ಮಾಸ್ಕ್ ಧರಿಸದೇ ಓಡಾಡಿದ ವೈದ್ಯೆ| ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದ ಡಿಸಿಪಿಯೊಂದಿಗೆ ರಸ್ತೆಯಲ್ಲೇ ಕಿರಿಕ್

ಬೆಳಗಾವಿ:ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಜೊತೆಗೆ ನಿರ್ಲಕ್ಷ ಕೂಡ ಅಧಿಕವಾಗುತ್ತಿದೆ.ಅದೆಷ್ಟೇ ಸರ್ಕಾರದಿಂದ ನಿಯಮಗಳು ಜಾರಿ ಆದರೂ ಯಾವುದಕ್ಕೂ ಕ್ಯಾರೇ ಎನ್ನದ ಜನ ಮಾಸ್ಕ್, ಸಾಮಾಜಿಕ ಅಂತರ ಮರೆತು ಹಾಯಾಗಿ ಓಡಾಡುತ್ತಿದ್ದಾರೆ. ಆದ್ರೆ ಇಲ್ಲೊಂದು ಕಡೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ವೈದ್ಯರೇ ತಪ್ಪು ದಾರಿಯತ್ತ ಹೆಜ್ಜೆ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು.ಜನರಿಗೆ ಬುದ್ಧಿ ಹೇಳಬೇಕಾದ ವೈದ್ಯರೇ ಮಾಸ್ಕ್ ಮರೆತು ಸುತ್ತಾಡಿದ್ದಾರೆ.ಇದು ಕುಂದಾನಗರಿ, ಗಡಿ ಜಿಲ್ಲೆ ಬೆಳಗಾವಿಯ ವೈದ್ಯೆಯಾಗಿದ್ದು,ಮಾಸ್ಕ್ ಹಾಕದೇ ಓಡಾಡಿದ್ದಲ್ಲದೇ, ಪ್ರಶ್ನೆ ಮಾಡಿದ್ದಕ್ಕೆ ಡಿಸಿಪಿ ಜತೆ ಕಿರಿಕ್ ಮಾಡಿದ್ದಾರೆ.

ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಡಿಸಿಪಿ ರವೀಂದ್ರ, ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಕರ್ಫ್ಯೂ ಪರಿಶೀಲನೆ ನಡೆಯುತ್ತಿದ್ದು, ಈ ವೇಳೆ ಮಾಸ್ಕ್ ಹಾಕದೇ ಕಾರಿನಲ್ಲಿ ಬಂದ ವೈದ್ಯೆಯೊಬ್ಬರನ್ನು ತಡೆದ ಪೊಲೀಸರು, ಮಾಸ್ಕ್ ಹಾಕಿಕೊಳ್ಳುವಂತೆ ವೈದ್ಯೆ ಹಾಗೂ ಆಕೆಯ ಕಾರು ಚಾಲಕನಿಗೆ ಸೂಚಿಸಿದ್ದಾರೆ. ಇದಕ್ಕೆ ಕಾರಿನಿಂದ ಇಳಿದ ವೈದ್ಯೆ, ರಸ್ತೆಯಲ್ಲಿ ಓಡಾಡುವವರು ಮಾಸ್ಕ್ ಹಾಕಿಲ್ಲ, ನಿಮ್ಮ ಪೊಲೀಸ್ ಸಿಬ್ಬಂದಿಗಳು ಮಾಸ್ಕ್ ಹಾಕಿಲ್ಲ. ನಾನು ಡಾಕ್ಟರ್, ನನಗೆ ರೂಲ್ಸ್ ಹೇಳ್ತೀರಾ? ಎಂದು ಮೊಂಡುವಾದ ಮಾಡಿದ್ದಾರೆ.

Leave A Reply

Your email address will not be published.