Day: May 16, 2021

ನಿರ್ಜನ ಪ್ರದೇಶದಲ್ಲಿ ಅಂಬುಲೆನ್ಸ್ ಫುಲ್ ಶೇಕಿಂಗ್ | ಪೊಲೀಸರು ಒಳಗೆ ಇಣುಕಿ ನೋಡಿ ಶಾಕ್ ಆಗಿದ್ದರು !

ಅಲ್ಲಿ ನಿರ್ಜನ ಪ್ರದೇಶದಲ್ಲಿ ಅಂಬುಲೆನ್ಸ್ ಒಂದು ನಿಂತಿತ್ತು. ಸುಮಾರು ಹೊತ್ತಿನಿಂದ ಅದು ಅಲ್ಲೇ ನಿಂತಿತ್ತು. ನಸು ಕತ್ತಲಲ್ಲಿ ನಿಂತ ಕಾರಣ ಅಲ್ಲಿಗೆ ಯಾರೂ ಅತ್ತ ಹೋಗಿ ನೋಡಲು ಧೈರ್ಯ ತೋರಿಲ್ಲ. ನಂತರ ಯಾರೋ ಪೊಲೀಸರಿಗೆ ಕರೆ ಮಾಡಿ ಅಂಬುಲೆನ್ಸ್ ವಿಷಯ ತಲುಪಿಸಿದ್ದಾರೆ. ಪೊಲೀಸರು ಬಂದು ನೋಡುವಷ್ಟರಲ್ಲಿ ಅಂಬುಲೆನ್ಸ್ ಫುಲ್ ಶೇಕಿಂಗ್ ! ಪೊಲೀಸರು ಅಂಬುಲೆನ್ಸ್ ಇಣುಕಿ ನೋಡುವಾಗ ಮೂವರು ಯುವಕರು ಓರ್ವ ಯುವತಿ ಜತೆ  ಆ್ಯಂಬುಲೆನ್ಸ್ ನೊಳಗೆ ಬಿಜಿ ಇದ್ದರಂತೆ. ತಕ್ಷಣ ಮೂವರು ಯುವಕರನ್ನು ಪೊಲೀಸರು ವಶಕ್ಕೆ …

ನಿರ್ಜನ ಪ್ರದೇಶದಲ್ಲಿ ಅಂಬುಲೆನ್ಸ್ ಫುಲ್ ಶೇಕಿಂಗ್ | ಪೊಲೀಸರು ಒಳಗೆ ಇಣುಕಿ ನೋಡಿ ಶಾಕ್ ಆಗಿದ್ದರು ! Read More »

ಕಡಬ : ಪೆರಾಬೆಯಲ್ಲಿ  ಹೆದ್ದಾರಿಯಲ್ಲೇ ಗೋವಿನ ತಲೆ | ಸೂಕ್ತ ಕ್ರಮಕ್ಕೆ ಒತ್ತಾಯ

         ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಹಾಗೂ ಪದವು ಮಧ್ಯೆ ಬರುವ ಹೇಮಳ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲೇ ಗೋವಧೆ ಮಾಡುವ ಕಿಡಿಗೇಡಿಗಳು ಗೋವಿನ ತಲೆಯನ್ನು ಹಾಗೂ ಇತರ ತ್ಯಾಜ್ಯವನ್ನು ಎಸೆದು ವಿಕೃತಿ ಮೆರದ ಘಟನೆ ಭಾನುವಾರ ನಡೆದಿದೆ.ಒಂದು ದನದ ತಲೆ, ಇನ್ನೊಂದು ಪ್ಲಾಸ್ಟಿಕ್ ಚೀಲದಲ್ಲಿ ಗೋವಿನ ಎಲುಬು ಹಾಗೂ ಇನ್ನಿತರತ್ಯಾಜ್ಯವನ್ನು ಬೆಳ್ಳಂಬೆಳಿಗ್ಗೆ ಎಸೆಯಲಾಗಿದೆ. ಪದವಿನ ಮುರಚೆಡವು ಹಾಗೂ ಹೇಮಳ ಮಧ್ಯೆ ಯಾವುದೇ ವಾಸದ ಮನೆಯಾಗಲಿ ಇತರ ಕಟ್ಟಡವಾಗಲಿ ಇಲ್ಲದೆ ಇರುವ ಈ …

ಕಡಬ : ಪೆರಾಬೆಯಲ್ಲಿ  ಹೆದ್ದಾರಿಯಲ್ಲೇ ಗೋವಿನ ತಲೆ | ಸೂಕ್ತ ಕ್ರಮಕ್ಕೆ ಒತ್ತಾಯ Read More »

ಉಪ್ಪಿನಂಗಡಿ; ವಿವಾಹಿತ ಮಾನಸಿಕ ಅಸ್ವಸ್ಥೆಯ ಅತ್ಯಾಚಾರ ಪ್ರಕರಣ: ಆರೋಪಿ ಸೆರೆ

ವಿವಾಹಿತ ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. 34 ನೆಕ್ಕಿಲಾಡಿಯ ದರ್ಬೆ ನಿವಾಸಿ ಸುರೇಶ್ ಪ್ರಭು (40) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಗಳಾಗಿದ್ದು, 34 ನೆಕ್ಕಿಲಾಡಿಯ ಪಾಥರ್ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ತನ್ನ 70 ವರ್ಷದ ತಾಯಿಯೊಂದಿಗೆ 44ರ ಹರೆಯದ ಅತ್ಯಾಚಾರ ಸಂತ್ರಸ್ತೆ ವಾಸಿಸುತ್ತಿದ್ದರು. ಸಂತ್ರಸ್ತೆಯ ಪತಿ ಗುಜರಾತ್‌ನಲ್ಲಿದ್ದು, ಗಂಡನನ್ನು ಭೇಟಿಯಾಗದೆ ಸುಮಾರು 10 ತಿಂಗಳಾಗಿತ್ತು ಎಂದು …

ಉಪ್ಪಿನಂಗಡಿ; ವಿವಾಹಿತ ಮಾನಸಿಕ ಅಸ್ವಸ್ಥೆಯ ಅತ್ಯಾಚಾರ ಪ್ರಕರಣ: ಆರೋಪಿ ಸೆರೆ Read More »

ಬೆಳ್ತಂಗಡಿ | ಕೋರೋನಾ ವ್ಯಾಧಿಗೆ ಮತ್ತೊಂದು ಬಲಿ !

ಬೆಳ್ತಂಗಡಿ ತಾಲೂಕಿನಲ್ಲಿ ಕೋರೋನಾ ವ್ಯಾಧಿಗೆ ಮತ್ತೊಂದು ಬಲಿಯಾಗಿದೆ. ಕಾರ್ಕಳದ ಮಿಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾ ಶಿಕ್ಷಕರಾಗಿದ್ದ ಸುಧೀರ್ ಎಂಬವರು ಕೋರೋನಾದಿಂದ ಮೃತಪಟ್ಟಿದ್ದಾರೆ. ಸುಧೀರ್ ಅವರು ಶಿರ್ಲಾಲುವಿನ ಪುದ್ದರ್ ಬೈಲ್ ನಿವಾಸಿಯಾಗಿದ್ದು ಚಿಕ್ಕ ಪ್ರಾಯದಲ್ಲೇ ಕೋರೋನಾಗೆ ಬಲಿಯಾಗಿದ್ದಾರೆ. ಅವರು ಕಳೆದ 15 ಕ್ಕೂ ಹೆಚ್ಚು ದಿನಗಳಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆತ ಅಸುನೀಗಿದ್ದಾರೆ.ಅವರು ಪತಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನದಿಯಲ್ಲಿ ಮುಳುಗಿ ಬಾಲಕ ಮೃತ್ಯು | ಗೆಳೆಯರೊಂದಿಗೆ ನದಿಯಲ್ಲಿ ಆಡುತ್ತಿದ್ದಾಗ ನಡೆಯಿತು ದುರ್ಘಟನೆ

ಮಂಗಳೂರು :ಗೆಳೆಯರ ಜೊತೆಗೂಡಿ ನದಿ ಸಮೀಪ ಆಟವಾಡುತ್ತಿದ್ದ ಈಜಲು ನದಿಗೆ ಇಳಿದಿದ್ದ ಬಾಲಕನೋರ್ವ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಲ್ಲೂರು ಸಮೀಪದ ಉದ್ದಬೆಟ್ಟು ಎಂಬಲ್ಲಿ ರವಿವಾರ ಸಂಜೆ ನಡೆದಿದೆ. ಉದ್ದಬೆಟ್ಟುವಿನ ಅಬ್ದುಲ್ ಖಾದರ್‌ ಎಂಬವರ ಪುತ್ರ ಮನ್ಸೂರ್ (17) ಮೃತ ಬಾಲಕ. ಗೆಳೆಯರ ಜೊತೆಗೂಡಿ ನದಿ ಸಮೀಪ ಆಟವಾಡುತ್ತಿದ್ದ ಈತ ಈಜಲು ನದಿಗೆ ಇಳಿದಿದ್ದ ಎನ್ನಲಾಗಿದ್ದು, ಈ ಸಂದರ್ಭ ನದಿಯ ಸುಳಿಗೆ ಸಿಲುಕಿ ನೀರಲ್ಲಿ ಮುಳುಗಿದ್ದು, ತಕ್ಷಣ ಅಲ್ಲೇ ಇದ್ದ ಇತರರು ನದಿಗೆ ಹಾರಿ ಮನ್ಸೂರ್‌ನನ್ನು …

ನದಿಯಲ್ಲಿ ಮುಳುಗಿ ಬಾಲಕ ಮೃತ್ಯು | ಗೆಳೆಯರೊಂದಿಗೆ ನದಿಯಲ್ಲಿ ಆಡುತ್ತಿದ್ದಾಗ ನಡೆಯಿತು ದುರ್ಘಟನೆ Read More »

ಉಪ್ಪಿನಂಗಡಿ: ವಿದ್ಯುತ್ ಶಾಕ್ |  ಮೆಸ್ಕಾಂ ಪವರ್ ಮ್ಯಾನ್ ಮೃತ್ಯು

     ಉಪ್ಪಿನಂಗಡಿ: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ಶಾಕ್ ಗೊಳಗಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರ್ತವ್ಯ ನಿರತ ಕಲ್ಲೇರಿ ಸೆಕ್ಷನ್ ಆಫೀಸಿನ ಮೆಸ್ಕಾಂ ಪವರ್ ಮ್ಯಾನ್ ವಿಕಾಸ್ ಎಂಬವರು ಮೃತಪಟ್ಟ ಪವರ್ ಮ್ಯಾನ್ . ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಈ ಘಟನೆ ಸಂಭವಿಸಿದೆ. ಈ ಭಾಗದಲ್ಲಿ ಕಳೆದ ಎರಡು ದಿನದಿಂದ ಭಾರಿ ಗಾಳಿ ಮಳೆ ಸುರಿಯುತ್ತಿದ್ದು ಇದೇ ಸಂದರ್ಭದಲ್ಲಿ ವಿದ್ಯುತ್ ಅಡಚಣೆ …

ಉಪ್ಪಿನಂಗಡಿ: ವಿದ್ಯುತ್ ಶಾಕ್ |  ಮೆಸ್ಕಾಂ ಪವರ್ ಮ್ಯಾನ್ ಮೃತ್ಯು Read More »

ಬೆಳ್ತಂಗಡಿ : ಲಾಯಿಲ ಬಜೆಕ್ರೆಸಾಲು ತಾತ್ಕಾಲಿಕ ಸೇತುವೆ ನೀರು ಪಾಲು

ತೌಕ್ತೆ ಚಂಡಮಾರುತದಿಂದ ಕಳೆದ ಎರಡು ದಿನಗಳಿಂದ ಕರಾವಳಿಯಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು ಇದರಿಂದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಹಳ್ಳ ಎಂಬಲ್ಲಿ ಹೊಸ ಸೇತುವೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜನರ ಅನುಕೂಲತೆಗಾಗಿ ನಿರ್ಮಿಸಲಾದ ತಾತ್ಕಾಲಿಕ ಮಣ್ಣಿನ ಸೇತುವೆ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಲಾಯಿಲ-ಕನ್ನಾಜೆ-ಕರ್ನೋಡಿ-ಮುಂಡೂರು ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರ ಮಧ್ಯೆ ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಕ್ರೆಸಾಲು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಕಾಮಗಾರಿಗಳು ಆರಂಭವಾಗಿದ್ದವು. ಇಲ್ಲಿನ ಹಳೆಯ ಕಿಂಡಿ ಅಣೆಕಟ್ಟಿನ ಸೇತುವೆಯನ್ನು ಕೆಡವಿ ಜನರ …

ಬೆಳ್ತಂಗಡಿ : ಲಾಯಿಲ ಬಜೆಕ್ರೆಸಾಲು ತಾತ್ಕಾಲಿಕ ಸೇತುವೆ ನೀರು ಪಾಲು Read More »

ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ 97.38 % ರಷ್ಟು ಜನರು ಸೇಫ್ !

ಕೋವಿಡ್ ವ್ಯಾಕ್ಸಿನೇಷನ್ ಮಾಡಿಸಿಕೊಂಡರೆ ಕೇವಲ ಶೇಕಡ 0.06 ಜನರಿಗೆ ಮಾತ್ರ ಆಸ್ಪತ್ರೆ ಅಗತ್ಯವಿರುತ್ತದೆ. ಲಸಿಕೆ ಹಾಕಿಸಿಕೊಂಡವರಲ್ಲಿ ಶೇಕಡ 97.38 ರಷ್ಟು ಜನರು ವೈರಸ್ ನಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಅಧ್ಯಯನ ಸಂಸ್ಥೆ ನಡೆಸಿದ ಸರ್ವೇಯಿಂದ ಬಹಿರಂಗವಾಗಿದೆ. ಕೋವಿಡ್-19 ವ್ಯಾಕ್ಸಿನೇಷನ್ ನಂತರ ಸೋಂಕುಗಳು(ಬ್ರೇಕ್ ಥ್ರೂ ಸೋಂಕು) ಆವರ್ತನ ಮೌಲ್ಯಮಾಪನ ಮಾಡಿದ ಅಧ್ಯಯನದ ಫಲಿತಾಂಶಗಳನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ. ಅಪೋಲೋ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕ ಡಾ. ಅನುಪಮ್ ಸಿಬಲ್‌ ಸುದ್ದಿ ಸಂಸ್ಥೆಯೊಂದಕ್ಕೆ ಈ ಬಗ್ಗೆ ಮಾಹಿತಿ …

ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ 97.38 % ರಷ್ಟು ಜನರು ಸೇಫ್ ! Read More »

” ನೀನು ನನ್ನೊಂದಿಗೆ ಮಲಗುವುದಾದರೆ, ನೀನು ಏನು ಕೇಳಿದರೂ ಕೊಡುತ್ತೇನೆ ” ಈ ನಟಿಗೆ ಆತ ಹೀಗೆ ಹೇಳಿದ್ದ !

ಇಂದು ಮುಕ್ತ ಸಂಹವನಕ್ಕೆ ಸಾಮಾಜಿಕ ಜಾಲತಾಣ ಪ್ರವೇಶ ಮುಕ್ತವಾಗಿದೆ. ತನಗೆ ಅನಿಸಿದ್ದನ್ನು ವ್ಯಕ್ತಿ ಅಲ್ಲಿ ಹೇಳಿಕೊಳ್ಳಬಹುದು. ಬಚ್ಚಿಡುವ ವಿಷಯಗಳನ್ನು ಕೂಡ ಮನ ಬಿಚ್ಚಿ ಮಾತಾಡಬಹುದು. ಇತ್ತೀಚೆಗೆ ಕೆಲ ಚಿತ್ರಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ನಟಿಸಿದ ತಮಿಳು ನಟಿ, ಸಿಂಗರ್ ಸೌಂದರ್ಯ ನಂದಕುಮಾರ್ ಅವರು ಪ್ರಾಧ್ಯಾಪಕರೊಬ್ಬರಿಂದ ಕಿರುಕುಳ ಅನುಭವಿಸಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಾನೊಬ್ಬ ಲೆಕ್ಚರರ್ ಎಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಕೆಟ್ಟದಾಗಿ ಮಾತನಾಡುವ ಮೂಲಕ ನಟಿಗೆ ಕಿರುಕುಳ ನೀಡಿದ್ದಾರೆ.ಆತ ಆಕೆಗೆ ನೇರವಾಗಿ ‘ ನೀನು ನನ್ನೊಂದಿಗೆ …

” ನೀನು ನನ್ನೊಂದಿಗೆ ಮಲಗುವುದಾದರೆ, ನೀನು ಏನು ಕೇಳಿದರೂ ಕೊಡುತ್ತೇನೆ ” ಈ ನಟಿಗೆ ಆತ ಹೀಗೆ ಹೇಳಿದ್ದ ! Read More »

ವಿಚ್ಛೇದಿತೆ ಎರಡನೇ ಮದುವೆ ವಿವಾಹವಾಗಿದ್ದಕ್ಕೆ ಪಂಚಾಯತ್ ನೀಡಿದ್ದು ಎಂಜಲು ನೆಕ್ಕುವ ಹೀನ ಶಿಕ್ಷೆ !

ವಿಚ್ಛೇದಿತ ಮಹಿಳೆಯೊಬ್ಬಳು ಎರಡನೆಯ ವಿವಾಹವಾಗಿದ್ದನ್ನು ಖಂಡಿಸಿ ಆಕೆಗೆ ಎಂಜಲು ನೆಕ್ಕುವ ಶಿಕ್ಷೆ ನೀಡಿರುವ ಘನಘೋರ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ. ಈ ಮೊದಲು ಆಕೆಗೆ ಮದುವೆ ಆಗಿದ್ದು ಆಕೆ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದಳು. ನಂತರ ಈಗ ಮಹಿಳೆ ಇನ್ನೊಂದು ವಿವಾಹವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರು ಈ ಅಮಾನವೀಯ ಶಿಕ್ಷೆ ಕೊಟ್ಟಿದ್ದಾರೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೋಗಿ ಎಂಬ ಸಮುದಾಯಕ್ಕೆ ಸೇರಿರುವ ಮಹಿಳೆ 2015 ರಲ್ಲಿ ವಿಚ್ಛೇದನ …

ವಿಚ್ಛೇದಿತೆ ಎರಡನೇ ಮದುವೆ ವಿವಾಹವಾಗಿದ್ದಕ್ಕೆ ಪಂಚಾಯತ್ ನೀಡಿದ್ದು ಎಂಜಲು ನೆಕ್ಕುವ ಹೀನ ಶಿಕ್ಷೆ ! Read More »

error: Content is protected !!
Scroll to Top