ಬಿಜೆಪಿ ಪರ ಚುನಾವಣೆಗೆ ನಿಂತ ವ್ಯಕ್ತಿಗೆ ತೀವ್ರ ಮುಜುಗರ ತಂದಿಟ್ಟ ಫಲಿತಾಂಶ | ಮನೆ-ಮನೆ ತಿರುಗಾಡಿ ಭರ್ಜರಿ ಪ್ರಚಾರ ಮಾಡಿದ ಈತನ ಪಾಲಿಗೆ ದೊರಕಿದ್ದು ಕೇವಲ ಒಂದು ಮತ | ಮನೆಯಲ್ಲಿ ನಾಲ್ವರು ಸದಸ್ಯರಿದ್ದರು ಸಿಕ್ಕಿದ್ದು ಮಾತ್ರ ಸಿಂಗಲ್ ವೋಟ್

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್ ಎಂಬುವರು ಕೇವಲ ಒಂದೇ ಒಂದು ಮತವನ್ನು ಪಡೆಯುವ ಮೂಲಕ ದೊಡ್ಡ ಸೋಲು ಅನುಭವಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ತಮ್ಮ ಕುಟುಂಬದಲ್ಲಿ ನಾಲ್ವರು ಮತಹಾಕುವ ಅರ್ಹತೆ ಇರುವ ಸದಸ್ಯರಿದ್ದರು ಸಹ ಕೇವಲ ಒಂದೇ ಒಂದು ಮತ ಪಡೆದಿರುವುದು ಆ ಬಿಜೆಪಿ ಅಭ್ಯರ್ಥಿ ಪಾಲಿಗೆ ದುರಂತದ ವಿಷಯ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯಾನೈಕೆನ್ಪಾಳ್ಯಂ ಯೂನಿಯನ್​ನಿಂದ ವಾರ್ಡ್​ ಸದಸ್ಯ ಚುನಾವಣೆಗೆ ಕಾರ್ತಿಕ್​ ಸ್ಪರ್ಧಿಸಿದ್ದರು. ಆದರೆ, ಅವರಿಗೆ ಕೇವಲ ಒಂದೇ ಒಂದು ಮತ ಬಿದ್ದಿದೆ. ಸ್ವತಹ ಆತನ ಮನೆಯವರೇ ಆತನಿಗೆ ನೀಡದೆ ಕೈ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾರ್ತಿಕ್​, ನನ್ನ ಮನೆ ಇರುವುದು ನಾಲ್ಕನೇ ವಾರ್ಡಿನಲ್ಲಿ ಆದರೆ, ನಾನು ಸ್ಪರ್ಧಿಸಿದ್ದು 9ನೇ ವಾರ್ಡಿನಲ್ಲಿ. ಹೀಗಾಗಿ ನಮ್ಮ ಮನೆಯವರು ವೋಟ್​ ಮಾಡಲು ಆಗಲಿಲ್ಲ ಎಂಬ ಸಮಜಾಯಿಸಿ ನೀಡಿದ್ದಾರೆ ಆ ಅಭ್ಯರ್ಥಿ. ನನ್ನದು ಬೇರೆ ವಾರ್ಡ್​ ಆದ್ದರಿಂದ ಜನರ ಬೆಂಬಲ ದೊರೆಯಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಒಂದು ಪಡೆದಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಇಂತಹ ಪರಿಸ್ಥಿತಿಯಲ್ಲೂ ಒಂದು ವೋಟ್​ ಪಡೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು, ಆಗ ಖಂಡಿತ ಗೆಲ್ಲುತ್ತಾರೆಂದು ಹೇಳಿದ್ದಾರೆ. ಅಲ್ಲದೆ, ಅಭ್ಯರ್ಥಿ ಕಾರ್ತಿಕ್​ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಅ. 6 ರಿಂದ 9ರವರೆಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದೆ. ಒಟ್ಟು 27,003 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 79,433 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾರ್ತಿಕ್​ ಅವರು ತುಂಬಾ ಪ್ರಚಾರ ನಡೆಸಿದ್ದರು. ಆದರೆ, ಕೇವಲ ಒಂದು ಮತವನ್ನು ಮಾತ್ರ ಪಡೆದುಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಇದು ನಿರಂತರ ಬೆಲೆ ಏರಿಕೆಯ ಪರಿಣಾಮ ಎಂಬ ಚರ್ಚೆಗಳು, ಬಿಜೆಪಿಯ ವಿರುದ್ಧವಾಗಿ ಜಾಲತಾಣದಲ್ಲಿ ನಡೆಯುತ್ತಿದೆ.

Leave A Reply

Your email address will not be published.