕಿಸಿದೆ ಮತ್ತು ಉಪನ್ಯಾಸಕಿಯನ್ನು ವಜಾಗೊಳಿಸುವಿಕೆ ಸರಿಯಲ್ಲ ಎಂದು ಕೋರ್ಟ್ ಹೇಳಿದೆ.

ಇದರ ಪರಿಣಾಮವಾಗಿ ‌ನ್ಯಾಯಮಂಡಳಿ 59 ವರ್ಷ ವಯಸ್ಸಿನ ಮಹಿಳೆಗೆ 1 ಕೋಟಿ ಪರಿಹಾರ ನೀಡಲು ಆದೇಶಿಸಿದೆ.

Leave A Reply

Your email address will not be published.