Day: September 18, 2021

ಬಂಟ್ವಾಳ | ಬೈಕಿನಲ್ಲಿ ಬಂದು ಮಹಿಳೆಯ ‌ಕರಿಮಣಿ ಸರ ಎಗರಿಸಿದ ಇಬ್ಬರ ಬಂಧನ

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದು ಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕರಿಮಣಿ ಸರವನ್ನು ಕಿತ್ತುಕೊಂಡು ಹೋದ ಘಟನೆ ನಡೆದಿದೆ. ಶ್ರೀಮತಿ ವತ್ಸಲಾ(53)ರವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಸುಲಿಗೆ ಮಾಡಿ ಪರಾರಿಯಾಗಿದ್ದವರನ್ನು ದಸ್ತಗಿರಿ ಮಾಡಿ ಸುಲಿಗೆ ಮಾಡಿದ್ದ ಚಿನ್ನದ ಕರಿಮಣಿ ಸರವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ ತಂಡ ಹಾಗೂ ಬಂಟ್ವಾಳ‌ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಆರ್ಯಾಪು ಪುತ್ತೂರು ನಿವಾಸಿಗಳಾದ ರೋಹಿತ್ (22) …

ಬಂಟ್ವಾಳ | ಬೈಕಿನಲ್ಲಿ ಬಂದು ಮಹಿಳೆಯ ‌ಕರಿಮಣಿ ಸರ ಎಗರಿಸಿದ ಇಬ್ಬರ ಬಂಧನ Read More »

ಕಾರ್ಕಳ : ನಿಟ್ಟೆಯ ಶ್ಯಾಮ ಕೋಟ್ಯಾನ್ ನಾಪತ್ತೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಜಾಲು ದರ್ಖಾಸ್ ಹೌಸ್ ಎಂಬಲ್ಲಿಯ ಶ್ಯಾಮ ಕೋಟ್ಯಾನ್ (65) ಎಂಬವರು ಸೆ. 13ರ ಸೋಮವಾರ ಬೆಳಗ್ಗೆ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ. ಇವರು ಮನೆಯಿಂದ ಹೋದಾಗ ಗುಲಾಬಿ ಬಣ್ಣದ ಶರ್ಟ್ ಹಾಗೂ ಕಂದು ಬಣ್ಣದ ಲುಂಗಿ ಧರಿಸಿದ್ದು, ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಇವರ ಮಗಳು ಶ್ರೀಮತಿ ಅಖಿಲಾರವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇವರನ್ನು ಕಂಡಲ್ಲಿ ಕಾರ್ಕಳ ಪೊಲೀಸ್ ಠಾಣೆಗೆ ಅಥವಾ …

ಕಾರ್ಕಳ : ನಿಟ್ಟೆಯ ಶ್ಯಾಮ ಕೋಟ್ಯಾನ್ ನಾಪತ್ತೆ Read More »

ವಾರಾಂತ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶ

ಕಡಬ : ಕಡಬ ತಾಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರಾಂತ್ಯದಲ್ಲೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 6.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕಳೆದ ವಾರದವರೆಗೆ ವಾರಾಂತ್ಯದಲ್ಲಿ ದೇವಸ್ಥಾನ ದರ್ಶನಕ್ಕೆ ನಿರ್ಬಂಧಿಸಲಾಗಿತ್ತು. ಕೊರೋನಾ ಲಾಕ್ ಡೌನ್ ನಿಂದ ಮುಚ್ಚಿದ್ದ ದೇವಸ್ಥಾನ ಲಾಕ್ ಡೌನ್ ತೆರೆದುಕೊಂಡ ಬಳಿಕದ ದಿನಗಳಲ್ಲಿ ದೇವರ ದರ್ಶನಕ್ಕೆ ತೆರದುಕೊಂಡಿತ್ತು. ವೀಕೆಂಡ್ ಕರ್ಪ್ಯೂನ ಎರಡು ದಿವಸ ಭಕ್ತರ ದರ್ಶನಕ್ಕೆ ನಿರ್ಬಂಧಿಸಲಾಗಿತ್ತು. ಇತ್ತೀಚೆಗೆ ವೀಕೆಂಡ್ ಕರ್ಫ್ಯೂ ತೆರವಾಗಿದ್ದರೂ ದೇವಸ್ಥಾನ …

ವಾರಾಂತ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶ Read More »

ಬೆಳ್ತಂಗಡಿ | ಕಾಲು ಜಾರಿ ನದಿಗೆ ಬಿದ್ದಿದ್ದ ಮಹಿಳೆಯ ಮೃತದೇಹ ಪತ್ತೆ

ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿಯ ಗಡಾಯಿಕಲ್ಲಿನ ಬಳಿ ಇರುವ ನದಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತರನ್ನು ಮಂಜೊಟ್ಟಿ ಬಳಿಯ ಬೀಜದಡಿ ನಿವಾಸಿ ಚೆನ್ನಮ್ಮ (70) ಎಂದು ಗುರುತಿಸಲಾಗಿದೆ. ಚೆನ್ನಮ್ಮ ಅವರು ಮಂಗಳವಾರ ಔಷಧಿ ತರಲೆಂದು ತೆರಳಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ನಾಪತ್ತೆಯಾಗಿದ್ದ ಇವರನ್ನು ಹುಡುಕುವ ಕಾರ್ಯ ನಡೆಯುತ್ತಿತ್ತು. ಇಂದು ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಸದ್ಯ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.

ದೇವಸ್ಯ : ಹಳೆಯ ಸೇತುವೆಗೆ ಹಾನಿ, ವಾಹನ ಸಂಚಾರ ನಿರ್ಬಂಧ

ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಬೆಳಿಯೂರು ಕಟ್ಟೆ ಸಮೀಪದ ದೇವಸ್ಯ ಎಂಬಲ್ಲಿ ಹಳೆಯ ಸೇತುವೆಗೆ ಹಾನಿಯಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ಸೇತುವೆಯ ಮೇಲೆ ಎಲ್ಲಾ ವಾಹನಗಳನ್ನು ಸಂಚಾರವನ್ನು ನಿರ್ಬಂಧಿಸಲಾಗಿದೆ. ಹೊಸ ಸೇತುವೆಯ ಸಂಪರ್ಕ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ದಿನಗಳ ಒಳಗಾಗಿ ಸಂಚಾರವನ್ನು ಮರುಸ್ಥಾಪಿಸಲು ಕ್ರಮವಹಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆಲೋಕೋಪಯೋಗಿ ಇಲಾಖೆ ಪುತ್ತೂರು ಉಪ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ನಿಮಗೆ ಬೀಳುವ ಕನಸು ಶುಭವೋ ಅಥವಾ ಅಶುಭವೋ ಎಂಬ ಗೊಂದಲದಲ್ಲಿ ನೀವಿದ್ದೀರಾ!!?| ಕನಸಲ್ಲಿ ಕಾಗೆ ಬಂದರೆ ಸಾವಿನ ಮುನ್ಸೂಚನೆ ಅಂತೇ!!? | ಈ ಮೂಲಕ ನಿಮ್ಮ ಕನಸು ಯಾವ ಮಾರ್ಗದಲ್ಲಿದೆ ಎಂದು ತಿಳಿದುಕೊಳ್ಳಿ

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳೂ ಭವಿಷ್ಯದ ಸಂಕೇತಗಳೇ… ಎಂಬ ಪ್ರಶ್ನೆ ಜ್ಯೋತಿಷಿಗಳಿಂದ ಹಿಡಿದು ವಿಜ್ಞಾನಿಗಳವರೆಗೂ ಕಾಡಿದ್ದಿದೆ. ಮನಃಶಾಸ್ತ್ರದಲ್ಲೂ ಕನಸಿನ ಲೋಕದ ಬಗ್ಗೆ ಸಾಕಷ್ಟು ಸಂಶೋಧನೆಗಳೇ ನಡೆದಿವೆ. ಹೀಗೆ ನಮಗೆ ಕಾಡುವ ಪ್ರತಿಯೊಂದು ಕನಸು ಒಳಿತೇ ಕೆಡುಕೆ ಎಂಬುದು ನಮ್ಮೆಲ್ಲರ ಪ್ರಶ್ನೆ. ಕೆಲವರು ಇಂತಹ ಉಹಾಪೋಹಗಳು ಮೂಢನಂಬಿಕೆ ಎಂದು ಹೇಳುವರು. ಆದರೆ ಕೆಲವೊಂದಿಷ್ಟು ಜನ ಸಂಪ್ರದಾಯಿಕವಾಗಿ ನಂಬುತ್ತಾರೆ.ಕೆಲವರು ಹೇಳುತ್ತಾರೆ ಬೆಳಗಿನ ಹೊತ್ತು ಕನಸು ಬಿದ್ದರೆ …

ನಿಮಗೆ ಬೀಳುವ ಕನಸು ಶುಭವೋ ಅಥವಾ ಅಶುಭವೋ ಎಂಬ ಗೊಂದಲದಲ್ಲಿ ನೀವಿದ್ದೀರಾ!!?| ಕನಸಲ್ಲಿ ಕಾಗೆ ಬಂದರೆ ಸಾವಿನ ಮುನ್ಸೂಚನೆ ಅಂತೇ!!? | ಈ ಮೂಲಕ ನಿಮ್ಮ ಕನಸು ಯಾವ ಮಾರ್ಗದಲ್ಲಿದೆ ಎಂದು ತಿಳಿದುಕೊಳ್ಳಿ Read More »

ಬ್ರಿಟಿಷ್ ಆಳ್ವಿಕೆ ಕಾಲದ ಒಂದು ರೂಪಾಯಿ ನಾಣ್ಯದ ಬೆಲೆ 10 ಕೋಟಿಯಂತೆ!!!ನಿಮಗೂ ಹಳೆಯ ನಾಣ್ಯವನ್ನು ಸಂಗ್ರಹಿಸುವ ಕ್ರೇಜಿ ಇದೆಯೇ?? ಹಾಗಿದ್ದರೆ ನೀವೂ ಮನೆಯಲ್ಲೇ ಕೂತು ಕೋಟಿ ಹಣ ಗಳಿಸುವ ಈ ಕೆಲಸ ಬೇಗ ಮಾಡಿ ಮುಗಿಸಿ!!

ಅನೇಕ ಜನರು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ಹಿಂದಿನ ಕಾಲದ ಪುರಾತನ ನಾಣ್ಯಗಳಿಗೆಲ್ಲಾ ತುಂಬಾ ಬೆಲೆ ಇದೆ. ಹಲವು ಮಂದಿ ಅವುಗಳನ್ನು ಸರಿಯಾದ ಸಮಯದಲ್ಲಿ ಮಾರಾಟ ಮಾಡಿ ಲಕ್ಷ ಲಕ್ಷ ದುಡ್ಡು ಎಣಿಸುತ್ತಾರೆ. ವಿಶಿಷ್ಟ ಗುರುತಿನ, ವಿಶೇಷತೆ ಹೊಂದಿರುವ ನೋಟುಗಳು ಮತ್ತು ನಾಣ್ಯಗಳಿಗೆ ಆನ್ಲೈನ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಸುಮಾರು ಜನರು ಆನ್ಲೈನಲ್ಲಿ ಅಪರೂಪದಲ್ಲಿಯೇ ಅಪರೂಪವನ್ನುವ, ವಿಶೇಷ ಸರಣಿಯ ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡಿ ಮನೆಯಲ್ಲಿಯೇ ಕುಳಿತು ಉತ್ತಮ ಆದಾಯ …

ಬ್ರಿಟಿಷ್ ಆಳ್ವಿಕೆ ಕಾಲದ ಒಂದು ರೂಪಾಯಿ ನಾಣ್ಯದ ಬೆಲೆ 10 ಕೋಟಿಯಂತೆ!!!ನಿಮಗೂ ಹಳೆಯ ನಾಣ್ಯವನ್ನು ಸಂಗ್ರಹಿಸುವ ಕ್ರೇಜಿ ಇದೆಯೇ?? ಹಾಗಿದ್ದರೆ ನೀವೂ ಮನೆಯಲ್ಲೇ ಕೂತು ಕೋಟಿ ಹಣ ಗಳಿಸುವ ಈ ಕೆಲಸ ಬೇಗ ಮಾಡಿ ಮುಗಿಸಿ!! Read More »

ತಿರುಪತಿ ತಿಮ್ಮಪ್ಪ ಮಲಗಿದ ಹಾಗೇ ಹಾಯಾಗಿ ಬಿಸಿಲಿಗೆ ಮೈಯೊಡ್ಡಿ ಮಲಗುತ್ತದೆ ಈ ಊಸರವಳ್ಳಿ | ಇದನ್ನು ನೋಡಿಕೊಳ್ಳಲು ಯಜಮಾನ ಬೇರೆ ಇದ್ದಾನಂತೆ!!

ಒಂದು ಕೈಯನ್ನು ತಲೆಗೆ ಒರಗಿಸಿಕೊಂಡು ಇನ್ನೊಂದು ಕೈಯನ್ನು ಹೊಟ್ಟೆಯ ಮೇಲೆ ಹಾಕಿ ಹಾಗೇ ಆರಾಮಾಗಿ ನಿದ್ರಿಸುವ ವ್ಯಕ್ತಿಯನ್ನು ಕಂಡರೆ ಮೊದಲು ಹೇಳುವ ಮಾತೆಂದರೆ, ಓಹೋ… ರಂಗನಾಥಸ್ವಾಮಿ ಹಾಗೇ ಮಲಗಿದ್ದಾನೆ ನೋಡಿ ಅಂತಾ. ಆದರೆ, ಅದೇ ಭಂಗಿಯಲ್ಲಿ ಒಂದು ಪ್ರಾಣಿ ವಿಶ್ರಾಂತಿ ಪಡೆಯುವುದನ್ನು ಎಂದಾದರೂ ನೋಡಿದ್ದೀರಾ? ಸಾಮಾನ್ಯವಾಗಿ ಯಾರು ನೋಡಿರಲು ಸಾಧ್ಯವಿಲ್ಲ. ಆದರೆ ಈ ಚಿತ್ರ ನೋಡಿದಾಗ ಒಂದು ಕ್ಷಣ ನಿಮ್ಮ ಹುಬ್ಬೇರುವುದಂತೂ ಸತ್ಯ. ಹೌದು, ಊಸರವಳ್ಳಿಯೊಂದು ತಿಮ್ಮಪ್ಪನ ಭಂಗಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ …

ತಿರುಪತಿ ತಿಮ್ಮಪ್ಪ ಮಲಗಿದ ಹಾಗೇ ಹಾಯಾಗಿ ಬಿಸಿಲಿಗೆ ಮೈಯೊಡ್ಡಿ ಮಲಗುತ್ತದೆ ಈ ಊಸರವಳ್ಳಿ | ಇದನ್ನು ನೋಡಿಕೊಳ್ಳಲು ಯಜಮಾನ ಬೇರೆ ಇದ್ದಾನಂತೆ!! Read More »

ಇನ್ಸ್ಟಾಗ್ರಾಮ್ ನಲ್ಲಿ ಬಂದೂಕು ಹಿಡಿದು ವಿಡಿಯೋ ಮಾಡಿ ಕಾನ್ಸ್ಟೇಬಲ್ ಹುದ್ದೆಯಿಂದ ಅಮಾನತುಗೊಂಡಿದ್ದ ಪ್ರಿಯಾಂಕಾ ಮಿಶ್ರಾಗೆ ಬರುತ್ತಿದೆಯಂತೆ ಸಾಲುಸಾಲು ಮಾಡೆಲಿಂಗ್ ಆಫರ್ ಗಳು !!

ಕರ್ತವ್ಯದ ವೇಳೆಯಲ್ಲಿ ಉತ್ತರ ಪ್ರದೇಶ ಆಗ್ರಾದ ಮಹಿಳಾ ಕಾನ್‌ಸ್ಟೇಬಲ್ ಪ್ರಿಯಾಂಕಾ ಮಿಶ್ರಾ ಬಂದೂಕು ಹಿಡಿದು ವಿಡಿಯೋ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು,ಆ ವಿಡಿಯೋ ಬಹಳ ವೈರಲ್ ಆಗಿ ಕೊನೆಗೆ ಆ ಕಾನ್‌ಸ್ಟೇಬಲ್ ಅನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಇದೀಗ ಇನ್ಸ್ಟಾಗ್ರಾಮ್ ವಿಡಿಯೋಗಳಿಂದ ಖ್ಯಾತರಾದ ಪ್ರಿಯಾಂಕಾ ಮಿಶ್ರಾಗೆ ಈಗ ವೆಬ್ ಸರಣಿ ಮತ್ತು ಮಾಡೆಲಿಂಗ್‌ನ ಅವಕಾಶಗಳು ಅರಸಿ ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯವಾಗಿರುತ್ತಿದ್ದ ಪ್ರಿಯಾಂಕಾ ಪಿಸ್ತೂಲು ಹಿಡಿದುಕೊಂಡು, ‘ಉತ್ತರ ಪ್ರದೇಶದಲ್ಲಿ ಐದು ವರ್ಷದ ಹುಡುಗರು ಸಹ …

ಇನ್ಸ್ಟಾಗ್ರಾಮ್ ನಲ್ಲಿ ಬಂದೂಕು ಹಿಡಿದು ವಿಡಿಯೋ ಮಾಡಿ ಕಾನ್ಸ್ಟೇಬಲ್ ಹುದ್ದೆಯಿಂದ ಅಮಾನತುಗೊಂಡಿದ್ದ ಪ್ರಿಯಾಂಕಾ ಮಿಶ್ರಾಗೆ ಬರುತ್ತಿದೆಯಂತೆ ಸಾಲುಸಾಲು ಮಾಡೆಲಿಂಗ್ ಆಫರ್ ಗಳು !! Read More »

ಕಡಬ | ತೂಗುಸೇತುವೆಯಿಂದ ಜಿಗಿದು ಅಪರಿಚಿತ ಆತ್ಮಹತ್ಯೆ ಶಂಕೆ

ಕಡಬ ತಾಲೂಕಿನ ಉದನೆಯ ತೂಗುಸೇತುವೆಯಿಂದ ನದಿಗೆ ಯಾರೋ ಗಂಡಸು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಗೊಂಡಿದೆ. ತೂಗು ಸೇತುವೆಯಲ್ಲಿ ಪುರುಷರ 1 ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದ್ದು,ಇದು ಅನುಮಾನಕ್ಕೆ ಕಾರಣವಾಗಿದೆ. ಮುಂಜಾನೆ ಸ್ಥಳೀಯರು ಗಮನಿಸಿ ಪೊಲೀಸರಿಗೆಮಾಹಿತಿ ನೀಡಿದ್ದು ನೆಲ್ಯಾಡಿ ಹೊರಠಾಣೆ ಪೊಲೀಸರುಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಗ್ ನಲ್ಲಿ ಗುರುತು ಚೀಟಿ ಪತ್ತೆಯಾಗಿದ್ದು ಪುಟ್ಟಪರ್ತಿನಿವಾಸಿ ಎಂದು ಹೇಳಲಾಗಿದೆ. ಅಲ್ಲದೇ ಡೆತ್ ನೋಟ್ ಹಾಗೂ ಧರ್ಮಸ್ಥಳದಿಂದ ಉದನೆಗೆ ಮಾಡಲಾಗಿದ್ದ ಬಸ್ ಟಿಕೆಟ್ ಸಹ ಬ್ಯಾಗ್ ನಲ್ಲಿ ಪತ್ತೆಯಾಗಿದೆ. …

ಕಡಬ | ತೂಗುಸೇತುವೆಯಿಂದ ಜಿಗಿದು ಅಪರಿಚಿತ ಆತ್ಮಹತ್ಯೆ ಶಂಕೆ Read More »

error: Content is protected !!
Scroll to Top