Day: October 5, 2021

ಮನೆ ಮನೆಗೆ ಬಂದು ಯಕ್ಷಕಲೆಯ ರಸದೌತಣ ನೀಡುವ ಕನ್ಯಾನ ಅಂಗ್ರಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ

ಕಳೆದ ಕೆಲ ತಿಂಗಳಿನಿಂದ ಮನೆ ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದ ಗೆಜ್ಜೆ ನಾದ, ಮದ್ದಳೆ, ತಾಳದ ಅಬ್ಬರ ಅನುರಣಿಸುತ್ತದೆ, ಭಾಗವತಿಕೆಯ ಭಾವಗಾಯನ ಮೊಳಗುತ್ತದೆ.ಯಕ್ಷಗಾನ ವೇಷಧಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಮನೆಗೆ ಬಂದು ಮನೆ ಮಂದಿಗೆ ಯಕ್ಷ ಕಲೆಯ ರಸದೌತಣವನ್ನು ಉಣಬಡಿಸುತ್ತಾರೆ. ಕರಾವಳಿಯ ಜಾನಪದ ಕಲೆ ಯಕ್ಷಗಾನಕ್ಕೆ ಶತಮಾನಗಳ ಇತಿಹಾಸವಿದೆ. ಇದನ್ನು ಆರಾಧನಾ ಕಲೆಯೆಂದೇ ಕರೆಯಲಾಗುತ್ತಿದೆ. ವರ್ಷದ ಮಳೆಗಾಲವನ್ನು ಹೊರತು ಪಡಿಸಿ ನವೆಂಬರ್ ನಿಂದ ಮೇವರೆಗೂ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೊಡು ಜಿಲ್ಲೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು …

ಮನೆ ಮನೆಗೆ ಬಂದು ಯಕ್ಷಕಲೆಯ ರಸದೌತಣ ನೀಡುವ ಕನ್ಯಾನ ಅಂಗ್ರಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ Read More »

ಸರ್ವೆ ಗ್ರಾಮದ ಸೊರಕೆಯಲ್ಲಿ 4 ವರ್ಷದ ಹಿಂದೆ ವಿದ್ಯುತ್ ಶಾಕ್‌ನಿಂದ ಪವರ್‌ಮ್ಯಾನ್ ಶ್ರೀ ಶೈಲ ಮೃತ್ಯು ಪ್ರಕರಣ |
ಮೆಸ್ಕಾಂ ಲೈನ್‌ಮ್ಯಾನ್ ಸಿದ್ಧಯ್ಯರಿಗೆ ಜೈಲು ಶಿಕ್ಷೆ ತೀರ್ಪು ನೀಡಿದ ಪುತ್ತೂರು ನ್ಯಾಯಾಲಯ

ಪುತ್ತೂರು : 4 ವರ್ಷದ ಹಿಂದೆ ಸರ್ವೆ ಗ್ರಾಮದ ಸೊರಕೆ ಸಮೀಪ ದುರಸ್ತಿಗೆಂದು ಕಂಬವೇರಿದ ಮೆಸ್ಕಾಂ ಪವರ್ ಮ್ಯಾನ್ ಓರ್ವರು ವಿದ್ಯುತ್ ಶಾಕ್‌ಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಸವಣೂರು ಮೆಸ್ಕಾಂ ಹಿರಿಯ ಪವರ್‌ಮ್ಯಾನ್ ಮಾರ್ಗದಾಳು ಸಿದ್ದಯ್ಯ ಅವರಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2017ರ ಮಾ.2ರಂದು ಸೊರಕೆ ಪರಂಟೋಲು ಬಳಿ ದುರಸ್ತಿ ಕಾರ್ಯಕ್ಕಾಗಿ ವಿದ್ಯುತ್ ಕಂಬವೇರಿದ್ದ ಮೆಸ್ಕಾಂ ಜೂನಿಯರ್ ಪವರ್‌ಮ್ಯಾನ್‌, ಬಾಗಲಕೋಟೆ ಮೂಲದ ಶ್ರೀಶೈಲ ಗುರಪ್ಪ (26ವ.)ಅವರು ವಿದ್ಯುತ್ ಶಾಕ್‌ಗೊಳಗಾಗಿ ಕೆಳಕ್ಕೆ …

ಸರ್ವೆ ಗ್ರಾಮದ ಸೊರಕೆಯಲ್ಲಿ 4 ವರ್ಷದ ಹಿಂದೆ ವಿದ್ಯುತ್ ಶಾಕ್‌ನಿಂದ ಪವರ್‌ಮ್ಯಾನ್ ಶ್ರೀ ಶೈಲ ಮೃತ್ಯು ಪ್ರಕರಣ |
ಮೆಸ್ಕಾಂ ಲೈನ್‌ಮ್ಯಾನ್ ಸಿದ್ಧಯ್ಯರಿಗೆ ಜೈಲು ಶಿಕ್ಷೆ ತೀರ್ಪು ನೀಡಿದ ಪುತ್ತೂರು ನ್ಯಾಯಾಲಯ
Read More »

ಮುಂಜಾವಿನಿಂದ ಬಿಸಿಲೇರಿದ್ದ ಇಳೆಗೆ ಸಂಜೆಯಾಗುತ್ತಲೇ ಮಳೆರಾಯನ ಆಗಮನ!!
ಎಲ್ಲೆಡೆ ಸುರಿದ ಭೀಕರ ಮಳೆಯಿಂದಾಗಿ ಹಲವೆಡೆ ಹಾನಿ,ಸಂಚಾರಕ್ಕೆ ತೊಡಕು

ಮುಂಜಾನೆಯಿಂದ ಬಿಸಿಲೇರಿದ್ದ ಇಳೆಗೆ ಸೂರ್ಯನ ಕಿರಣ ಮರೆಯಾಗುತ್ತಲೇ ಮಳೆರಾಯನ ಆಗಮನವಾಗಿದೆ. ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ಇಂದು ಸಂಜೆಯಾಗುತ್ತಲೇ ಎಲ್ಲಾ ಕಡೆಗಳಲ್ಲೂ ಮಳೆರಾಯಣ ರೌದ್ರಾವತಾರ ಕಂಡುಬಂದಿದೆ . ಸಿಡಿಲು,ಗುಡುಗು,ಗಾಳಿ ಸಹಿತ ಭಯಂಕರ ಮಳೆಯಾಗಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಕೆಲ ಕಡೆಗಳಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿದ್ದು, ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಸಮಸ್ಯೆಗಳಾಗಿವೆ.ಇನ್ನೂ ಕೆಲ ಕಡೆಗಳಲ್ಲಿ ಕೃಷಿ ತೋಟಕ್ಕೆ ನೀರು …

ಮುಂಜಾವಿನಿಂದ ಬಿಸಿಲೇರಿದ್ದ ಇಳೆಗೆ ಸಂಜೆಯಾಗುತ್ತಲೇ ಮಳೆರಾಯನ ಆಗಮನ!!
ಎಲ್ಲೆಡೆ ಸುರಿದ ಭೀಕರ ಮಳೆಯಿಂದಾಗಿ ಹಲವೆಡೆ ಹಾನಿ,ಸಂಚಾರಕ್ಕೆ ತೊಡಕು
Read More »

ಮಂಗಳೂರಿನಲ್ಲಿ ಮತ್ತೆ ಕೇಳಿಸಿದ ಗುಂಡಿನ ಸದ್ದು!! ಸಂಬಳ ಕೇಳಲು ಬಂದಿದ್ದ ಕೆಲಸದಾಳುವಿಗೆ ಹೊಡೆದ ಗುಂಡು ಗುರಿ ತಪ್ಪಿ ಮಗನಿಗೆ ದೇಹಕ್ಕೆ

ಹಲವು ಸಮಯಗಳ ಮಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ.ಖ್ಯಾತ ಉದ್ಯಮಿಯೊಬ್ಬರು ಕೋಪದಲ್ಲಿ ಕೆಲಸದಾಳಿಗೆ ಹಾರಿಸಿದ ಗುಂಡು ತನ್ನ ಮಗನಿಗೇ ಬಿದ್ದಿರುವ ಘಟನೆ ನಗರದ ಮೋರ್ಗನ್ ಗೇಟ್ ಬಳಿ ಇಂದು ಸಂಭವಿಸಿದೆ. ಘಟನೆ ವಿವರ: ಮಂಗಳೂರಿನ ವೈ ಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ.ಲಿ. ನ ಮೋರ್ಗನ್ ಗೇಟ್ ಕಚೇರಿಯಲ್ಲಿ ಈ ಗುಂಡಿನ ದಾಳಿ ಸಂಭವಿಸಿದ್ದು ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಸಂಬಳ ಕೇಳಲು ಬಂದಿದ್ದ ಕೆಲಸದಾಳುವಿಗೆ ಗುಂಡು ಹಾರಿಸಿದ್ದು,ಗುರಿ ತಪ್ಪಿ ತನ್ನ ಮಗನನ್ನು ಗುಂಡು ಸೀಳಿದೆ. ಕೆಲಸದಾಳು …

ಮಂಗಳೂರಿನಲ್ಲಿ ಮತ್ತೆ ಕೇಳಿಸಿದ ಗುಂಡಿನ ಸದ್ದು!! ಸಂಬಳ ಕೇಳಲು ಬಂದಿದ್ದ ಕೆಲಸದಾಳುವಿಗೆ ಹೊಡೆದ ಗುಂಡು ಗುರಿ ತಪ್ಪಿ ಮಗನಿಗೆ ದೇಹಕ್ಕೆ Read More »

ಸುರಸುಂದರಿಯ ಮೋಹ(ಸ)ದ ಮಾತಿಗೆ ಮರುಳಾದ 60 ರ ಮುದುಕ!!ನಗ್ನ ಫೋಟೋ ಕಂಡು ತಡೆಯಲಾರದೇ 10 ಕೋಟಿ ಗಿಫ್ಟ್ ಕೊಟ್ಟ

ಸಾಮಾಜಿಕ ಜಾಲತಾಣ ಎಂದಾಗ ಅರೆಕ್ಷಣ ಭಯವಾಗುತ್ತದೆ. ಏಕೆಂದರೆ ಇತ್ತೀಚೆಗೆ ಜಾಲತಾಣದಲ್ಲಿ ಹಲವಾರು ಮಂದಿ ಮೋಸ ಹೋಗಿರುವುದು, ಮೋಸ ಹೋಗುತ್ತಿರುವುದು ಸದಾ ಪ್ರಚಲಿತದಲ್ಲಿದೆ.ಅಂತವುದೇ ಒಂದು ಘಟನೆ ಲಂಡನ್ ನಲ್ಲಿ ನಡೆದಿದ್ದು, ಒಂಥರಾ ವಿಚಿತ್ರವಾದ ಈ ಘಟನೆಯಲ್ಲಿ 60 ವರ್ಷದ ಓರ್ವ ಮುದುಕ ಸುರಸುಂದರಿಯ ಮೋಸದಾಟಕ್ಕೆ ಸಿಲುಕಿ ಸುಮಾರು 25 ಕೋಟಿ ಕಳೆದುಕೊಂಡಿದ್ದಾನೆ. ವೇಶ್ಯೆಯಾಗಿದ್ದ ಆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮುದುಕನೊಂದಿಗೆ ತಾನು ಖಾಸಗಿ ಕಂಪನಿಯೊಂದರ ಸಿಇಓ ಎಂದು ಪರಿಚಯಿಸಿಕೊಂಡು ಗೆಳೆತನ ಬೆಳೆಸಿದ್ದಾಳೆ.ಹಲವಾರು ಮಂದಿಯೊಂದಿಗೆ ಐಶಾರಾಮಿ ಹೋಟೆಲ್ ಗಳಲ್ಲಿ ರೂಮ್ …

ಸುರಸುಂದರಿಯ ಮೋಹ(ಸ)ದ ಮಾತಿಗೆ ಮರುಳಾದ 60 ರ ಮುದುಕ!!ನಗ್ನ ಫೋಟೋ ಕಂಡು ತಡೆಯಲಾರದೇ 10 ಕೋಟಿ ಗಿಫ್ಟ್ ಕೊಟ್ಟ Read More »

ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದ ಯುವಕ ಸಾವು | ಯುವಕನ ಸಾವಿಗೆ ಕಾರಣರಾದರೇ ವೈದ್ಯರು ??!

ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲೆಂದು ಆಸ್ಪತ್ರೆಗೆ ತೆರಳಿದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಕಲಬುರಗಿ ನಗರದಲ್ಲಿ ಸಂಭವಿಸಿದೆ. ಕಲಬುರಗಿಯ ಆನಂದ ನಗರದ ನಿವಾಸಿ ಶಶಾಂಕ್(18) ಮೃತ ದುರ್ದೈವಿ. 3 ದಿನಗಳ ಹಿಂದೆ ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲು ನಗರದ ಖಾಸಗಿ ಆಸ್ಪತ್ರೆಗೆ 3 ದಿನಗಳ ಹಿಂದೆ ಶಶಾಂಕ್ ಬಂದಿದ್ದ. ಚಿಕಿತ್ಸೆ ವೇಳೆ ವೈದ್ಯರು ಯುವಕನಿಗೆ ಅನಸ್ತೇಶಿಯಾ ನೀಡಿದ್ದರು. ಕೆಲವೇ ನಿಮಿಷದಲ್ಲಿ ಪ್ರಜ್ಞೆತಪ್ಪಿದ ಯುವಕ ಕೋಮಾಗೆ ಜಾರಿದ್ದ. ಮೂರು ದಿನವಾದರೂ ಪ್ರಜ್ಞೆ ಬರಲೇ ಇಲ್ಲ. ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ …

ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದ ಯುವಕ ಸಾವು | ಯುವಕನ ಸಾವಿಗೆ ಕಾರಣರಾದರೇ ವೈದ್ಯರು ??! Read More »

ಕೆದಂಬಾಡಿ : ಆಕಸ್ಮಿಕ ವಿದ್ಯುತ್ ಅವಘಡ : ಕೃಷಿಕ ಮೃತ್ಯು

ಪುತ್ತೂರು: ಕೆದಂಬಾಡಿ ಹೆಂಡತಿ ಮನೆಯ ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅವಘಡದಿಂದ ಕರ್ನೂರು ಭಾವ ನಿವಾಸಿ ಕೃಷಿಕ ಧನಂಜಯ ರೈ ಅವರು ಮೃತಪಟ್ಟಿದ್ದಾರೆ. ಕುದ್ಕಾಡಿ ದಿ.ಸೋಮಪ್ಪ ರೈ ಅವರ ಪುತ್ರ ಧನಂಜಯ ರೈ ಅವರು ಕೆದಂಬಾಡಿ ಬೊಳೋಡಿಯಲ್ಲಿರುವ ಪತ್ನಿ ಅಮಿತಾ ಅವರ ಮನೆಯ ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅವಘಡವಾಗಿದೆ ಎನ್ನಲಾಗಿದೆ. ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದು ಕೊಂಡು ಬರಲಾಯಿತ್ತಾದರೂ ಆಗಲೇ ಧನಂಜಯ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಅಮಿತಾ …

ಕೆದಂಬಾಡಿ : ಆಕಸ್ಮಿಕ ವಿದ್ಯುತ್ ಅವಘಡ : ಕೃಷಿಕ ಮೃತ್ಯು Read More »

ಕಾಸರಗೋಡು: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕುಂಟಾರು ರವೀಶ್ ತಂತ್ರಿ ಆಯ್ಕೆ

ಕಾಸರಗೋಡು : ಸಂಘ ಪರಿವಾರದ ನಾಯಕ, ಕಟ್ಟರ್ ಹಿಂದುತ್ವವಾದಿ, ಹಿಂದೂ ಮುಖಂಡ ರವೀಶ ತಂತ್ರಿ ಕುಂಟಾರು ಅವರನ್ನು ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರವೀಶ್ ತಂತ್ರಿ ಅವರು ಹಲವು ಭಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕಾಸರಗೋಡು ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ಶ್ರಮಿಸಿ, ಬಿಜೆಪಿ ಜಿಲ್ಲಾ ಕಛೇರಿ ನಿರ್ಮಾಣಕ್ಕೆ ಮುಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ.

ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವಿಧ್ಯಾಭ್ಯಾಸ ಮಾಡುವ ಹಿಂದುಳಿದ ವರ್ಗದವರಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1, ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿಗಳಿಗೆ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ ಮತ್ತು ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ, ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇಲಾಖೆಯ ವೆಬ್‌ಸೈಟ್http://www.ssp.postmatric.karnataka.gov.in/2122 ನಲ್ಲಿ ಅರ್ಜಿ ಸಲ್ಲಿಸಲು ಅ.31ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.: 8050770005, 080 35254757, 8050770004ನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೇಂದ್ರದಿಂದ ಬಿಡುಗಡೆಯಾಗಿದೆ ಹೊಸ ಯೋಜನೆ | ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದರೆ ಇನ್ನು ಮುಂದೆ ಸಿಗಲಿದೆ ನಗದು ಬಹುಮಾನ !!

ಒಂದೆಡೆ ಮಾನವೀಯತೆಯ ಕೊರತೆ, ಮತ್ತೊಂದೆಡೆ ಪೊಲೀಸ್ ಭಯ. ಈ ಎರಡು ಕಾರಣಗಳಿಂದ ಸಾರ್ವಜನಿಕರು ಅದೆಷ್ಟೋ ಬಾರಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕುತ್ತಿದ್ದರು. ರಸ್ತೆಯ ಮೇಲೆ ಹೋಗುತ್ತಿರುವಾಗ ಅಪಘಾತವಾದರೆ ಅವರ ನೆರವಿಗೆ ಬರುವವರು ತುಂಬಾ ಅಪರೂಪ. ನೆರವು ನೀಡಲು ಹೋಗಿ ಪೊಲೀಸರು, ಕೋರ್ಟ್, ಕಚೇರಿ ಎಂದೆಲ್ಲಾ ಅಲೆದಾಡಬೇಕು, ಯಾರಿಗೆ ಬೇಕಪ್ಪಾ ಇದರ ಉಸಾಬರಿ ಎಂದುಕೊಂಡು ಆಸ್ಪತ್ರೆಗೆ ದಾಖಲು ಮಾಡುವ ಮನಸ್ಸು ಇದ್ದರೂ ನೋಡದವರ ಹಾಗೆ ಹೋಗುವವರೇ ಹೆಚ್ಚು. ಈ ಸ್ಥಿತಿ ತುಂಬಾ ವರ್ಷಗಳ …

ಕೇಂದ್ರದಿಂದ ಬಿಡುಗಡೆಯಾಗಿದೆ ಹೊಸ ಯೋಜನೆ | ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದರೆ ಇನ್ನು ಮುಂದೆ ಸಿಗಲಿದೆ ನಗದು ಬಹುಮಾನ !! Read More »

error: Content is protected !!
Scroll to Top