Day: June 7, 2022

ಪುತ್ತೂರು: ಕಾರು-ರಿಕ್ಷಾ ಡಿಕ್ಕಿ, ರಿಕ್ಷಾ ಚಾಲಕನಿಗೆ ಗಾಯ

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪುತ್ತೂರು ದರ್ಬೆ ಮಕ್ಕಳಮಂಟಪದ ಬಳಿ ಮಾರುತಿ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜೂ.7 ರ ರಾತ್ರಿ ನಡೆದಿದೆ. ದರ್ಬೆ ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ರಸ್ತೆ ಬದಿ ನಿಂತಿದ್ದ ಸ್ವಿಪ್ಟ್ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು ಚಾಲಕ ತೀವ್ರ ಗಾಯಗೊಂಡಿದ್ದಾರೆ.

ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಶಿರಾಡಿ ಗ್ರಾಮ ಪಂಚಾಯಿತಿ ಪಿಡಿಒ ಪಿ.ವೆಂಕಟೇಶ್‌ ಅಮಾನತು

ನೆಲ್ಯಾಡಿ: ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಶಿರಾಡಿ ಗ್ರಾಮ ಪಂಚಾಯಿತಿ ಪಿಡಿಒ ಪಿ.ವೆಂಕಟೇಶ್‌ರವರನ್ನು ಸೇವೆಯಿಂದ ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್‌ರವರು ಆದೇಶ ನೀಡಿದ್ದಾರೆ. ವೆಂಕಟೇಶ್‌ರವರ ಮೇಲಿನ ಆರೋಪಗಳ ಕುರಿತಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ದಿನಾಂಕ ೭-೬-೨೦೨೨ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕುಮಾರ್ ಕೆರವರು ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನೆರೆಮನೆಯ ಯುವಕನಿಂದ ಅತ್ಯಾಚಾರ, ದೂರು ದಾಖಲು

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಬಣ ಎಂಬಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ನೆರೆಮನೆ ನಿವಾಸಿ ಮುನಾಸಿರ್ ಮೇಲೆ ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಅಪ್ರಾಪ್ತ ಬಾಲಕಿಯ ಮನೆಗೆ ಆಗಾಗ ಬಂದುಹೋಗುತ್ತಿದ್ದನು. ಅದಲ್ಲದೆ ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದನು. ಪದೇ ಪದೇ ಒತ್ತಾಯ ಮಾಡಿ ದಿನಾಂಕ 30-05-2022 ರಂದು ಬೆಳಿಗೆ 08.15 ಗಂಟೆಗೆ ಬಾಲಕಿಯು ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಬಳಿ ತಲುಪಿದಾಗ …

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನೆರೆಮನೆಯ ಯುವಕನಿಂದ ಅತ್ಯಾಚಾರ, ದೂರು ದಾಖಲು Read More »

ಕುಕ್ಕೇ ಸುಬ್ರಹ್ಮಣ್ಯ: ಸೋರುತಿಹುದು ಠಾಣಾ ಕಟ್ಟಡದ ಚಾವಣಿ!! ಮಳೆ ನೀರಿನಿಂದ ರಕ್ಷಣೆಗೆ ಟಾರ್ಪಲು ಹೊದಿಕೆ

ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೇ ಸುಬ್ರಹ್ಮಣ್ಯದಲ್ಲಿ ರಕ್ಷಣೆ ನೀಡುವ ರಕ್ಷಕರಿಗೇ ರಕ್ಷಣೆ ಇಲ್ಲದಂತಾಗಿರುವುದು ಬೆಳಕಿಗೆ ಬಂದಿದೆ.ಕುಕ್ಕೇ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಕಟ್ಟಡದ ಚಾವಣಿ ಸೋರುವ ಕಾರಣದಿಂದ ಮಳೆ ನೀರನ್ನು ತಡೆಯಲು ಈ ಬಾರಿ ಟಾರ್ಪಲಿನ ಹೊದಿಕೆ ಹೊದಿಸಲಾಗಿದೆ. ಸುಮಾರು 50 ವರ್ಷಗಳ ಹಿಂದಿನ ಠಾಣಾ ಕಟ್ಟಡ ಶಿಥಿಲಗೊಂಡು ನಾಲ್ಕು ವರ್ಷಗಳೇ ಕಳೆದಿದ್ದು, ಈ ನಡುವೆ ಠಾಣಾ ಅಗತ್ಯ ದಾಖಲೆಗಳು ಒದ್ದೆಯಾಗುವ ಭಯ ಕಾಡಿದೆ. ಆರೋಪಿಗಳನ್ನು ಬಂಧಿಸಿಡುವ ಕೊಠಡಿಗಳಲ್ಲಿ ಮಳೆಯ ನೀರು …

ಕುಕ್ಕೇ ಸುಬ್ರಹ್ಮಣ್ಯ: ಸೋರುತಿಹುದು ಠಾಣಾ ಕಟ್ಟಡದ ಚಾವಣಿ!! ಮಳೆ ನೀರಿನಿಂದ ರಕ್ಷಣೆಗೆ ಟಾರ್ಪಲು ಹೊದಿಕೆ Read More »

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಳಿಗೆ ವರ್ಗಾವಣೆ

ಬೆಳ್ತಂಗಡಿ: ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸರಿಗೆ ವರ್ಗಾವಣೆಯಾಗಿದೆ. ಸರಿಸುಮಾರು ಏಳು ವರ್ಷಗಳಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಪೊಲೀಸರಿಗೆ ಇದೀಗ ದಕ್ಷಿಣ ಕನ್ನಡದ ವಿವಿಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರವೀಣ್ ಅವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ, ವಿಶ್ವನಾಥ್ ಅವರನ್ನು ಬೆಳ್ತಂಗಡಿ ಠಾಣೆಗೆ, ರಾಹುಲ್ ರಾವ್ ಅವರನ್ನು ಪುಂಜಾಲಕಟ್ಟೆಗೆ, ರವೀಂದ್ರ ಅವರನ್ನು ವೇಣೂರು ಪೊಲೀಸ್ ಠಾಣೆಗೆ ಹಾಗೂ ಬೆನ್ನಿಚ್ಚನ್ ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ವಿಶ್ವನಾಥ್ ಹಾಗೂ …

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಳಿಗೆ ವರ್ಗಾವಣೆ Read More »

ಹೊಸ ಅನ್ವೇಷಣೆ; ಈ ಔಷಧದಿಂದ ಕ್ಯಾನ್ಸರ್ ಸಂಪೂರ್ಣ ಗುಣಮುಖವಾಗುತ್ತೆ !

ಇಲ್ಲಿವರೆಗೆ ಗುದನಾಳದ ಕ್ಯಾನ್ಸರ್ ಎಂದರೆ ಜನರು ಬೆಚ್ಚಿ ಬೀಳುವಂತಾಗಿತ್ತು. ಯಾವುದೇ ವ್ಯಕ್ತಿಗೆ ಕ್ಯಾನ್ಸರ್‌ ಇದೆಯೆಂದರೆ ಅವರು ಜೀವನಪರ್ಯಂತೆ ನರಕ ಅನುಭವಿಸಬೇಕಾಗಿತ್ತು. ಆದ್ರೆ ಇನ್ಮುಂದೆ ಆ ಸಮಸ್ಯೆ ಇರುವುದಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಔಷಧಿ ಪ್ರಯೋಗ ನಡೆಸಲಾಗಿದೆ. ಇತ್ತೀಚಿನ ಕ್ಲಿನಿಕಲ್‌ ಪ್ರಯೋಗದಿಂದ ಸಂತಸದ ವಿಚಾರವೊಂದು ಹೊರಬಂದಿದೆ. ಇತ್ತೀಚಿನ ಕ್ಲಿನಿಕಲ್ ವರದಿಯೊಂದರ ಪ್ರಕಾರ, ಗುದನಾಳದ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ದೋಸ್ಟಾರ್ಲಿಮಾಬ್ ಎಂಬುದು ಪ್ರಯೋಗಾಲಯ-ಉತ್ಪಾದಿತ ಅಣುಗಳನ್ನು ಹೊಂದಿರುವ ಔಷಧವಾಗಿದ್ದು, ಅದು ಮಾನವ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ. 18 ಗುದನಾಳದ ಕ್ಯಾನ್ಸರ್ ರೋಗಿಗಳಿಗೆ …

ಹೊಸ ಅನ್ವೇಷಣೆ; ಈ ಔಷಧದಿಂದ ಕ್ಯಾನ್ಸರ್ ಸಂಪೂರ್ಣ ಗುಣಮುಖವಾಗುತ್ತೆ ! Read More »

ಕಡಬ : ಮಾದಕ ವಸ್ತುಗಳ ವಿರೋಧಿ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಕಡಬ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ (ರಿ )ಧರ್ಮಸ್ಥಳ ಜಿಲ್ಲಾ ಜನಜಾಗೃತಿ ವೇದಿಕೆ ದ. ಕ 2 ಜಿಲ್ಲೆ ಇದರ ಆಶ್ರಯ ದಲ್ಲಿ ಪರಮ ಪೂಜ್ಯ ಡಾ॥ ಡಿ.ವೀರೇಂದ್ರ ಹೆಗ್ಗಡೆ ಯವರ ಹಾಗೂ ಮಾತೃಶ್ರೀ ಡಾ॥ ಹೇಮಾವತಿ ವಿ ಹೆಗ್ಗಡೆ ಯವರ ಕೃಪಾಶಿರ್ವಾದ ದೊಂದಿಗೆ ವಿಶ್ವ ತಂಬಾಕು ದಿನಾಚರಣೆಯ ಅಂಗವಾಗಿ ಮಾಧಕ ವಸ್ತು ಗಳ ಸೇವನೆಯಿಂದ ಮಾನವನಿಗೆ ಆಗುವ ದುಷ್ಪರಿಣಾಮ …

ಕಡಬ : ಮಾದಕ ವಸ್ತುಗಳ ವಿರೋಧಿ ದಿನಾಚರಣೆ Read More »

ಕುಡಿದ ಮತ್ತಿನಲ್ಲಿದ್ದರಾ ಚಹಲ್ -ನೆಹ್ರಾ? ಇವರು ಮಾಡಿದ್ದಾದರೂ ಏನುಗೊತ್ತೆ

ಮೊನ್ನೆಯಷ್ಟೇ ಮುಕ್ತಾಯವಾದ ಐಪಿಎಲ್ 2022 ರ  ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಸೀಸನ್​ನಲ್ಲೇ ಐಪಿಎಲ್​ ಚಾಂಪಿಯನ್ ಆದ ಕಾರಣ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಗುಜರಾತ್ ಟೈಟಾನ್ಸ್​ ತಂಡದ ಆಟಗಾರರೊಂದಿಗೆ ರಾಜಸ್ಥಾನ್ ರಾಯಲ್ಸ್ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಕಾಣಿಸಿಕೊಂಡಿದ್ದರು. ಪಾರ್ಟಿಯ ಬಳಿಕ ಗುಜರಾತ್ ತಂಡ ಕೋಚ್ ಆಶಿಶ್ ನೆಹ್ರಾ ಹಾಗೂ ಚಹಾಲ್ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಯುಜ್ವೇಂದ್ರ ಚಹಾಲ್ …

ಕುಡಿದ ಮತ್ತಿನಲ್ಲಿದ್ದರಾ ಚಹಲ್ -ನೆಹ್ರಾ? ಇವರು ಮಾಡಿದ್ದಾದರೂ ಏನುಗೊತ್ತೆ Read More »

ಮಂಗಳೂರು : ಅನಾರೋಗ್ಯದ ಕಾರಣದಿಂದ ಸಾವು ಕಂಡ ಅಂತಾರಾಷ್ಟ್ರೀಯ ಬೈಕರ್!!!

ಉಳ್ಳಾಲ : ಮಂಗಳವಾರ ಮಧ್ಯಾಹ್ನ ತೊಕ್ಕೊಟ್ಟಿನ ಅಳೇಕಲದ ಜಾರ ಹೌಸ್ ನಿವಾಸಿ ಸೈಯದ್ ಮುಹಮ್ಮದ್ ಸಲೀಂ ತಂಜಳ್ (31) ಅವರು ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ‌. ಅವಿವಾಹಿತರಾಗಿದ್ದ ಇವರಿಗೆ ಕೆಲವು ತಿಂಗಳ ಹಿಂದೆ ಅನಾರೋಗ್ಯ ಕಾಡಿತ್ತು. ಹಾಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದಿನಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದ ಇವರು, ನಂತರ ವಿದೇಶಕ್ಕೆ ಹೋಗಿ ಅಲ್ಲಿ ಉದ್ಯೋಗದಲ್ಲಿದ್ದರು. ಆದರೆ ಕೊರೊನಾ ಎಲ್ಲಾ ಮುಗಿದ ಬಳಿಕ ಊರಿಗೆ ಬಂದು, ತನ್ನ ಇಷ್ಟದ ಹವ್ಯಾಸಿ ಬೈಕ್ ಪ್ರಯಾಣ ಮುಂದುವರಿಸಿದ್ದರು. …

ಮಂಗಳೂರು : ಅನಾರೋಗ್ಯದ ಕಾರಣದಿಂದ ಸಾವು ಕಂಡ ಅಂತಾರಾಷ್ಟ್ರೀಯ ಬೈಕರ್!!! Read More »

ನೂಪುರ್ ಶರ್ಮಾ ಹೇಳಿಕೆ ಅವಾಂತರ : ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಪಕ್ಷದ ನಾಯಕರಿಗೆ ಬಿಜೆಪಿಯಿಂದ ‘ಟಫ್ ರೂಲ್ಸ್’

ನವದೆಹಲಿ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮಹಮ್ಮದ್‌ ಪೈಗಂಬರ್‌ ಕುರಿತು ನೀಡಿರುವ ಹೇಳಿಕೆ ಇದೀಗ ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವೆ ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಎನ್ನುವ ಕಿಚ್ಚು ಎಬ್ಬಿಸಿದೆ. ಅಲ್ಲದೆ, ಭಾರತದ ಉತ್ಪನ್ನಗಳಿಗೆ ಅರಬ್ ರಾಷ್ಟ್ರ ನಿರ್ಬಂಧ ಹೇರಿದೆ. ಇದೀಗ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಟಿವಿ ಚರ್ಚೆಯಲ್ಲಿ ಭಾಗವಹಿಸುವ ತನ್ನ ನಾಯಕರಿಗೆ ಹೊಸ ನಿಯಮಗಳನ್ನು ತಂದಿದೆ. ಹೌದು. ಈ ಚರ್ಚೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ವಕ್ತಾರರಿಗೆ ಪಾಲ್ಗೊಳ್ಳಲು ಅವಕಾಶ …

ನೂಪುರ್ ಶರ್ಮಾ ಹೇಳಿಕೆ ಅವಾಂತರ : ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಪಕ್ಷದ ನಾಯಕರಿಗೆ ಬಿಜೆಪಿಯಿಂದ ‘ಟಫ್ ರೂಲ್ಸ್’ Read More »

error: Content is protected !!
Scroll to Top