ನಿರ್ಜನ ಪ್ರದೇಶದಲ್ಲಿ ಅಂಬುಲೆನ್ಸ್ ಫುಲ್ ಶೇಕಿಂಗ್ | ಪೊಲೀಸರು ಒಳಗೆ ಇಣುಕಿ ನೋಡಿ ಶಾಕ್ ಆಗಿದ್ದರು !

ಅಲ್ಲಿ ನಿರ್ಜನ ಪ್ರದೇಶದಲ್ಲಿ ಅಂಬುಲೆನ್ಸ್ ಒಂದು ನಿಂತಿತ್ತು. ಸುಮಾರು ಹೊತ್ತಿನಿಂದ ಅದು ಅಲ್ಲೇ ನಿಂತಿತ್ತು. ನಸು ಕತ್ತಲಲ್ಲಿ ನಿಂತ ಕಾರಣ ಅಲ್ಲಿಗೆ ಯಾರೂ ಅತ್ತ ಹೋಗಿ ನೋಡಲು ಧೈರ್ಯ ತೋರಿಲ್ಲ. ನಂತರ ಯಾರೋ ಪೊಲೀಸರಿಗೆ ಕರೆ ಮಾಡಿ ಅಂಬುಲೆನ್ಸ್ ವಿಷಯ ತಲುಪಿಸಿದ್ದಾರೆ. ಪೊಲೀಸರು ಬಂದು ನೋಡುವಷ್ಟರಲ್ಲಿ ಅಂಬುಲೆನ್ಸ್ ಫುಲ್ ಶೇಕಿಂಗ್ !

ಪೊಲೀಸರು ಅಂಬುಲೆನ್ಸ್ ಇಣುಕಿ ನೋಡುವಾಗ ಮೂವರು ಯುವಕರು ಓರ್ವ ಯುವತಿ ಜತೆ  ಆ್ಯಂಬುಲೆನ್ಸ್ ನೊಳಗೆ ಬಿಜಿ ಇದ್ದರಂತೆ. ತಕ್ಷಣ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ ಆ್ಯಂಬುಲೆನ್ಸ್ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿರುವ ಆ್ಯಂಬುಲೆನ್ಸ್ ಆಗಿದ್ದು, ಅದನ್ನು ಯುವಕನೋರ್ವನಿಗೆ ಆಸ್ಪತ್ರೆ ಬಾಡಿಗೆಗೆ ಕೊಟ್ಟಿದ್ದಾಗಿ ಹೇಳಲಾಗಿದೆ. ಈ ಹಿಂದೆಯೂ ಆ  ಈ ರೀತಿಯ ದೂರು ಕೇಳಿಬಂದಿತ್ತು. ಕೊರೋನಾ ಸಮಯದಲ್ಲಿ ಅಂಬುಲೆನ್ಸ್ ಅನ್ನು ಲಾಡ್ಜ್ ಥರ ಬಳಸಿದರೆ ಯಾರಿಗೂ ಅನುಮಾನ ಬರಲ್ಲ ಎಂಬ ಧೈರ್ಯದಿಂದ ಅದರಲ್ಲಿ ರಾಜಾರೋಷವಾಗಿ ಆ ಪ್ರೋಗ್ರಾಂ ನಡೆಯುತ್ತಿತ್ತು ಎನ್ನಲಾಗಿದೆ.

ದೇಶದಾದ್ಯಂತ ಕರೊನಾ ಸೋಂಕಿನ ಅಬ್ಬರ ಹೆಚ್ಚಿದ್ದು, ಸೋಂಕಿತರಿಗೆ ಆ್ಯಂಬುಲೆನ್ಸ್ ಸೇವೆ ಕಲ್ಪಿಸುವುದೇ ದೊಡ್ಡ ಸಾಹಸವಾಗಿಬಿಟ್ಟಿದ್ದರೂ ಯುವಕರ ಗುಂಪೊಂದು ಆ್ಯಂಬುಲೆನ್ಸ್ ಅನ್ನು ಹೀಗೆ ದುರ್ಬಳಕೆ ಮಾಡಿಕೊಂಡು ಸಿಕ್ಕಿಹಾಕಿಕೊಂಡಿರುವ ಘಟನೆ ದುರದೃಷ್ಟಕರ. ನಡೆದದ್ದು ಉತ್ತರ ಪ್ರದೇಶದ ವಾರಾಣಸಿಯಲ್ಲಿ.

Leave A Reply

Your email address will not be published.