ಇಲ್ಲಿವರೆಗೆ ಗುದನಾಳದ ಕ್ಯಾನ್ಸರ್ ಎಂದರೆ ಜನರು ಬೆಚ್ಚಿ ಬೀಳುವಂತಾಗಿತ್ತು. ಯಾವುದೇ ವ್ಯಕ್ತಿಗೆ ಕ್ಯಾನ್ಸರ್ ಇದೆಯೆಂದರೆ ಅವರು ಜೀವನಪರ್ಯಂತೆ ನರಕ ಅನುಭವಿಸಬೇಕಾಗಿತ್ತು. ಆದ್ರೆ ಇನ್ಮುಂದೆ ಆ ಸಮಸ್ಯೆ ಇರುವುದಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಔಷಧಿ ಪ್ರಯೋಗ ನಡೆಸಲಾಗಿದೆ.
ಇತ್ತೀಚಿನ ಕ್ಲಿನಿಕಲ್ ಪ್ರಯೋಗದಿಂದ ಸಂತಸದ ವಿಚಾರವೊಂದು ಹೊರಬಂದಿದೆ. ಇತ್ತೀಚಿನ ಕ್ಲಿನಿಕಲ್ ವರದಿಯೊಂದರ ಪ್ರಕಾರ, ಗುದನಾಳದ ಕ್ಯಾನ್ಸರ್ನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
ದೋಸ್ಟಾರ್ಲಿಮಾಬ್ ಎಂಬುದು ಪ್ರಯೋಗಾಲಯ-ಉತ್ಪಾದಿತ ಅಣುಗಳನ್ನು ಹೊಂದಿರುವ ಔಷಧವಾಗಿದ್ದು, ಅದು ಮಾನವ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ. 18 ಗುದನಾಳದ ಕ್ಯಾನ್ಸರ್ ರೋಗಿಗಳಿಗೆ ಆರು ತಿಂಗಳ ಕಾಲ ಒಂದೇ ಔಷಧವನ್ನು ನೀಡಲಾಯಿತು ಮತ್ತು ಚಿಕಿತ್ಸೆಯ ಪರಿಣಾಮವಾಗಿ, ಪ್ರತಿ ರೋಗಿಯಲ್ಲಿ ಕ್ಯಾನ್ಸರ್ ಸಂಪೂರ್ಣವಾಗಿ ಕಡಿಮೆಯಾಯಿತು.
You must log in to post a comment.