ಬೆಳ್ತಂಗಡಿಯ ಸರಕಾರಿ ದಂತ ವೈದ್ಯನಿಂದ ಯುವತಿಗೆ ಲೈಂಗಿಕ ಕಿರುಕುಳ : ದಂತ ವೈದ್ಯ ಅಂದರ್

ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೊಠಡಿ ಸಂಖ್ಯೆ 36 ರಲ್ಲಿ ಕರ್ತವ್ಯದಲ್ಲಿದ್ದ ದಂತ ವೈದ್ಯರಾದ ಡಾ: ಸುಧಾಕರ ಎಂಬವರಲ್ಲಿ ಯುವತಿ ಒಬ್ಬರು ಹಲ್ಲಿನ ಚಿಕಿತ್ಸೆಗೆಂದು ಹೋಗಿದ್ದ ಸಮಯ ಆರೋಪಿ ದಂತ ವೈದ್ಯ ಪಿರ್ಯಾದಿದಾರರಿಗೆ ಚಿಕಿತ್ಸೆ ನೀಡುತ್ತಾ ಲೈಂಗಿಕ ಕಿರುಕುಳ ನೀಡಿರುವುದಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 354, 354A(1)(I) IPC ಯಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave A Reply