Day: January 16, 2022

ಪುತ್ತೂರು : ಫೋನ್ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಹಣ ದೋಚುತ್ತಿದ್ದ ಯುವಕನ ಬಂಧನ | ಸಂಪ್ಯ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಪುತ್ತೂರು: ಪೋನ್ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಎಟಿಎಂ ನಿಂದ ನಗದು ದೋಚುವುದು ಸೇರಿದಂತೆ ಹಣ ವಂಚನೆ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಮೂಲಕ ಹೊರ ಬಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಕಳೆದ 2 ವರ್ಷಗಳಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಉಡುಪಿ ಮೂಲದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಹೊಗೆ ಸೊಪ್ಪಿನ ಕೂಡ್ಲು ನಿವಾಸಿ ಆದರ್ಶ ಅಲಿಯಾಸ್ ಜೀವನ್ ಬಂಧಿತ ಆರೋಪಿ, ಆರೋಪಿ ಮಹಿಳೆಯರಿಗೆ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಎಟಿಎಮ್ ಮಾಹಿತಿ ಪಡೆದು …

ಪುತ್ತೂರು : ಫೋನ್ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಹಣ ದೋಚುತ್ತಿದ್ದ ಯುವಕನ ಬಂಧನ | ಸಂಪ್ಯ ಪೊಲೀಸರ ಯಶಸ್ವಿ ಕಾರ್ಯಾಚರಣೆ Read More »

ರಾತ್ರೋರಾತ್ರಿ ಶ್ರೀಮಂತನಾದ ಕಟ್ಟಿಗೆ ಕಡಿಯುವ ಬಡ ಕೂಲಿ ಕಾರ್ಮಿಕ!!|ಇದಕ್ಕೆ ಕಾರಣ ಮಾತ್ರ ರಹಸ್ಯ!!

ಸಾಮನ್ಯವಾಗಿ ಪ್ರತಿಯೊಬ್ಬರೂ ಕೂಡ ಶ್ರೀಮಂತಿಕೆಯ ಬದುಕನ್ನು ಕಾಣಲು ಬಯಸುತ್ತಾರೆ. ಆದ್ರೆ ಕೆಲವೊಬ್ಬರ ಕೈ ಅದೃಷ್ಟದ ಕಡೆಗೆ ಹೋದ್ರೆ ಇನ್ನೂ ಕೆಲವರಿಗೆ ನತದೃಷ್ಟದ ಬಾಗಿಲು ತೆರೆಯುತ್ತೆ.ಆದ್ರೆ ಇಲ್ಲೊಬ್ಬ ಸಾಮಾನ್ಯ ಬಡ ಕಟ್ಟಿಗೆ ಕಡಿಯುವ ಕೂಲಿ ಕಾರ್ಮಿಕ ರಾತ್ರೋರಾತ್ರಿ ಶ್ರೀಮಂತ!? ಆದ್ರೆ ಅದಕ್ಕೆ ಕಾರಣವೇ ರಹಸ್ಯ!! ಹೌದು.ಬಿಹಾರದ ಕಿಶನ್‌ಗಂಜ್‌ನಲ್ಲಿ ಕಟ್ಟಿಗೆ ಕಡಿಯುತ್ತಿದ್ದ ಬಡ ಕೂಲಿ ಕಾರ್ಮಿಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಈ ಬಗ್ಗೆ ಗ್ರಾಮದಲ್ಲಿ ನಾನಾ ರೀತಿಯ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು, ಆ ಕೂಲಿ ಕಾರ್ಮಿಕನ ಮಗ ಉಬೇಲುದಾಳ್ 15 ದಿನಗಳ ಹಿಂದೆ …

ರಾತ್ರೋರಾತ್ರಿ ಶ್ರೀಮಂತನಾದ ಕಟ್ಟಿಗೆ ಕಡಿಯುವ ಬಡ ಕೂಲಿ ಕಾರ್ಮಿಕ!!|ಇದಕ್ಕೆ ಕಾರಣ ಮಾತ್ರ ರಹಸ್ಯ!! Read More »

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕುಸಿದು ಬಿದ್ದ ಯುವಕ | ಕೂಡಲೇ ಸಿಪಿಆರ್ ನೀಡಿ ಯುವಕನ ಪ್ರಾಣ ರಕ್ಷಿಸಿದ ನರ್ಸ್ !!

ಚಲಿಸುತ್ತಿರುವ ಬಸ್ ನಲ್ಲಿ ಯುವಕನೋರ್ವನಿಗೆ ತೀವ್ರವಾಗಿ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಬಸ್ ನಲ್ಲಿದ್ದ ನರ್ಸ್ ಓರ್ವರು ಸಿಪಿಆರ್ ನೀಡಿ ಯುವಕನ ಪ್ರಾಣರಕ್ಷಿಸಿದ ಘಟನೆ ನಡೆದಿದೆ. ನರ್ಸ್ ಲಿಜಿ ಎಂ ಅಲೆಕ್ಸ್ 28 ವರ್ಷದ ರಾಜೀವ್ ಎಂಬಾತನಿಗೆ ಸಿಪಿಆರ್ ಚಿಕಿತ್ಸೆ ನೀಡಿದ್ದಾರೆ. ಕೊಟ್ಟಾಯಂ ನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಿಜಿ ಕರ್ತವ್ಯ ಮುಗಿಸಿ ಕೊಲ್ಲಂ ನಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಬಸ್ ನಲ್ಲಿ ರಾತ್ರಿ 8 ಗಂಟೆ ವೇಳೆಗೆ ಬಸ್ ಪರಕ್ಕುಲಂ ಗೆ ತಲುಪುತ್ತಿದ್ದಂತೆಯೇ …

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕುಸಿದು ಬಿದ್ದ ಯುವಕ | ಕೂಡಲೇ ಸಿಪಿಆರ್ ನೀಡಿ ಯುವಕನ ಪ್ರಾಣ ರಕ್ಷಿಸಿದ ನರ್ಸ್ !! Read More »

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಮಾಲೋಚನಾ ಸಭೆ

ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಆಡಳಿತ ಸಮಿತಿ, ಅನುವಂಶೀಯ ಮೊಕ್ತೇಸರರು, ಬ್ರಹ್ಮಕಲಶೋತ್ಸವ ಸಮಿತಿ, ಖಾಯಂ ಆಹ್ವಾನಿತರು ಹಾಗೂ ಊರವರ ಸಮಾಲೋಚನಾ ಸಭೆಯು ದೇವಸ್ಥಾನದಸಭಾಭವನದಲ್ಲಿ ಜ೧೬ರಂದು ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಢಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಈಗಾಗಲೇ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಸಲು ತಂತ್ರಿಯವರಿAದ ದಿನ ನಿಗದಿಯಾಗಿದ್ದು, ಎ ೫ರಿಂದ ಎ೧೦ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿದ್ದು, ಇನ್ನೂ ಬಾಕಿಯಿರುವ ಕೆಲಸಗಳನ್ನು …

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಮಾಲೋಚನಾ ಸಭೆ Read More »

ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಆಸ್ಪತ್ರೆಗೆ ಪ್ರವೇಶ !! | ಕಠಿಣ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ

ಆಸ್ಪತ್ರೆಗಳಲ್ಲಿ ಗುಂಪು ಸೇರುವುದನ್ನು ತಪ್ಪಿಸಲು ಹಾಗೂ ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ಜ್ವರ ಮತ್ತು ತುರ್ತು ಆರೋಗ್ಯ ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಭೇಟಿ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸಣ್ಣ ಪ್ರಮಾಣದ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಹೊರರೋಗಿ ಚಿಕಿತ್ಸೆಯ ಅಗತ್ಯ ಇರುವ ರೋಗಿಗಳು ಸೇರಿದಂತೆ ದಂತ ಚಿಕಿತ್ಸೆಯ ಅಗತ್ಯವಿರುವವರು ಎರಡು ವಾರದವರೆಗೆ ಆಸ್ಪತ್ರೆಗಳಿಗೆ ಭೇಟಿ ನೀಡಬಾರದು ಎಂದು ಸೂಚಿಸಲಾಗಿದೆ. ಗುಂಪು ಸೇರುವುದನ್ನು …

ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಆಸ್ಪತ್ರೆಗೆ ಪ್ರವೇಶ !! | ಕಠಿಣ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ Read More »

ಮಾಸ್ಕ್ ಧರಿಸದೇ ಓಡಾಡಿದ ವೈದ್ಯೆ| ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದ ಡಿಸಿಪಿಯೊಂದಿಗೆ ರಸ್ತೆಯಲ್ಲೇ ಕಿರಿಕ್

ಬೆಳಗಾವಿ:ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಜೊತೆಗೆ ನಿರ್ಲಕ್ಷ ಕೂಡ ಅಧಿಕವಾಗುತ್ತಿದೆ.ಅದೆಷ್ಟೇ ಸರ್ಕಾರದಿಂದ ನಿಯಮಗಳು ಜಾರಿ ಆದರೂ ಯಾವುದಕ್ಕೂ ಕ್ಯಾರೇ ಎನ್ನದ ಜನ ಮಾಸ್ಕ್, ಸಾಮಾಜಿಕ ಅಂತರ ಮರೆತು ಹಾಯಾಗಿ ಓಡಾಡುತ್ತಿದ್ದಾರೆ. ಆದ್ರೆ ಇಲ್ಲೊಂದು ಕಡೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ವೈದ್ಯರೇ ತಪ್ಪು ದಾರಿಯತ್ತ ಹೆಜ್ಜೆ ಹಾಕಿದ್ದಾರೆ ಎಂದರೆ ತಪ್ಪಾಗಲಾರದು. ಹೌದು.ಜನರಿಗೆ ಬುದ್ಧಿ ಹೇಳಬೇಕಾದ ವೈದ್ಯರೇ ಮಾಸ್ಕ್ ಮರೆತು ಸುತ್ತಾಡಿದ್ದಾರೆ.ಇದು ಕುಂದಾನಗರಿ, ಗಡಿ ಜಿಲ್ಲೆ ಬೆಳಗಾವಿಯ ವೈದ್ಯೆಯಾಗಿದ್ದು,ಮಾಸ್ಕ್ ಹಾಕದೇ ಓಡಾಡಿದ್ದಲ್ಲದೇ, ಪ್ರಶ್ನೆ ಮಾಡಿದ್ದಕ್ಕೆ ಡಿಸಿಪಿ …

ಮಾಸ್ಕ್ ಧರಿಸದೇ ಓಡಾಡಿದ ವೈದ್ಯೆ| ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದ ಡಿಸಿಪಿಯೊಂದಿಗೆ ರಸ್ತೆಯಲ್ಲೇ ಕಿರಿಕ್ Read More »

ಬೆಂಗಳೂರಿನಲ್ಲೊಂದು ಭೀಕರ ದುರಂತ : ತಾಯಿ ಮಗಳು ಉಸಿರುಗಟ್ಟಿ ಸಾವು

ಬೆಂಗಳೂರು : ತಾಯಿ ಮಗಳು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ನಡೆದಿದೆ. ಸ್ನಾನಕ್ಕೆಂದು ಸ್ನಾನದ ಕೋಣೆಗೆ ಹೋದ ಮಗಳು , ತಾಯಿ ಇಬ್ಬರೂ ಸಾವಿನ ಸೇರಿದ್ದಾರೆ. ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಾಯಿ ಮಂಗಳ ( 35) ಮಗಳು ಗೌತಮಿ ( 7) ಮೃತಪಟ್ಟಿದ್ದಾರೆ. ಮನೆಯ ಮಾಲೀಕರಾದ ಗಾಯತ್ರಿ ಎಂಬುವರು ಮನೆ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಪತಿ ನರಸಿಂಹಮೂರ್ತಿ ಕೆಲಸಕ್ಕೆ …

ಬೆಂಗಳೂರಿನಲ್ಲೊಂದು ಭೀಕರ ದುರಂತ : ತಾಯಿ ಮಗಳು ಉಸಿರುಗಟ್ಟಿ ಸಾವು Read More »

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯು ಜನವರಿ 17ರಿಂದ ಪುನರಾರಂಭ

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಲ್ಪವಿರಾಮ ನೀಡಲಾಗಿದ್ದ ಈಗಾಗಲೆ 14 ದಿನಗಳ ಪ್ರಶ್ನಾಚಿಂತನಾ ಕಾರ್ಯಕ್ರಮ ಜನವರಿ ತಿಂಗಳ 17 ರಿಂದ 5 ದಿನಗಳ ಕಾಲ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಆಡಳಿತ ಮಂಡಳಿಯ ಅಪೇಕ್ಷೆ. ಕೊವಿಡ್ 19ರ ಸರಕಾರದ ನಿಯಮಾನುಸಾರ ಊಟೋಪಚಾರಗಳಿಗೆ ಅವಕಾಶವಿರುವುದಿಲ್ಲ ಹಾಗೂ ಭಾಗವಹಿಸುವ ಎಲ್ಲಾ ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆಡಳಿತ ಸಮಿತಿಯ ಅಧ್ಯಕ್ಷರು ಕೇಶವ ಪ್ರಸಾದ್ ಮುಳಿಯ …

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯು ಜನವರಿ 17ರಿಂದ ಪುನರಾರಂಭ Read More »

ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ‘ರೂಬೆಲ್ಲಾ’ ಚುಚ್ಚುಮದ್ದು ಪಡೆದ ಮೂರು ಹಸುಗೂಸುಗಳು ನಿಗೂಢವಾಗಿ ಸಾವು!!

ಬೆಳಗಾವಿ: ರೂಬೆಲ್ಲಾ ಚುಚ್ಚುಮದ್ದು ಪಡೆದು ಜಿಲ್ಲೆಯ ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಂತ 3 ಹಸುಗೂಸುಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು,ರಾಜ್ಯವೇ ಬೆಚ್ಚಿ ಬೀಳುವಂತಿದೆ. ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈ ಅಘಾತಕಾರಿ ಘಟನೆ ನಡೆದಿದ್ದು, ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ರೂಬೆಲ್ಲಾ ಚುಚ್ಚುಮದ್ದು ಪಡೆದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ . ಬೆಳಗಾವಿಯ ರಾಮದುರ್ಗ ತಾಲೂಕಿನ 13 ತಿಂಗಳ ಪವಿತ್ರಾ ಹುಲಗುರ್, ಒಂದು ವರ್ಷ ಎರಡು ತಿಂಗಳ ಮಧು ಉಮೇಶ್ ಕುರಗಂದಿ ಹಾಗೂ ಒಂದೂವರೆ …

ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ‘ರೂಬೆಲ್ಲಾ’ ಚುಚ್ಚುಮದ್ದು ಪಡೆದ ಮೂರು ಹಸುಗೂಸುಗಳು ನಿಗೂಢವಾಗಿ ಸಾವು!! Read More »

ಮಂಗಳೂರು:’ಮುಲ್ಲಾ ರಹೀಮನೊಂದಿಗೆ ಹಿಂದೂ ಯುವತಿಯ ಕುಚುಕು’!! ಸುಖಾಸುಮ್ಮನೆ ಓರ್ವ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಹಿಂದೂ ಯುವತಿಯ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾದರೂ ಯಾರು!??

ಮಂಗಳೂರು: ನಗರದ ಪ್ರತಿಷ್ಟಿತ ಕಾಲೇಜೊಂದರಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗದಲ್ಲಿರುವ ಹಿಂದೂ ಯುವತಿಯೋರ್ವಳ ಫೋಟೋವನ್ನು ಮುಸ್ಲಿಂ ಯುವಕನೋರ್ವನ ಫೋಟೋದೊಂದಿಗಿರುವಂತೆ ಎಡಿಟ್ ಮಾಡಿ, ಇವರಿಬ್ಬರಿಗೂ ಸಂಬಂಧವಿದೆ-ಇದೊಂದು ಲವ್ ಜಿಹಾದ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ನಗರ ಕಮಿಷನರೇಟ್ ವ್ಯಾಪ್ತಿಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ:ಮಂಗಳೂರಿನ ಹೆಸರಾಂತ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ಹಿಂದೂ ಯುವತಿಯ ಫೋಟೋವನ್ನು ಆಕೆಯ ಇನ್ಸ್ಟಾಗ್ರಾಮ್ ಪೇಜ್ ನಿಂದ ಕದ್ದ ಕಿಡಿಗೇಡಿಗಳು, ಮುಲ್ಲಾ ರಹಿಮಾನ್ ಎಂಬ ಮುಸ್ಲಿಂ ಯುವಕನೊಂದಿಗಿರುವಂತೆ …

ಮಂಗಳೂರು:’ಮುಲ್ಲಾ ರಹೀಮನೊಂದಿಗೆ ಹಿಂದೂ ಯುವತಿಯ ಕುಚುಕು’!! ಸುಖಾಸುಮ್ಮನೆ ಓರ್ವ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಹಿಂದೂ ಯುವತಿಯ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾದರೂ ಯಾರು!?? Read More »

error: Content is protected !!
Scroll to Top