ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಮಾಲೋಚನಾ ಸಭೆ

ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಆಡಳಿತ ಸಮಿತಿ, ಅನುವಂಶೀಯ ಮೊಕ್ತೇಸರರು, ಬ್ರಹ್ಮಕಲಶೋತ್ಸವ ಸಮಿತಿ, ಖಾಯಂ ಆಹ್ವಾನಿತರು ಹಾಗೂ ಊರವರ ಸಮಾಲೋಚನಾ ಸಭೆಯು ದೇವಸ್ಥಾನದಸಭಾಭವನದಲ್ಲಿ ಜ೧೬ರಂದು ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಢಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಈಗಾಗಲೇ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಸಲು ತಂತ್ರಿಯವರಿAದ ದಿನ ನಿಗದಿಯಾಗಿದ್ದು, ಎ ೫ರಿಂದ ಎ೧೦ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿದ್ದು, ಇನ್ನೂ ಬಾಕಿಯಿರುವ ಕೆಲಸಗಳನ್ನು ಶೀಘ್ರದಲ್ಲಿ ಮಾಡಲಾಗುವುದು ಎಂದವರು ಫೆಬ್ರವರಿ ತಿಂಗಳಲ್ಲಿ ಮತ್ತೊಮ್ಮೆ ಊರವರ ಸಭೆ ಕರೆದು, ಆಮಂತ್ರಣ ತಯಾರಿಸುವ ಕುರಿತು ಚರ್ಚಿಸಲಾಗುವುದು. ಅಲ್ಲದೇ ದೇವಸ್ಥಾನದಲ್ಲಿ ಒಂದು ದಿನದ ಪ್ರಶ್ನಾ ಚಿಂತನೆ ನಡೆಸುವ ಬಗ್ಗೆ ಹೇಳಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಊರಿನ ಎಲ್ಲರೂ ಒಗ್ಗಟ್ಟಾಗಿ ಒಂದೇ ಮನಸ್ಸಿನಿಂದ ಭಾಗವಹಿಸಿ ಬ್ರಹ್ಮಕಲಶೋತ್ಸವದ ಸಂಭ್ರಮವನ್ನು ಹೆಚ್ಚಿಸಲು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು. ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ದೇವಸ್ಥಾನದ ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಆಡಳಿತ ಸಮಿತಿ ಸದಸ್ಯರಾದ ಮಹಾಲಿಂಗೇಶ್ವರ ಶರ್ಮ, ಬಾಲಕೃಷ್ಣ ಗೌಡ ನೂಜಿ, ನಿಟ್ಟೋಣಿ ಕೆಡೆಂಜಿ, ಅರ್ಚಕ ರಮಾನಂದ ಭಟ್ ತೋಟಂತಿಲ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ, ಉಪಾಧ್ಯಕ್ಷ ಚಂದ್ರಶೇಖರ್ ಬರೆಪ್ಪಾಡಿ, ಜತೆ ಕಾರ್ಯದರ್ಶಿ ಭರತ್ ಕುಮಾರ್ ನಡುಮನೆ, ಜತ್ತಪ್ಪ ರೈ ಬರೆಪ್ಪಾಡಿ, ಐತ್ತಪ್ಪ ಗೌಡ ಕುವೆತ್ತೋಡಿ, ನಾಗೇಶ್ ಕೆ. ಕೆಡೆಂಜಿ, ಸುರೇಶ್ ಕಾಪಿನಕಾಡು, ತಾರಾನಾಥ ನಗ್ರಿ, ಪದ್ಮನಾಭ, ಜನಾರ್ದನ ಎರ್ಕಮೆ, ಉಮೇಶ್ ಕೆರೆನಾರು, ಚೆನ್ನಪ್ಪ ಗೌಡ, ದಯಾನಂದ ಅನ್ಯಾಡಿ, ತೇಜಕುಮಾರ್ ನಡುಮನೆ, ಶ್ರೀಕಾಂತ್ ಬಿ.ವಿ, ನಮ್ಮಿರಾಜ್, ವೆಂಕಪ್ಪ ಏರ್ಕಮೆ, ವಿಶ್ವನಾಥ, ದೇವಪ್ಪ ಗೌಡ, ಚಿದಾನಂದ ಕೆರೆನಾರು, ಲೋಕೇಶ್ ಬಿ.ಎನ್, ರಮೇಶ್ ಕುಮಾರ್, ಬೆಳಿಯಪ್ಪ ಗೌಡ, ಆನಂದ ಅನ್ಯಾಡಿ, ಹರೀಶ್ ಅನ್ಯಾಡಿ, ಉಮೇಶ್ ನಡುಮನೆ, ಬಾಲಕೃಷ್ಣ, ಜೀವನ್ ಅನ್ಯಾಡಿ, ಇಂದಿರಾವತಿ ಅನ್ಯಾಡಿ, ವಿಮಲಾ ಅನ್ಯಾಡಿ, ಲಿಂಗಪ್ಪ ಗೌಡ ಕುದ್ಮನಮಜಲು, ಬಾಲಚಂದ್ರ, ಚಂದಪ್ಪ, ಗೋಪಾಲಕೃಷ್ಣ ಕಾರ್ಲಾಡಿ,ಮೋನಪ್ಪ, ಜಯಾನಂದ ಕೆಡೆಂಜಿ, ಶೇಷಪ್ಪ ಗೌಡ ನೂಜಿ, ಮೇದಪ್ಪ ಗೌಡ, ಎನ್ ಬಾಲಚಂದ್ರ, ಕುಶಾಲಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.