ಅಂಕತ್ತಡ್ಕ : ಸೋಲಾರ್ ಬೀದಿ ದೀಪದ ಕಳ್ಳತನ

ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಸಾರಡ್ಕ ಕ್ರಾಸ್ ಬಳಿ ಅಳವಡಿಸಿದ ಸೋಲಾರ್ ಅನ್ನು ಕಳ್ಳತನ‌ ಮಾಡಲಾಗಿದೆ.

ಗ್ರಾ.ಪಂ.ವತಿಯಿಂದ ಅಳವಡಿಸಿದ ಸೋಲಾರ್ ದೀಪದ ಕಂಬವನ್ನು ಬ್ಲೇಡ್ ಮೂಲಕ ತುಂಡರಿಸಿ ಸೋಲಾರ್ ದೀಪ,ಬ್ಯಾಟರಿ ಕಳ್ಳತನ ಮಾಡಲಾಗಿದೆ.

ಈ ಕುರಿತು ಸವಣೂರು ಗ್ರಾ.ಪಂ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

Leave A Reply

Your email address will not be published.