ಬೆಳ್ತಂಗಡಿ | ಗುರುವಾಯನಕೆರೆ ಸಮೀಪ ಕಾಲು ಜಾರಿ ಕೆರೆಗೆ ಬಿದ್ದು ಟೈಲರ್ ಸಾವು

ಬೆಳ್ತಂಗಡಿ : ಮನೆ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಮಾಕೆರೆಕೆರೆಯಲ್ಲಿ ನಡೆದಿದೆ.

ವೃತ್ತಿಯಲ್ಲಿ ಟೈಲರ್ ಆಗಿರುವ ಚಂದ್ರಶೇಖರ್ ಕುಲಾಲ್(42) ಎಂಬುವವರು ಮೃತಪಟ್ಟವರಾಗಿರುತ್ತಾರೆ.

ಮಾಕೆರೆಕೆರೆ ನಿವಾಸಿ ಲೋಕಯ್ಯ ಕುಲಾಲ್‌ರವರ ಪುತ್ರರಾಗಿರುವ ಚಂದ್ರಶೇಖರ್ ಅವರು ತಮ್ಮ ತಂದೆಯವರ ಕಾಂಪ್ಲೆಕ್ಸ್ ನ ಒಂದು ಕೊಠಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಟೈಲರ್ ವೃತ್ತಿಯನ್ನು ನಡೆಸುತ್ತಿದ್ದು,ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮೃತರು ಆ.20ರಂದು ಬೆಳಗ್ಗೆ ತೋಟಕ್ಕೆ ಹೋಗಿದ್ದ ಸಮಯದಲ್ಲಿ ತಮ್ಮ ಮನೆಯ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತ ದುರ್ದೈವಿ ಚಂದ್ರಶೇಕರ ಕುಲಾಲ್ ಎಂಬುವವರು ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಇಬ್ಬರು ಮಕ್ಕಳನ್ನು,ಬಂಧು ವರ್ಗದವರನ್ನು ಅಗಲಿದ್ದಾರೆ.

Leave A Reply