ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆಯು ಇಂದು ಬೆಳಿಗ್ಗೆ ಲೋಕಾರ್ಪಣೆಗೊಂಡಿತು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜತೆಗೂಡಿ ಈ ಮೇಲ್ಸೇತುವೆಯನ್ನು ಉದ್ಘಾಟಿಸಿದರು.
600 ಮೀಟರ್ ಉದ್ದ ಹೊಂದಿರುವ ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣಕ್ಕೆ 2010 ರಲ್ಲಿ ಚಾಲನೆ ನೀಡಲಾಗಿತ್ತು. ಈಗ ಸುಧೀರ್ಘ ಈ ಮೇಲ್ಸೇತುವೆ ವರ್ಷಗಳ ನಂತರ ಕೆಲಸ ಪೂರ್ಣಗೊಂಡು ಜನರ ಬಳಕೆಗೆ ಲಭ್ಯವಾಗಿದೆ.

ಲೋಕಾರ್ಪಣೆಗೆ ಕಳೆದೆರಡು ವರ್ಷಗಳಿಂದ ಹಲವು ಗಡುವುಗಳನ್ನು ಸಂಸದ ನಳಿನ್‌ಕುಮಾರ್ ಕಟೀಲು ನೀಡಿದ್ದರು. ಆದರೆ ಅಂತಿಮವಾಗಿ ಕಳೆದ ಡಿಸೆಂಬರ್‌ನಲ್ಲಿ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಮಗಾರಿಯ ಮೇಲುಸ್ತುವಾರಿಕೆಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿತ್ತು. ಇದೀಗ ಮೇಲ್ಸೇತುವೆಯು ಲೋಕಾರ್ಪಣೆಗೊಂಡಿರುತ್ತದೆ.
ಇಂದು ಮಾತನಾಡಿದ ಕಟೀಲರು , ಪ್ರಾಜೆಕ್ಟ್ ನ ವಿಳಂಬಕ್ಕೆ ಕಾಂಗ್ರೆಸ್ ನ್ನು ಕಾರಣೀಭೂತರನ್ನಾಗಿಸಿದರು. ಒತ್ತುವರಿಯ ಹಲವು ಕೇಸುಗಳು ಇದ್ದು, ಅದನ್ನೆಲ್ಲ ಕ್ಲಿಯರ್ ಮಾಡಿಕೊಂಡು ಬರಲು ತಡವಾಯಿತೆಂದು ಹೇಳಿದರು.
ಸಮಾರಂಭದಲ್ಲಿ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸಕಾಮತ್, ಮತ್ತು ದಕ್ಷಿಣಕನ್ನಡದ ಎಲ್ಲ ಶಾಸಕರುಗಳು ಮತ್ತು ವಿವಿಧ ಪದಾದಿಕಾರಿಗಳು ಹಾಜರಿದ್ದರು.
You must log in to post a comment.