Parijatha Flower : ನಿಮಗೆ ತಿಳಿದಿರದ ಪಾರಿಜಾತ ಹೂವಿನ ಕೆಲವೊಂದು ಗುಟ್ಟುಗಳು!!!
ನಾನು ಪರಿಮಳದಲ್ಲೂ ಕಮ್ಮಿಯಿಲ್ಲ, ಅಂದದಲ್ಲೂ ಕಮ್ಮಿಯಿಲ್ಲ, ಆರೋಗ್ಯ ಕಾಪಾಡಲು ನಾನು ಬೇಕು, ದೇವರ ಪೂಜೆಗೂ ನಾನು ಬೇಕು , ರಾತ್ರಿಯಲ್ಲಿ ಅರಳಿ ಬೆಳಗಿನ ಜಾವಾ ಭೂಮಿ ಮಡಿಲಲ್ಲಿ ಇರುವೆನು ಎಂದು ಜಂಭದಿಂದ ಬಿಗುವ ಹೂವೇ ಪಾರಿಜಾತ.
ಹೆಸರಲ್ಲಿ ಕೂಡ ಗಾಂಭೀರ್ಯ ತುಂಬಿದೆ.
ಹೌದು ಪಾರಿಜಾತವು ಆಯುರ್ವೇದದಲ್ಲಿಯೂ ಸ್ಥಾನ ಪಡೆದುಕೊಂಡಿದೆ. ಪಾರಿಜಾತ ಹೂವು ಪೂಜೆಗೂ ಕೂಡ ಉಯೋಗಿಸುತ್ತಾರೆ, ಅಲ್ಲದೆ ಈ ಹೂವು ಶ್ರೀ ಕೃಷ್ಣ ದೇವರಿಗೆ ಇಷ್ಟ ಎಂದು ಪ್ರಸಿದ್ಧಿ ಇದೆ. ಜೊತೆಗೆ ಸಮೃದ್ಧಿ ಮಾತ್ರವಲ್ಲದೆ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಆಯುರ್ವೇದದ ಪ್ರಕಾರ ಪಾರಿಜಾತ ರಸವು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ತಜ್ಞರ ಪ್ರಕಾರ ಸಾಬೀತು ಆಗಿದೆ.
ನಮ್ಮ ಪ್ರಕೃತಿಯಲ್ಲಿ ಹಲವಾರು ರೀತಿಯ ಹೂವುಗಳಿವೆ. ಅದರಲ್ಲಿ ಕೆಲವೊಂದನ್ನು ಪೂಜೆಗೆಂದು ಬಳಸಲಾಗುತ್ತದೆ. ಅಂತಹ ಹೂವುಗಳಲ್ಲಿ ಪಾರಿಜಾತ ಹೂವು ಒಂದು. ಅನೇಕ ಜನರು ಇದನ್ನು ವಿಶೇಷವಾಗಿ ದೇವರ ಆರಾಧನೆಗಾಗಿ ಬಳಸುವುದು ಉಂಟು. ಈ ಹೂವನ್ನು ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಈ ಹೂವುಗಳು ನೋಡಲು ತುಂಬಾ ಸುಂದರವಾಗಿದ್ದು, ಪರಿಮಳಯುಕ್ತವಾಗಿದೆ. ಈ ಹೂವುಗಳು ರಾತ್ರಿಯಲ್ಲಿ ಅರಳುತ್ತವೆ ಮತ್ತು ಬೆಳಗಿನ ತನಕ ಭೂಮಿಗೆ ಬೀಳುತ್ತವೆ. ಇದು ಅದರ ವಿಶೇಷತೆ ಕೂಡ ಹೌದು. ಉದುರಿದ ಹೂಗಳನ್ನು ಪೂಜೆಗೆ ಬಳಸಲಾಗುತ್ತದೆ.
ಈ ಪಾರಿಜಾತವು ಆಯುರ್ವೇದದಲ್ಲಿಯೂ ಸ್ಥಾನ ಪಡೆದುಕೊಂಡಿದೆ. ಆಯುರ್ವೇದದ ಪ್ರಕಾರ ಪಾರಿಜಾತ ರಸವು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರ ಎಲೆಗಳು ಮತ್ತು ಮೊಗ್ಗುಗಳು ವಿಶೇಷ ಗುಣಗಳನ್ನು ಹೊಂದಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಪಾರಿಜಾತ ಹೂವುಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ವೈದ್ಯಕೀಯದಲ್ಲಿ ಇದರ ಸಸ್ಯ, ಎಲೆಗಳು, ಬೀಜಗಳು, ಹೂವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಈ ಸಸ್ಯದ ಔಷಧೀಯ ಗುಣಗಳು ವಿವಿಧ ರೋಗಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಲಾಗುತ್ತದೆ.
ಅಲ್ಲದೆ ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸುವುದು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮನೆಯ ಸುತ್ತಲೂ ಪಾರಿಜಾತ ಗಿಡವನ್ನು ನೆಟ್ಟರೆ ಮನೆಯಿಂದ ವಾಸ್ತು ದೋಷಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
ಪಾರಿಜಾತ ಗಿಡ ಮತ್ತು ಹೂವಿನ ಪ್ರಯೋಜನಗಳು:
ಈ ಕೆಳಗಿನ ರೋಗ ನಿವಾರಕ ಆಗಿದೆ :
ಪಾರಿಜಾತವು ಸಂಧಿವಾತ, ಸಯಾಟಿಕಾ, ಮೂಳೆ ಮುರಿತ, ಚರ್ಮ ರೋಗಗಳು, ಪೈಲ್ಸ್, ಜ್ವರ, ಡೆಂಗ್ಯೂ, ಮಲೇರಿಯಾ, ಒಣ ಕೆಮ್ಮು, ಮಧುಮೇಹ ಮುಂತಾದ ವಿವಿಧ ಕಾಯಿಲೆಗಳಿಗೆ ಔಷಧವಾಗಿದೆ.
ಚರ್ಮ ಸಮಸ್ಯೆ ಮತ್ತು ಸೌಂದರ್ಯವರ್ಧಕ ಆಗಿದೆ:
ಪಾರಿಜಾತ ಗಿಡದ ಎಲೆಗಳನ್ನು ಅರೆದು ತ್ವಚೆಯ ಮೇಲೆ ಹಚ್ಚಿದರೆ ತ್ವಚೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಹೂಗಳ ಪೇಸ್ಟ್ನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ.
ಮಹಿಳೆಯರಿಗೆ ಉತ್ತಮ :
ಪಾರಿಜಾತ ಮಹಿಳೆಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಪಾರಿಜಾತ ಮರದ ಕಾಳುಗಳನ್ನು ಒಣಗಿಸಿ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳುವುದರಿಂದ ನೆತ್ತಿಯಲ್ಲಿನ ಹುಣ್ಣು ಕಡಿಮೆಯಾಗುತ್ತದೆ. ರುಬ್ಬಿದ ಕಾಳುಗಳಿಗೆ ತೆಂಗಿನೆಣ್ಣೆ ಬೆರೆಸಿ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.
ಪಾರಿಜಾತದ ಎಲೆಗಳನ್ನು ಸಣ್ಣಗೆ ರುಬ್ಬಿಕೊಳ್ಳಿ, ಎಣ್ಣೆಗೆ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಈ ಮಿಶ್ರಣವನ್ನು ವಾತ ನೋವುಗಳ ಮೇಲೆ ಹಚ್ಚಿ ಕಟ್ಟಿದರೆ ನೋವು ಕಡಿಮೆಯಾಗುತ್ತದೆ. ಪಾರಿಜಾತ ಮರದ ಬೀಜಗಳನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿ ಅದು ಕಪ್ಪಾಗುವವರೆಗೆ ಬಿಸಿ ಮಾಡಬೇಕು. ನಂತರ ಈ ಬೀಜಗಳನ್ನು ಒಣಗಿಸಿ ಮತ್ತು ಹರತಿ ಕರ್ಪೂರದ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಪೇಸ್ಟ್ ಮಾಡಲು ಮಿಶ್ರಣ ಮಾಡಿ. ಈ ಪೇಸ್ಟ್ನ್ನು ಲೇಪವಾಗಿ ಹಚ್ಚುವುದರಿಂದ ತುರಿಕೆ, ಎಸ್ಜಿಮಾ ಮುಂತಾದ ಚರ್ಮ ರೋಗಗಳು ಕಡಿಮೆಯಾಗುತ್ತವೆ.
ಪಾರಿಜಾತವು ಹಲವು ರೀತಿಯ ಪ್ರಯೋಜನಗಳನ್ನು ಒಳಗೊಂಡಿರುವುದು ಅಲ್ಲದೆ ಶ್ರೀ ಕೃಷ್ಣ ದೇವರ ನೆಚ್ಚಿನ ಹೂವಾಗಿದ್ದು, ಶ್ರೀ ಕೃಷ್ಣ ನಿಗೆ ಸಮರ್ಪಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿ ಆಗುವುದು ಎಂದು ಬಲವಾದ ನಂಬಿಕೆ ಇದೆ.