ಮಂಗಳೂರು:ಮನೆ ಕಟ್ಟಲು ಹಣದ ಜೊತೆಗೆ ಗಿಫ್ಟ್ ಕಳುಹಿಸುವುದಾಗಿ ಹೇಳಿ 2.92 ಲಕ್ಷ .ರೂ.ಗಳನ್ನು ದೋಚಿಕೊಂಡ ಖತರ್ನಾಕ್ ವಂಚಕ

ಮಂಗಳೂರು: ವ್ಯಕ್ತಿಯೋರ್ವರಿಗೆ ಮನೆ ಕಟ್ಟಲು ಹಣದ ಜೊತೆಗೆ ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ ಸುಳ್ಳು ನೆಪವೊಡ್ಡಿ ಹಣ ಕಸಿದುಕೊಂಡು ಮೋಸಗೊಳಿಸಿರುವ ಘಟನೆ ನಡೆದಿದೆ.

ದೂರುದಾರ ವ್ಯಕ್ತಿ ಕೆನರಾ ಬ್ಯಾಂಕ್‌ ಕೂಳೂರು ಶಾಖೆಯಲ್ಲಿ ಖಾತೆಯನ್ನು ಹೊಂದಿದವರಾಗಿದ್ದು,ಇವರಿಂದ 2.92 ಲಕ್ಷ .ರೂ.ಗಳನ್ನು ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರಿಗೆ ಮನೆ ಕಟ್ಟಲು ಹಣ ನೀಡುವುದಾಗಿ ಹಾಗೂ ಗಿಫ್ಟ್ ಕೂಡ ಕಳುಹಿಸಿಕೊಡುವುದಾಗಿ +22953861930ನಿಂದ ವ್ಯಕ್ತಿಯೋರ್ವ ವಾಟ್ಸ್‌ಆಯಪ್‌ ಸಂದೇಶದ ಮೂಲಕ 2021ರ ಸೆ.20ರಂದು ತಿಳಿಸಿದ್ದ.ಅನಂತರ ಅ. 5ರಂದು 8453027805ದಿಂದ ಕರೆ ಮಾಡಿ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡಿ ಗಿಫ್ಟ್ ಹೊಸದಿಲ್ಲಿಗೆ ಬಂದಿದ್ದು ಅದನ್ನು ಮಂಗಳೂರಿಗೆ ಕಳುಹಿಸಿಕೊಡಲು 35,000 ರೂ. ಕಳುಹಿಸುವಂತೆ ತಿಳಿಸಿದ.ಇದನ್ನು ನಂಬಿದ ದೂರುದಾರ ವ್ಯಕ್ತಿಯು 8453027805 ಸಂಖ್ಯೆಗೆ ಗೂಗಲ್‌ ಪೇ ಮಾಡಿದರು. ಅನಂತರ ಆ ವ್ಯಕ್ತಿ ಮತ್ತೆ ಕರೆ ಮಾಡಿ 97,000 ರೂ.ಗಳನ್ನು ಪಾವತಿಸಬೇಕೆಂದು ತಿಳಿಸಿದ. ದೂರುದಾರ ವ್ಯಕ್ತಿ ಅ.7ರಂದು 97,000 ರೂ. ಹಾಗೂ ಅ.8ರಂದು 1.60 ಲ.ರೂ.ಗಳನ್ನು ನೆಫ್ಟ್ ಮೂಲಕ ಆತನ ಎಸ್‌ಬಿಐ ಖಾತೆ ಸಂಖ್ಯೆ 40417352907ಗೆ ಪಾವತಿಸಿದರು.

ಹೀಗೆ ಒಟ್ಟು 2.92 ಲ.ರೂ.ಗಳನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು ಯಾವುದೇ ಗಿಫ್ಟ್ ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಒಟ್ಟಾರೆ ಆತನ ಮೋಸದ ಜಾಲೆಗೆ ಬಿದ್ದು,ಲಕ್ಷಾಂತರ ರೂ. ಯನ್ನೂ ಕಳೆದುಕೊಂಡು ಅತ್ತ ಗಿಫ್ಟ್ ಕೂಡ ಇಲ್ಲದೆ ತಲೆ ಮೇಲೆ ಕೈ ಹಿಡಿದುಕೂರುವ ಪರಿಸ್ಥಿತಿಗೆ ದೂಡಿಕೊಂಡ.

Leave A Reply

Your email address will not be published.