ವಾರಾಂತ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶ

ಕಡಬ : ಕಡಬ ತಾಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರಾಂತ್ಯದಲ್ಲೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಳಿಗ್ಗೆ 7 ರಿಂದ ಸಂಜೆ 6.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಕಳೆದ ವಾರದವರೆಗೆ ವಾರಾಂತ್ಯದಲ್ಲಿ ದೇವಸ್ಥಾನ ದರ್ಶನಕ್ಕೆ ನಿರ್ಬಂಧಿಸಲಾಗಿತ್ತು.

Ad Widget / / Ad Widget

ಕೊರೋನಾ ಲಾಕ್ ಡೌನ್ ನಿಂದ ಮುಚ್ಚಿದ್ದ ದೇವಸ್ಥಾನ ಲಾಕ್ ಡೌನ್ ತೆರೆದುಕೊಂಡ ಬಳಿಕದ ದಿನಗಳಲ್ಲಿ ದೇವರ ದರ್ಶನಕ್ಕೆ ತೆರದುಕೊಂಡಿತ್ತು. ವೀಕೆಂಡ್ ಕರ್ಪ್ಯೂನ ಎರಡು ದಿವಸ ಭಕ್ತರ ದರ್ಶನಕ್ಕೆ ನಿರ್ಬಂಧಿಸಲಾಗಿತ್ತು.

ಇತ್ತೀಚೆಗೆ ವೀಕೆಂಡ್ ಕರ್ಫ್ಯೂ ತೆರವಾಗಿದ್ದರೂ ದೇವಸ್ಥಾನ ಭಕ್ತರಿಗೆ ತೆರೆದುಕೊಂಡಿರಲಿಲ್ಲ. ಸೆ.18 ರ ಶನಿವಾರದಿಂದ ಮತ್ತೆ ಸಾರ್ವಜನಿಕ ದರ್ಶನ ಆರಂಭವಾಗಿದ್ದು ಸೇವೆಗಳು ಮುಂದಿನ ದಿನಗಳಲ್ಲಿ ಆರಂಭವಾಗಬೇಕಾಗಿದೆ.

Leave a Reply

error: Content is protected !!
Scroll to Top
%d bloggers like this: