Day: December 28, 2021

ಅಂಕತ್ತಡ್ಕ : ಸೋಲಾರ್ ಬೀದಿ ದೀಪದ ಕಳ್ಳತನ

ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಸಾರಡ್ಕ ಕ್ರಾಸ್ ಬಳಿ ಅಳವಡಿಸಿದ ಸೋಲಾರ್ ಅನ್ನು ಕಳ್ಳತನ‌ ಮಾಡಲಾಗಿದೆ. ಗ್ರಾ.ಪಂ.ವತಿಯಿಂದ ಅಳವಡಿಸಿದ ಸೋಲಾರ್ ದೀಪದ ಕಂಬವನ್ನು ಬ್ಲೇಡ್ ಮೂಲಕ ತುಂಡರಿಸಿ ಸೋಲಾರ್ ದೀಪ,ಬ್ಯಾಟರಿ ಕಳ್ಳತನ ಮಾಡಲಾಗಿದೆ. ಈ ಕುರಿತು ಸವಣೂರು ಗ್ರಾ.ಪಂ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಬದಲಾದ ನೈಟ್ ಕರ್ಫ್ಯೂ ಮಾರ್ಗಸೂಚಿ | ಹೋಟೆಲ್ ಮಾಲೀಕರು ಕೊಂಚ ರಿಲ್ಯಾಕ್ಸ್

ಬೆಂಗಳೂರು:ಕರ್ನಾಟಕ ಸರ್ಕಾರ ಡಿಸೆಂಬರ್ 28ರಿಂದ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ.ಆದರೆ ಈ ಆದೇಶಕ್ಕೆ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ನೈಟ್ ಕರ್ಫ್ಯೂ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಮಂಗಳವಾರ ಆದೇಶ ಹೊರಡಿಸಿದ್ದು ಹೋಟೆಲ್, ಬಾರ್, ರೆಸ್ಟೋರೆಂಟ್, ಪಬ್, ಮನೋರಂಜನಾ ತಾಣಗಳಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಹೇಳಿತ್ತು.ಇದರಿಂದಾಗಿ ಹೋಟೆಲ್ …

ಬದಲಾದ ನೈಟ್ ಕರ್ಫ್ಯೂ ಮಾರ್ಗಸೂಚಿ | ಹೋಟೆಲ್ ಮಾಲೀಕರು ಕೊಂಚ ರಿಲ್ಯಾಕ್ಸ್ Read More »

ಬೇರೆ ರಾಜ್ಯಗಳಿಂದ ಬರುವ ಪ್ರವಾಸಿಗರು ಮದ್ಯ ಸೇವಿಸಬೇಕು ಎಂದರೆ ನಮ್ಮ ರಾಜ್ಯಕ್ಕೆ ಬರಲೇಬೇಡಿ ಎಂದು ಗುಡುಗಿದ ಬಿಹಾರ ಸಿಎಂ !! | ಕಾರಣವೇನು ಗೊತ್ತಾ??

ಮದ್ಯಪ್ರಿಯರಿಗೋಸ್ಕರ ಇತ್ತೀಚೆಗೆ ರಾಜ್ಯ ಸರ್ಕಾರಗಳು ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿವೆ. ಅಂತೆಯೇ ಬೇರೆ ರಾಜ್ಯಗಳಿಂದ ಬರುವವರು ಮದ್ಯ ಸೇವಿಸಬೇಕು ಅಂದರೆ ಬಿಹಾರಕ್ಕೆ ಬರಲೇಬೇಡಿ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ರಾಜ್ಯಕ್ಕೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗಾಗಿ ಮದ್ಯ ನಿಷೇಧ ಕಾನೂನನ್ನು ಸಡಿಲಗೊಳಿಸುವ ಬಗ್ಗೆ ಸೋಮವಾರ ಸಸಾರಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಭೇಟಿ ನೀಡುವವರಿಗೆ ಮದ್ಯ ಸೇವಿಸಲು ಅವಕಾಶ ನೀಡಿ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಸಾಧ್ಯವೇ? ನಾವು ಅವರಿಗೆ ಮದ್ಯಪಾನ …

ಬೇರೆ ರಾಜ್ಯಗಳಿಂದ ಬರುವ ಪ್ರವಾಸಿಗರು ಮದ್ಯ ಸೇವಿಸಬೇಕು ಎಂದರೆ ನಮ್ಮ ರಾಜ್ಯಕ್ಕೆ ಬರಲೇಬೇಡಿ ಎಂದು ಗುಡುಗಿದ ಬಿಹಾರ ಸಿಎಂ !! | ಕಾರಣವೇನು ಗೊತ್ತಾ?? Read More »

ಮಾರುಕಟ್ಟೆಗೆ ಹೊಸದಾಗಿ ಬಂದಿದೆ ಎಲೆಕ್ಟ್ರಿಕ್ ಹೈಸ್ಪೀಡ್ ಸ್ಟೈಲಿಶ್ ಸ್ಕೂಟರ್ | ಒಮ್ಮೆ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ಓಡುವ ಈ ಗಾಡಿಯನ್ನು ಕೇವಲ 1,999 ರೂ.ಗೆ ಕೂಡಲೇ ಬುಕ್ ಮಾಡಿ

ನವದೆಹಲಿ : ಭಾರತೀಯ ಮಾರುಕಟ್ಟೆ ದಿನದಿಂದ ದಿನಕ್ಕೆ ಉತ್ತಮವಾದ ಬ್ರ್ಯಾಂಡ್ ಗಳನ್ನು ಪ್ರದರ್ಶಿಸುತ್ತಲೇ ಇದೆ. ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯಾದ ಬಳಿಕ ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬರುತ್ತಿದೆ. ಇದೀಗ ಇತ್ತೀಚಿನ ಬ್ರ್ಯಾಂಡ್ ಒಕಾಯಾ ಎಲೆಕ್ಟ್ರಿಕ್ ಸ್ಕೂಟರ್ ಕೂಡಾ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಕೂಟರ್ ಅನ್ನು ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ EV ಎಕ್ಸ್‌ಪೋ 2021 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಹೆಸರು ಫಾಸ್ಟ್ . ಇದರ ಎಕ್ಸ್ ಶೋ ರೂಂ ಬೆಲೆ 90,000 ರೂ. …

ಮಾರುಕಟ್ಟೆಗೆ ಹೊಸದಾಗಿ ಬಂದಿದೆ ಎಲೆಕ್ಟ್ರಿಕ್ ಹೈಸ್ಪೀಡ್ ಸ್ಟೈಲಿಶ್ ಸ್ಕೂಟರ್ | ಒಮ್ಮೆ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ಓಡುವ ಈ ಗಾಡಿಯನ್ನು ಕೇವಲ 1,999 ರೂ.ಗೆ ಕೂಡಲೇ ಬುಕ್ ಮಾಡಿ Read More »

ಬೆಂಗಳೂರಲ್ಲಿ ರೋಡಿಗಿಳಿದ ಎಲೆಕ್ಟ್ರಿಕ್ ಬಸ್‌ಗಳು | ಮಾಲಿನ್ಯ ನಿಯಂತ್ರಣ ಉದ್ದೇಶಿತ ‘ಕ್ಲೀನ್ ಬಸ್‌’ ಗಳಲ್ಲಿದೆ ಈ ಎಲ್ಲಾ ವಿಶೇಷತೆ !

ಇದು ಎಲೆಕ್ಟ್ರಿಕ್ ಯುಗ. ಎಲೆಕ್ಟ್ರಿಕ್ ಸೈಕಲ್ ಬೀದಿಗೆ ಬಂತು, ನಂತರ ಎಲೆಕ್ಟ್ರಿಕ್ ಬೈಕ್ ಬೀದಿ ಸವಾರಿ ಮಾಡಿ ಆಯ್ತು. ಆಮೇಲೆ ಅವುಗಳ ಜಾಗಕ್ಕೆ ಕಾರ್ ಇಳಿಯಿತು, ಇದೀಗ ಎಲೆಕ್ಟ್ರಿಕ್ ಬಸ್‌ಗಳು ರೋಡಿಗಿಳಿಯುವ ಕಾಲ. ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ಪೊಳ್ಯೋಷನ್ ಕಮ್ಮಿ ಮಾಡಿಕೊಳ್ಳುವ ಬಹುಕಾಲದ ಆಸೆಗೆ ನಿನ್ನೆಗೆ ನಾಂದಿ ಹಾಡಿದೆ. ನಿನ್ನೆ ಡಿಸೆಂಬರ್ 27ರಂದು ಬೆಂಗಳೂರು ನಗರದಲ್ಲಿ ಬರೋಬ್ಬರಿ 40 ಎಲೆಕ್ಟ್ರಿಕ್ ಬಸ್‌ಗಳು ನಿನ್ನೆಯಿಂದ ಸಂಚರಿಸಲು ಆರಂಭಗೊಂಡಿದ್ದು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಇನ್ನೂ 50 ಬಸ್‌ಗಳು ಕೆಲವೇ …

ಬೆಂಗಳೂರಲ್ಲಿ ರೋಡಿಗಿಳಿದ ಎಲೆಕ್ಟ್ರಿಕ್ ಬಸ್‌ಗಳು | ಮಾಲಿನ್ಯ ನಿಯಂತ್ರಣ ಉದ್ದೇಶಿತ ‘ಕ್ಲೀನ್ ಬಸ್‌’ ಗಳಲ್ಲಿದೆ ಈ ಎಲ್ಲಾ ವಿಶೇಷತೆ ! Read More »

ವೈಯಕ್ತಿಕ ಬದ್ಧತೆ, ಸಾಮಾಜಿಕ ಕಾಳಜಿಯಿರಲಿ: ಲೋಕೇಶ್ ಕಾಯರ್ಗ | ಪತ್ರಕರ್ತರ ಸಮ್ಮೇಳನದಲ್ಲಿ ಮಾಧ್ಯಮ ವಿಚಾರಗೋಷ್ಠಿ

ಮಂಗಳೂರು, ಡಿ. ೨೮: ವೈಯಕ್ತಿಕ ಬದ್ಧತೆ ಹಾಗೂ ಸಾಮಾಜಿಕ ಕಾಳಜಿ ಹೊಂದಿರುವ ಪತ್ರಕರ್ತ ಸಾಮಾಜಿಕ ಹೊಣೆಗಾರಿಕೆಯನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಪ್ರಜಾನುಡಿ ಮೈಸೂರಿನ ಸಂಪಾದಕರಾದ ಲೋಕೇಶ್ ಕಾಯರ್ಗ ಹೇಳಿದರು.ಮಂಗಳೂರು ಪುರಭವನದಲ್ಲಿ ಮಂಗಳವಾರ ನಡೆದ ಪತ್ರಕರ್ತರ ಜಿಲ್ಲಾ ಸಮ್ಮೇಳನದಲ್ಲಿ ‘ಮಾಧ್ಯಮ-ಸಾಮಾಜಿಕ ಹೊಣೆಗಾರಿಕೆ’ ಎಂಬ ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೆ ಪತ್ರಿಕೋದ್ಯಮದಲ್ಲಿ ಸೈದ್ಧಾಂತಿಕ ನೆಲೆಗಟ್ಟು ಜಾಗೃತವಾಗಿತ್ತು. ಅದರ ಮೂಖೇನವೇ ಸುದ್ದಿಗಳು ಸಿದ್ಧವಾಗುತ್ತಿತ್ತು. ಆದರೆ ಈಗ ಜನಪ್ರಿಯತೆಯ ಬೆನ್ನು ಬಿದ್ದು ಅದರ ಹಾದಿಯಲ್ಲಿ ಮಾಧ್ಯಮಗಳು ಸಾಗುವ ಕಾರಣದಿಂದ …

ವೈಯಕ್ತಿಕ ಬದ್ಧತೆ, ಸಾಮಾಜಿಕ ಕಾಳಜಿಯಿರಲಿ: ಲೋಕೇಶ್ ಕಾಯರ್ಗ | ಪತ್ರಕರ್ತರ ಸಮ್ಮೇಳನದಲ್ಲಿ ಮಾಧ್ಯಮ ವಿಚಾರಗೋಷ್ಠಿ Read More »

ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ !! | ಕಣ್ಣು, ಮೂಗು, ಬಾಯಿ ದಿಟ್ಟೋ ಮನುಷ್ಯನಂತಿರುವ ಮೇಕೆ ಮರಿಯನ್ನು ನೋಡಲು ಹರಿದುಬರುತ್ತಿದೆ ಜನಸಾಗರ

ಪ್ರಾಣಿಗಳು ಅದರದ್ದೇ ರೂಪ ಹೋಲುವಂತಹ ಮರಿಗಳಿಗೆ ಜನ್ಮ ನೀಡುವುದು ಸಹಜ. ಆದರೆ ಇಲ್ಲಿ ಮೇಕೆಯೊಂದು ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿರುವ ವಿಲಕ್ಷಣವಾದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಅಸ್ಸಾಂನ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೇಕೆ ಮರಿ ಇನ್ನೂ ಬದುಕಿದೆ. ಮನುಷ್ಯನ ಹೋಲಿಕೆ ಹೊಂದಿರುವ ಮೇಕೆಯನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ. ಆಮೇಕೆ ಮರಿಯ ಕಣ್ಣು, ಮೂಗು ಮತ್ತು ಬಾಯಿ ಮನುಷ್ಯನಂತೆ ಇದ್ದು, ಅದರ ಕಿವಿಗಳು ಮಾತ್ರ ಮೇಕೆಯಂತಿದೆ. ಇನ್ನೂ …

ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ !! | ಕಣ್ಣು, ಮೂಗು, ಬಾಯಿ ದಿಟ್ಟೋ ಮನುಷ್ಯನಂತಿರುವ ಮೇಕೆ ಮರಿಯನ್ನು ನೋಡಲು ಹರಿದುಬರುತ್ತಿದೆ ಜನಸಾಗರ Read More »

ಮಂಗಳೂರು:ಮತ್ತೊಮ್ಮೆ ಕೊರಗಜ್ಜನ ಒಡಲಿಗೆ ಬಿತ್ತು ಬಳಸಿದ ಕಾಂಡೋಮ್ !! ಪವಿತ್ರ ಸ್ಥಾನಗಳ ಅಪವಿತ್ರಗೊಳಿಸುವ ಕಿಡಿಗೇಡಿ ಕೃತ್ಯಗಳಿಗೆ ಕೊನೆ ಯಾವಾಗ!??

ಮಂಗಳೂರು:ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೊಮ್ ಎಸೆದು ಕಿಡಿಗೇಡಿತನ ಮೆರೆದ ಪ್ರಕರಣ ಬೆಳಕಿಗೆ ಬಂದಿದ್ದು, ಕೊರಗಜ್ಜನ ಸ್ಥಾನವನ್ನು ಅಪವಿತ್ರಗೊಳಿಸಿದ ಈ ಘಟನೆ ಮಂಗಳೂರು ನಗರದ ನಂದಿಗುಡ್ಡೆ ಎಂಬಲ್ಲಿ ನಡೆದಿದೆ. ಇಂದು ಮುಂಜಾನೆ ಬೆಳಕಿಗೆ ಬಂದ ಘಟನೆಯ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ವಿಹಿಂಪ ಭಜರಂಗದಳ ಸಹಿತ ಕೊರಗಜ್ಜನ ಭಕ್ತರು ಆಗ್ರಹಿಸಿದ್ದಾರೆ. ಈ ಹಿಂದೆಯೂ ಮಂಗಳೂರಿನ ಹಲವಾರು ಕಡೆಗಳಲ್ಲಿ ಕೊರಗಜ್ಜನ ಅಪವಿತ್ರಗೊಳಿಸುವ ಘಟನೆಗಳು ನಡೆದಿತ್ತು. ಕಾಪಿಕಾಡ್ ಬಳಿಯ ದಡ್ಡಲ್ ಕಾಡ್ ಬಬ್ಬುಸ್ವಾಮಿ, ಅತ್ತಾವರ …

ಮಂಗಳೂರು:ಮತ್ತೊಮ್ಮೆ ಕೊರಗಜ್ಜನ ಒಡಲಿಗೆ ಬಿತ್ತು ಬಳಸಿದ ಕಾಂಡೋಮ್ !! ಪವಿತ್ರ ಸ್ಥಾನಗಳ ಅಪವಿತ್ರಗೊಳಿಸುವ ಕಿಡಿಗೇಡಿ ಕೃತ್ಯಗಳಿಗೆ ಕೊನೆ ಯಾವಾಗ!?? Read More »

ಫ್ಲಿಪ್ ಕಾರ್ಟ್ ನಿಂದ ಗ್ರಾಹಕರಿಗೆ ಬಂಪರ್ ಆಫರ್‌ | ಇಂದು ಕೇವಲ ಒಂದು ರೂಪಾಯಿಗೆ ಸಿಗುತ್ತದೆಯಂತೆ ಈ ವಸ್ತುಗಳು !!

ಇ-ಕಾಮರ್ಸ್ ಕಂಪನಿಗಳು ದಿನಕ್ಕೊಂದು ಆಫರ್ ನೀಡುತ್ತಿರುತ್ತವೆ. ಇತ್ತೀಚಿಗೆ ಅಮೆಜಾನ್ ಕೂಡ ತನ್ನ ಗ್ರಾಹಕರಿಗಾಗಿ ಒಂದು ಮೆಗಾ ಆಫರ್ ಘೋಷಿಸಿತ್ತು. ಹಾಗೆಯೇ ಇದೀಗ ಫ್ಲಿಪ್ ಕಾರ್ಟ್ ಕೂಡ ಅದೇ ಹಾದಿಯಲ್ಲಿ ಸಾಗಿದೆ. ಅಮೆಜಾನ್ ನಂತೆಯೇ ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಫ್ಲಿಪ್ ಕಾರ್ಟ್ ಕೂಡ ಹಿಂದೆ ಬಿದ್ದಿಲ್ಲ. ಫಿಪ್‌ಕಾರ್ಟ್‌ನಲ್ಲೂ ಪ್ರತಿದಿನ ಹೊಸ ಆಫರ್ ಗಳಿರುತ್ತವೆ. ಪ್ರತಿದಿನ ಕೆಲವೊಂದು ದಿನಸಿ ವಸ್ತುಗಳ ಮೇಲೆ ಅದ್ಭುತ ರಿಯಾಯಿತಿ ನೀಡುತ್ತದೆ. ಹಾಗೆಯೇ ಇಂದು ಕೇವಲ ಒಂದು ರೂಪಾಯಿಗೆ ಗೋಧಿ ಹಿಟ್ಟು, …

ಫ್ಲಿಪ್ ಕಾರ್ಟ್ ನಿಂದ ಗ್ರಾಹಕರಿಗೆ ಬಂಪರ್ ಆಫರ್‌ | ಇಂದು ಕೇವಲ ಒಂದು ರೂಪಾಯಿಗೆ ಸಿಗುತ್ತದೆಯಂತೆ ಈ ವಸ್ತುಗಳು !! Read More »

ಜನಸಾಮಾನ್ಯರಿಗೊಂದು ನ್ಯಾಯ-ಸರ್ಕಾರಕ್ಕೊಂದು ನ್ಯಾಯ!! ರಾಜ್ಯದ ಜನತೆಯನ್ನು ಕರ್ಫ್ಯೂ ವಿಧಿಸಿ ನಿಯಮ ಪಾಲಿಸಲು ಸೂಚಿಸಿದ ಸರ್ಕಾರ ಮಾತ್ರ ಎಲ್ಲವನ್ನೂ ಗಾಳಿಗೆ ತೂರಿದಂತಿದೆ!??

ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಿ ಕಟ್ಟುನಿಟ್ಟಿನ ಕ್ರಮಗಳ ಪಾಲನೆಗೆ ಆದೇಶಿಸಿರುವ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ತಮ್ಮ ಪಕ್ಷದ ಕಾರ್ಯಕಾರಿಣಿ ಸಭೆಯ ದೂರಿನಲ್ಲಿ ಜಾತ್ರೆ ನಡೆಸಲು ಮುಂದಾಗಿದೆ ಎಂದು ರಾಜ್ಯದ ಜನತೆ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಎರಡು ವರ್ಷಗಳಿಂದ ವ್ಯಾಪಾರ ವಹಿವಾಟುಗಳು ಸಂಪೂರ್ಣ ಕುಂಠಿತವಾಗಿತ್ತು.ಈ ಬಾರಿ ವಹಿವಾಟುಗಳು ಕೊಂಚ ಪ್ರಗತಿ ಕಾಣುವಾಗಲೇ ಸರ್ಕಾರ ಮತ್ತೊಮ್ಮೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿರುವುದು ವಿಪರ್ಯಾಸ. ಪಬ್, ಬಾರ್, ಹೋಮ್ ಸ್ಟೇ ಗಳು ಈ ಬಾರಿಯ ಹೊಸವರ್ಷದ ಸಂಭ್ರಮಕ್ಕೆ …

ಜನಸಾಮಾನ್ಯರಿಗೊಂದು ನ್ಯಾಯ-ಸರ್ಕಾರಕ್ಕೊಂದು ನ್ಯಾಯ!! ರಾಜ್ಯದ ಜನತೆಯನ್ನು ಕರ್ಫ್ಯೂ ವಿಧಿಸಿ ನಿಯಮ ಪಾಲಿಸಲು ಸೂಚಿಸಿದ ಸರ್ಕಾರ ಮಾತ್ರ ಎಲ್ಲವನ್ನೂ ಗಾಳಿಗೆ ತೂರಿದಂತಿದೆ!?? Read More »

error: Content is protected !!
Scroll to Top