ಬ್ರೇಕಿಂಗ್ ನ್ಯೂಸ್: ಉಪ್ಪಿನಂಗಡಿ ಗ್ಯಾಸ್ ಘಟಕದಲ್ಲಿ ಸ್ಫೋಟ!

ಉಪ್ಪಿನಂಗಡಿ ಎಚ್ ಪಿ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲಿಂಡರ್ ಘಟಕದಲ್ಲಿ ಗ್ಯಾಸ್ ಸ್ಫೋಟಗೊಂಡ ಆತಂಕಕಾರಿ ಘಟನೆಯ ಸುದ್ದಿ ಇದೀಗ ಹೊಸ ಕನ್ನಡಕ್ಕೆ ಲಭ್ಯವಾಗಿದೆ.

ಉಪ್ಪಿನಂಗಡಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಇದು ಆದಿತ್ಯ ಹೋಟೆಲ್ ನ ಹಿಂಬದಿಯಲ್ಲಿ ಇರುವ ಗ್ಯಾಸ್ ಏಜೆನ್ಸಿ. ಸ್ಥಳಕ್ಕೆ ಪೋಲಿಸ್ ಇನ್ಸ್ ಪೆಕ್ಟರ್ ಮತ್ತು ಇತರೆ ಸಿಬ್ಬಂದಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಗೋಡಾನ್ ಒಳಹೊಕ್ಕು ನೋಡಿದ ಬಳಿಕವಷ್ಟೇ ಉಂಟಾದ ಹಾನಿಯ ಮಾಹಿತಿ ದೊರಕಲಿದೆ.

ಬೆಂಗಳೂರಿಗೆ ಮತ್ತಿತರ ದೂರದ ಪ್ರಯಾಣಕ್ಕೆ ಸಿದ್ದರಾಗಿ ಬಂದ ಪ್ರಯಾಣಿಕರು ಪಟ್ಟು ಆದಿತ್ಯ ಹೋಟೆಲಿನ ಮುಂಭಾಗದಿಂದ ಓಡಿಹೋದರು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave A Reply

Your email address will not be published.