Ad Widget

ಉಪ್ಪಿನಂಗಡಿ: ವಿದ್ಯುತ್ ಶಾಕ್ |  ಮೆಸ್ಕಾಂ ಪವರ್ ಮ್ಯಾನ್ ಮೃತ್ಯು

    

ಉಪ್ಪಿನಂಗಡಿ: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ಶಾಕ್ ಗೊಳಗಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ತವ್ಯ ನಿರತ ಕಲ್ಲೇರಿ ಸೆಕ್ಷನ್ ಆಫೀಸಿನ ಮೆಸ್ಕಾಂ ಪವರ್ ಮ್ಯಾನ್ ವಿಕಾಸ್ ಎಂಬವರು ಮೃತಪಟ್ಟ ಪವರ್ ಮ್ಯಾನ್ .

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಈ ಘಟನೆ ಸಂಭವಿಸಿದೆ.

ಈ ಭಾಗದಲ್ಲಿ ಕಳೆದ ಎರಡು ದಿನದಿಂದ ಭಾರಿ ಗಾಳಿ ಮಳೆ ಸುರಿಯುತ್ತಿದ್ದು ಇದೇ ಸಂದರ್ಭದಲ್ಲಿ ವಿದ್ಯುತ್ ಅಡಚಣೆ ಉಂಟಾಗಿತ್ತು.

ವಿದ್ಯುತ್ ಸರಬರಾಜು ಸರಿಪಡಿಸುವ ಸಂದರ್ಭದಲ್ಲಿ ಈ ದುರ್ಘಟನೆಯ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: