Day: December 6, 2021

ರಾಜ್ಯಾದ್ಯಂತ ಡಿಸೆಂಬರ್ 8ರಿಂದ ಮದ್ಯ ಮಾರಾಟ ಬಂದ್ | ಮದ್ಯಪ್ರಿಯರಲ್ಲಿ ಶುರುವಾಗಿಯೇ ಬಿಡ್ತು ಚಡಪಡಿಕೆ!

ಡಿಸೆಂಬರ್ 10 ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಿಂದ 3 ದಿನಗಳ ಕಾಲ ವೈನ್ ಸ್ಟೋರ್ ಮತ್ತು ಬಾರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಈ ಆಚರಣೆ ರಾಜ್ಯಾದ್ಯಂತ ಜಾರಿಯಲ್ಲಿರಲ್ಲಿರಲಿದೆ. ಮೂರು ದಿನ ಮದ್ಯದಂಗಡಿಗಳನ್ನು ಬಂದ್ ಮಾಡುವ ಸುದ್ದಿ ಹಬ್ಬುತ್ತಿದ್ದಂತೆ ಮದ್ಯ ಪ್ರಿಯರಲ್ಲಿ ತೀವ್ರ ಚಡಪಡಿಕೆ ಕಂಡು ಬಂದಿದೆ. ಮೂರು ದಿನಕ್ಕೆ ಬೇಕಾದಷ್ಟು ಮದ್ಯ ಸಂಗ್ರಹಣೆ ಮಾಡುವತ್ತ ಅವರ ಚಿತ್ತ ನೆಟ್ಟಿದೆ. 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು …

ರಾಜ್ಯಾದ್ಯಂತ ಡಿಸೆಂಬರ್ 8ರಿಂದ ಮದ್ಯ ಮಾರಾಟ ಬಂದ್ | ಮದ್ಯಪ್ರಿಯರಲ್ಲಿ ಶುರುವಾಗಿಯೇ ಬಿಡ್ತು ಚಡಪಡಿಕೆ! Read More »

ಉಪ್ಪಿನಂಗಡಿ: ನಿನ್ನೆ ನಡೆದ ಮಾರಕಾಸ್ತ್ರ ದಾಳಿಗೆ ಪ್ರತಿಕಾರದ ಇನ್ನೊಂದು ದಾಳಿ!! ಇಂದು ಸಂಜೆ ವೇಳೆ ಅಂಗಡಿ ಮುಂದೆ ನಿಂತಿದ್ದ ಹಿಂದೂ ಯುವಕನಿಗೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!!

ಉಪ್ಪಿನಂಗಡಿ :ನಿನ್ನೆ ನಡೆದ ಮಾರಕಾಸ್ತ್ರ ದಾಳಿಯ ಆರೋಪಿಗಳ ಬಂಧನವಾಗುವ ಮುನ್ನವೇ ಇನ್ನೊಂದು ಪ್ರಕರಣ ನಡೆದಿದ್ದು, ಮೀನಿನ ಅಂಗಡಿ ಮುಂದೆ ನಿಂತಿದ್ದ ಹಿಂದೂ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದ ಪರಿಣಾಮ ಯುವಕನ ಸ್ಥಿತಿ ಗಂಭೀರವಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಘಟನೆ ವಿವರ: ಸಮೀಪದ ಹಳೇ ಗೇಟು ಎಂಬಲ್ಲಿ ಯುವಕನೊಬ್ಬನ ಮೇಲೆ ದಾಳಿ ನಡೆದಿದ್ದು,ಹಲ್ಲೆಗೊಳಗಾದವರು ಉಪ್ಪಿನಂಗಡಿ ಕಜೆಕಾರು ನಿವಾಸಿ ಅಶೋಕ್ ಶೆಟ್ಟಿ ಎನ್ನಲಾಗಿದೆ. ಉಪ್ಪಿನಂಗಡಿಯ ಹಳೇ ಗೇಟು ಬಳಿ …

ಉಪ್ಪಿನಂಗಡಿ: ನಿನ್ನೆ ನಡೆದ ಮಾರಕಾಸ್ತ್ರ ದಾಳಿಗೆ ಪ್ರತಿಕಾರದ ಇನ್ನೊಂದು ದಾಳಿ!! ಇಂದು ಸಂಜೆ ವೇಳೆ ಅಂಗಡಿ ಮುಂದೆ ನಿಂತಿದ್ದ ಹಿಂದೂ ಯುವಕನಿಗೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!! Read More »

ಪುತ್ತೂರು: ಮಾಜಿ ಶಾಸಕ ಬಿಜೆಪಿಯ ಭೀಷ್ಮ ಉರಿಮಜಲು ಕೆ.ರಾಮ ಭಟ್ ವಿಧಿವಶ!! ಜಿಲ್ಲೆಯಾದ್ಯಂತ ಬಿಜೆಪಿಯಲ್ಲಿ ಮಡುಗಟ್ಟಿದ ಶೋಕ-ಗಣ್ಯರ ಸಂತಾಪ

ಪುತ್ತೂರು: ದ.ಕ ಜಿಲ್ಲಾ ಬಿಜೆಪಿಯ ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿದ್ದ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ (92) ರವರು ವಯೋ ಸಹಜ ಅನಾರೋಗ್ಯದಿಂದಾಗಿ ಇಂದು ಸಂಜೆ ವಿಧಿವಶರಾದರು. ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ರಾಮ ಭಟ್ ರವರನ್ನು ಕೊಂಬೆಟ್ಟಿನಲ್ಲಿರುವ ಅವರ ಮನೆಗೆ ಕರೆ ತರಲಾಗಿತ್ತು. ಮತ್ತೆ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಇಂದು …

ಪುತ್ತೂರು: ಮಾಜಿ ಶಾಸಕ ಬಿಜೆಪಿಯ ಭೀಷ್ಮ ಉರಿಮಜಲು ಕೆ.ರಾಮ ಭಟ್ ವಿಧಿವಶ!! ಜಿಲ್ಲೆಯಾದ್ಯಂತ ಬಿಜೆಪಿಯಲ್ಲಿ ಮಡುಗಟ್ಟಿದ ಶೋಕ-ಗಣ್ಯರ ಸಂತಾಪ Read More »

ಗರ್ಭಿಣಿ ಮಗಳ ಶಿರಚ್ಛೇದ ಮಾಡಿ ಸೆಲ್ಫಿ ತೆಗೆದುಕೊಂಡ ಹೆತ್ತಮ್ಮ | ಭಯಾನಕ ಘಟನೆಯ ಸುತ್ತ…!

ತಾಯಿಗೆ ತನ್ನ ಮಗುವೇ ಜೀವ. ಅದೆಷ್ಟೇ ತಪ್ಪು ಮಾಡಿದರೂ ಒಮ್ಮೆಗೆ ಬೈದರೂ ಮತ್ತದೇ ಪ್ರೀತಿ-ವಾಸ್ತಲ್ಯ. ಇಂತಹ ಕರುಳಬಳ್ಳಿ ಸಂಬಂಧ ದೂರ ಆದಾಗ ಹತ್ತಿರವಾಗಿರೋದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆ!?ಹೌದು. ಗರ್ಭಿಣಿ ಮಗಳ ಶಿರಚ್ಛೇದನ ಮಾಡಿ ತಲೆಯ ಜೊತೆಗೆ ಅಮ್ಮ-ಮಗ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಅದೆಂತಹ ಕಲ್ಲು ಮನಸ್ಸನ್ನು ಕರಗಿಸುವಂತಿದೆ ಘಟನೆ. ಆದರೆ ಆ ತಾಯಿಗೆ ಮಾತ್ರ ಮನಸ್ಸು ಕಲ್ಲಾಗೆ ಉಳಿಯಿತೇ ಏನು!?. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ಮರ್ಯಾದಾ ಹತ್ಯೆ ನಡೆದಿದ್ದು, ತಾಯಿಯ …

ಗರ್ಭಿಣಿ ಮಗಳ ಶಿರಚ್ಛೇದ ಮಾಡಿ ಸೆಲ್ಫಿ ತೆಗೆದುಕೊಂಡ ಹೆತ್ತಮ್ಮ | ಭಯಾನಕ ಘಟನೆಯ ಸುತ್ತ…! Read More »

ಶಬರಿಮಲೆ : ಮಳೆ,ಭಕ್ತರಿಗೆ ಕಿರಿ ಕಿರಿ, ಹೀಗಿದೆ ವ್ಯವಸ್ಥೆ

ಶಬರಿಮಲೆ :ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.ಈತನ್ಮದ್ಯೆ ಸೋಮವಾರ ಸಂಜೆ ಶಬರಿಮಲೆ ಹಾಗೂ ಪರಿಸರದ ನೀಲಕಲ್ ಮೊದಲಾದೆಡೆ ಮಳೆಯಾಗುತ್ತಿದೆ. ಇದರಿಂದಾಗಿ ಭಕ್ತರಿಗೆ ಕಿರಿ ಕಿರಿಯಾಗಿದೆ.ಪಂಪಾನದಿಯಲ್ಲಿ ಯಾರಿಗೂ ಸ್ನಾನಕ್ಕೆ ಅವಕಾಶವಿಲ್ಲ.ಅಲ್ಲದೆ ಶಬರಿಮಲೆ ಸನ್ನಿಧಾನ,ಪಂಪಾ ಗಣಪತಿ ಸನ್ನಿಧಾನ ಸೇರಿದಂತೆ ಎಲ್ಲಿಯೂ ಭಕ್ತರಿಗೆ ತಂಗಲು ಅವಕಾಶ ನೀಡಲಾಗಿಲ್ಲ.ಸಂಜೆ 7 ರಿಂದ ರಾತ್ರಿ 1 ರ ತನಕ ನೀಲಕ್ಕಲ್‌ನಿಂದ ಪಂಪಾ ಕಡೆಗೆ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.ಭಕ್ತಾದಿಗಳು ಆನ್‌ಲೈನ್ ಟಿಕೇಟ್, ಕೋವಿಡ್ 2 ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ RTPCR …

ಶಬರಿಮಲೆ : ಮಳೆ,ಭಕ್ತರಿಗೆ ಕಿರಿ ಕಿರಿ, ಹೀಗಿದೆ ವ್ಯವಸ್ಥೆ Read More »

ಇಸ್ಲಾಂ ತೊರೆದು ಹಿಂದೂ ಧರ್ಮ ಸೇರಿದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ | “ಹಿಂದೂ ಧರ್ಮ ವಿಶ್ವದ ಪರಿಶುದ್ಧ ಧರ್ಮ” ಎಂಬ ಹೇಳಿಕೆ !!

ಸನಾತನ ಧರ್ಮ, ವೈದಿಕ ಧರ್ಮ ಎಂದು ಕರೆಯಲಾಗುವ ಹಿಂದೂ ಧರ್ಮದಲ್ಲಿ ಅನೇಕ ಸಂಸ್ಕಾರಗಳು, ಪದ್ಧತಿಗಳು ರೂಢಿಯಲ್ಲಿದೆ. ಧರ್ಮಗಳಲ್ಲಿ ಅತ್ಯಂತ ಪ್ರಾಚೀನವಾದುದು ಹಿಂದೂ ಧರ್ಮ. ಇಂತಹ ಶ್ರೇಷ್ಠ ಧರ್ಮವನ್ನು ಮೆಚ್ಚಿಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಇಂತಹ ಪಟ್ಟಿಗೆ ನೂತನ ಹೆಸರೊಂದು ಸೇರ್ಪಡೆಯಾಗಿದೆ. ಉತ್ತರ ಪ್ರದೇಶದ ಪ್ರಮುಖ ಮುಸ್ಲಿಂ ಮುಖಂಡರಲ್ಲಿ ಒಬ್ಬರಾಗಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಈ ಹಿಂದೆ ಪ್ರವಾದಿ ಮುಹಮದರ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದ್ದ …

ಇಸ್ಲಾಂ ತೊರೆದು ಹಿಂದೂ ಧರ್ಮ ಸೇರಿದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ | “ಹಿಂದೂ ಧರ್ಮ ವಿಶ್ವದ ಪರಿಶುದ್ಧ ಧರ್ಮ” ಎಂಬ ಹೇಳಿಕೆ !! Read More »

ಕಾಂಗ್ರೆಸ್ ಉಚ್ಛಾಟಿತ ರಾಜೇಶ್ ಬಾಳೆಕಲ್ಲು ಬಿಜೆಪಿ ಸೇರ್ಪಡೆ!! ಜಿಲ್ಲೆಯ ಘಟಾನುಘಟಿ ನಾಯಕರು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಬಿಜೆಪಿ ಕಾರ್ಯಕರ್ತರ ಆಕ್ಷೇಪ

ಕಾಂಗ್ರೆಸ್ ಉಚ್ಛಾಟಿತ ನಾಯಕ ರಾಜೇಶ್ ಬಾಳೆಕಲ್ಲು ಅವರನ್ನು ಇಂದು ಜಿಲ್ಲೆಯ ಘಟನುಘಟಿ ನಾಯಕರು ನೆರೆದಿದ್ದ ಸಭಾವೇದಿಕೆಯಲ್ಲಿ ಬಿಜೆಪಿಗೆ ಬರಮಾಡಿಕೊಳ್ಳಲಾಗಿತ್ತು. ಇದೇ ವೇಳೆ ಬಿಜೆಪಿಯ ಇತರ ಸ್ಥಳೀಯ ನಾಯಕರುಗಳ ಸಹಿತ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ಕಪ್ಪು ಬಾವುಟ ಪ್ರದರ್ಶಿಸಿದರು. ಆದರೂ ಕಾರ್ಯಕರ್ತರ ಮಾತಿಗೆ ಬಗ್ಗದ ನಾಯಕರುಗಳು ಬಾಳೆಕಲ್ಲು ಅವರನ್ನು ಶಾಲು ಹಾಕಿ ಬರಮಾಡಿಕೊಂಡಾಗ, ಬೂತ್ ನಾಯಕರು ತಮ್ಮ ನಾಮಫಲಕವನ್ನು ಹಿಂದಿರುಗಿಸಿ ನಡೆದರು. ಸದ್ಯ ವಿಟ್ಲ ಬಿಜೆಪಿಯಲ್ಲಿ ಮುಂದೇನಾಗುತ್ತದೆ ಎಂಬ ಯೋಚನೆ ಕಾಡಿದೆ. ಈ ಮೊದಲು ಕಾಂಗ್ರೆಸ್ ನ …

ಕಾಂಗ್ರೆಸ್ ಉಚ್ಛಾಟಿತ ರಾಜೇಶ್ ಬಾಳೆಕಲ್ಲು ಬಿಜೆಪಿ ಸೇರ್ಪಡೆ!! ಜಿಲ್ಲೆಯ ಘಟಾನುಘಟಿ ನಾಯಕರು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಬಿಜೆಪಿ ಕಾರ್ಯಕರ್ತರ ಆಕ್ಷೇಪ Read More »

2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಗಳ ಭರ್ಜರಿ ಜಯ

2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಗಳ ಭರ್ಜರಿ ಜಯ ನ್ಯೂಜಿಲೆಂಡ್ ವಿರುದ್ಧದ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 2 ಪಂದ್ಯಗಳ ಸರಣಿಯನ್ನು ಕೈ ವಶ ಮಾಡಿಕೊಂಡಿದೆ. ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 2 ಪಂದ್ಯಗಳ ಸರಣಿಯನ್ನು ಕೈ ವಶ ಮಾಡಿಕೊಂಡಿದೆ. ಭಾರತ …

2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಗಳ ಭರ್ಜರಿ ಜಯ Read More »

ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವದಂದು ಈ ಬಾರಿಯೂ ಎಡೆಸ್ನಾನವಿಲ್ಲ !! | ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಡೆಸ್ನಾನ ಸೇವೆ ರದ್ದು

ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವದಂದು ಭಕ್ತರು ನಡೆಸುವ ಎಡೆಸ್ನಾನ ಸೇವೆ ಈ ಬಾರಿಯೂ ನಡೆಯುವುದಿಲ್ಲ. ಕೊರೋನಾ ಕಾರಣದಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಠಿಯಂದು ದೇವಸ್ಥಾನದ ಹೊರಾಂಗಣದಲ್ಲಿ ಭಕ್ತರು ಸ್ವಯಂ ಪ್ರೇರಿತರಾಗಿ ಈ ಸೇವೆ ನಡೆಸುತ್ತಿದ್ದರು. ಕಳೆದ ಬಾರಿಯೂ ಕೊರೋನ ಕಾರಣಕ್ಕೆ ಅನುಮತಿ ನೀಡಿರಲಿಲ್ಲ. ಅಂತೆಯೇ ಈ ಬಾರಿಯೂ ಎಡೆ ಸ್ನಾನಕ್ಕೆ ಅವಕಾಶ ನೀಡಲಾಗಿಲ್ಲ.

ಮಂಗಳೂರಿನಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟ | ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಪಾಸಿಟಿವ್!!

ಮಂಗಳೂರಿನಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಒಂದೇ ದಿನ ಕೊರೋನಾ ದೃಢಪಟ್ಟಿದೆ. ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸದ್ಯ ಕಾಲೇಜನ್ನು ಆರೋಗ್ಯ ಇಲಾಖೆ ಕಂಟೇನ್ಮೆಂಟ್ ಮಾಡಿದೆ. 10 ದಿನದಲ್ಲಿ 21 ಜನ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಆಗಿದೆ. ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಬಂದ ಎಲ್ಲಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಈವರೆಗೆ ಮೂರೂ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ …

ಮಂಗಳೂರಿನಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟ | ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಪಾಸಿಟಿವ್!! Read More »

error: Content is protected !!
Scroll to Top