ಗುರುವಿಲ್ಲದೇ ಕಲೆಯಲ್ಲಿ ಮಿಂಚಿದ ಈಕೆಯ ಸಾಧನೆಗೆ ಒಲಿಯಿತು ಹಲವಾರು ಅವಕಾಶ!!
ಚಿತ್ರಕಲೆ ಸಹಿತ ಬರಹಗಳಲ್ಲಿ ಸೆಡ್ಡು ಹೊಡೆಯಬಲ್ಲ ಅಸಾಧಾರಣ ಗ್ರಾಮೀಣ ಪ್ರತಿಭೆ ಅನುಶ್ರೀ ಎಂ
ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ಚಿತ್ತಾರಗಳಿಗೆ ತನ್ನ ಪ್ರತಿಭೆಯ ಮೂಲಕ ಜೀವತುಂಬಿದ ಆಕೆ ಗುರುವಿಲ್ಲದೆಯೇ ಚಿತ್ರಕಲೆಯಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆ.ಎಲ್ಲಾ ವಿಧದ ಚಿತ್ತಾರಗಳನ್ನು ಸಾರಾಗವಾಗಿ ಬಿಡಿಸುವ ಆಕೆಯ ಪ್ರತಿಭೆಗೆ ಹಲವೆಡೆ ಅಭಿಮಾನಿಗಳಿದ್ದಾರೆ. ಮಣ್ಣಿನ ಮೂರ್ತಿ ಯಿಂದ ಹಿಡಿದು ಕಲರ್ ಪೇಂಟಿಂಗ್ ನಲ್ಲಿ ಆಕೆ ಮಾಡುವ ಚಾಕಚಕ್ಯತೆಗೆ ಸೋಲದವರೇ ಇಲ್ಲ. ಅಂತಹ ಅದ್ಭುತ ಪ್ರತಿಭೆ, ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ನಮ್ಮೂರ ಗ್ರಾಮೀಣ ಪ್ರತಿಭೆ ಅನುಶ್ರೀ ಎಂ. ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು …