Day: October 14, 2021

ಮುರುಳ್ಯದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಕಾಣಿಯೂರು : ಮುರುಳ್ಯ ಗ್ರಾಮದ ಸಮಹಾದಿಯಲ್ಲಿ ಯುವಕನೋರ್ವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.14 ರಂದು ನಡೆದಿದೆ. ಮುರುಳ್ಯ ಸಮಹಾದಿ ದಿ.ಶೀನ ಎಂಬವರ ಪುತ್ರ ಪ್ರದೀಪ (21) ಎಂಬವರು ಮನೆಯ ಸಮೀಪದ ಗುಡ್ಡದಲ್ಲಿ ಗೇರು ಬೀಜದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.15 : ಆರ್.ಎಸ್.ಎಸ್.ಜಿಲ್ಲಾ ನೂತನ ಕಾರ್ಯಾಲಯಕ್ಕೆ ಭೂಮಿ ಪೂಜೆ

ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲೆಯ ನೂತನ ಕಾರ್ಯಾಲಯದ ಭೂಮಿ ಪೂಜನಾ ಕಾರ್ಯಕ್ರಮ ಅ.15ರಂದು ಬೆಳಿಗ್ಗೆ 9.15ಕ್ಕೆ ನಡೆಯಲಿದೆ. ಪುತ್ತೂರಿನ ಹಳೇ ಆರಕ್ಷಕ ವಸತಿ ನಿಲಯ ರಸ್ತೆಯಲ್ಲಿರುವ ‘ಪಂಚವಟಿ’ಯಲ್ಲಿ ಕಾರ್ಯಕ್ರಮ ಜರಗಲಿದೆ. 95 ವರುಷಗಳ ಇತಿಹಾಸ ಇರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಕಛೇರಿ ‘ಪಂಚವಟಿ’ ಹಲವಾರು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಕಾರ್ಯ ಚಟುವಟಿಕೆಗಾಗಿ ಇನ್ನೂ ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆ ಇರುವುದರಿಂದ ನೂತನ ಕಟ್ಟಡ ನಿರ್ಮಾಣವಾಗಲಿದೆ. ಕೇಶವ ಸ್ಮೃತಿ ಸಂವರ್ಧನ ಸಮಿತಿಯ ನೇತೃತ್ವದಲ್ಲಿ …

ಅ.15 : ಆರ್.ಎಸ್.ಎಸ್.ಜಿಲ್ಲಾ ನೂತನ ಕಾರ್ಯಾಲಯಕ್ಕೆ ಭೂಮಿ ಪೂಜೆ Read More »

ಮದುಮಗಳನ್ನು ನೋಡಲು ಅಮಲಿನಲ್ಲಿ ಗಾಡಿ ಓಡಿಸಿದವನ ನಡು ಮಧ್ಯಕ್ಕೆ ಬಿತ್ತು ದೊಡ್ಡ ಏಟು | ಇದೀಗ ಮದುವೆ ಗಂಡಿಗೆ ಅದೇ ಇಲ್ಲ !!

ಗೆಳತಿಯನ್ನು ಭೇಟಿಯಾಗಲು ಆತನಿಗೆ ಆತುರ. ಗೆಳತಿ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಆತನಲ್ಲಿ ಉದ್ವೇಗ. ಖುಷಿಯನ್ನು ಸಂಭ್ರಮಿಸಲು ಆತ ಗಂಟಲಿಗೆ ಒಂದಷ್ಟು ದ್ರವ ಸುರಿದುಕೊಂಡು ಕಾರನ್ನೇರಿದ್ದ. ಕುಡಿದ ಅಮಲಿಗೋ, ಮೈ ಮರವಿಗೋ ಆಘಾತವಂತೂ ನಡೆದು ಹೋಗಿದೆ. ಆದರಲ್ಲಾಗಲೇ ಆತ ಕೋಮಾಗೆ ಜಾರಿದ್ದನು. ಜೊತೆಗೆ ಆತ ಬದುಕಿನಲ್ಲಿ ಸ್ತ್ರೀ ಪ್ರೀತಿಗೆ ಅತ್ಯಗತ್ಯವಾದ ಪುರುಷ ಅಂಗವನ್ನೇ ಕಳೆದುಕೊಳ್ಳಬೇಕಾಗಿ ಬಂದದ್ದು ದುರಂತ. ಅಮೆರಿಕದಲ್ಲಿ ನಡೆದ ಘಟನೆ ಇದಾಗಿದೆ, ಪೌಲ್​ ಬೆರ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ. ವರದಿಯ ಪ್ರಕಾರ, ವಾಹನ ಮಿತಿ …

ಮದುಮಗಳನ್ನು ನೋಡಲು ಅಮಲಿನಲ್ಲಿ ಗಾಡಿ ಓಡಿಸಿದವನ ನಡು ಮಧ್ಯಕ್ಕೆ ಬಿತ್ತು ದೊಡ್ಡ ಏಟು | ಇದೀಗ ಮದುವೆ ಗಂಡಿಗೆ ಅದೇ ಇಲ್ಲ !! Read More »

ಬೆಳ್ತಂಗಡಿ| ಆಶ್ರಯ ನೀಡುತ್ತಿದ್ದ ಮರವೇ ಬುಡ ಸಮೇತ ಉರುಳಿ ವ್ಯಕ್ತಿ ದುರಂತ ಸಾವು !

ಮನೆಯ ಅಂಗಳದಲ್ಲಿದ್ದ ಮರವೊಂದು ಯಾವುದೇ ಮುನ್ಸೂಚನೆ ಇಲ್ಲದೆ ಬುಡಸಮೇತ ವ್ಯಕ್ತಿಯೊಬ್ಬರ ಮೇಲೆ ಬಿದ್ದು, ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ತಾವೇ ಮನೆಯ ಅಂಗಳದಲ್ಲಿ ನೆಟ್ಟು ಬೆಳೆಸಿದ ಮರವೊಂದು ತಮ್ಮ ಜೀವಕ್ಕೆ ಕುತ್ತು ತಂದಿದೆ. ಹೌದು, ಮನೆಯ ಅಂಗಳದಲ್ಲಿದ್ದ ಮರವೊಂದು ಮನೆಯ ಸದಸ್ಯನ ಮೇಲೆ ಬಿದ್ದಿದೆ. ಪರಿಣಾಮ ವ್ಯಕ್ತಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪುದುವೆಟ್ಟು ಗ್ರಾಮದ ಸಾಮೆದಕಲಪು ವರಸಾರಿ ಮನೆ ನಿವಾಸಿ …

ಬೆಳ್ತಂಗಡಿ| ಆಶ್ರಯ ನೀಡುತ್ತಿದ್ದ ಮರವೇ ಬುಡ ಸಮೇತ ಉರುಳಿ ವ್ಯಕ್ತಿ ದುರಂತ ಸಾವು ! Read More »

ಮಂಗಳೂರು | ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನ ಬಂಧನ

ಮಹಿಳಾ ಸಿಬ್ಬಂದಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಫಾರೂಕ್ (47) ಬಂಧಿತ ಆರೋಪಿ. ಘಟನೆಯ ವಿವರ: ತನ್ನ ಕಚೇರಿಯಲ್ಲಿ ಕೆಲಸಕ್ಕಿದ್ದ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದಲ್ಲದೆ, ವಾಟ್ಸಪ್ ಮೂಲಕ ತನ್ನ ನಗ್ನ ಚಿತ್ರಗಳನ್ನು ಕಳುಹಿಸಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ಯುವತಿಯ ನಗ್ನ ಚಿತ್ರಗಳನ್ನೂ ಕಳುಹಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಸಹಕರಿಸದ ಆಕೆ …

ಮಂಗಳೂರು | ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನ ಬಂಧನ Read More »

ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಂದೆಯೇ ಪೈಲೆಟ್ | ತಂದೆಯನ್ನು ಸಮವಸ್ತ್ರದಲ್ಲಿ ಕಂಡ ಈ ಪೋರಿಯ ಖುಷಿಗೆ ಪಾರವೇ ಇಲ್ಲ!! | ಇಲ್ಲಿದೆ ನೋಡಿ ಆ ಮುದ್ದಾದ ವಿಡಿಯೋ

ತಂದೆ ಮಗಳ ಸಂಬಂಧ ಏನೋ ಒಂಥರಾ ಒಂಥರಾ ಚಂದ. ಕರಗದಷ್ಟು ಪ್ರೀತಿ ಎನ್ನುವ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋನೇ. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ…ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನು ಹಚ್ಕೊಳ್ಳೋದೇ ಜಾಸ್ತಿ. ಸಣ್ಣ ಹೆಣ್ಣು ಮಕ್ಕಳಿಗಂತೂ ತಂದೆಯೇ ಪ್ರಪಂಚವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ವಿಮಾನದಲ್ಲಿದ್ದ ಪುಟ್ಟ ಹುಡುಗಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೈರಲ್ …

ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಂದೆಯೇ ಪೈಲೆಟ್ | ತಂದೆಯನ್ನು ಸಮವಸ್ತ್ರದಲ್ಲಿ ಕಂಡ ಈ ಪೋರಿಯ ಖುಷಿಗೆ ಪಾರವೇ ಇಲ್ಲ!! | ಇಲ್ಲಿದೆ ನೋಡಿ ಆ ಮುದ್ದಾದ ವಿಡಿಯೋ Read More »

‘ಕೋಟಿಗೊಬ್ಬ’ನ ಕಾಣದೆ ರಾಜ್ಯದಲ್ಲೆಡೆ ರೊಚ್ಚಿಗೆದ್ದ ಜನ | ಅಭಿನಯ ಚಕ್ರವರ್ತಿಯ ಸಿನಿಮಾ ರಿಲೀಸ್ ವಿಳಂಬ, ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್

ಎಲ್ಲಡೆ ನಾಡ ಹಬ್ಬ ದಸರಾ ಸಂಭ್ರಮ. ಆಯುಧಪೂಜೆ ದಿನದಂದೇ ಸಿನಿಪ್ರಿಯರಿಗೆ ಸ್ಯಾಂಡಲ್​ವುಡ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ದುನಿಯಾ ವಿಜಯ್ ಅಭಿನಯದ ಸಲಗ ಹಾಗೂ ಕಿಚ್ಚ ಸುದೀಪ್​ ಅವರ ಕೋಟಿಗೊಬ್ಬ 3 ತೆರೆ ಕಂಡಿದೆ. ಕೊರೋನಾ ಲಾಕ್​ಡೌನ್​ ಸಡಿಲಗೊಂಡ ನಂತರ ಸಿನಿಮಾ ಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಿದ ನಂತರ ತೆರೆ ಕಾಣುತ್ತಿರುವ ಸಿನಿಮಾಗಳು ಇವಾಗಿದೆ. ಅದರಲ್ಲೂ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ ಸಿನಿಮಾ ನೋಡಲು ಅಭಿಮಾನಿಗಳು ಮುಂಜಾನೆಯೇ ಚಿತ್ರಮಂದಿರಗಳ ಬಳಿ ಸೇರಿದ್ದಾರೆ. ಎರಡೂವರೆ …

‘ಕೋಟಿಗೊಬ್ಬ’ನ ಕಾಣದೆ ರಾಜ್ಯದಲ್ಲೆಡೆ ರೊಚ್ಚಿಗೆದ್ದ ಜನ | ಅಭಿನಯ ಚಕ್ರವರ್ತಿಯ ಸಿನಿಮಾ ರಿಲೀಸ್ ವಿಳಂಬ, ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್ Read More »

ಸಹಾಯಕ ಪ್ರೊಫೆಸರ್ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ | ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು ತಡೆಹಿಡಿದ ಯುಜಿಸಿ

ಸಹಾಯಕ ಪ್ರೊಫೆಸರ್ ಆಗ ಬಯಸುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು ಆಯೋಗ ತಡೆಹಿಡಿದಿದ್ದು, ಇದರಿಂದ ಅದಷ್ಟು ಪ್ರೊಫೆಸರ್ ಹುದ್ದೆಗೆ ಸೇರಬಯಸುವವರಿಗೆ ನಿರಾಳವಾಗಿದೆ. ಸಹಾಯಕ ಪ್ರೊಫೆಸರ್ ಹುದ್ದೆಗಳಿಗೆ ಪಿಎಚ್‌ಡಿ ಕಡ್ಡಾಯ. ಆದರೆ ಈ ಬಾರಿ ಈ ನಿಯಮದಿಂದ ಅನುದಾನ ಆಯೋಗ ಸಡಿಲಿಕೆ ನೀಡಿದೆ. ಕಡ್ಡಾಯವಾಗಿ ಪಿಎಚ್‌ಡಿ ಹೊಂದಿರಲೇಬೇಕು ಎಂದಿರುವ ತನ್ನ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಆಯೋಗ ಕಡ್ಡಾಯವಾಗಿ ಪಿಎಚ್‌ಡಿ ಹೊಂದುವ ಅಗತ್ಯವಿಲ್ಲ ಎಂದು ಹೇಳಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು …

ಸಹಾಯಕ ಪ್ರೊಫೆಸರ್ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ | ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು ತಡೆಹಿಡಿದ ಯುಜಿಸಿ Read More »

ಬಿಜೆಪಿ ಪರ ಚುನಾವಣೆಗೆ ನಿಂತ ವ್ಯಕ್ತಿಗೆ ತೀವ್ರ ಮುಜುಗರ ತಂದಿಟ್ಟ ಫಲಿತಾಂಶ | ಮನೆ-ಮನೆ ತಿರುಗಾಡಿ ಭರ್ಜರಿ ಪ್ರಚಾರ ಮಾಡಿದ ಈತನ ಪಾಲಿಗೆ ದೊರಕಿದ್ದು ಕೇವಲ ಒಂದು ಮತ | ಮನೆಯಲ್ಲಿ ನಾಲ್ವರು ಸದಸ್ಯರಿದ್ದರು ಸಿಕ್ಕಿದ್ದು ಮಾತ್ರ ಸಿಂಗಲ್ ವೋಟ್

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್ ಎಂಬುವರು ಕೇವಲ ಒಂದೇ ಒಂದು ಮತವನ್ನು ಪಡೆಯುವ ಮೂಲಕ ದೊಡ್ಡ ಸೋಲು ಅನುಭವಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ತಮ್ಮ ಕುಟುಂಬದಲ್ಲಿ ನಾಲ್ವರು ಮತಹಾಕುವ ಅರ್ಹತೆ ಇರುವ ಸದಸ್ಯರಿದ್ದರು ಸಹ ಕೇವಲ ಒಂದೇ ಒಂದು ಮತ ಪಡೆದಿರುವುದು ಆ ಬಿಜೆಪಿ ಅಭ್ಯರ್ಥಿ ಪಾಲಿಗೆ ದುರಂತದ ವಿಷಯ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯಾನೈಕೆನ್ಪಾಳ್ಯಂ ಯೂನಿಯನ್​ನಿಂದ ವಾರ್ಡ್​ ಸದಸ್ಯ ಚುನಾವಣೆಗೆ ಕಾರ್ತಿಕ್​ ಸ್ಪರ್ಧಿಸಿದ್ದರು. ಆದರೆ, …

ಬಿಜೆಪಿ ಪರ ಚುನಾವಣೆಗೆ ನಿಂತ ವ್ಯಕ್ತಿಗೆ ತೀವ್ರ ಮುಜುಗರ ತಂದಿಟ್ಟ ಫಲಿತಾಂಶ | ಮನೆ-ಮನೆ ತಿರುಗಾಡಿ ಭರ್ಜರಿ ಪ್ರಚಾರ ಮಾಡಿದ ಈತನ ಪಾಲಿಗೆ ದೊರಕಿದ್ದು ಕೇವಲ ಒಂದು ಮತ | ಮನೆಯಲ್ಲಿ ನಾಲ್ವರು ಸದಸ್ಯರಿದ್ದರು ಸಿಕ್ಕಿದ್ದು ಮಾತ್ರ ಸಿಂಗಲ್ ವೋಟ್ Read More »

ಗರ್ಭಿಣಿಯರ ಗರ್ಭಪಾತದ ವಿಷಯದಲ್ಲಿ ಹೊಸದಾಗಿ ಬಂದ ಕೇಂದ್ರದ ಕಾಯ್ದೆ | ಯಾರೆಲ್ಲ ಎಷ್ಟು ವಾರದ ಗರ್ಭಪಾತ ಮಾಡ್ಕೊಬಹುದು ಎಂಬ ವಿವರ ಇಲ್ಲಿದೆ

ಗರ್ಭಿಣಿಯರ ಗರ್ಭಪಾತದ ಕುರಿತು ಹೊಸ ನಿಯಮವೊಂದನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದ್ದು,ನಿರ್ದಿಷ್ಟ ವರ್ಗಗಳ ಗರ್ಭಿಣಿಯರಿಗೆ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ನೀಡುವುದಕ್ಕೆ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ನೀಡಿದೆ. ಇದರ ಪ್ರಕಾರ, ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಧಾರಣೆಯ ಮುಕ್ತಾಯದ ಮೇಲಿನ ಮಿತಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸಲಾಗಿದೆ. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ತಿದ್ದುಪಡಿ) ನಿಯಮಗಳು, 2021 (Medical Termination of Pregnancy (Amendment) Rules, 2021) ರ ಪ್ರಕಾರ ಈ ವರ್ಗಗಳಲ್ಲಿ ಲೈಂಗಿಕ ದೌರ್ಜನ್ಯ ಅಥವಾ …

ಗರ್ಭಿಣಿಯರ ಗರ್ಭಪಾತದ ವಿಷಯದಲ್ಲಿ ಹೊಸದಾಗಿ ಬಂದ ಕೇಂದ್ರದ ಕಾಯ್ದೆ | ಯಾರೆಲ್ಲ ಎಷ್ಟು ವಾರದ ಗರ್ಭಪಾತ ಮಾಡ್ಕೊಬಹುದು ಎಂಬ ವಿವರ ಇಲ್ಲಿದೆ Read More »

error: Content is protected !!
Scroll to Top