Month: January 2020

ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ

ಫೆಬ್ರವರಿ 1 ಕ್ಕೆಂದು ನಿಗದಿಯಾಗಿದ್ದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ತಿಹಾರ್ ಜೈಲಿನ ಅಧಿಕಾರಿಗಳು ಗಲ್ಲುಶಿಕ್ಷೆಯನ್ನು ಬಂದುದಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡಿದರೂ, ಅಡಿಷನಲ್ ಸೆಷನ್ಸ್ ಜಡ್ಜ್ ಆದ ಧರ್ಮೇಂದ್ರ ರಾಣ ಅವರು ತಿಹಾರ್ ಜೈಲಿನ ಅಧಿಕಾರಿಗಳ ವಾದವನ್ನು ಒಪ್ಪಲಿಲ್ಲ. ಕಾರಣ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರನ ರಾಷ್ಟ್ರಪತಿಯ ಕ್ಷಮಾ ಪತ್ರವು ಇನ್ನೂ ಬಾಕಿ ಉಳಿದಿದ್ದು, ಅದು ಇತ್ಯರ್ಥವಾಗುವವರೆಗೂ ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದು ಆರೋಪಿಗಳ ಪರ ವಕೀಲರಾದ ಎಪಿ ಸಿಂಗ್ ಅವರು ವಾದಿಸಿದ್ದರು. …

ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ Read More »

ಬ್ರೇಕಿಂಗ್ ನ್ಯೂಸ್ । ಭಗ ಭಗ ಹೊತ್ತಿಕೊಂಡು ಉರಿದ ಪುತ್ತೂರು ದರ್ಬೆಯ CTO ರೋಡ್ ಪಕ್ಕದ ಗುಡ್ಡ

ಪುತ್ತೂರಿನ ದರ್ಬೆಯ ಸಿ ಟಿ ಓ ರಸ್ತೆಯ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಬಿದ್ದಿದೆ. ಆಕಸ್ಮಿಕ ಬೆಂಕಿ ಇದಾಗಿದ್ದು, ಅಗ್ನಿಶಾಮಕ ತಂಡ ಬೆಂಕಿ ಆರಿಸುವಲ್ಲಿ ನಿರತರಾಗಿದ್ದಾರೆ. ಬೆಂಕಿ ಅವಘಡಕ್ಕೆ ಯಾರೋ ಸೇದಿ ಎಸೆದ ಬೀಡಿ ಕಾರಣವಿರಬಹುದೆಂದು ಜನ ಹೇಳುತ್ತಿದ್ದಾರೆ. ತಪ್ಪಿದಲ್ಲಿ ಎಲೆಕ್ಟ್ರಿವ್ಕ್ ಶಾರ್ಕ್ ಸರ್ಕ್ವಿಟ್ ಕಾರಣವಾಗಿರುವ ಸಾಧ್ಯತೆಯೂ ಇದೆ. ಸಾವು ನೋವು ಸಂಭವಿಸಿಲ್ಲವಾದರೂ ಅರಣ್ಯ ಸಂಪತ್ತು ನಾಶವಾಗಿದೆ . ಬೇಸಿಗೆ ಪ್ರಾರಂಭವಾದುದರಿಂದ ನೆಲದ ಹುಲ್ಲುಒಣಗಿದೆ. ಜತೆಗೆ ಒಣ ತರಗೆಲೆಗಳು ಬೆಂಕಿಯನ್ನು ಬೇಗ ಹಿಡಿದುಕೊಂಡು ವ್ಯಾಪಿಸುವಂತೆ ಮಾಡುತ್ತವೆ.

ಅಂತೂ ಇಂತೂ ಓಪನ್ ಆಯ್ತು ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ

ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆಯು ಇಂದು ಬೆಳಿಗ್ಗೆ ಲೋಕಾರ್ಪಣೆಗೊಂಡಿತು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜತೆಗೂಡಿ ಈ ಮೇಲ್ಸೇತುವೆಯನ್ನು ಉದ್ಘಾಟಿಸಿದರು. 600 ಮೀಟರ್ ಉದ್ದ ಹೊಂದಿರುವ ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣಕ್ಕೆ 2010 ರಲ್ಲಿ ಚಾಲನೆ ನೀಡಲಾಗಿತ್ತು. ಈಗ ಸುಧೀರ್ಘ ಈ ಮೇಲ್ಸೇತುವೆ ವರ್ಷಗಳ ನಂತರ ಕೆಲಸ ಪೂರ್ಣಗೊಂಡು ಜನರ ಬಳಕೆಗೆ ಲಭ್ಯವಾಗಿದೆ. ಲೋಕಾರ್ಪಣೆಗೆ ಕಳೆದೆರಡು ವರ್ಷಗಳಿಂದ ಹಲವು ಗಡುವುಗಳನ್ನು ಸಂಸದ ನಳಿನ್‌ಕುಮಾರ್ ಕಟೀಲು ನೀಡಿದ್ದರು. …

ಅಂತೂ ಇಂತೂ ಓಪನ್ ಆಯ್ತು ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ Read More »

ಸುಳ್ಳ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಪಿ ಯು ಸಿ ವಿದ್ಯಾರ್ಥಿನಿ । ಆರೋಪಿಗಾಗಿ ಶೋಧಕಾರ್ಯ !

ಸುಳ್ಳ್ಯದಲ್ಲಿ ಅತ್ರಾಪ್ತೆ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಸುದ್ದಿ ಬಂದಿದೆ. ವಿದ್ಯಾರ್ಥಿನಿ ಇನ್ನೂ ಪಿ ಯು ಸಿ ವಿದ್ಯಾರ್ಥಿನಿಯಾಗಿದ್ದು, ಆಕೆಯ ಗರ್ಭಕ್ಕೆ ಕಾರಣನಾದವನು ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಆದರೆ ಬಾಲಕಿ ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆದಿದೆ. ಹೆಚ್ಚಿನ ಮಾಹಿತಿಗಾಗಿ ಎದುರು ನೋಡಲಾಗುತ್ತಿದೆ.

ಕೋಳಿ ಕಳ್ಳರಲ್ಲ, ಕೋಳಿಫಾರ್ಮ್ ಕಳ್ಳರು । ಪುತ್ತೂರಿನ ಕೆಮ್ಮಿಂಜೆಯ ಚಾರ್ಲ್ಸ್ ಲೂಯಿಸ್‌ಗೆ ಸಕತ್ ಧೋಕಾ !

ಕೋಳಿಫಾರ್ಮ್ ಹಾಕಿ ದುಡ್ಡು ಮಾಡಲು ಹೊರಟ ಪುತ್ತೂರಿನ ವೃದ್ಧರೊಬ್ಬರು ಲಕ್ಷಾಂತರ ರೂಪಾಯಿ ಮೋಸ ಹೋಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ನಿವಾಸಿ ಚಾರ್ಲ್ಸ್ ಲೂಯಿಸ್‌ (70) ಎಂಬವರು ದಿನಾಂಕ 01.08.2018 ರಂದು ಪ್ರಕಟಣೆಗೊಂಡಿದ್ದ ಜಾಹೀರಾತನ್ನು ನೋಡಿ ಮೈಸೂರಿಗೆ ತೆರಳಿ ಆರೋಪಿಗಳಾದ ತಿರುವನಂತಪುರಂ ನೆಯ್ಯಟ್ಟಿನಕರದ ಒಮೇಗಾ 3-6 ಪೌಲ್ಟ್ರೀ ಇಂಜಿನಿಯರಿಂಗ್ & ಟೆಕ್ನಾಲಜೀಸ್ ನ ಜತೆ ಕೋಳಿ ಫಾರ್ಮ್ ಹಾಕುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು. ಎಲ್‌.ಎಸ್‌ .ಪ್ರಮೋದ್‌, ಸಂಪತ್‌ ಶೆರ್ಲಿ, ಪರಾಮ್ದ್‌ ಲಜಾರ್‌ ಸುಶೀಲ ಎಂಬವರೊಂದಿಗೆ …

ಕೋಳಿ ಕಳ್ಳರಲ್ಲ, ಕೋಳಿಫಾರ್ಮ್ ಕಳ್ಳರು । ಪುತ್ತೂರಿನ ಕೆಮ್ಮಿಂಜೆಯ ಚಾರ್ಲ್ಸ್ ಲೂಯಿಸ್‌ಗೆ ಸಕತ್ ಧೋಕಾ ! Read More »

ಕೋಡಿ೦ಬಾಳ ಆಸಿಡ್ ಆರೋಪಿಗೆ ಕಠಿಣ ಶಿಕ್ಷೆಆಗಲಿ, ಸಂತ್ರಸ್ತೆಯ ಹೆಣ್ಣು ಮಕ್ಕಳ ಶಿಕ್ಷಣದ ಪೂರ್ತಿ ವೆಚ್ಚವನ್ನು ಸರ್ಕಾರವೇ ಭರಿಸಬೇಕು । ಬಿಜೆಪಿ ಮಹಿಳಾ ಮೋರ್ಚಾ

ಕಡಬ : ಕೋಡಿ೦ಬಾಳ ಆಸಿಡ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಸಂತ್ರಸ್ತರ ಸಂಪೂರ್ಣ ವೈದ್ಯಕೀಯ ವೆಚ್ಚ ಸರ್ಕಾರ ಭರಿಸಬೇಕು ಎಂದು ಸರ್ಕಾರವನ್ನು ಇಂದು ಒತ್ತಾಯಿಸಲಾಯಿತು. ಅಲ್ಲದೆ ಸಂತ್ರಸ್ತೆಯ ಮೂವರು ಹೆಣ್ಣು ಮಕ್ಕಳ ಶಿಕ್ಷಣದ ಪೂರ್ತಿ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕಡಬ ತಹಸೀಲ್ದಾರ್ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿಯ ಸರಕಾರಿ ದಂತ ವೈದ್ಯನಿಂದ ಯುವತಿಗೆ ಲೈಂಗಿಕ ಕಿರುಕುಳ : ದಂತ ವೈದ್ಯ ಅಂದರ್

ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೊಠಡಿ ಸಂಖ್ಯೆ 36 ರಲ್ಲಿ ಕರ್ತವ್ಯದಲ್ಲಿದ್ದ ದಂತ ವೈದ್ಯರಾದ ಡಾ: ಸುಧಾಕರ ಎಂಬವರಲ್ಲಿ ಯುವತಿ ಒಬ್ಬರು ಹಲ್ಲಿನ ಚಿಕಿತ್ಸೆಗೆಂದು ಹೋಗಿದ್ದ ಸಮಯ ಆರೋಪಿ ದಂತ ವೈದ್ಯ ಪಿರ್ಯಾದಿದಾರರಿಗೆ ಚಿಕಿತ್ಸೆ ನೀಡುತ್ತಾ ಲೈಂಗಿಕ ಕಿರುಕುಳ ನೀಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 354, 354A(1)(I) IPC ಯಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಮಲ ಮುಡಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ । ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಖ್ಯಾತ ಬ್ಯಾಡ್ಮಿಟಂನ್ ತಾರೆ ಸೈನಾ ನೆಹ್ವಾಲ್ ರಾಜಕೀಯ ಕ್ಷೇತ್ರಕ್ಕಿಳಿದಿದ್ದು ಇಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  29 ರ ಹರೆಯದ ಸೈನಾ ಒಂದು ಕಾಲದ ವರ್ಲ್ಡ್ ನಂಬರ್ 1 ಬ್ಯಾಡ್ಮಿಂಟನ್ ಆರ್ಟಗಾರ್ತಿ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಕೂಟಗಳಲ್ಲಿ ಡಾಮಿನೇಟ್ ಮಾಡುವಂತಹಾ ಆಟ ಪ್ರದರ್ಶಿಸಿದ ಸೈನಾ ನೆಹ್ವಾಲ್ ಒಟ್ಟು 24 ಅಂತಾರಾಷ್ಟೀಯ ಪ್ರಶಸ್ತಿಗಳನ್ನು ಎತ್ತಿ ಬೀಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತನಾಗಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಸೈನಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮೋದಿ ಸರ್ಕಾರ ‘ಖೇಲೋ …

ಕಮಲ ಮುಡಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ । ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ Read More »

ಅನಂತ ಕೋಟಿ ವರ್ಷದ ಕ್ಯಾಲೆಂಡರ್ ನ ಮಾಹಿತಿ ಕ್ಷಣಗಳಲ್ಲಿ । ಕಡಬದ ಆಲಂಕಾರು ಶ್ರೀ ಭಾರತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಈಗ ವಿಶ್ವ ದಾಖಲೆಯತ್ತ

ಕಡಬ ತಾಲೂಕಿನ ಆಲಂಕಾರು ಶ್ರೀ ಭಾರತಿ ಶಾಲೆಯ ಮೂರು ಮಂದಿ ವಿದ್ಯಾರ್ಥಿಗಳು ವಿಶ್ವದಾಖಲೆ ನಿರ್ಮಾನಕ್ಕಾಗಿ ತಮ್ಮ ಪ್ರತಿಭೆಯನ್ನು ಸೋಮವಾರ ಶಾಲೆಯಲ್ಲಿ ನಡೆದ ವಿಶ್ವ ದಾಖಲೆ ಪ್ರದರ್ಶನ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು. ಈ ವಿದ್ಯಾರ್ಥಿಗಳು ಸೊನ್ನೆಯಿಂದ ಅನಂತ ಕೋಟಿ ವರ್ಷದವರೆಗಿನ ದಿನಾಂಕ,ತಿಂಗಳು, ಮತ್ತು ವರ್ಷವನ್ನು ತಿಳಿಸಿದರೆ ಸರಿ ಹೊಂದುವ ವಾರವನ್ನು ತಿಳಿಸುವ ಮೂಲಕ ವಿಶ್ವ ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ.  ಮೆಮೊರೈಸಿಂಗ್ ಎಂಡ್ ರಿಕಾಲಿಂಗ್ ಝೀರೋ ಟು ಇನ್ಫಿನಿಟ್ ಕ್ಯಾಲೆಂಡರ್ ಎಂಬ ವಿಷಯದಲ್ಲಿ ಶಾಲಾ ಏಳನೇ ತರಗತಿ ವಿದ್ಯಾರ್ಥಿಗಳಾದ ಮೋಕ್ಷಿತ್, ನಿತಿನ್ ಹಾಗೂ …

ಅನಂತ ಕೋಟಿ ವರ್ಷದ ಕ್ಯಾಲೆಂಡರ್ ನ ಮಾಹಿತಿ ಕ್ಷಣಗಳಲ್ಲಿ । ಕಡಬದ ಆಲಂಕಾರು ಶ್ರೀ ಭಾರತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಈಗ ವಿಶ್ವ ದಾಖಲೆಯತ್ತ Read More »

ಬ್ರೇಕಿಂಗ್ ನ್ಯೂಸ್: ಉಪ್ಪಿನಂಗಡಿ ಗ್ಯಾಸ್ ಘಟಕದಲ್ಲಿ ಸ್ಫೋಟ!

ಉಪ್ಪಿನಂಗಡಿ ಎಚ್ ಪಿ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲಿಂಡರ್ ಘಟಕದಲ್ಲಿ ಗ್ಯಾಸ್ ಸ್ಫೋಟಗೊಂಡ ಆತಂಕಕಾರಿ ಘಟನೆಯ ಸುದ್ದಿ ಇದೀಗ ಹೊಸ ಕನ್ನಡಕ್ಕೆ ಲಭ್ಯವಾಗಿದೆ. ಉಪ್ಪಿನಂಗಡಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಇದು ಆದಿತ್ಯ ಹೋಟೆಲ್ ನ ಹಿಂಬದಿಯಲ್ಲಿ ಇರುವ ಗ್ಯಾಸ್ ಏಜೆನ್ಸಿ. ಸ್ಥಳಕ್ಕೆ ಪೋಲಿಸ್ ಇನ್ಸ್ ಪೆಕ್ಟರ್ ಮತ್ತು ಇತರೆ ಸಿಬ್ಬಂದಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗೋಡಾನ್ ಒಳಹೊಕ್ಕು ನೋಡಿದ ಬಳಿಕವಷ್ಟೇ ಉಂಟಾದ ಹಾನಿಯ ಮಾಹಿತಿ ದೊರಕಲಿದೆ. ಬೆಂಗಳೂರಿಗೆ ಮತ್ತಿತರ ದೂರದ ಪ್ರಯಾಣಕ್ಕೆ ಸಿದ್ದರಾಗಿ …

ಬ್ರೇಕಿಂಗ್ ನ್ಯೂಸ್: ಉಪ್ಪಿನಂಗಡಿ ಗ್ಯಾಸ್ ಘಟಕದಲ್ಲಿ ಸ್ಫೋಟ! Read More »

error: Content is protected !!
Scroll to Top