ಪುತ್ತೂರು| ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದಲ್ಲಿ ನಡೆದಿದೆ.

ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಮಯ್ಯಾಳ ಎಂಬಲ್ಲಿನ ರಮೇಶ್ ಪಾಟಾಳಿ ಎಂಬವರು ಮೃತಪಟ್ಟವರು ಎಂದು ತಿಳಿದು ಬಂದಿದೆ.

ನೆಟ್ಟಣಿಗೆಮುಡ್ನೂರು ಗ್ರಾಮದ ಗುಳಿಗಗುಂಡಿ ಕೃಷ್ಣ ನಾಯ್ಕ್ ಕುತ್ಯಾಳ ಎಂಬವರ ಮನೆಗೆ ಟ್ಯಾಪಿಂಗ್ ಕೆಲಸಕ್ಕೆ ರಮೇಶ್‌ರವರು ಬಂದಿದ್ದು, ಮನೆಯ ಸಮೀಪದ ಕೆರೆಗೆ ಬಿದ್ದಿದ್ದರೆನ್ನಲಾಗಿದೆ.

ಆದರೆ ಈ ವಿಚಾರ ಅವರ ಮನೆಯವರಿಗೆ ತಿಳಿದಿರಲಿಲ್ಲ.ರಾತ್ರಿ ಆದರೂ ಅವರು ಮನೆಗೆ ಬಾರದೇ ಇದ್ದುದರಿಂದ ಮನೆಯವರು ಗಾಬರಿಯಿಂದ ಕೃಷ್ಣ ನಾಯ್ಕ್‌ರವರಲ್ಲಿ ವಿಚಾರಿಸಿದ್ದರು.

ಬಳಿಕ ರಮೇಶ್ ನಾಪತ್ತೆಯಾಗಿದ್ದ ವಿಚಾರ ಗಮನಕ್ಕೆ ಬಂದು ಹುಡುಕಾಡಿದಾಗ,ಮನೆಯ ಕೆರೆಯಲ್ಲಿ ಶವ ಪತ್ತೆಯಾಗಿತ್ತು.ಆ.19ರಂದು ಶವವನ್ನು ನೀರಿನಿಂದ ಮೇಲಕ್ಕೆ ತೆಗೆದು ಪುತ್ತೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply