Day: September 18, 2021

ಇರಲಾರದೆ ಇರುವೆ ಬಿಟ್ಟುಕೊಂಡನಂತೆ ! ಎಂಬ ಮಾತಿಗೆ ನಿದರ್ಶನವಾಗಿದೆ ಈ ಘಟನೆ | ತನ್ನಪಾಡಿಗೆ ತಾನಿದ್ದ ಕೋತಿಯನ್ನು ಕೆರಳಿ ಅದರಿಂದ ಕಚ್ಚಿಸಿಕೊಂಡ ಆಟೋ ರಾಜ !!

ಚಿಕ್ಕಮಗಳೂರು:ಮೂಕ ಪ್ರಾಣಿ ಎಂದು ಅವುಗಳಿಗೆ ಹಿಂಸೆ ಕೊಡುವವರ ಸಂಖ್ಯೆ ಹೆಚ್ಚೇ ಇದೆ ಎನ್ನಬಹುದು. ಅವುಗಳಿಗೆ ಏನು ಅರಿವಾಗುವುದಿಲ್ಲ ಎಂದು ತಮ್ಮ ಮನೋರಂಜನೆಗೆ ತಕ್ಕ ಹಾಗೇ ಅವುಗಳಿಗೆ ಕಿರುಕುಳ ನೀಡುತ್ತಾರೆ. ಇದೇ ರೀತಿ ಕೋತಿಗೆ ಕೀಟಲೆ ಕೊಟ್ಟ ವ್ಯಕ್ತಿಗೆ ಮುಂದೆ ಏನಾಯ್ತು ನೀವೇ ನೋಡಿ. ಹೌದು ಸಾಮಾನ್ಯ ಪ್ರಾಣಿ ಎಂದು ಅದರ ಕೋಪವನ್ನು ಅರಿಯದ ವ್ಯಕ್ತಿಯೊಬ್ಬ ಕೋತಿಗೆ ಕೀಟಲೆ ನೀಡಿದ್ದ, ಬಳಿಕ ರೊಚ್ಚಿಗೆದ್ದ ಕೋತಿ ವ್ಯಕಿಯನ್ನು ಬೆನ್ನಟ್ಟಿ ಹುಡುಕಿ ಕಚ್ಚಿ ಗಾಯ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ …

ಇರಲಾರದೆ ಇರುವೆ ಬಿಟ್ಟುಕೊಂಡನಂತೆ ! ಎಂಬ ಮಾತಿಗೆ ನಿದರ್ಶನವಾಗಿದೆ ಈ ಘಟನೆ | ತನ್ನಪಾಡಿಗೆ ತಾನಿದ್ದ ಕೋತಿಯನ್ನು ಕೆರಳಿ ಅದರಿಂದ ಕಚ್ಚಿಸಿಕೊಂಡ ಆಟೋ ರಾಜ !! Read More »

ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ನಡೆದ ಮಹಾ ಲಸಿಕೆ ಅಭಿಯಾನ ಯಶಸ್ವಿ | ಒಂದೇ ದಿನ  2.5 ಕೋಟಿ ಲಸಿಕೆ ನೀಡುವ ಮೂಲಕ ದಾಖಲೆ | ಈ ಅಭಿಯಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ‌!!

ನಿನ್ನೆ ನಡೆದ ಲಸಿಕಾ ಅಭಿಯಾನದಲ್ಲಿ ದೇಶಾದ್ಯಂತ 2.5 ಕೋಟಿ ಲಸಿಕೆ ನೀಡುವ ಮೂಲಕ ಭಾರತ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಅಭಿಯಾನದಲ್ಲಿ ಕರ್ನಾಟಕ ರಾಜ್ಯವು ಒಂದೇ ದಿನದಲ್ಲಿ 27.8 ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಹಾಕುವ ಮೂಲಕ ಅತಿ ಹೆಚ್ಚು ಕೋವಿಡ್ ಲಸಿಕೆಗಳನ್ನು ಹಾಕಿದ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಮಹಾ ಲಸಿಕೆ‌ ಅಭಿಯಾನ ನಡೆಸಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಕೂಡ 31,75,000 ಲಸಿಕೆ‌ …

ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ನಡೆದ ಮಹಾ ಲಸಿಕೆ ಅಭಿಯಾನ ಯಶಸ್ವಿ | ಒಂದೇ ದಿನ  2.5 ಕೋಟಿ ಲಸಿಕೆ ನೀಡುವ ಮೂಲಕ ದಾಖಲೆ | ಈ ಅಭಿಯಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ‌!! Read More »

ಕಾರ್ಕಳ | ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆ

ಕಾರ್ಕಳ: ಕಾಲೇಜಿಗೆಂದು ಹೋದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಪೆತ್ತಾಜೆ ಮನೆ ನಿವಾಸಿ ಜೇಮ್ಸ್ ಡಿಸೋಜ(17) ನಾಪತ್ತೆಯಾದ ಹುಡುಗ. ಸಪ್ಟೆಂಬರ್ 16ರಂದು ನಕ್ರೆ ಪೆತ್ತಾಜೆ ಮನೆಯಿಂದ ಕಾಲೇಜಿಗೆಂದು ಹೊರಟು ಹೋಗಿದ್ದು, ಕಾಲೇಜಿಗೂ ತಲುಪದೇ ಮನೆಗೂ ಹಿಂತಿರುಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಜೇಶ್ವರದ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ವೀರ ವಿಠಲ ಕ್ಷೇತ್ರ ಸಮೀಪದ ಚಂದ್ರಹಾಸ ಎಂಬವರ ಪುತ್ರಿ ಸ್ನೇಹಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಆಕೆ ಬರೆದ ಪತ್ರವೊಂದು ಆಕೆಯ ಕೋಣೆಯಲ್ಲಿ ಪೊಲೀಸರಿಗೆ ಲಭಿಸಿದೆ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದ ಸ್ನೇಹಾ ಕೆಲ ಸಮಯದ ಬಳಿಕ ಕೋಣೆಯೊಳಗೆ ತೆರಳಿದ್ದು, ರಾತ್ರಿ ಸುಮಾರು 7 ಗಂಟೆ ಕಳೆದರೂ ಕೋಣೆಯಿಂದ ಹೊರ ಬರದ …

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು Read More »

ಕೈಯಲ್ಲಿ ಅಸ್ತಿಪಂಜರ ಹಿಡಿದುಕೊಂಡು ಸ್ಮಶಾನದಲ್ಲಿ ಕುಣಿದಾಡಿದ ಮಹಿಳೆ!!| ಆ ಬಿಳಿ ಸೀರೆಯುಟ್ಟ ಮೋಹಿನಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ ಅಲ್ಲಿನ ಜನರು

ಇತ್ತೀಚೆಗೆ ಕೆಲವು ವಿಚಿತ್ರವಾದ ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಮಾಮೂಲಾಗಿದೆ. ಹಾಗೆಯೇ ಇಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೊ ಭಯಾನಕವಾಗಿದೆ. ಅದೇನೆಂದರೆ ಮಹಿಳೆ ಬಿಳಿ ಬಣ್ಣದ ಡ್ರೆಸ್ ತೊಟ್ಟು ಅಸ್ಥಿಪಂಜರದೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಇಂಗ್ಲೆಂಡ್​ನಲ್ಲಿ ಸ್ಮಶಾನದ ಎದುರು ನಡೆದಿದೆ. ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ಈ ದೃಶ್ಯ ಕಂಡಿದ್ದು ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ. ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ದೃಶ್ಯ ನೋಡಿದಾಕ್ಷಣ ಭಯದ ಜೊತೆಗೆ ನಾನಾ ಪ್ರಶ್ನೆಗಳು …

ಕೈಯಲ್ಲಿ ಅಸ್ತಿಪಂಜರ ಹಿಡಿದುಕೊಂಡು ಸ್ಮಶಾನದಲ್ಲಿ ಕುಣಿದಾಡಿದ ಮಹಿಳೆ!!| ಆ ಬಿಳಿ ಸೀರೆಯುಟ್ಟ ಮೋಹಿನಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ ಅಲ್ಲಿನ ಜನರು Read More »

ಪ್ರಿಯತಮನ ಸಾವಿನಿಂದ ಮನನೊಂದು ಪ್ರೇಯಸಿ ಆತ್ಮಹತ್ಯೆ| ಸಾವಿನಲ್ಲೂ ಜೊತೆಯಾದ ಅಮರ ಪ್ರೇಮಿಗಳು!!

ಚಾಮರಾಜನಗರ: ಪ್ರೀತಿ ಕುರುಡು ಎಂಬ ಮಾತಿದೆ. ಆದರೆ ನಿಜವಾದ ಪ್ರೀತಿ ಯಾವತ್ತೂ ನಿಷ್ಕಲ್ಮಶವಾಗಿರುತ್ತದೆ. ಅದರಂತೆ ಪ್ರೀತಿ ಎಷ್ಟು ಪವಿತ್ರವಾದದ್ದು ಎಂದು ಈ ಇಬ್ಬರು ಜೋಡಿಗಳ ಬಂಧನ ತಿಳಿಸಿ ಕೊಡುತ್ತದೆ. ಹೌದು, ಇವರಿಬ್ಬರ ಪ್ರೇಮ ಅಮರವಾಗಿದ್ದು, ಸಾವಲ್ಲೂ ಜೊತೆಯಾಗಿ ನಡೆದ ಅಮರ ಕಥನವಿದು. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ಎಂಬ ವಿಚಾರ ತಿಳಿದು ಪ್ರೇಯಸಿ ನೇಣಿಗೆ ಕೊರಳೊಡ್ಡಿ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದ ಪೂಜಾ(19)ಆತ್ಮಹತ್ಯೆ ಮಾಡಿಕೊಂಡಾಕೆ. ಚಾಮರಾಜನಗರ ತಾಲೂಕಿನ ಚಂದುಕಟ್ಟೆಮೋಳೆ …

ಪ್ರಿಯತಮನ ಸಾವಿನಿಂದ ಮನನೊಂದು ಪ್ರೇಯಸಿ ಆತ್ಮಹತ್ಯೆ| ಸಾವಿನಲ್ಲೂ ಜೊತೆಯಾದ ಅಮರ ಪ್ರೇಮಿಗಳು!! Read More »

ನಾಡದೋಣಿ ಮಗುಚಿ ಮೀನುಗಾರಿಕೆಗೆ ತೆರಳಿದ ಇಬ್ಬರು ಮೀನುಗಾರರು ಕಣ್ಮರೆ

ಕುಂದಾಪುರ: ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಮರಳಿ ಅಳ್ವೆಕೋಡಿಗೆ ಬರುತ್ತಿದ್ದ ನಾಡ ದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ಚರಣ್ ಖಾರ್ವಿ ಎಂಬವರ ಮಾಲಕತ್ವದ ಜೈ ಗುರೂಜಿ ನಾಡ ದೋಣಿ ತೆರೆಯ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದ್ದು ದೋಣಿಯಲ್ಲಿದ್ದ ಇಬ್ಬರು ಕಣ್ಮರೆಯಾಗಿದ್ದಾರೆ. ದೋಣಿಯಲ್ಲಿದ್ದ ಇತರೆ ಐದು ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರಿದ್ದಾರೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೀನುಗಾರರು, ಮುಳುಗು ತಜ್ಞರು …

ನಾಡದೋಣಿ ಮಗುಚಿ ಮೀನುಗಾರಿಕೆಗೆ ತೆರಳಿದ ಇಬ್ಬರು ಮೀನುಗಾರರು ಕಣ್ಮರೆ Read More »

ನಟ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಅಪ್ರಾಪ್ತೆಯ ಅತ್ಯಾಚಾರ

ಕನ್ನಡ ಚಲನಚಿತ್ರ ನಟ ದರ್ಶನ್ ಮಾಲೀಕತ್ವದ ಮೈಸೂರಿನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಕುಟುಂಬವೊಂದರ ಸದಸ್ಯೆ ಅಪ್ರಾಪ್ತ ಬಾಲಕಿಯ ಮೇಲೆ ಸೋಮವಾರ ರಾತ್ರಿ ಅದೇ ತೋಟದಲ್ಲಿ ಕುದುರೆಗೆ ಲಾಳ ಹೊಡೆಯುವ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಗ್ಗೆ ಬಾಲಕಿ ಪೋಷಕರಿಗೆ ಮೂರು ದಿನಗಳ ಬಳಿಕ ತಿಳಿಸಿದ್ದು, ಪೋಷಕರಿಗೆ ವಿಷಯ ತಿಳಿದ ಕೂಡಲೇ ಸ್ಥಳೀಯ …

ನಟ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಅಪ್ರಾಪ್ತೆಯ ಅತ್ಯಾಚಾರ Read More »

ನಿವೃತ್ತ ಎಎಸ್‌ಐ ಸಾಂತಪ್ಪಗೌಡ ನಿಧನ

ಪುತ್ತೂರು: ಮುಂಡೂರು ಗ್ರಾಮದ ಭಕ್ತಕೋಡಿ ಕಡ್ಯ ನಿವಾಸಿ, ನಿವೃತ್ತ ಎಎಸ್‌ಐ ಸಾಂತಪ್ಪ ಗೌಡ(72ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.17ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಸುಳ್ಯ, ಸುಬ್ರಹ್ಮಣ್ಯ, ಮಂಗಳೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಾಂತಪ್ಪ ಗೌಡ ಅವರು ಬಿ.ಸಿ.ರೋಡ್ ಠಾಣೆಯಲ್ಲಿ ಎಎಸ್‌ಐ ಆಗಿದ್ದ ವೇಳೆ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಪುತ್ತೂರು ಮುಕ್ರಂಪಾಡಿಯಲ್ಲಿ ವಾಸವಾಗಿದ್ದರು. ಮೃತರು ಪುತ್ರರಾದ ಆಶಿತ್, ಹರ್ಷಿತ್, ಪುತ್ರಿ ಚೈತ್ರಾ ಅವರನ್ನು ಅಗಲಿದ್ದಾರೆ.

ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ರ ಇಡೀ ಕುಟುಂಬ ಆತ್ಮಹತ್ಯೆಗೆ ಶರಣು | ಶವಗಳ ಮಧ್ಯೆಯೇ ಉಳಿದು ನಾಲ್ಕು ದಿನಗಳ ನಂತರ ಬದುಕಿ ಬಂದಿತ್ತು 3 ವರ್ಷದ ಮಗು !

ಶಾಸಕ ಪತ್ರಿಕೆಯ ಸಂಪಾದಕ ಹಲ್ಲೆಗೆರೆ ಶಂಕರ್ ಅವರ ಕುಟುಂಬದ ಎಲ್ಲಾ ಐವರು ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಇಲ್ಲದ ವೇಳೆ ಈ ದುರ್ಘಟನೆ ನಡೆದಿದೆ.ಸಂಪಾದಕರ ಪತ್ನಿ 50 ವರ್ಷದ ಭಾರತಿ, 27 ವರ್ಷದ ಮಗ ಮಧು ಸಾಗರ್, ಹೆಣ್ಣುಮಕ್ಕಳಾದ 33 ವರ್ಷದ ಸಿಂಚನಾ ಮತ್ತು 30 ವರ್ಷದ ಸಿಂಧುರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಹೆಚ್ಚಿನ ಕಳವಳಕಾರಿ ಸಂಗತಿ ಏನೆಂದರೆ, ಆತ್ಮಹತ್ಯೆಗೆ ಮುನ್ನ …

ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ರ ಇಡೀ ಕುಟುಂಬ ಆತ್ಮಹತ್ಯೆಗೆ ಶರಣು | ಶವಗಳ ಮಧ್ಯೆಯೇ ಉಳಿದು ನಾಲ್ಕು ದಿನಗಳ ನಂತರ ಬದುಕಿ ಬಂದಿತ್ತು 3 ವರ್ಷದ ಮಗು ! Read More »

error: Content is protected !!
Scroll to Top