Ad Widget

” ನೀನು ನನ್ನೊಂದಿಗೆ ಮಲಗುವುದಾದರೆ, ನೀನು ಏನು ಕೇಳಿದರೂ ಕೊಡುತ್ತೇನೆ ” ಈ ನಟಿಗೆ ಆತ ಹೀಗೆ ಹೇಳಿದ್ದ !

ಇಂದು ಮುಕ್ತ ಸಂಹವನಕ್ಕೆ ಸಾಮಾಜಿಕ ಜಾಲತಾಣ ಪ್ರವೇಶ ಮುಕ್ತವಾಗಿದೆ. ತನಗೆ ಅನಿಸಿದ್ದನ್ನು ವ್ಯಕ್ತಿ ಅಲ್ಲಿ ಹೇಳಿಕೊಳ್ಳಬಹುದು. ಬಚ್ಚಿಡುವ ವಿಷಯಗಳನ್ನು ಕೂಡ ಮನ ಬಿಚ್ಚಿ ಮಾತಾಡಬಹುದು.

ಇತ್ತೀಚೆಗೆ ಕೆಲ ಚಿತ್ರಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ನಟಿಸಿದ ತಮಿಳು ನಟಿ, ಸಿಂಗರ್ ಸೌಂದರ್ಯ ನಂದಕುಮಾರ್ ಅವರು ಪ್ರಾಧ್ಯಾಪಕರೊಬ್ಬರಿಂದ ಕಿರುಕುಳ ಅನುಭವಿಸಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಾನೊಬ್ಬ ಲೆಕ್ಚರರ್ ಎಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಕೆಟ್ಟದಾಗಿ ಮಾತನಾಡುವ ಮೂಲಕ ನಟಿಗೆ ಕಿರುಕುಳ ನೀಡಿದ್ದಾರೆ.
ಆತ ಆಕೆಗೆ ನೇರವಾಗಿ ‘ ನೀನು ನನ್ನೊಂದಿಗೆ ಮಲಗುವೆಯಾ? ಮಲಗುವುದಾದರೆ ನೀನು ಏನು ಕೇಳಿದರೂ ಕೊಡುತ್ತೇನೆ. ನೀನು ನನ್ನೊಂದಿಗೆ ಮಲಗಬೇಕು’ ಎಂದು ಲೆಕ್ಚರರ್ ಮೆಸೇಜ್ ಮಾಡಿರುವುದಾಗಿ ನಟಿ ಸೌಂದರ್ಯ ತಿಳಿಸಿದ್ದಾರೆ.

ಅಂತಹ ಸಂದರ್ಭದಲ್ಲಿ ನನಗೆ ಏನು ಪ್ರತಿಕ್ರಿಯೆ ನೀಡಬೇಕೆಂದು ಒಂದಷ್ಟು ಹೊತ್ತು ತಿಳಿಯಲಿಲ್ಲ ಎಂದಿದ್ದಾರೆ ಆಕೆ.

ಅಲ್ಲದೆ, ಆ ಉಪನ್ಯಾಸಕ ತಾನು ಕೆಲಸ ಮಾಡುವ ಕಾಲೇಜಿನಲ್ಲಿಯೂ ಇದನ್ನೇ ಮಾಡುತ್ತಾನಂತೆ. ಈ ವಿಷಯ ತಿಳಿದ ನಟಿ ಸೌಂದರ್ಯ ನಂದಕುಮಾರ್ ಮತ್ತಷ್ಟು ಕೋಪಗೊಂಡಿದ್ದಾರೆ. ಓರ್ವ ಉಪನ್ಯಾಸಕನಾಗಿ ಸಾಮಾಜಿಕ ಜವಾಬ್ದಾರಿ ಇರುವ  ವೃತ್ತಿಯಲ್ಲಿರುವ ವ್ಯಕ್ತಿ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಎಂದು ಪ್ರಶ್ನಿಸಿರುವ ಸೌಂದರ್ಯ ಅವರು, ಆತ ಮಾಡಿರುವುದು ದೊಡ್ಡ ತಪ್ಪು ಎಂದಿದ್ದಾರೆ.

ಆದರೆ ಈಗ ಆತನ ನಡೆಯನ್ನು ಖಂಡಿಸಿದ ನಟಿ ಸೌಂದರ್ಯ, ಪೊಲೀಸರು ಇಂತವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು. ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಲ್ಲಿರುವವರನ್ನು ಪೊಲೀಸರು ಈ ರೀತಿ ಮಾಡಲು ಬಿಡಬಾರದು ಎಂದು ಒತ್ತಾಯಿಸಿದ್ದಾರೆ. ಆದರೆ ಆಕೆ ಸ್ವತಃ ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: