ರಾತ್ರೋರಾತ್ರಿ ಶ್ರೀಮಂತನಾದ ಕಟ್ಟಿಗೆ ಕಡಿಯುವ ಬಡ ಕೂಲಿ ಕಾರ್ಮಿಕ!!|ಇದಕ್ಕೆ ಕಾರಣ ಮಾತ್ರ ರಹಸ್ಯ!!

ಸಾಮನ್ಯವಾಗಿ ಪ್ರತಿಯೊಬ್ಬರೂ ಕೂಡ ಶ್ರೀಮಂತಿಕೆಯ ಬದುಕನ್ನು ಕಾಣಲು ಬಯಸುತ್ತಾರೆ. ಆದ್ರೆ ಕೆಲವೊಬ್ಬರ ಕೈ ಅದೃಷ್ಟದ ಕಡೆಗೆ ಹೋದ್ರೆ ಇನ್ನೂ ಕೆಲವರಿಗೆ ನತದೃಷ್ಟದ ಬಾಗಿಲು ತೆರೆಯುತ್ತೆ.ಆದ್ರೆ ಇಲ್ಲೊಬ್ಬ ಸಾಮಾನ್ಯ ಬಡ ಕಟ್ಟಿಗೆ ಕಡಿಯುವ ಕೂಲಿ ಕಾರ್ಮಿಕ ರಾತ್ರೋರಾತ್ರಿ ಶ್ರೀಮಂತ!? ಆದ್ರೆ ಅದಕ್ಕೆ ಕಾರಣವೇ ರಹಸ್ಯ!!

ಹೌದು.ಬಿಹಾರದ ಕಿಶನ್‌ಗಂಜ್‌ನಲ್ಲಿ ಕಟ್ಟಿಗೆ ಕಡಿಯುತ್ತಿದ್ದ ಬಡ ಕೂಲಿ ಕಾರ್ಮಿಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಈ ಬಗ್ಗೆ ಗ್ರಾಮದಲ್ಲಿ ನಾನಾ ರೀತಿಯ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು, ಆ ಕೂಲಿ ಕಾರ್ಮಿಕನ ಮಗ ಉಬೇಲುದಾಳ್ 15 ದಿನಗಳ ಹಿಂದೆ ಎಲ್ಲಿಂದಲೋ ರಹಸ್ಯವಾಗಿ ಹಣ ಪಡೆದಿದ್ದು, ಇದರಿಂದ ಆತ ಶ್ರೀಮಂತನಾಗಿದ್ದಾನೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆಇನ್ನು ಹಲವರು ಆತ ಲಾಟರಿ ಟಿಕೆಟ್ ಖರೀದಿಸಿದ್ದು, ಅದರಲ್ಲಿ 1 ಕೋಟಿ ರೂ ತಗುಲಿದೆ ಎನ್ನುತ್ತಿದ್ದಾರೆ. ಇನ್ನು ಈ ವಿಷಯ ಎಸ್‌ಡಿಎಂಗೆ ತಲುಪಿದ್ದು, ಅವ್ರದನ್ನ ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿದ್ದಾರೆ.

ಈ ಪ್ರಕರಣವು ಕಿಶನ್‌ಗಂಜ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ತೆಯುಸಾ ಪಂಚಾಯತ್‌ನಲ್ಲಿ ನಡೆದಿದೆ. ಇನ್ನು ಈ ಕೂಲಿ ಕಾರ್ಮಿಕರ ಒಂದೇ ಒಂದು ರಾತ್ರಿ ಕಳೆಯುವುದರಲ್ಲಿ ಕೋಟ್ಯಾಧಿಪತಿಯಾದ ವಿಷ್ಯ ವೇಗವಾಗಿ ಹರಡುತ್ತಿದ್ದು, ವಿವಿಧ ವದಂತಿಗಳು ಹುಟ್ಟಿಕೊಂಡಿವೆ. ಇದ್ರಿಂದ ಭಯಗೊಂಡ ತಂದೆ ಮಗ ರಾತ್ರೋ ರಾತ್ರಿ ಊರಿಂದ ಕಾಲ್ಕಿತ್ತಿದ್ದು, ಇಬ್ಬರೂ ಭೂಗತರಾಗಿದ್ದಾರೆ.

ಬಿಹಾರದಲ್ಲಿ ಲಾಟರಿ ಟಿಕೆಟ್‌ಗೆ ನಿಷೇಧವಿದೆ ಎಂದು ಹೇಳಲಾಗುತ್ತಿದೆ, ಆದ್ದರಿಂದ ಅವರು ಬಂಗಾಳದಿಂದ ಲಾಟರಿ ಟಿಕೆಟ್ ಖರೀದಿಸಿದ್ದ ಎನ್ನುವ ಮಾತು ಹರಡಿದೆ. ಅನರಕ್ಷರಸ್ಥರಾದ ತಂದೆ ಮತ್ತು ಮಗನಿಗೆ ಕಾನೂನು ವಿಷಯಗಳ ಬಗ್ಗೆ ತಿಳಿಯದ ಕಾರಣ, ಎಲ್ಲೋ ಭೂಗತರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಇನ್ನು ಈ ಇಬ್ಬರ ಪತ್ತೆಗೆ ಪೊಲೀಸರು ನಿರತರಾಗಿದ್ದಾರೆ. ಇಬ್ಬರೂ ಸಿಕ್ಕಿಬಿದ್ದ ನಂತರವಷ್ಟೇ ಸತ್ಯಾಸತ್ಯತೆ ಬಯಲಾಗಲು ಸಾಧ್ಯ.

ಆದಾಯ ತೆರಿಗೆ ಇಲಾಖೆ ಮತ್ತು ಇಡಿ ತನಿಖೆಯನ್ನ ಮಾಡಲಿದೆ ಎಂದು ಕಿಶನ್‌ಗಂಜ್ ಎಸ್‌ಡಿಎಂ ಶಾನವಾಜ್ ಅಹ್ಮದ್ ನಿಯಾಜಿ ಹೇಳಿದ್ದಾರೆ. ಇದೇ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಯಲಿಗೆ ಬಂದರೆ ತೆರೆಮರೆಯಲ್ಲಿ ಅಡಗಿರುವ ವ್ಯಕ್ತಿಗಳನ್ನೂ ಬಯಲಿಗೆಳೆಯಲಾಗುವುದು ಎಂದರು. ಪ್ರಸ್ತುತ, ಈ ವಿಷಯ ಕಿಶನ್‌ಗಂಜ್‌ನಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ. ಅಷ್ಟಕ್ಕೂ ಒಂದೇ ರಾತ್ರಿಯಲ್ಲಿ ಇಷ್ಟೊಂದು ಹಣ ಬಂದಿದ್ದು ಹೇಗೆ? ಅನ್ನೋ ಪ್ರಶ್ನೆ ಕಾಡುತ್ತಿದೆ.

Leave A Reply

Your email address will not be published.