Day: August 20, 2021

ಪುತ್ತೂರು : ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಅಮ್ಚಿನಡ್ಕದ ಯುವಕನಿಗೆ 6.5 ಲಕ್ಷ ವಂಚನೆ

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದುಕೊಂಡು ನಂಬಿಕೆ ದ್ರೋಹ, ವಂಚನೆ ಎಸಗಿರುವ ಘಟನೆ ಮಾಡ್ನೂರು ಗ್ರಾಮದ ಅಮ್ಚಿನಡ್ಕದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಮ್ಮದ್ ಸಾದಿಕ್ ಅವರು ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ವಂಚಿಸಿದ ಆರೋಪಿಯನ್ನು ಎಲ್ವಿಸ್ ಕನ್ಸನ್ ಟೈನ್ ಬರೆಟ್ಟೋ ಎಂದು ಗುರುತಿಸಲಾಗಿದೆ.ಈತ ಕೆನಡಾದಲ್ಲಿ ಉದ್ಯೋಗವನ್ನು ಒದಗಿಸಿಕೊಡುವುದಾಗಿ ಸಾದಿಕ್ ಅವರಿಗೆ ಭರವಸೆಯನ್ನು ನೀಡಿ ಪಾಸ್ ಪೋರ್ಟ್ ಮತ್ತು 6,50,000 ರೂ. ಹಣವನ್ನು ಪಡೆದುಕೊಂಡು ವಿದೇಶದಲ್ಲಿ ಉದ್ಯೋಗವನ್ನು ಮಾಡಿಕೊಡದೇ ಪಡೆದುಕೊಂಡ …

ಪುತ್ತೂರು : ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಅಮ್ಚಿನಡ್ಕದ ಯುವಕನಿಗೆ 6.5 ಲಕ್ಷ ವಂಚನೆ Read More »

12 ರಿಂದ 18 ವಯೋಮಾನದವರಿಗೂ ಸಿದ್ಧವಾಯಿತು ಲಸಿಕೆ | ತುರ್ತು ಬಳಕೆಗೆ ಸಿಕ್ಕಿತು ಅನುಮೋದನೆ

ಕೋವಿಡ್ ಸೋಂಕಿನ ವಿರುದ್ಧ ಝೈಡಸ್ ಕ್ಯಾಡಿಲಾ ಸಂಸ್ಥೆ ಸಿದ್ಧಪಡಿಸಿರುವ 3 ಡೋಸ್ ಗಳ ಲಸಿಕೆಯ ತುರ್ತು ಬಳಕೆಗೆ ಆ.20ರಂದು ಅನುಮೋದನೆ ಸಿಕ್ಕಿದೆ ಸೂಜಿ ರಹಿತ ಲಸಿಕೆಯಾಗಿರುವ ಮೂರು ಡೋಸ್ ಪ್ರಮಾಣದ ZyCov-D ಲಸಿಕೆಯನ್ನು ತುರ್ತುಬಳಕೆಗೆ ಅನುಮೋದನೆ ನೀಡುವಂತೆ ಕೇಂದ್ರ ಆರೋಗ್ಯ ತಜ್ಞರು ಶಿಫಾರಸ್ಸು ಮಾಡಿದ ಬೆನ್ನಲ್ಲೇ ಇದಕ್ಕೆ ಅನುಮೋದನೆ ಸಿಕ್ಕಿದೆ. ಝೈಕೋವ್-ಡಿ ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದ್ದು, ಈಗಾಗಲೇ ದೇಶದಲ್ಲಿ ಸೆರಂ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್, ಭಾರತ್ ಬಯೋಟೆಕ್ ನ ಕೊವಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ ಬಳಕೆಯಲ್ಲಿದ್ದು, …

12 ರಿಂದ 18 ವಯೋಮಾನದವರಿಗೂ ಸಿದ್ಧವಾಯಿತು ಲಸಿಕೆ | ತುರ್ತು ಬಳಕೆಗೆ ಸಿಕ್ಕಿತು ಅನುಮೋದನೆ Read More »

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ | ಪತ್ರಕರ್ತರಿಗೆ ನಿವೇಶನ ನಮ್ಮ ಜವಾಬ್ದಾರಿ – ವೇದವ್ಯಾಸ್ ಕಾಮತ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಕ್ರೀಯಾಶೀಲರಾಗಿದ್ದು, ಬ್ರ್ಯಾಂಡ್ ಮಂಗಳೂರು, ಗ್ರಾಮ ವಾಸ್ತವ್ಯ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮ ಮೂಲಕ ರಾಜ್ಯಕ್ಕೆ ಮಾದರಿಯಾದವರು. ಈ ಜಿಲ್ಲೆಯ ಪತ್ರಕರ್ತರ ಬಹುಕಾಲದ ಬೇಡಿಕೆಯಾದ ನಿವೇಶನದ ಕನಸು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಮಂಗಳೂರಿನ ಲೇಡಿಹಿಲ್ ಪತ್ರಿಕಾಭವನದಲ್ಲಿ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸಹಕಾರ ಸಂಘಗಳ ಕೊಡುಗೆ ಅಪಾರವಿದ್ದು, ದಕ್ಷಿಣ …

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ | ಪತ್ರಕರ್ತರಿಗೆ ನಿವೇಶನ ನಮ್ಮ ಜವಾಬ್ದಾರಿ – ವೇದವ್ಯಾಸ್ ಕಾಮತ್ Read More »

ಮಾಜಿ ಸಚಿವ ಎಚ್.ವೈ.ಮೇಟಿ ಲೈಂಗಿಕ ಹಗರಣದ ಸಂತ್ರಸ್ತೆ ಮತ್ತೊಮ್ಮೆ ಸುದ್ದಿಯಲ್ಲಿ | ಈಗ ಆರೋಪ ಮಾಡಿರುವುದು ಶಾಸಕ ವೀರಣ್ಣ ಚರಂತಿಮಠ ವಿರುದ್ಧ | ಏನಿದು ಪ್ರಕರಣ ?

2019ರಲ್ಲಿ ಭಾರಿ ಸದ್ದು ಮಾಡಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಅವರ ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿದ್ದ ವಿಜಯಲಕ್ಷ್ಮಿ ಸರೂರ ಅವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿರುವ ವಿಜಯಲಕ್ಷ್ಮಿ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಿಂದೆ ನನ್ನ ವಿರುದ್ಧ ಕೊಲೆ ಯತ್ನ ಕೂಡ ನಡೆದಿತ್ತು. ಚರಂತಿಮಠ ಅವರು ನನ್ನ ಬೆನ್ನು ಬಿದ್ದಿದ್ದಾರೆ. ನನ್ನನ್ನು ಕೆಲಸದಿಂದ ವಜಾ ಮಾಡುವ ಹುನ್ನಾರ ನಡೆದಿದೆ, ನನಗೆ ಈ …

ಮಾಜಿ ಸಚಿವ ಎಚ್.ವೈ.ಮೇಟಿ ಲೈಂಗಿಕ ಹಗರಣದ ಸಂತ್ರಸ್ತೆ ಮತ್ತೊಮ್ಮೆ ಸುದ್ದಿಯಲ್ಲಿ | ಈಗ ಆರೋಪ ಮಾಡಿರುವುದು ಶಾಸಕ ವೀರಣ್ಣ ಚರಂತಿಮಠ ವಿರುದ್ಧ | ಏನಿದು ಪ್ರಕರಣ ? Read More »

ತಾಲಿಬಾನ್ ವರಿಷ್ಟ,ಮಾಸ್ಟರ್ ಮೈಂಡ್ ಹೈಬತುಲ್ಲಾ ಪಾಕ್ ಸೇನೆಯ ಹಿಡಿತದಲ್ಲಿ

ತಾಲಿಬಾನ್ ವರಿಷ್ಠ ನಾಯಕ ಹೈಬತುಲ್ಲಾ ಪಾಕಿಸ್ತಾನದ ಸೇನೆಯ ಹಿಡಿತದಲ್ಲಿರುವ ಸಾಧ್ಯತೆ ಹೆಚ್ಚಿದೆ ಎಂದು ವಿದೇಶಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ರಹಸ್ಯ ಬಂಧನದಲ್ಲಿರುವ ಹೈಬತುಲ್ಲಾನ ಕುರಿತು ವಿದೇಶಿ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ಪರಿಶೀಲಿಸುತ್ತಿರುವ ಭಾರತ ಸರ್ಕಾರ ಈ ಮಾಹಿತಿ ನೀಡಿದೆ. ಕಳೆದ ಆರು ತಿಂಗಳಿನಿಂದ ತಾಲಿಬಾನ್ ಬಂಡುಕೋರ, ಭಯೋತ್ಪಾದಕ ಹೈಬತುಲ್ಲಾ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮೇನಲ್ಲಿ ನಡೆದ ಈದ್ ಉಲ್ ಫಿತರ್ ವೇಳೆ ಮಾತ್ರ ಹೈಬತುಲ್ಲಾ ಕೊನೆಯದಾಗಿ ಬಹಿರಂಗ ಹೇಳಿಕೆ ನೀಡಿರುವುದಾಗಿ ವರದಿ ಹೇಳಿದೆ. ತಾಲಿಬಾನ್ …

ತಾಲಿಬಾನ್ ವರಿಷ್ಟ,ಮಾಸ್ಟರ್ ಮೈಂಡ್ ಹೈಬತುಲ್ಲಾ ಪಾಕ್ ಸೇನೆಯ ಹಿಡಿತದಲ್ಲಿ Read More »

ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಾಗಿ ಗುರುಲಿಂಗಸ್ವಾಮಿ ಹೊಲಿಮಠ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಮಾಧ್ಯಮ ಸಂಯೋಜಕರಾಗಿ ಗುರುಲಿಂಗಸ್ವಾಮಿ ಹೊಲಿಮಠ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸರಕಾರದ ಅಧೀನ ಕಾರ್ಯದರ್ಶಿ ಟಿ.ಮಹಂತೇಶ್ ಅವರು ಆದೇಶ ಹೊರಡಿಸಿದ್ದಾರೆ.

ಕುಖ್ಯಾತ ಗ್ಯಾಂಗ್ ‌ಸ್ಟರ್ ವಿಕಾಸ್ ದುಬೆ ಎನ್‌ಕೌಂಟರ್ ಪೊಲೀಸರಿಗೆ ನ್ಯಾಯಾಂಗ ಆಯೋಗದಿಂದ ಕ್ಲೀನ್ ಚಿಟ್

ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮತ್ತು ಐದು ಮಂದಿ ಇತರರನ್ನು ಉತ್ತರ ಪ್ರದೇಶ ಪೊಲೀಸರು ಸರಣಿ ಎನ್‌ಕೌಂಟರ್ ಗಳಲ್ಲಿ ಹತ್ಯೆಗೈದ ಒಂದು ವರ್ಷದ ಬಳಿಕ ಘಟನೆಯ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿತವಾಗಿದ್ದ ತ್ರಿಸದಸ್ಯರ ನ್ಯಾಯಾಂಗ ಆಯೋಗ ತನ್ನ ವರದಿಯಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ ಎಸ್ ಚೌಹಾಣ್ ನೇತೃತ್ವದ ಆಯೋಗದಲ್ಲಿ ಅಲಹಾಬಾದ್ ಹೈಕೋರ್ಟಿನ ನಿವೃತ ನ್ಯಾಯಾಧೀಶ ಶಶಿಕಾಂತ್ ಅಗರ್ವಾಲ್ ಮತ್ತು ಉತ್ತರ ಪ್ರದೇಶದ ಮಾಜಿ ಡಿಜಿಪಿ …

ಕುಖ್ಯಾತ ಗ್ಯಾಂಗ್ ‌ಸ್ಟರ್ ವಿಕಾಸ್ ದುಬೆ ಎನ್‌ಕೌಂಟರ್ ಪೊಲೀಸರಿಗೆ ನ್ಯಾಯಾಂಗ ಆಯೋಗದಿಂದ ಕ್ಲೀನ್ ಚಿಟ್ Read More »

ಪುತ್ತೂರು| ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದಲ್ಲಿ ನಡೆದಿದೆ. ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಮಯ್ಯಾಳ ಎಂಬಲ್ಲಿನ ರಮೇಶ್ ಪಾಟಾಳಿ ಎಂಬವರು ಮೃತಪಟ್ಟವರು ಎಂದು ತಿಳಿದು ಬಂದಿದೆ. ನೆಟ್ಟಣಿಗೆಮುಡ್ನೂರು ಗ್ರಾಮದ ಗುಳಿಗಗುಂಡಿ ಕೃಷ್ಣ ನಾಯ್ಕ್ ಕುತ್ಯಾಳ ಎಂಬವರ ಮನೆಗೆ ಟ್ಯಾಪಿಂಗ್ ಕೆಲಸಕ್ಕೆ ರಮೇಶ್‌ರವರು ಬಂದಿದ್ದು, ಮನೆಯ ಸಮೀಪದ ಕೆರೆಗೆ ಬಿದ್ದಿದ್ದರೆನ್ನಲಾಗಿದೆ. ಆದರೆ ಈ ವಿಚಾರ ಅವರ ಮನೆಯವರಿಗೆ ತಿಳಿದಿರಲಿಲ್ಲ.ರಾತ್ರಿ ಆದರೂ ಅವರು ಮನೆಗೆ ಬಾರದೇ ಇದ್ದುದರಿಂದ ಮನೆಯವರು …

ಪುತ್ತೂರು| ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು Read More »

ಬೆಳ್ತಂಗಡಿ | ಗುರುವಾಯನಕೆರೆ ಸಮೀಪ ಕಾಲು ಜಾರಿ ಕೆರೆಗೆ ಬಿದ್ದು ಟೈಲರ್ ಸಾವು

ಬೆಳ್ತಂಗಡಿ : ಮನೆ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಮಾಕೆರೆಕೆರೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ಟೈಲರ್ ಆಗಿರುವ ಚಂದ್ರಶೇಖರ್ ಕುಲಾಲ್(42) ಎಂಬುವವರು ಮೃತಪಟ್ಟವರಾಗಿರುತ್ತಾರೆ. ಮಾಕೆರೆಕೆರೆ ನಿವಾಸಿ ಲೋಕಯ್ಯ ಕುಲಾಲ್‌ರವರ ಪುತ್ರರಾಗಿರುವ ಚಂದ್ರಶೇಖರ್ ಅವರು ತಮ್ಮ ತಂದೆಯವರ ಕಾಂಪ್ಲೆಕ್ಸ್ ನ ಒಂದು ಕೊಠಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಟೈಲರ್ ವೃತ್ತಿಯನ್ನು ನಡೆಸುತ್ತಿದ್ದು,ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರು ಆ.20ರಂದು ಬೆಳಗ್ಗೆ ತೋಟಕ್ಕೆ ಹೋಗಿದ್ದ ಸಮಯದಲ್ಲಿ ತಮ್ಮ ಮನೆಯ ಸಮೀಪದ ಕೆರೆಗೆ …

ಬೆಳ್ತಂಗಡಿ | ಗುರುವಾಯನಕೆರೆ ಸಮೀಪ ಕಾಲು ಜಾರಿ ಕೆರೆಗೆ ಬಿದ್ದು ಟೈಲರ್ ಸಾವು Read More »

ಪುತ್ತೂರು : ಕೆಲವೇ ಗಂಟೆಗಳಲ್ಲಿ ದಂಪತಿ ಕಳೆದುಕೊಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಪತ್ತೆ ಮಾಡಿದ ಪೊಲೀಸ್ ಶಿವಪ್ಪ ನಾಯ್ಕ್

ದಂಪತಿಗಳು ಬಸ್‌ನಲ್ಲಿ ಕಳೆದು ಹೋದ ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಕೆಲವೇ ಗಂಟೆಗಳಲ್ಲಿ ಹೆಡ್‌ಕಾನ್‌ಸ್ಟೇಬಲ್ ಅವರು ಪತ್ತೆ ಹಚ್ಚಿ ವಾರಿಸುದಾರರಿಗೆ ಹಿಂದಿರುಗಿಸಿದ ಘಟನೆ ಆ.20ರಂದು ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಶಿವಪ್ಪ ನಾಯ್ಕ್ ಅವರ ಸಮಯ ಪ್ರಜ್ಞೆಯಿಂದ ಬ್ಯಾಗ್ ಪತ್ತೆ ಮಾಡಿ ದಂಪತಿಗಳಿಗೆ ನೀಡಿ, ಇದೀಗ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸತೀಶ್ ದಂಪತಿ ಪಕಳಕುಂಜದಿಂದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಬಂದು ಪುತ್ತೂರು ಬಸ್ ನಿಲ್ದಾಣದಲ್ಲಿ ಇಳಿದಿದ್ದರು,ಬಳಿಕ ತಮ್ಮ ಬ್ಯಾಗ್ ಇಲ್ಲದನ್ನು ಗಮನಿಸಿ …

ಪುತ್ತೂರು : ಕೆಲವೇ ಗಂಟೆಗಳಲ್ಲಿ ದಂಪತಿ ಕಳೆದುಕೊಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಪತ್ತೆ ಮಾಡಿದ ಪೊಲೀಸ್ ಶಿವಪ್ಪ ನಾಯ್ಕ್ Read More »

error: Content is protected !!
Scroll to Top